ಪುಟ:Vimoochane.pdf/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಮೋಚನೆ

೩೩೫

ಆತ ಕೂಗಿಕೊಳ್ತುತಿದ್ದ ನಿಜ; ಆದರೆ ಆಕೆ ಏಳಲಿಲ್ಲ.

ಸಂದೇಹ ತಲೆದೋರಿತು ಅವನಿಗೆ....ಆದರೆ ಏರಿದ್ದ ಕೋಪ

ಇಳಿದಿರಲಿಲ್ಲ....ಬಿದ್ದಿದವಳು ಏಳದೇ ಇದ್ದುದನ್ನು ಕಂಡು ಆ ಕೋಪ

ಇಳಿಯ ತೊಡಗಿದಾಗ-

ಶ್ರೀಕಂಠ ಧಿಗ್ಗನೆದ್ದು ಅವಳ ಮೈಮುಟ್ಟಿದ ಕೈಕುಲುಕಿದ......

ತಣ್ಣಗಾಗಿತ್ತು ಎಲ್ಲವೂ....ಅದು ವಿಸ್ಮಯಕರವಾದ ಸಂಗತಿ.ಹಾಗಾ

ಗುವುದು ಸಾಧ್ಯವೆ ?

ತನ್ನ ಪಾಲಿಗೆ ಶಾರದಾ ಇದ್ದರೂ ಸತ್ತಹಾಗೆ-ಎಂದು ಶ್ರೀಕಂಠ

ಎಷ್ಟೋ ವೇಳೆ ಭಾವಿಸಿದ್ದನೇನೋ ನಿಜ....ಆದರೆ ಅಂಥ ಸಾವು........

ಆ ಆಂಗೈಗಳು.....ಎದುರು ನಿಲವುಗನ್ನಡಿಯಿತ್ತು......ಅದರಲ್ಲಿ ತೋರ

ಬಂದ ತನ್ನಮುಖ! ಓ!

ಆ ಮೇಲೆ ಕೆಲವು ನಿಮಿಷಗಳು-ಸಿಡಿಯುತಿದ್ದ ಮೆದುಳು

ಹತೋಟಿಗೆ ಬಂದತನಕ.....

ಶ್ರೀಕಂಠ ಬಾಗಿಲೆಳೆದುಕೊಂಡು,ಅದಕ್ಕೆ ಅಂಟಿಕೂಂಡಿದ್ದ ಬೀಗದ

ಕೈಯನ್ನು ತಿರುವಿದ.ತನ್ನ ಕೊಠಡಿಗೂ ಬೀಗಹಾಕಿಕಕೊಂಡು ಹೊರ

ಹೊರಟ.ಕೆಳಹಜಾರದಲ್ಲಿ ಉದ್ಯಾನದಲ್ಲಿದ್ದ ಸೀಮೆನಾಯಿ ಬಾಲ

ವಾಡಿಸುತ್ತಾ ಬಂತು.ಅದನ್ನು ಗದರಿಕೆಯ ನಟನೆಯಿಂದ ದೂರ

ವಿರಿಸ ಆತ ಬೀದಿಗಳಿದ.

ಅದೀಗ ಶ್ರೀಕಂಠ್ ಹೇಳಿದ ಕತೆ,

"ನೀನೇ ಹೇಳು ಚಂದ್ರೂ..... ಈಗೇನ್ಮಾಡ್ಲಿ.... ಎನ್ಮಾಡ್ಲಿ ಈಗ ?........."

ನಾನು ಶಾಂತನಾಗಿ ಯೋಚಿಸಿದೆ,ಶಾರದೆ ಸತ್ತಳೆಂದು

ಇನ್ನೊಂದು ಜೀವಕ್ಕೆ ಹಾನಿಯೊದಗುವುದರಲ್ಲಿ ಅರ್ಥವಿರಲಿಲ್ಲಿ.

ಶ್ರೀಕಂಠನ ವ್ಯಕ್ತಿತ್ವಕ್ಕೆ ಕುಂದುಬರುವ ಸನ್ನಿವೇಶವನ್ನಂತೂ ಊಹಿ

ಸುವುದಾದರೂ ಸಾಧ್ಯವೆ?

"ಕಂಠಿ,ಮನೇಲಿ ಸ್ಲೀಪಿಂಗ್ ಟೇಬ್ಲೆಟ್ಸ್ ಇವೆಯೇನು ?"