ಪುಟ:Vimoochane.pdf/೨೫೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಶನೀಶ್ವರ. ಒಂದಲ್ಲ ಒಂದು ದಿನ ಶ್ರೀಕಂಠನಿಗೆ ನನ್ನ ಗತ ಜೀವನದ ಅರಿವಾಗುತ್ತದೆಂಬುದು ನನಗೆ ಗೊತ್ತಿತ್ತು. ಆದರೂ-

"ಏನೂ ಗಾಬರಿ ಬೀಳ್ಬೇಡ. ಆತ ನಮ್ಜನವೇ."

"ಏನಂತೆ ಅವರಿಗೆ?"

"ನಿನ್ನ ಸಾಹಸದ ವಿಷಯ ಚುಟುಕಾಗಿ ವರದಿಕೊಟ್ಟ. ಅದನ್ನ ಕೇಳ್ತಾ ಇದ್ದರೆ ಥ್ರಿಲ್ ಆಯ್ತು."

"ಹುಂ.ಆ ಮೇಲೆ?"

"ನೀನು ನನ್ನ ಕಾರ್ಯದರ್ಶೀಂತ ಹೇಳ್ಪೆ. ತೆಪ್ಪಗಾದ."

"ಅಷ್ಟೇನೆ?"

"ನಾನು ಹುಷಾರಾಗಿರ್ಬೇಕೂಂತ ಎಚ್ಚರಿಕೆ ಕೊಟ್ಟ!"

"ಹೌದು ಕಂಠಿ. ಬಹಳ ದಿವಸ್ದಿಂದ ನಾನೂ ನಿನಗೆ ಹೇಳ್ಬೇ ಕೂಂತಲೇ ಇದ್ದೆ. ನನ್ನ ವಿಷಯ ನೀನು ಯೋಚಿಸ್ಬೇಕಾದ್ದೇ."

"ಹುಚ್ಚನ ಹಾಗೆ ಆಡ್ಬೇಡ.ನಾನಿರೋವರೆಗೂ ಪೋಲೀಸರನ್ನ ಮರೆತ್ಬಿಡು."

"ನಾನೇ ನಿನಗೇನಾದರೂ ಮೋಸ ಮಾಡಿದ್ರೆ?"

"ಒಳ್ಳೇ ಜೋಕು. ಮಾಡು. ನೋಡೊಣ."

.......ಆ ದಿನ ನನ್ನ ತಂದೆ ಹರಕು ಕಂಬಳಿ ಹೊದ್ದು ಬಂದು ಜಾಮೀನು ನಿಲ್ಲುವೆನೆಂದಿದ್ದ. ಆದರೆ ಇನ್ಸ್ಪೆಕ್ಟರ್ ಮರಿ ಸಾಹೇ ಬರು ನನ್ನನ್ನು ಬಿಟ್ಟುಕೊಟ್ಟಿರಲ್ಲಿಲ್ಲ. ಈಗ ನಗರದ ಗಣ್ಯವ್ಯಕ್ತಿ ಯೊಬ್ಬರ ಆಶ್ವಾಸನೆ ಕೇಳಿ,ಸ್ವತಃ ಐ ಜಿ ಸಿ ಹಿರಿ ಸಾಹೇಬರೇ ತೃಪ್ತರಾ ಗಿದ್ದರು.ದೂರದಿಂದ ನೋಡಿದಾಗ ರಾಜ್ಯ ಯಂತ್ರ ಗಂಭೀರವಾಗಿ ಭೀತಿಕಾರಕವಾಗಿ ಕಾಣುತಿತ್ತು. ಆದರೆ ಹತ್ತಿರಬಂದಾಗ? ಪರೀಕ್ಷಿಸಿ ದಾಗ? ಎಷ್ಟೊಂದು ಸುಲಭವಾಗಿತ್ತು ಅದರ ಯಾಂತ್ರಿಕ ರಚನೆ!.... ಹತ್ತಿರ ಬರುವ ಭಾಗ್ಯ ಮಾತ್ರ ಎಲ್ಲರಿಗೂ ಇರಲ್ಲಿಲ್ಲ,ಅಷ್ಟೆ.

ಶಾರದಾ,ಕುಮಾರ ಕಂಠೀರವನನ್ನು ಹೆತ್ತಳು. ಶ್ರೀಕಂಠ ಆ ದಿನ ಸಂತೋಷದಿಂದ ಮಿತಿಮೀರಿ ಕುಡಿದ.ತನಗೊಬ್ಬ ಮಗನನ್ನು