ಪುಟ:Vimoochane.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತ್ತಿದ್ದ ಆ ನಾಯಿಯನ್ನೂ ಕೂಡ. ಜೀವನವೆಲ್ಲಾ ಕಹಿಯಲ್ಲ, ಕತ್ತಲೆಯಲ್ಲ. ಸೀಮೇಎಣ್ಣೆಯ ಮಿಣುಕು ದೀಪದ ಕರಿ ಹೊಗೆಯೇ ನಮ್ಮ ಬಾಳ್ವೆಯನ್ನು ಮುಚ್ಚಿಲ್ಲ. ವಿದ್ಯುತ್ ದೀಪಗಳೂ ಆಗೋಮ್ಮೆ ಈ ಗೊಮ್ಮೆಯೇ ಜೀವನದ ಆಮೃತಘಳಿಗೆಯೊ ಏನೋ.....

ಘಳಿಗೆಯ ಅವಕಾಶಕ್ಕೆ ಆಸ್ಪದವಿಲ್ಲದ ಹಾಗೆ ಮತ್ತೆ ಯಾರೊ ಬರುತ್ತಿದ್ದ ಸದ್ದಾಯಿತು. ನನ್ನ ಹಿರಿತನವನ್ನು ಕಂಡುಹಿಡಿದ ಆ ಮಾಹಾನುಭಾವರೇ ಬರುತ್ತಿದ್ದರೆಂದು ಭಾವಿಸಿದೆ ಆದರೆ ಬಂದ ವ್ಯಕ್ತಿ, ಆ ಪಪ್ಪನ ಮಗಳು--ಅದೇ ಹುಡುಗಿ.

ಆಕೆ ಮುಷ್ಟಿ ಸಡಿಲಿಸಿ, "ತಗೋ," ಎಂದಳು. ನಾನು ಕೈ ಚಾಚಿದೆ. ರೂಪಾಯಿ ನಾಣ್ಯಗಳೆರಡು ಸದ್ದುಮಾಡಿದುವು.

ನನ್ನನ್ನು ನಾನೇ ನಂಬಲಿಲ್ಲ ನನ್ನ ಸುತ್ತೆಲ್ಲವೂ ಗಾಡವಾದ ಕತ್ತಲು ಕವಿದಹಾಗಾಯಿತು. ಏನು ಇದರ ಅರ್ಥ? ಇದರ ಅರ್ಥ ವೇನು?......

ನಾನು ಚೇತರಿಸಿಕೊಂಡೆ, ಆದರೆ ಆಕೆ ಅಲ್ಲಿರಲ್ಲಿಲ್ಲ.

ಸ್ವಲ್ಪ ಹೊತ್ತು ಮೂಕನಾಗಿ ಅಲ್ಲಿ ನಿಂತೆ. ಆ ದೊಡಮನು ಷ್ಯರು ಹೊರಗೆ ಬರಬಹುದು; ಎಲ್ಲೋ ಏನೊ ತಪ್ಪಾಗಿರಬೇಕು--ಎಂದು ಕಾದುನಿಂತೆ.

ಕೊನೆಗೆ ಬಂದವನು ಜವಾನ ಅವನು ನನ್ನ ಸುಖದುಃಖ ವಿಚಾರಿಸಿದ. ಆ ವಿಚಾರಣೆಯ ವೈಖರಿ?.....

"ಯಾಕೊ? ಯಾಕ್ ನಿಂತಿದಿಯಾ ಇನ್ನೂ? ಭಿಕ್ಷ ಸಿಗ್ಸ್ಲಿಲ್ಲ ನವೇನೋ?ಹೋಗು. ಹೋರಟೋಗು?"

ನನ್ನು ಮೆಲ್ಲನೆ ಮುಂದೆ ಬಂದು, ಒಂದು ಹೂ ದಾನಿಯನ್ನು ಹೊತ್ತು ನಿಂತಿದ್ದ ಪುಟ್ಟ ಮೇಜಿನಮೇಲೆ ಆ ಎರಡು ನಾಣ್ಯಗಳನ್ನೂ ಇರಿಸಿದೆ. ಸರಕ್ಕನೆ ತಿರುಗಿ ದಡದಡನೆ ಮೆಟ್ಟಲಿಳಿದು ಉದ್ಯಾನವನ್ನು ಹಾದು ಬೀದಿಗೆ ಓಡಿದೆ.

ಜವಾನ ಹಿಂದಿನಿಂದ ಕೂಗಿ ಕರೆಯುತ್ತಿದ್ದ......