ಕಾ:ಮ್ರೆಡ್ ಮೃಣಾಲಿನಿಯವರೆ, 'ರಶ್ಯಾದಲ್ಲಿ ವಿದ್ಯಾರ್ಥಿಗಳ ಪರಿಸ್ಥಿತಿ' ಎಂಬ ವಿಷಯದ ಮೇಲೆ ಆ ಗೋಷ್ಟಿಯಲ್ಲಿ ನೀವು ಹತ್ತು ನಿಮಿಷ ಮಾತನಾಡಬಹುದೆ ?
ಕೋಸಲೇಂದ್ರ: ( ನಗುತ್ತ ) ಅವರು ರಶ್ಯಾದ ಮೇಲೆ ಬೇಕಾದಾಗ ಬೇಕಾದಲ್ಲಿಂದ ಬೇಕಾದಷ್ಟು ಹೊತ್ತು ಮಾತನಾಡುತ್ತಾರೆ. ಅದು ಅವರ ಜೀವಿತದ ಧೈಯ.
ಬನಸಿಲಾಲ : ಬಹಳ ಸಂತೋಷ, ಕೋಸಲೇಂದ್ರಬಾಬು, ನೀವೂ ನಿಮ್ಮ ಕೆಲವು ಕವನಗಳನ್ನು ಆ ಗೋಷ್ಠಿಯಲ್ಲಿ ಅಂದು ತೋರಿಸಬೇಕು. ದುಡು ಕೊಟ್ಟು ಗೋಷ್ಠಿಗೆ ಬಂದ ಜನರಿಗೆ ಕಾವ್ಯ ಗಾಯನವಿಲ್ಲದೆ ರುಚಿಸುವದಿಲ್ಲ.
ಕೋಸಲೇಂದ್ರ : ಅಂದರೆ ? ನಾನೇನು ಸಂಗೀತಬುವಾ ಎಂದು ತಿಳಿದಿರೇನು, ಸೇಠ್ ಜಿ!
ಬನಸಿಲಾಲ : ಛೇ ! ಛೇ ! ಹಾಗೆ ತಾವು ತಿಳಿಯಬಾರದು ! ಆದರೆ......ಆದರೆ ....... ...
ಕೋಸಲೇಂದ್ರ : ( ನಗುತ್ತ) ಆಗಲಿ, ಬರುತ್ತೇನೆ. ಇನ್ನು ನಿಮ್ಮಿಂದ ವಿವರಣೆ ಬೇಕಾಗಿಲ್ಲ.
ಬನಸಿಲಾಲ : ನಾನು ಬಹಳ ಉಪಕೃತ, ಕಾ:ಮ್ರೆಡ್ ಮೃಣಾಲಿನಿ, ತಮ್ಮ ಅನುಮತಿಯೂ ಇದೆಯೆಂದು ತಿಳಿಯುತ್ತೇನೆ. ಇದ್ದೇ ಇರಬೇಕು !
ಮೃಣಾಲಿನಿ : ಆಗಬಹುದು. ಆದರೆ ಒಂದು ಕರಾರಿನ ಮೇಲೆ, ಕಾರ್ಯ ಸೂಚಿಯಲ್ಲಿ ನನ್ನ ಹೆಸರನ್ನು ಕೊನೆಯದಾಗಿ ಹಾಕಿರಿ, ಉಳಿದ ಭಾಷಣ ಕಾರರು ರಶ್ಯಾವನ್ನು ಆಗೀಗ ಟೀಕಿಸಬಹುದು. ಕೊನೆಯ ಏಟು ನನ್ನ ಕೈಯಿಂದ ಬಿದ್ದಿರಬೇಕು !
ಬನಸಿಲಾಲ: ( ನಕ್ಕು) ಅಗತ್ಯವಾಗಿ, ಹಾಗಾದರೆ ಇನ್ನು ನಾನು ಹೊರಡ ಬೇಕು. ಕೆಲಸ ಬಹಳವಿದೆ. ಕಾ:ಮ್ರೆಡ್ ಮೃಣಾಲಿನಿಯವರ ಭೇಟಿ ಇಲ್ಲಿಯೇ ಆಗಿದ್ದು ಬಹಳ ಚೆನ್ನಾಯಿತು, ನಮಸ್ತೇ, ನಮಸ್ತೆ !
( ಹೋಗುತ್ತಾನೆ. )