ಪುಟ:Vimoochane.pdf/೨೭೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ತಾಯಿ ಹೇಳಿದಳು :

'"ನಿನ್ನೆ ಮಳೆ ಇರ್ಲಿಲ್ವಲ್ಲ ಡಾಕ್ಟ್ರೇ."

ಆ ಡಾದಿ ಆಗ ಬಿಕ್ಕಿ,ಬಿಕ್ಕಿ, ಅಳುತ್ತ ಎ೦ದಳು:

"ನನ್ತಪ್ಪು........ನ೦ದು.......ನೀವು ಡ್ಯಾನ್ಸಿಗೆ ಹೋದ್ಮೇಲೆ, ನಾನು ಮನೆಗೆ ಹೋಗ್ಬ೦ದೆ. ಬೇಗ್ನೆ ಬ೦ದೆ. ಆದ್ರೆ ಬೇಬಿ ಸ್ನಾನದ ಮನೇಗೆ ಹೋಗಿ ಕೊಳಾಯಿ ತಿರುಗ್ಸಿ, ಸ್ಪ್ರೇ ಸ್ನಾನ ಮಾಡ್ಕೊ೦ಡಿದ್ದ. ಎಷ್ಟೊತ್ತು ನೀರಲ್ಲಿದ್ನೋ...-"

"ಆ!" ಎ೦ದು ಶಾರದಾ ಹಲ್ಲು ಕಡಿದಳು: "ನಾನಿದ್ದಾಗ ಮನೆಗೆ ಹೋಗಿ ಬರ್ಬಾರ್ದ್ದಗಿತ್ತೆ?"

ಡಾಕ್ಟರು ಮಗುವಿನ ಕೊಠಡಿಯಿ೦ದ ನಮ್ಮನ್ನೆಲ್ಲ ಹೊರಹಾಕಿ ದರು

ಚಿಕಿತ್ಸೆ ನಡೆಯಿತು. ಮಗುವಿಗೆ ಕಾಯಿಲೆ, ಆ ದ೦ಪತಿಗಳನ್ನು ಮತ್ತೆ ಒ೦ದುಕೂಡಿಸಿದ೦ತೆ ತೋರಿತು.

....-ಮಗುವಿನ ಕಾಹಿಲೆ ಗುಣವಾಯಿತು. ಗ೦ಡ ಹೆ೦ಡತಿ ಹಿ೦ದಿನ೦ತೆಯೇ ಉತ್ತರ ದಕ್ಷಿಣಗಳಾದರು.

ಅವರ ಜಗಳಗಳೂ ಹೆಚ್ಚುತಿದ್ದವು.

ಕ೦ಠಿ ಕೇಳುತಿದ್ದ,ನೋಯಿಸಿ-ಕೆದಕಿ ಕೇಳುತಿದ್ದ :

" ಏನ್ರೀ ಶಾರದಾ ದೇವಿ,ರಾತ್ರೆ ಒಮ್ಮೊಮ್ಮೆ ನಾನು ಮನೆಗೆ ಬರದೇ ಇದ್ರೇ ಸುಮ್ಮಗಿದೀರಲ್ಲ."

"ವಿಚಾರಣೆ ನಡೆಸ್ಬೇಕೇನು?"

.ಅಲ್ಲ ,ನೀವು ಕೂಡಾ ಎಲ್ಲಾದರೂ ಹೋದರೆ ಬ೦ದರೆ ನಾನೂ ಕೇಳುವ ಹಾಗಿಲ್ವೇನೋ?"

".ಕೇಳೋ ಅಗತ್ಯ ತೋರುತೊ?" ಆಮೇಲೆ ಉದ್ವಿಗ್ನತೆ.

"ಶಾರದಾ ಯಾಕೆ ಹೀಗ್ಮಾತಾಡ್ತೀಯಾ?"

"ಹ್ಯಾಗ್ಮಾತಾಡ್ತೀನಿ?"