ಪುಟ:Vimoochane.pdf/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೂಲ ಗೊತ್ತಾ? ನೀನು ಹೀಗೆ ನಡೆದು ಹೋಗ್ತಾ ಇದ್ರೆ, ನಿನ್ಮೇಲೆ ಕಳ್ತನದ ಆರೋಪ ಹೊರಿಸೋ ಎದೆಗಾರಿಕೆ ಯಾವನ್ಗಿದೆ? ನೀನು ಷಾಪಿಂಗ್ ಹೋದರೂ ಅಷ್ಟೆ, ದುಡ್ಡು ಆ ಮೇಲೆ ಕೊಡ್ರೀನೀಂತ ಸಾಮಾನು ಹೊರಿಸ್ಕೊಂಡು ಬಂದ್ರೂ ನಿನ್ನ ತಡಿಯೋರಿಲ್ಲ."

ಅಷ್ಟೇ ಆಗಿರಲಿಲ್ಲ, ಕೊನೆಯಲ್ಲಿ ಅವನಿಗೆ ಪ್ರಿಯವಾಗಿದ್ದ

ಇನ್ನೊಂದು ಮಾತಿತ್ತು.

"ಹುಷಾರಾಗಿರ್ಬೇಕಪ್ಪಾ ಶೇಖರ್, ಕಾರು ನಿಲ್ಸಿ, ನಿನ್ನ

ಸೈಕಲ್ನಿಂದ ಇಳಿಸಿ, ಆ ದೊಡ್ಮನುಷ್ಯರ ಹುಡುಗೀರು ನಿನಗೆಲ್ಲಾದರೂ ತೊಂದರೆ ಕೊಡಬಹುದು !"

ಆಗ ನನಗೆ ನಗು ಬರುತಿತ್ತು.

"ಅದೆಲ್ಲಾ ಸಿನಿಮಾದಲ್ಲಿ ಚಲಂ. ಜೀವನದಲ್ಲಿ ಅಂಥಾದ್ದೆಲ್ಲಾ

ಎಲ್ಲಿ ಸಾಧ್ಯ?"

"ಯಾರು ಕಂಡೋರು?"

ಯಾರೂ ಕಾಣದ ಹಾಗೆಯೇ ಆ ದಿನ ಘಟನೆ ನಡೆಯಿತು.

ಆಕಾಶದ ಮೋಡಗಳು ಬೇರೆ ಊರಿಗೆ ತೇಲಿ ಹೋದುವು, ನಗರದ ಉದ್ಯಾನದತ್ತ ನಾನು ಸೈಕಲ್ ತುಳಿದೆ. ಉದ್ಯಾನದ ಹೋಟೆಲಿನಲ್ಲಿ ಅದನ್ನಿರಿಸಿ ಬೀಗ ತಗುಲಿಸಿದೆ. ಕಾಫಿ ಕುಡಿದು ಹೊರ ಬಂದು, ಸುತ್ತಮುತ್ತಲೂ ಇದ್ದ ಜನರನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತಾ ನಿಂತೆ.

ಉದ್ಯಾನದ ಒಂದು ಮೂಲೆಯಲ್ಲಿ, ಎಳೆಯ ಹುಡುಗನ ಹಾಗೆ

ತೋರುತಿದ್ದ ಆ ಯುವಕ ಸಿಮೆಂಟಿನ ಒರಗು ಬೆಂಚಿನ ಮೇಲೆ ಕುಳಿತಿದ್ದ, ನಾನು ನಿರ್ದಿಷ್ಟವಾದ ಯಾವ ಯೋಚನೆಯೂ ಇಲ್ಲದೆ ಅವನ ಬಳಿ ಸಾರಿದೆ.

"ಇಲ್ಲಿ ಕೂತ್ಕೋಬಹುದಾ?"

"ಅದಕ್ಕೇನಂತೆ?"

"ಅಲ್ಲ, ಬೇರೆ ಯಾರಾದ್ರೂ ಬರ್ತಾರೇನೋಂತ."

"ಯಾರೂ ಇಲ್ಲ, ನೀವು ಕೂತ್ಕೋಳ್ಳಿ."