ವಿಷಯಕ್ಕೆ ಹೋಗು

ಪುಟ:Vimoochane.pdf/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಆರಂಭಿಸೋಣವೇ ?"

"ನೀವು ಯಾವ ಮಿಲ್ಲಿನವರು ?"

"ನಾನು ಸಂಘದ ಕಾರ್ಯದರ್ಶಿ,ನಿಯೋಗದ ಮುಖಂಡ.... ಇವರು - ಇವರು -"

ಆತ ನಿಯೋಗದ ಸದಸ್ಯರ ಹೆಸರುಗಳನ್ನು ಹೇಳುತಿದ್ದ .

ಮತ್ತೆ ಆ ಹೆಸರು:ಟಿ.ಜಿ.ನಾರಾಯಣ್ - ನಾರಾಯಣ.

ಶ್ರೀಕಂಠನ ಮುಖ ನೋಡಿದೆ. ಆತ ನಾರಾಯಣನನ್ನು ನೋಡಿದ್ದ-ಗುರುತು ಹಿಡಿದಿದ್ದ. ನಾರಾಯಣನೂ ನಮ್ಮಿಬ್ಬರನ್ನು ನೋಡಿದ. ಆದರೆ ಆ ಕಣ್ಣುಗಳು ನಿಶ್ಚಲವಾಗಿದ್ದುವು. ತುಟಿಗಳು ಬಾಡಿಬಿಗಿದಿದ್ದುವು .

"ಮಾಲೀಕರೊಡನೆ ಕೆಲಸಗಾರರೇ ಮಾತನಾಡ್ಬೆಬೇಕು ."

"ಇಪ್ಪತ್ತು ಸಾವಿರ ಕೆಲಸಗಾರರು ನಮ್ಮನ್ನು ಚುನಾಯಿ ಸಿದ್ದಾರೆ. ನಾವೆಲ್ಲರೂ ನಿಮ್ಜತೇಲಿ ಮಾತನಾಡ್ತೀವಿ. ಆದರೆ ವ್ಯವಹಾರದ ಅನುಕೂಲಕ್ಕಾಗಿ ಯಾರಾದರೊಬ್ಬರು ನಿಯೋಗದ ಮುಖಂಡರಾಗಿರೋದು ಪದ್ಧತಿ-ನೀವು ಏರ್ಪಾಟು ಮಾಡಿಕೊಂಡಿ ರೋ ಹಾಗೆ !"

ಆ ಅಧಿಕಾರವಾಣಿಯನ್ನು ಹೆದರಿಕೆ ಬೆದರಿಕೆಗಳಿಂದ ನಡುಗಿಸು ವುದು ಸಾಧ್ಯವಿರಲಿಲ್ಲ.

ಅದು ನನಗೆ ವಿಚಿತ್ರವಾಗಿ ತೋರಿತು. ಅತ್ತಿತ್ತ ಮಾತುಗಳು ಹಾರಾಡುತ್ತಿದ್ದರೂ ನಾನು ಕಿವಿಗೊಡಲಿಲ್ಲ. ಬೇರೆಯೇ ಯೋಚನೆ ಗಳು ನನ್ನನ್ನು ಮುತ್ತುತ್ತಿದ್ದುವು .

ಪರಸ್ಪರ ಎದುರು ಬದುರಾಗಿ ನಿಂತಿದ್ದ ಈ ಎರಡು ಶಕ್ತಿಗಳು! ಆ ವರೆಗೆ ಹಣವಂತರು ಪಕ್ಷವೊಂದೇ ದೊಡ್ಡ ಶಕ್ತಿಯೆಂದು ನಾನು ಬಗೆದಿದ್ದೆ. ಅದು ನಿಜವಾಗಿರಲಿಲ್ಲ. ಇಲ್ಲಿ ಇನ್ನೊಂದು ಶಕ್ತಿಯಿತ್ತು -ಹಣವಿಲ್ಲದವರ ಶಕ್ತಿ ....

ಈ ಎರಡು ಶಕ್ತಿಗಳ ನಡುವೆ ನಾನು ಎಲ್ಲಿದ್ದೆ? ದರಿದ್ರರಾದ ಅ ಕೆಲಸಗಾರರ ಪಕ್ಷ ನನ್ನದಾಗಿರಲಿಲ್ಲ....ನನ್ನ ತಂದೆ ಹಿಂದೆ ಅದೇ