ಪುಟ:Vimoochane.pdf/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರೇಮದ ವಿಷಯ ನಾನು ಪುಸ್ತಕಗಳಲ್ಲಿ ಓದಿದ್ದೆ, ಪ್ರೇಮ, ಎಷ್ಟೊಂದು ಸಾಹಿತ್ಯ ಸೃಷ್ಟಿಗೆ ಪ್ರೇರಕವಾಗಿಲ್ಲ! ಆ ಸಾಹಿತ್ಯ ದೊಳಗಿನ ಪ್ರೇಮ, ನನ್ನ ಪಾಲಿಗೆ ಕಲ್ಪನೆಯ ಲೋಕದ ಕೈಗೆಟಕದ ವಸ್ತುವಾಗಿತ್ತು—ಚಲಚ್ಚಿತ್ರದೊಳಗಿನ ಆದರ್ಶ ಜೀವನದ ಹಾಗೆ. ನನ್ನ ಜೀವನದಲ್ಲಾ ಆ ಪ್ರೇಮದೊಂದು ಪ್ರಕರಣ ಆಗಿಯೇ ತೀರುವು ದೆಂದು— ಹಾಗೆ ಆಗಿಯೇ ತೀರುವುದೆಂದು–ಯಾರು ಊಹಿಸಿದ್ದರು ?

ಆ ಪ್ರಕರಣ-

ವನಜ ಎಂತಹ ಹುಡುಗಿಯೆಂದು ತಿಳಿಯಲು ನಾನು ಯತ್ನಿಸ ಲಿಲ್ಲ, ಅವರ ಮನೆಗೆ ಸಂಬಂಧಿಕರಾದ ಸ್ನೇಹಿತರಾದ ಬೇರೆ ಬೇರೆ ಯುವಕರು ಬರುತ್ತಿದ್ದರು. ಹೀಗಿದ್ದೂ ನನ್ನನ್ನು ಅವಳು ಪ್ರೀತಿಸಿ ದಳು. ನನಗೆ ಅಷ್ಟೇ ಸಾಕಾಗಿತ್ತು, ಜೀವನದಲ್ಲಿ ಹೆಣ್ಣಿನ ಪ್ರೀತಿ ಎಂದರೇನೆಂಬುದನ್ನು ತಿಳಿಯದೇ ಇದ್ದ ನಾನು, ವನಜಳ ತೇವ ತುಂಬಿದ ಕಣ್ಣುಗಳಿಗೆ, ನಡುಗುವ ಸ್ವರಕ್ಕೆ, ತುಟಿಗಳ ಕಂಪನಕ್ಕೆ, ಮನೋವಿಕಾರದ ಅರ್ಥ ಹೀನ ಮಾತುಗಳಿಗೆ ಮಾರುಹೋದೆ.

ನನ್ನ ಇರುವಿಕೆಯ ವೆಚ್ಚಕಾಗಿ ಅಲ್ಲಿಂದ ಇಲ್ಲಿಂದ ಅಷ್ಡಿಷ್ಟು

ಹಣ ನನ್ನ ರೀತಿಯಲ್ಲೆ ನಾನು ದೊರಕಿಸಿಕೊಳ್ಳಬೇಕಾಗುತಿತ್ತು. ಹಾಗೆ ಮಾಡುವಾಗ ವನಜಳ ನೆನಪಾಗುತಿತ್ತು.

ಊರಿಗೆ ಹಿಂತಿರುಗಿದ ಚಲಂ ನನ್ನನ್ನು ಕಂಡು, ಹಾದಿ ತಪ್ಪಿದ

ಎಳೆಯ ತಮ್ಮನಿಗೆ ಹಿತ ವಚನಗಳನ್ನು ಆಡಿದ ಹಾಗೆ ನನ್ನೊಡನೆ ಮಾತನಾಡಿದ.

"ಇಲ್ಲ. ನನಗೇನೂ ಆಗಿಲ್ಲ ಚಲಂ. ಇಲ್ಲದ ಚಿಂತೆ

ಹಚ್ಚಿಕೊ

ಬೇಡ.....ನನಗೇನೂ ಆಗಿಲ್ಲ.'

"ಶೇಖರ್, ಯಾಕೆ ಸುಳ್ಳು ಮಾತು? ಸುಳ್ಳು ಹೇಳಿ ನನ್ನನ್ನು

ಯಾಕೆ ನೀನು ನೋಯಿಸ್ಬೇಕು ?"

ನಾನು ನೋಯಿಸುವುದು ಹಾಗಿರಲಿ. ನನಗೇ ವಿಚಿತ

ರೀತಿಯ ನೋವಿನ ಅನುಭವವಾಗುತಿತ್ತು.

ಚಲಂ, ನನಗೆ ಮೈ ಚೆನಾಗಿಲ್ಲ."