ಪುಟ:Vimoochane.pdf/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಘೋಷಿಸಿತು. ನಮ್ಮ ನಗರದ ಆರು ಕಾರ್ಖಾನೆಗಳ ಕೂಲಿಗಾರರೂ ಒಂದಾದರು. ಬೇರೆ ಬೇರೆ ಬೀದಿಗಳಲ್ಲಿ ಪ್ರತ್ಯೇಕವಾಗಿ ಮೆರ ವಣಿಗೆಗಳು ಬಂದು, ಒಂದೇ ಒಂದಾದ ದೊಡ್ಡ ಪ್ರವಾಹ ಭೋರ್ಗರೆ ಯುತ್ತ ಹರಿಯಿತು....ಇಪ್ಪತ್ತು ಸಾವಿರ ಕೂಲಿಗಾರರು ಬೀದಿಯಲ್ಲಿ! ಮೊರೆಯುತ್ತಿದ್ದ ಘೋಷವಿದು: "ಮೂರು ತಿಂಗಳ ಬೋನಸ್ !" "ಯುದ್ಡ ಕಾಲದ ಲಾಭದಲ್ಲಿ ನಮಗೂ ಒಂದು ಪಾಲು ಕೊಡಿ!".... ಆ ಬಳಿಕ ಭಾಷಣಗಳು....ಮಾಲೀಕರನ್ನೆಲ್ಲ ಕಾಣಲು ಆರು ಜನರ ಒಂದು ನಿಯೋಗದ ಆಯ್ಕೆ.

ಮಾಲೀಕರ ಕೊಠಡಿಗಲಿಂದ ಫೋನ್ ಗಳು ಟ್ರನ್ ಗುಟ್ಟಿದುವು. ಸ್ವಲ್ಪ ಹೊತ್ತಿನಲ್ಲೆ, ನಗರದ ಅತಿ ದೊಡ್ಡ ಹೊಟೇಲಿನಲ್ಲಿ ತಮ್ಮ ತಮ್ಮ ಮ್ಯಾನೇಜರರೊಡನೆ ಅವರು ಒಂದುಗೂಡಿದರು. ನನ್ನನ್ನೂ ಕರೆ ದೊಯ್ದ ಶ್ರೀಕಂಠ. ಬಲು ಶಾಂತವಾಗಿ ಮಾತುಗಳು ಅತ್ತಿತ್ತ ತೇಲಿ ಹೋದವು.

"ಕೊಡದೇ ಇದ್ದರೆ ‌‌‍ಏನಂತೆ ಇವರು ಮಾಡೋದು?"

"ಗೊತ್ತೇ ಇದೆಯಲ್ಲ-ಮುಷ್ಕರ!"

"ಉಪವಾಸ ಬಿದ್ದು ಸಾಯ್ತರೆ, ಅಷ್ಟೆ."

"ಒಂದು ತಿಂಗಳೇನಾದರೂ ಮುಷ್ಕರ ನಡೀತೂಂತಂದ್ರೆ ಒಟ್ಟು ನಮಗಾಗೋ ನಷ್ಟ ಎಷ್ಟು ಯೋಚೀಸಿದ್ದೀರಾ?"

"ಒಂದು ದಿನ ಕೆಲಸ ನಿಂತರೂ ದೊಡ್ಡ ನಷ್ಟವೇ!"

"ಮತ್ತೆ!?"

"ಅವರ ನಿಯೋಗದ ಮುಖಂಡರ ಅರೆಸ್ಟ ಮಾಡಿಸೋಣ."

"ಮಾಡಿಸೋದು ಸುಲಭ. ಮುಮದಿನ ಗತಿ? ಮುಷ್ಕರ ತಪ್ಪಿಸ್ಬೇಕೂಂತಿದ್ದರೆ, ನಾವು ದುಡುಕ್ಬಾರ್ದು."

"ಅದು ನಿಜ. ನಿಯೋಗದವರ್ನ ನಾವು ಜತೆಯಾಗಿಯೇ ಕಾಣೋಣ. ಮೊದಲು ನಕಾರದ ಉತ್ತರ. ಅ ಮೇಲೆ ನೋಡಿ ಕೊಂಡರಾಯ್ತು"

ಹೀಗೆ ಒಬ್ಬೊಬ್ಬರು ಒಂದೊಂದು ವಿಧವಾಗಿ ಮಾತನಾಡಿದರು.