ಪುಟ:Yugaantara - Gokaak.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು ? ಮೃಣಾಲಿನಿ : ( ಕುಳಿತುಕೊಳ್ಳುತ್ತ ) ಅದೇಕೆ ! ಇಷ್ಟೊಂದು ಗಿರ್ರನೇಶ್ವ ಉಪಚಾರವೇಕೆ ? ಹೋ ಹೋ ಹೋ ಎಂದು ಮನೆ ಹಾರಿಬೀಳುವ ಸ್ವಾಗತವೇಕೆ ? ಇದಾವುದೂ ಅವಶ್ಯವಿಲ್ಲ. ಬನಸಿಲಾಲರ ಮನೆಗೆ ಹೊರ ೬ದೆ. ಹಾದಿಯಲ್ಲಿ ನಿನ್ನ ಬೋರ್ಡು ಕಂಡಿತು. ಈ ಪ್ರಾಣಿ ಏನು ಮಾಡು ತಿದೆ ನೋಡೋಣ ಎಂದು ಹಣಿಕಿ ಹಾಕಿ ಹೋಗಲು ಬಂದೆ. ಕೋಸಲೇಂದ್ರ : ಒಳ್ಳೆಯದಾಯಿತು, ಬಹಳ ಒಳ್ಳೆಯದಾಯಿತು. ಅದರಿಂದ ಈ ಪ್ರಾಣಿಗೆ ಎಷ್ಟು ಸಂತೋಷವಾಗಿದೆಯೆಂಬುದರ ಕಲ್ಪನೆ ನಿನಗಿಲ್ಲ. ಎಲ್ಲರನ್ನೂ ಬಿಟ್ಟು ಬನಸಿಲಾಲರ ಕಡೆಗೇಕೆ~, ತಮ್ಮ ಸ್ವಾರಿ ಹೊರಟಿದ್ದು? ಮೃಣಾಲಿನಿ : ಯಾರು ಕಾರ್ಲ ಮಾರ್ಕ್ಸನ ತತ್ವಗಳನ್ನು ತಿಳಿಯಲು ಹವಣಿ ಸುವರೋ ಅವರ ಕಡೆಗೆ ಹೋಗಿ ತಿಳಿಸಿಕೊಡುವದು ನನ್ನ ಕರ್ತವ್ಯ. ಬನ ಲಾಲರೇನು, ಮುನಸಿಲಾಲರೇನು ? ಎಲ್ಲರೂ ನನಗೆ ಅಷ್ಟೇ, ಕೋಸಲೇಂದ್ರ: ಇದಾವ ಪುಸ್ತಕ,- ನಿಮ್ಮ ಕೈಯಲ್ಲಿರುವುದು ? ಮೃಣಾಲಿನಿ : ಮಾರ್ಕ್ಸ್-ಏಂಜಲ್ಪರ ಪತ್ರವ್ಯವಹಾರ, ಬನಸಿಲಾಲರು - ಇದನ್ನು ಓದಿ ತಿಳಿದುಕೊಳ್ಳಬೇಕೆಂದಿದ್ದರು. ಕೋಸಲೇಂದ್ರ : ಕು:ಮೈಡ್ ಮೃಣಾಲಿನಿ, ನಿಮ್ಮಲ್ಲಿ ನನ್ನದೂ ಒಂದು ಬಿನ್ನಹವಿದೆ. ಮೃಣಾಲಿನಿ : ಇದೇನು ! ಕವಿಗಳೂ ಆಗೀಗ ಬಿನ್ನವಿಸುವರೇನು ? ಕೋಸಲೇಂದ್ರ : ಅದೇನೋ ಗೊತ್ತಿಲ್ಲ. ಆದರೆ ನಿಮ್ಮನ್ನು ನೋಡಿದಂದಿ ನಿಂದ ಮಾರ್ಕ್ಸವಾದವನ್ನು ತಿಳಿದುಕೊಳ್ಳಬೇಕೆಂಬ ಆಸೆ ನನ್ನಲ್ಲಿ ಪ್ರಬಲ ವಾಗಿದೆ, ನನಗೂ ಪಾಠ ಹೇಳುವಿರಾ? ನಿಮಗೆ ಹೆಚ್ಚು ಶ್ರಮ ಕೊಡುವದಿಲ್ಲ. ವಾರಕ್ಕೆ ಒಂದು ಸಲ ಹೇಳಿದರೆ ಸಾಕು, ಮೃಣಾಲಿನಿ : ನಿಮ್ಮಂಥ ಕವಿಗಳಿಗೆ ನಾನು ಪಾಠ ಹೇಳುವ ಅವಶ್ಯಕತೆಯೆಲ್ಲಿ? ಪುಸ್ತಕಗಳನ್ನು ತಂದು ಕೊಡುತ್ತೇನೆ. ನೀನಾಗಿ ಓದಬಹುದಲ್ಲ ? ಕೋಸಲೇಂದ್ರ : ಹಾಗಲ್ಲ, ಕಾ:ಮೈಡ್' ಮೃಣಾಲಿನಿ ! ಕವಿಯು ತನ್ನ ಕವನ ವನು ತಾನೇ ಹೇಳಿದರೆ ಅದು ರಸ ತುಂಬಿ ತಿಳಿಯಲು ಸುಲಭವಾಗುತ್ತ ದೆ. ಮಾರ್ಕ್ಸ್ತತ್ವದ ದಾರ್ಶನಿಕರು ನೀವು. ನಿಮ್ಮ ದನಿಯು ಆ ತತ್ವದೊಡನೆ 2