ಪುಟ:Yugaantara - Gokaak.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತತೆ U ಇರಬೇಕಲ್ಲ, ಎಂದು ಪ್ರಶ್ನೆ ಎತ್ತಿದೆ. ತಾವು ಅಧ್ಯಕ್ಷರಾಗ ಬೇಕೆಂದು, ಎಂದು ಅವರು ನನ್ನನ್ನು ಬೆನ್ನನಿಸಿದರು. ಈ ಸುದ್ದಿ ತಿಳಿದಾಗ, ತಾನು ಸಂಸ್ಥೆಗೆ ಇಪ್ಪತ್ತೈದು ಸಾವಿರ ರೂಪಾಯಿ ಕೊಡುವದಾಗಿ ಟ್ರಸ್ಸಿನವರಿಗೆ ಬನಸಿಲಾಲನು ಹೇಳಿದ. ಆಗ ಸದಸ್ಯರು ಹಿಂದೆ ಮುಂದೆ ನೋಡಿದರು. ನನಗೆ ಕೊಟ್ಟ ವಚನವೆಲ್ಲ ? ಎಂದು ನಾನು ಬಿಗಿಹಿಡಿದೆ. ಕಾಂತಿಚಂದ್ರರ ಸರತಿ ಮುಗಿಯಲಿ ಎಂದು ಅವರು ಬನಸಿಲಾಲರಿಗೆ ಹೇಳಿಬಿಟ್ಟರು ! ರೋಹಿಣಿದೇವಿ : ಒಳ್ಳೆಯದಾಯಿತು. ಈ ಸ್ವಾರ್ಥಸಾಧಕರ ಮಗ್ಗಲು ಹೀಗೆಯೆ ಮುರಿಯಬೇಕು. ಇಂದ್ರಪ್ರಸ್ಥದಲ್ಲಿ ಬನಸಿಲಾಲನ ಪ್ರಸ್ಥ ಇನ್ನು ಬೆಳೆಯುವದು ಸಾಧ್ಯವಿಲ್ಲ. ಈ ಎಲ್ಲ ಕೆಲಸಕ್ಕೆ ನಿಮ್ಮಂಧ ಹಸಿರು ಬೇಕು; ಕಿಶನ್ ತಿಕೋರರಿಂದ ಮೃದು ಸ್ವಭಾವಿಗಳಲ್ಲ. Tಂತಿಚಂದ್ರ : ನನ್ನ ಸಾಹಸ ಎಲ್ಲಿಗೆ ಹತ್ತು ? ಅದಕ್ಕೆ ನಿನ್ನ೦ಧ ರಾಜಕಾರಣವಿಶಾರದೆಯದು ಬೇಕು ! ಅದಿರಲಿ, ರ್ರೋರೆ ! ( ಮೃಣಾಲಿನಿಯ ಕಡೆಗೆ ನೋಡುತ್ತ) ಎಲ್ಲರನ್ನೂ ಜಯಿಸಬಹುದು; ಆದರೆ ಈ ನಮ್ಮ ಮೃಣಾಲಿನಿಯನ್ನು ಜಯಿಸುವದು ಹೇಗೆ ? ಇದು ನನಗೆ ತಿಳಿಯ ದಾಗಿದೆ ? ೧{ಹಿಣಿದೇವಿ : ( ಮೃಣಾಲಿನಿಯ ಕಡೆಗೆ ತಿರುಗಿ) ಏನು ಓಮ೨ ದಿ. ಮೃಣಾಲಿಸಿ ! ಎಂದಿಲ್ಲೊಂದು ದಿನ ಬೆಟ್ಟಗೆಂದು ಬರುತ್ತೀ. ಬಂದಾಗ ಕೈಯಲ್ಲಿ ಪುಸ್ತಕ ಹಿಡಿದುಕೊಂಡೇ ಬರುತ್ತಿಯಲ್ಲ ! ಮೃಣಾಲಿನಿ : ( ಪುಸ್ತಕದಿಂದ ಮೋರೆ ಮೇಲೆ ನನಗೆ ಊಟ ಮಾಡಲು ಬಿಡುವಿರುವದಿಲ್ಲ. ಆದರೂ ನೀವು ಹೇಳಿದ್ದೀರೆಂದು ಆಗೀಗ ವಿಶ್ವ ಪ್ರಯತ್ನ ಮಾಡಿ ಬರುತ್ತೇನೆ. ಕೆಲಸ ಮಾಡಬೇಕೆನ್ನುವವರು; ಇಂದಿಲ್ಲ ನಾಳೆ ನನ್ನ ಹಾದಿಗೆ ಬಂದಾರು : ಎಂಬ ಪ್ರತೀಕ್ಷೆಯೂ ಅದರಲ್ಲಿ ಕೂಡಿದೆ ಎನ್ನಿರಿ ! ಆದರೆ ನಾನು ಇಲ್ಲಿ ಬಂದಾಗೆಲ್ಲ ನಡೆಯುತ್ತಿರುವ ಮಾತನ್ನು ಕೇಳಿ ಕೇಳಿ ಬೇಸರ ಬಂದಿದೆ. ನನ್ನ ಸಹಾಯಕ್ಕೆ ಪುಸ್ತಕವಾದರೂ ಇರಲಿ ಎಂದು ಒಂದನ್ನು ತೆಗೆದುಕೊಂಡು ಬರುತ್ತೇನೆ. ಈ ಪುಸ್ತಕದ ಹೆಸರು - ಮಾರ್ಕ್ಸಎಂಜರ ಪತ್ರವ್ಯವಹಾರ' ಎಂದು. ಇಂಥ ಪುಸ್ತಕ ನಿಮ್ಮ ಕಣ್ಣಿಗಾದರು ಬಿದ್ದರೂ ಎಷ್ಟೋ ಕೆಲಸವಾಯಿತು ! ಎ