ಪುಟ:Vimoochane.pdf/೩೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಸಂಪಾದಿಸುತ್ತಿದ್ದ ಗುಮಾಸ್ತೆ-ದೊಡ್ಡ ಮನುಷ್ಯ. ಆ ಗೋಡೆಯ ಮೇಲೆ ಅವನ ಚಿತ್ರಪಟ ಬೇರೆ ತೂಗುತ್ತಿತ್ತಲ್ಲವೆ? ಅಮ್ಮ ನದಿಯ ಪಾಲಾದ ಕತೆ ಕೇಳಿ,"ಆಯ್ಯೋ ಪಾಪ, ಹಿಂಗೂ ಆಯ್ತೆ? ಎಲ್ಲಾ ಪ್ರಾರಬ್ಧ ಕರ್ಮ!" ಎಂದು ಹೇಳಿ, ಆತ ಸಹಾನುಭೂತಿ ತೋರಿಸ ಲಿಲ್ಲವೆ? ಹಳ್ಳಿಯಲ್ಲಿದ್ದಾಗ ಆತ ಮತ್ತು ತಂದೆ ಇಬ್ಬರೂ ಜತೆಯಾಗಿಯೇ ಮಾವಿನಕಾಯಿ ಕೀಳಲು ಹೋಗುತ್ತಿದ್ದರಂತೆ."ನನ್ನೈಲಾಗಾಕ್ಕಿಲ್ಲ. ನಂಗೂ ನೀನೆ ತಕ್ಕೊಡೊ” ಎಂದು ಆತ ಗೋಗರೆಯುತ್ತಿದ್ದನಂತೆ. ಆದರೆ ಈ ದಿನ, “ಊಟಕ್ಕಿದ್ದು ಹೋಗಿ" ಎಂಬ ಇಂದು ಒಳ್ಳೆಯ

ಮಾತೂ ಅವನ ಬಾಯಿಂದ ಹೊರಬೀಳಲಿಲ್ಲ... ಥೂ' ಎಂದು ನನ್ನ ತಂದೆ ಉಗುಳಿದುದನ್ನು ಕಂಡೆ. ಹಾಗೆ ಉಗುಳಿದಾಗ ಕೋಪ ಮತ್ತು ತುಚ್ಚಿಕಾರದಿಂದ ಆತ ಕನಲಿ ಕೆಂಡವಾಗಿದ್ದನೆಂದು ನನಗೆ ತಿಳಿದಿತ್ತು.

ಯಾರೋ ಕಡಲೆಕಾಯಿಯ ದಾನ ಮಾಡಿದರು. ಅದನ್ನುತಿಂದು, ತೊಗಟೆಗಳನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡಿ ಬದಿಗೆ ಸರಿಸಿ, ನೀರು ಕುಡಿದುನಾವು ಮಲಗಿದೆವು. ಅಲ್ಲಿಯೇ – ಹಿಂದಿನ ರಾತ್ರೆ ಮಲಗಿದ್ದಲ್ಲಿಯೇ, ತಂದೆ ತೇಗಿನ ಸ್ವರ ಹೊರಡಿಸಿದ ಆ ಸ್ವರ ಹೊರಡಿಸಿ "ಖೋ, ಖೋ” ಎಂದು ನಕ್ಕ, ನನಗೆ ಹೆದರಿಕೆಯಾಗಿ “ ಅಪಾ, ಅಪ್ಪಾ” ಎಂದೆ. ಆತ ನಗು ನಿಲ್ಲಿಸಲೇ ಇಲ್ಲ, ಹಳ್ಳಿ ಬಿಟ್ಟು ತಾಯಿ ಯನ್ನು ಕಳೆದುಕೊಂಡು ನಗರ ಸೇರಿದ ಇಷ್ಟುದಿನಗಳ ವರೆಗೂ ಆತ ನಕ್ಕಿರಲಿಲ್ಲ, ಆದರೆ, ಈ ನಗು? ನಗುವಿನಲ್ಲಿ ವಿವಿಧ ರೀತಿಗಳಿರುತ್ತವೆ, ನಿಮಗೆ ಗೊತ್ತೆ ? ಆಗ ನನಗೆ ತಿಳಿದಿರಲಿಲ್ಲ, ಈಗ ಬಲ್ಲೆ.

ನಮ್ಮ ಜೀವನದಲ್ಲಿ ಮತ್ತೊಂದು ರಾತ್ರೆ ಮುಕ್ತಾಯವಾಗಿ ಬೆಳಕು ಹರಿಯಿತು. ಅದು ಭಾನುವಾರ, ಮತ್ತೆ ಅದೇ ಬಾವಿಕಟ್ಟೆ. ಮುಖ ಮಾರ್ಜನ... -

ಆತ ನಮ್ಮನ್ನು ಕಂಡು ಆಗ ಮಾತನಾಡಿಸದೇ ಇದ್ದಿದ್ದರೆ ನಮ್ಮ ಜೀವನ ಪ್ರವಾಹ ಹೇಗೆ ಹರಿಯುತ್ತಿತ್ತೋ ಹೇಳಲಾರೆ. ಆತ ನಿಂದಾಗಿ, ಹಳ್ಳಿಯ ನಂಬಿಗಸ್ಥ ಎನಿಸಿಕೊಂಡಿದ್ದ ನನ್ನ ತಂದೆ ಪೇಟೆಯ ಕೂಲಿಗಾರನಾದ.