ಪುಟ:Vimoochane.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ಸ್ವರ ಕ್ಷೀಣವಾಗಿತ್ತು, ನನ್ನ ದೃಷ್ಟಿಯ ಕ್ಷ-ಕಿರಣ ಅವನ

ಅಂಗಾಂಗಗಳನ್ನು ಪರೀಕ್ಷಿಸಿತು.

"ಮೈ ಚೆನಾಗಿಲ್ಲಾಂತ ತೋರುತ್ತೆ.

"ಹೌದು; ಡ್ರೈವರ್ ಇಲ್ಲಿಯವರೆಗೆ ಕರಕೊಂಡು ಬಂದ

.

ಎಂಟು ಘಂಟೆಗೆ ಬಾ ಅಂತ ಹೇಳ್ವಿಟ್ಟು, ಅವನ್ನ ಕಳಿಸ್ಕೊಟ್ಟೆ."

ಕಾರಿನ ಬಗ್ಗೆ ಮಾತನಾಡಿದಾಗ, ತನ್ನ ಅಂತಸ್ತನ್ನು ಸೂಕ್ಷ್ಮ

ವಾಗಿ ತೋರಿಸುವ ಉತುಕತೆ ಅವನಲ್ಲಿತ್ತು, ಒಂದು ತುತು ಅನ್ನ ಹೆಚ್ಚು ಸಂಪಾದಿಸುತ್ತಿರುವ ಮೇಲಿನ ಮಧ್ಯಮ ವರ್ಗದವರಿರಬೇಕು. . ...ಹಿರಿಯ ಶ್ರೀಮಂತಿಕೆ ಅವನಲ್ಲಿ ಒಡಿದು ತೋರುತ್ತಿರಲಿಲ್ಲ. ಅದರ ಬದಲು ತಮ್ಮ ಆಂತಸ್ತಿನ ಬಗ್ಗೆ ಕೇಳುವವರು ಸಂದೇಹ ವ್ಯಕ್ತಪಡಿಸ ಬಹುದೇನೊ ಎಂಬ ಶಂಕೆ ಆ ತುಟಗಳ ಮೇಲೆ ತೇಲುತಿತ್ತು.

ಕನಿಕರ ಸೂಚಿಸುವ ಧ್ವನಿಯಲ್ಲಿ ನಾನು ಕೇಳಿದೆ:

"ಏನಾಗಿತ್ತು ? ಜ್ವರವಾ ?"

ನ್ಯುಮೋನಿಯಾ. ಇದೇ ಈಗ ಹತ್ತು ದಿವಸಗಳಿಂದ ಓಡಾ

ಡ್ತಿದೀನಿ."

"ಓದ್ತಾ ಇದೇರ?"

"ಹೂಂ. ಈ ಸಾರೆ ಬಿ.ಎ.ಗೆ ಕಟ್ಬೇಕು. ಆದರೆ ಏನಾ

ಗುತ್ತೊ ಏನೊ. ಈ ಕಾಹಿಲೆ ಬಹಳ ಸತಾಯಿಸ್ಟಿಟ್ಟಿದೆ.”

ಬಹಳ ಸತಾಯಿಸುವ ನುಮೋನಿಯ. ಆ ವಿಷಯ ನನಗೆ

ಗೊತ್ತಿರಲಿಲ್ಲವೆ? ತನಗೇ ಧೈರ್ಯ ಉಂಟಾಗುವಂತೆ ಆತ ಹೇಳಿದ:

"ಇನ್ನೇನು ಗುಣವಾದ ಹಾಗೇ. ಸ್ವಲ್ಪ ದಿವಸದಲ್ಲೇ ಪುನಃ

ಶಕ್ತಿ ಬರತ್ತೆ, ನ್ಯೂಮೋನಿಯಾ ಹೆದರೊಬೇಕಾದ ಜ್ವರವೇನೂ ಅಲ್ಲ."

ಜ್ವರಕ್ಕೆ ಹೆದರದೇ ಇದ್ದ ಆ ಧೈರ್ಯವಂತನಲ್ಲಿ, ಬಂದವರನ್ನು

ದೂರವಿಡುವ ಮನೋವೃತ್ತಿ ಇರಲಿಲ್ಲ. ಇನ್ನೊಂದು ಜೀವದೊಡನೆ ಮಾತನಾಡಲು ಆತ ಆತುರನಾಗಿದ್ದ.

"ಸಿಗರೇಟು?"