ಪುಟ:Vimoochane.pdf/೨೨೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಬಂದಿದ್ದಳು.

"ಎಲ್ಲಾದರೂ ಉಂಟೆ ಅಕ್ಕ? ಬೇಡಿ, ಬೇಡಿ."

"ಹಾಗನ್ಬೇಡವಪ್ಪಾ. ಅವರೇ ಇಲ್ಲದ ಮೇಲೆ ಇವು ಯಾವ

ಸೌಭಾಗ್ಯಕ್ಕೆ? ವಕೀಲರ ಖರ್ಚಿಗೆ ಬೇಕಾಗುತ್ತೆ. ತೆಗೆದಿಟ್ಕೊ."

ನಾನು ಸುಮ್ಮನಿದ್ದೆ.

ಹಿಂದೊಮ್ಮೆ ಬಳಗದವನೊಬ್ಬನ ಮೇಲೆ ಒಂದು ಮೊಕದ್ದಮೆ

ಯಾವಾಗ ಚಲಂ ಗೊತ್ತುಮಾಡಿದ್ದ ಯುವಕ ವಕೀಲನ ಬಗ್ಗೆ, ಸಾವಿತ್ರಿಯೊಡನೆ ಬಂದವನು ಹೇಳಿದ. ನಾನು ಆ ವಕೀಲನ ಹೆಸರು ವಿಳಾಸ ತಿಳಿದುಕೊಂಡ.

....ಭವೃಲೋಕವೊಂದರ ಬಾಗಿಲಲ್ಲಿ ನಿಂತು ವನಜ "ಬಾ"

ಎಂದು ಕರೆಯುತ್ತಿದ್ದಳು. ಎಲ್ಲವನ್ನೂ ಬಿಟ್ಟು ಅಲ್ಲಿಗೆ ಹೊರಟು ಹೋಗಲು ಮನಸಾಗುತಿತ್ತು. ಅದಕ್ಕೆ ಮುಂಚೆ, ಜೀವನದ ಅದೊಂದು ಅಧ್ಯಾಯದ ಕೊನೆಯ ಗೆರೆಯನ್ನು ಬರೆದು ಹೊರಡಬೇಕಾಗಿತ್ತು. ಆ ಗೆರೆಯನ್ನು ಬರೆಯುವುದು ಸುಲಭವಾಗಿರಲಿಲ್ಲ. ಚಲಂ ಬಂಧನ ಆ ಕೆಲಸವನ್ನು ಮತ್ತಷ್ಟು ಕಠಿನಗೊಳಿಸಿತ್ತು.

....ಸಂಜೆ ಆ ವಕೀಲರ ಆಫೀಸಿನ ಹೊರನಿಂತಿದ್ದು, ಕಕ್ಷಿಗಾರರೆ

ಲ್ಲ ಹೊರಟು ಹೋಗುವುದನ್ನು ಕಾಯುತಿದ್ದೆ. ಅವರೊಬ್ಬರೆ ಉಳಿ ದಾಗ ನಾನು ಮೆಟ್ಟಲೇರಿ ಒಳಬಂದೆ.

ಪ್ರಶ್ನಾರ್ಥಕ ಚಿಹ್ನೆಯಾಗುವಂತೆ ಅವರು ಹುಬ್ಬುಗಳನ್ನೇರಿಸಿ

ದರು. ನಾನು ನೇರವಾಗಿ ವಿಷಯವನ್ನೇ ಪ್ರಸ್ತಾಪಿಸಿದೆ.

"ನಿನ್ನೆಯ ಪತ್ರಿಕೇಲಿ, ಕಾರಿನ ಕಳವಿಗೆ ಸಂಬಂಧಿಸಿ ಚಲಂ

ಅಂತ ಒಬ್ಬರ್‍ನ ಹಿಡಿದದ್ದು ನೀವು ಓದಿರ್ಬೇಕು."

"ಹೌದು."

"ಆ ಚಲಂ ನಿಮಗೆ ಪರಿಚಿತರು ಅಲ್ವೆ?"

"ಯಾರು ನೀವು?"

"ಅವರ ಸ್ನೇಹಿತ, ಕೇಶವ ಎಂತ."

"ನಿಮಗೇನು ಬೇಕು?"