ಪುಟ:Vimoochane.pdf/೧೯೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಶೇಖರ್?"

ಮದರಾಸಿನ ಸೂಳೆಗೇರಿಯೊ೦ದರಿಂದ ಮೂರು ವರ್ಷಗಳ ಹಿಂದೆ

ಅವಳನ್ನು ಚಲಂ ರಕ್ಷಿಸಿ ತಂದು, ತನ್ನ ರಕ್ಷಣೆಯ ಆಶ್ರಯ ನೀಡಿದ್ದ. ಆಗಬಾರದ ಜಾಡ್ಯ ಅವಳಿಗೆ ಅಂಟಿಕೊಂಡಿತ್ತಂತೆ. ನೀರಿನಂತೆ ಹಣ ಸುರಿದು ಚಲಂ ಚಿಕಿತ್ಸೆ ಮಾಡಿದ. ಆ ಮೇಲೆ ಈ ಸಂಸಾರ, ಇಲ್ಲಿ, ನೆರೆ ಮನೆಯವರ ದೃಷ್ಟಿಯಲ್ಲಿ ಚಲಂ, ರಾತ್ರೆ ಹೊತ್ತು ಯಾವುದೋ ಫ್ಯಾಕ್ಟರಿಯಲ್ಲಿ ದುಡಿಯುವ ಮೇಸ್ತ್ರಿ: –ಊರಲ್ಲಿ ಇಲ್ಲದೆ ಇದ್ದಾಗ, ಫ್ಯಾಕ್ಟರಿಯ ಪರವಾಗಿ ಸಂಚಾರ ಹೋಗಿರುವ ವ್ಯಾಪಾರ ಪ್ರತಿನಿಧಿ.....

ಆ ದಿನದ ಕಾರ್ಯಕ್ರಮ ಯಶಸ್ವಿಯಾಗಿಯೆ ನಡೆಯಿತು.

ಆಭರಣವನ್ನೆಲ್ಲ ಸರಾಫರ ಬೀದಿಯಲ್ಲಿದ್ದ ನನ್ನ ಪರಿಚಯದ ಅಂಗಡಿ ಗೊಯ್ದೆ, ಸಾವಿರ ಚಿಲ್ಲರೆ ಹಣವನ್ನು ನಾವು ಹಂಚಿಕೊಂಡೆವು.

........ಗುಂಪಿನವರಲ್ಲಿ ಒಬ್ಬನನ್ನು ಟ್ಯಾಕ್ಸಿ ಡ್ರೈವರಾಗಿರುವಂತೆ

ಚಲಂ ಏರ್ಪಾಟು ಮಾಡಿದ.

ಅದರ ಬಗ್ಗೆ ಸಮ್ಮತಿ ಸೂಚಿಸುತ್ತಾ, "ಅದೇನೋ ಸರಿ. ಆದರೆ

ನನಗೊ೦ದು ಸೈಕಲ್ ಬೇಕು,"ಎಂದೆ.

ಅವರಲ್ಲೊಬ್ಬ ಕೇಳಿದ:

"ಶೇಖರ್, ನಿನ್ನ ಹುಟ್ಟಿದ ಹಬ್ಬ ಯಾವತ್ತು?"

"ನಿನ್ನದು?"

"ಯಾವ ದಿನ ಹುಟ್ಟಿದೆನೋ ನೆನಪಿಲ್ಲ."

"ನನ್ನದೂ ಅಷ್ಟೆ."

"ಎಂಥಾ ಅನ್ಯಾಯ! ಹುಟ್ಟು ಹಬ್ಬದ ದಿವಸ ನಿನಗೊಂದು ಸೈಕಲ್

ಉಡುಗೊರೆ ಕೊಡೋಣಾಂತಿದ್ರೆ..."

"ಓ! ಅದಕ್ಕೇನು? ಇವತ್ತು ಕೊಡೋ ಹಾಗಿದ್ರೆ ಇವತ್ತೇ ನನ್ನ ಹುಟ್ಟು

ಹಬ್ಬ"

ಎಲ್ಲರೂ ನಕ್ಕರು.