ಪುಟ:Vimoochane.pdf/೮೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

" ಯಾವ ಚಂದ್ರು, ಯಾವ ಚಂದ್ರಶೇಖರ ? "

ತಂದೆಗೆ ತುಂಬ ದಿಗಿಲಾಯಿತು. ಆಶ್ಚರ್ಯವೂ ಆಯಿತು. ಚಂದ್ರಶೇಖರನ ಹೆಸರು ಕನ್ನಡ ಉಪಾಧ್ಯಾಯರಿಗೆ ತಿಳಿಯದೆಂದರೇನು ? ಆದರೆ ಸ್ವಲ್ಪ ಹೊತ್ತು ಯೋಚಿಸಿದ ಮೇಲೆ ಆ ಉಪಾಧ್ಯಾ ಯರು ನೆನಪಾದವರ ಹಾಗೆ ಬಾಯಿ ತೆರೆದರು.

" ಓ ಚಂದ್ರಶೇಖರನಾ?" ಎಂದರು.

ಹಾಗೆಯೇ ಸ್ವರವೇರಿಸಿ, " ಏನಯ್ಯ ಸ್ಕೂಲು ಬಿಡಿಸ್ಬುಟ್ಟೆ ಯಲ್ಲಯ್ಯ-ಹೀಗ್ಮಾಡಬಹುದಾ ? " ಎಂದನು.

" ಸ್ವಾಮಿ ಸ್ವಾಮಿ, ಯಾಕೆ ಯಾಕೆ ? .... ....ನಮ್ಮ ಚಂದ್ರು. ಸ್ಕೂಲಿಗೆ ಬರ್ತಾ ಇಲ್ವ ? ಸ್ಕೂಲು ಬಿಟ್ಟುಟ್ನ ? "

ಈಗ ದಿಗಿಲು ಆಶ್ಚರ್ಯಗಳ ಅನುಭವವಾದುದು ಕನ್ನಡ ಪಂಡಿತರಿಗೆ.

"ಎಲ್ಲಿ? ಈ ವರ್ಷ ಒಂದು ಹತ್ತು ದಿವಸ ಬಂದ್ನೊ ಇಲ್ವೊ. ಆಮೇಲೆ ಶಾಲೆ ಬಿಟ್ಬಿಟ್ಟ. ಅನ್ಯಾಯ! ಅನ್ಯಾಯ ! "

ಯಾರಿಗೆ ಯಾರು ಅನ್ಯಾಯ ಮಾಡಿದ್ದರು ? ಯಾರಿಗೆ ಅನ್ಯಾಯವಾಗಿತ್ತು ? ಹಾಗೆ ಯೋಚಿಸುವುದರಲ್ಲಿ ಅರ್ಥವಿರಲಿಲ್ಲ.

ನನ್ನೆದುರಿಗಾದರೋ ಕಾಣುತ್ತಲಿದ್ದುದೊಂದೋ---ಅದು ನನ್ನ ತಂದೆಗೆ ನಾನು ಬಗೆವ ಅನ್ಯಾಯ.

ಹಾಗೆ ನಡೆದುದನ್ನು ಆ ಬಳಿಕ ಮನೆಯಲ್ಲಿ ತಂದೆ ನನಗೆ ವಿವರಿಸಿದಾಗ, ನನ್ನ ಪ್ರೀತಿಯ ಉಪಾಧ್ಯಾಯರಾಗಿದ್ದ ಆ ಪಂಡಿತರನ್ನೂ ತುಂಬ ನೋವು ಉಂಟಾಗುವ ಸುದ್ದಿ ಕೇಳಿ ಸಹಿಸಿಕೊಂಡಿದ್ದ ತಂದೆಯನ್ನೂ ನಾನು ಮನಸ್ಸಿನಲ್ಲೇ ಚಿತ್ರಿಸಿಕೊಂಡೆ. ಒಂದಲ್ಲ ಒಂದು ದಿನ ನನ್ನ ರಹಸ್ಯ ಬಯಲಾಗುವುದೆಂದು ನನಗೆ ಗೊತ್ತಿತ್ತು. ಆದರೆ ಇಷ್ತು ಬೇಗನೆ ಹಾಗಾಗುವುದೆಂದು ಯಾರು ಭಾವಿಸಿದ್ದರು ?

ತಂದೆಯ ಕಣ್ಣುಗಳು ತೋಯ್ದಿದ್ದುವು. ಬಹಳ ದಿನಗಳ ಮೇಲೆ ಆತನ ಕಂಬನಿಯನ್ನು ಕಂಡೆ. ಹಿಂದೆಯಾಗಿದ್ದರೆ ಅವನು ಮತ್ತೂ ಒಂದಷ್ಟು ಮಾತನಾಡುತ್ತಿದ್ದ. ಆರಂಭದಿಂದಲೂ ತನ.