ಪುಟ:Yugaantara - Gokaak.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು ೨ ಪ್ರವೇಶ ೧ | ಮಾಹುವಿನ ಹತ್ತಿರದಲ್ಲಿ ಕಿಶನ್ ಕಿಶೋರರ ಬ೦ಗಲೆ, ಒಳಗೆಲ್ಲ ಕೆತ್ತಲೆಯಾಗಿದೆ. ಕಿಶನ್ ಕಿಶೋರರೂ ರುಕ್ಕಿಣಿದೇವಿಯರೂ ತಮ್ಮ ಕೋಣೆಯಲ್ಲಿ ಬೇರೆ ಬೇರೆ ಮಂಚಗಳ ಮೇಲೆ ಮಲಗಿಕೊಂಡಿದ್ದಾರೆ. ಮಧ್ಯರಾತ್ರಿಯ ಸಮಯವಾಗಿದೆ. ಕಿಶನ್ ಕಿಶೋರರು ಜೋರಾಗಿ ಗೊರಕೆ ಹೊಡೆಯುತ್ತಿದ್ದಾರೆ, ಈ ಸುಮಾರಿಗೆ ಹೊರಗಿನಿಂದ ಓಂಪ್ರಕಾಶನು ಬಾಗಿಲು ತಟ್ಟಿ ಸರಕಾರ ! ಸರಕಾರ !' ಎಂದು

  • ಕೂಗುತ್ತಾನೆ. bರನ್ ಕಿಶೋರ : ( ಗಡಬಡಿಸಿ ಹಾಸಿಗೆಯ ಮೇಲೆದ್ದು ಕುಳಿತು ) ಯಾರನ

ಏನದು ? ಓಂಪ್ರಕಾಶ : ನಾನು, ಸರಕಾರ ! ಓಂಪ್ರಕಾಶ, ಅಡವಿಯೊಳಗಿನ ಒಂದು ಹೆಬ್ಬಾವು ಮನೆಯೊಳಗೆ ಬಂದಿದೆ, ಪಹರೆಯವನನ್ನು ಅದು ಕಚ್ಚಿತು. ಎಚ್ಚರ ತಪ್ಪಿ ಅವನು ಗೇಟಿನ ಹತ್ತಿರ ಬಿದ್ದಿದ್ದಾನೆ. ತಾವು ಕೆಳಗಿನ ಡ್ರಾಯಿಂಗ ರೂಮನ್ನು ಸೇರಿದೆ. ಕಿನ್ಕಿರೋರ : ( ಎದ್ದು ದೀಪ ಹಚ್ಚಲು ಹೋಗಿ ) ಎಲ ಇವೇನು ? ಒತ್ತಿ ಹಿಡಿದು ಅಲುಗಾಡಿಸಿದರೂ ದೀಪ ಹತ್ತಲೊಲ್ಲದು ! ಓಂಪ್ರಕಾರ : ಡೈನಮೋ ಕೆಟ್ಟಿದೆ, ಸರಕಾರ ! ಪವರ್‌ಹೌಸಿನ ಮೇಲ್ವಿ. ಚಾರಕ ಒಂದೇ ಸವನೆ ಪ್ರಯತ್ನಿಸುತ್ತಿದ್ದಾನೆ. ಇನ್ನೂ ಯಾವ ದೀಪ ಹತ್ಯ. ಲೋಲ್ಲವು. ಕಿಶನ್ ಕಿಶೋರ : ಬಟ್ಲರನನ್ನು ಎಬ್ಬಿಸು! ನೀನೂ, ಬಟ್ಲರ್ ಹಾಗು ನೇಟರ್ - ಕೂಡಿ ಆ ಹಾವನ್ನು ಹೊಡೆಯಿರಿ, ಓಂಪ್ರಕಾಶ : ಕತ್ತಲೆಯಲ್ಲಿ ಕಾಣುವದಿಲ್ಲ, ಸರಕಾರ್ ! ಮೇಲಾಗಿ ಅವರೆಲ್ಲ ಬಾಗಿಲು ಹಾಕಿಕೊಂಡು ಮನೆಯಲ್ಲಿ ಕೂತಿದ್ದಾರೆ. ಹೊರಗೆ ಬರಲೊಲ್ಲರು. ರುಕ್ಕಿಣಿದೇವಿ : ( ಹಾಸಿಗೆಯ ಮೇಲೆ ಎದ್ದು ಕುಳಿತು ) ಏನು ? ಎಷ್ಟು ಗದ್ದಲವಾಗಿದೆಯಲ್ಲ ?