ಪುಟ:Yugaantara - Gokaak.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು ೧ ಮೃಣಾಲಿನಿ : ನಾನೇ ಬರುತ್ತೇನೆ. ನಮ್ಮ ಮನೆಗೆ ಬಂದರೆ,- ಬರಿ ನಿಚ್ಚ. ಣಿಕೆಗಳು ಅಲ್ಲಿ ನಿಮ್ಮ ಕಣ್ಣಿಗೆ ಬೀಳುವವು. ನನ್ನ ತಂದೆ ಸಾಮಾಜ್ಯ ಸರ ಕಾರದ ಸೇವೆ ಮಾಡಿ ದೊಡ್ಡ ಪೆನ್ಶನ್ ತೆಗೆದುಕೊಂಡು ಕುಳಿತಿದ್ದಾರೆ. ನನ್ನ ತಮ್ಮ ಐ. ಸಿ. ಎಸ್. ಆಗಬೇಕೆಂದು ಅವರ ವಿಶ್ವ ಪ್ರಯತ್ನ ನಡೆದಿದೆ. ಚಾಕರಿ, ನೌಕರಿ, ಮಾನ, ಅಧಿಕಾರ, ಇದರ ಹೊರತು ಅಲ್ಲಿ ಮಾತೇ ಇಲ್ಲ ! ಉಹ್ 1 ಅದರ ನೆನಪಾದರೆ ಮೈಗೆ ಮುಳ್ಳು ಹಚ್ಚುತ್ತದೆ ! ನಾನು ತಂದೆಗೆ ಹೇಳಿಬಿಟ್ಟದೇನೆ, ನಾನು ನಿಮ್ಮ ಪಾಲಿಗಿಲ್ಲವೆಂದು ತಿಳಿಯಿ ರೆಂದು ಈಗ ನಾನು ಮನೆಗೆ ಹೋಗುವದು,- bed and breakfast ಗೆ ಮಾತ್ರ! ಕೋಸಲೇಂದ್ರ : ಮತ್ತೆ ರೋಹಿಣಿದೇವಿಯವರ ಮನೆ ಇದೆಯಲ್ಲ ? ಮೃಣಾಲಿನಿ : ಮನೆ ಏನೋ ಇದೆ. ಅವರು ನನ್ನನ್ನು ಪ್ರೀತಿಸುವದೂ ನಿಜ. ಆದರೆ ತಂದೆಯಲ್ಲಿ ಸಾಮಾಜಸೇವೆಯ ಅಹಂಕಾರ ತುಂಬಿದ್ದರೆ ಇವರಲ್ಲಿ ಸಮಾಜಸೇವೆಯ ಅಹಂಕಾರ ತುಂಬಿದೆ. ಕೋಸಲೇಂದ್ರರೆ. ಮಾರ್ಕವಾದಿಯು ವಾಸ್ತವವಾದಿ. ಅವನಿಗೆ ಆತ್ಮವಂಚನೆಯನ್ನು ಕಂಡರೆ ಬರ್ಷಣ. ಆ ನಿಮ್ಮ ಕಿಶನ್ ಕಿಶೋರರ ಆಧ್ಯಾತ್ಮಿಕ ಸ್ವಪ್ನವನ್ನು ಕಂಡಂತೆ! ಕೋಸಲೇಂದ್ರ: ( ನಗುತ್ತ ) ಅದು ಹೋಗಲಿ ಬಿಡಿರಿ! ನಾವು ಮೊದಲು ಯಾವ ಪುಸ್ತಕ ಪ್ರಾರಂಭಿಸೋಣ ? ಮೃಣಾಲಿನಿ : ಮೊದಲು Manifesto ಓದಬೇಕು. ಅದರಲ್ಲಿ ಎಲ್ಲ ಮಾರ್ಕ್ಸ್ ತತ್ವಗಳ ಸಾರವಿದೆ. ಕೋಸಲೇಂದ್ರ : ಆಗಬಹುದು.......... ( (ಕೂಸಲೇಂದ್ರ ಬಾಬು ! ಕೂಸಲೇಂದ್ರ ಬಾಬು! ” ಎಂದು ಹೊರಗಿ ನಿಂದ ಕೂಗುತ್ತ ಬನಸಿಲಾಲನು ಬರುತ್ತಾನೆ ) ಓಹೊ ! ಬನಸಿಲಾಲರು ! ಹೀಗೆ ಬನ್ನಿರಿ! ಇವತ್ತು ಯಾವ ಬೇಪಾರಿ ಗತ್ತು ಹಾಕಿಕೊಂಡು ಬಂದಿದ್ದಿರಿ ? (ನಗುತ್ತಾನ) ಬನಸಿಲಾಲ : ( ನಗುತ್ತ ಕುಳಿತುಕೊಂಡು ) ನೀನೇನು ಕವಿಗಳು ! ನಿನ್ನು ಕಲ್ಪನಾಶಕ್ತಿ ನಿರಂಕುಶ ! ಓಹೊ ! ಕಾಮೆಡ್ ಮೃಣಾಲಿನಿಯವರೂ ಇಲ್ಲಿದ್ದಾರಲ್ಲ ! ನಮಸ್ತೆ !