ಪುಟ:Vimoochane.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊತ್ತು ಕಳೆಯುವ ಹಾಗಿರಲಿಲ್ಲ.

" ನಂಗೆ ಪಾಸಾಯ್ತು ಸಾರ್."

" Good, Good."

ನಾನು ಪಾಸಾದಾಗ ನನ್ನ ತಂದೆಗೆ ಆಗಿದ್ದ ಸಂತೋಷದ ನೂರರಲ್ಲಿ ಒಂದು ಪಾಲೂ ಲೋಕಪರಾಯಣ ರಾಮಸ್ವಾಮಿಯವರ ಮುಖದಮೇಲೆ ಕಾಣಿಸಲಿಲ್ಲ. ಆದರೂ ಅವರು ಪ್ರೋತ್ಸಾಹದ ಮಾತನ್ನಾಡಲಿಲ್ಲವೆ? ಎರಡು ಸಾರಿ ಗುಡ್ ಗುಡ್ ಎನ್ನಲಿಲ್ಲನವೆ? ನಾನು ಉತ್ತೇಜಿತನಾಗಿ ಮಾತು ಮುಂದುವರಿಸಿದೆ.

"ಆದರೆ ನಮ್ಮ ತಂದೆಗೆ ಕಾಯಿಲೆನಂತೆ ಸಾರ್. ಟಿ. ಬಿ. ನಂತೆ ಸಾರ್. ಔಷಧಿಗೆ ನೂರಾರು ರೂಫಾಯಿ ಬೇಕಂತೆ ಸಾರ್......"

ನೂರಾರೂ ಎಂದರೆ ನಿಜವಾಗಿ ಎಷ್ಟೆಂಬುದು ನನಗಿಂತಲೂ ಹೆಚ್ಚಾಗಿ ಅವರಿಗೆ ತಿಳಿದಿತ್ತೇನೊ. ನನ್ನ ತಂದೆಯಾದರೆ ಅಷ್ಟು ಹಣದ ಸಂಪಾದನೆಗಾಗಿ ಅದೆಷ್ಟೊ ವರ್ಷ ದುಡಿಯಬೇಕು. ದೊಡ್ಡಮನು ಷ್ಯರು ಕೆಲವೊಮ್ಮೆ ಕಣ್ಣುಮುಚ್ಚಿ ತೆರೆಯುವುದರೊಳಗಗಿ ಸಹ ಸಹಸ್ರ ಸಂಪಾದನೆ ಮಾಡುವರೆಂದು ನಾನು ಕೇಳಿದ್ದೆ. ನಾನು ಹಣದ ಮಾತನ್ನೆತ್ತಿ ಒಂದು ಕ್ಷಣವಾಗಿತ್ತಷ್ಟೆ - ಕಣ್ಣು ಮುಚ್ಚಿ ತೆರೆಯುವ ಹೋತ್ತು. ಅವರು ಕುಳಿತಲ್ಲಿಂದ ಎದ್ದರು.

"ಬಡವರನ್ನು ಕಂಡರೆ,ಅದರಲ್ಲೂ ಬುದ್ದಿ ವಿದ್ಯೆಯಿರೋರನ್ನ ಕಂಡರೆ ಫ್ರೀತಿ ನನಗೆ. ಆದರೆ ನೊಡಪ್ಪ, ಪೂರ್ತಿ ಸಹಾಯ ನಾನು ಮಾಡೋದು ಸರಿಯಲ್ಲ. ಬೇರೆಯವರಿಗೂ ಫುಣ್ಯದ ಅವಕಾಶ ಸಿಗ ಬೇಕು. ನಾನೂ ಒಂದಿಷ್ಟು ಕೊಡ್ತೀನಿ."

ಅವರು ಒಳಹೋದರು. ನನ್ನ ಹೃದಯ ಸಂತೋಷದಿಂದ ಬಿರಿಯುತ್ತಿತ್ತು. ನೂರಾರು ರುಪಾಯಿ ಅವರು ಕೊಡಲಾರರು ನಿಜ. ಆದರೆ ಸದ್ಯಃ ದೊರೆಯುವ ಹಣದಲ್ಲಿ ಚಿಕಿತ್ಸೆ ಆರಂಭಿಸಬಹುದಲ್ಲಾ? ಇಂಚೆಕ್ಷನ್ ಕೊಡಿಸಬಹುದಲ್ಲಾ? ಆ ಕಿರಿದುಮೂಗಿನ ವಕ್ರ ಹುಬ್ಬಿನ ಹುಡುಗಿಯನ್ನು ನಾನು ಮರೆತೆ- ನಾಲಿಗೆಯಲ್ಲಿ ನೀರು ತೊಟ್ಟಕ್ಕು,