ಪುಟ:Yugaantara - Gokaak.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆpಳು ಪ್ರವೇಶ ) | ಕಾಂತಿಚಂದ್ರರ ಮನೆ ಕಾಂತಿ ಚಂದ್ರ-ರೋಹಿಣಿದೇವಿಯರು ಚಿಂತಾಕ್ರಾಂತರಾಗಿದ್ದಾರೆ. ಕಾಂತಿಚಂದ್ರರು ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ. ರೋಹಿಣಿದೇವಿಯರು ಅವರ ಬಳಿ ಕುಳಿತಿದ್ದಾರೆ. ] ರೋಹಿಣಿದೇವಿ : ಕಿಶನ್‌ಕಿಶೋರರು ಹೇಳಿದ್ದು ನಿಜ. ಬನಸಿಲಾಲನನ್ನು ನಾವು ತಡವಬಾರದಾಗಿತ್ತು. ದುಃಸ್ವಪ್ನದಂತೆ ನಾವು ಅಡಿಯಿಟ್ಟಲ್ಲೆಲ್ಲ ಅವನು ನಮ್ಮ ಬೆನ್ನು ಹತ್ತಿದ್ದಾನೆ. ಕಾಂತಿಚಂದ್ರ: ( ನರಳುತ್ತ ) ನಾನೂ ಅದನ್ನೇ ಹೇಳುತ್ತ ಬಂದೆ, ರೋಹಿಣಿ! ಆದರೆ ಅದು ನಿನಗೆ ಹಿಡಿಸಲಿಲ್ಲ. ಆ ನೀಚ ಯಾವುದಕ್ಕೂ ಹೇಸುವವನಲ್ಲ. ವಿದ್ಯಾರ್ಥಿಗಳ ನಿಧಿಯೊಂದನ್ನು ಕೂಡಿಸಿದಂತೆ ಮಾಡಿ ಬನಸಿಲಾಲನು ಅವರನ್ನು ಬಗಲಲ್ಲಿ ಹಾಕಿಕೊಂಡಿದ್ದಾನೆ. ಬಡವರಿಗಾಗಿ ಒಂದು ಕೋಆಪರೇಟಿವ್ ಸ್ಟೋರ್ ತೆಗೆದು ರೋಖು ಹಣವಿಲ್ಲದೆ ಸಾಮಾನು ಕೊಡುತ್ತ ಬಂದು ಅವರ ಜೀವವನ್ನೂ ವೋಟನ್ನೂ ಕೂಡಿಯೇ ಕೈಯಲ್ಲಿ ಹಿಡಿ. ದಿದ್ದಾನೆ. ಆಗಸ್ಟ್ ಗಲಭೆಯಲ್ಲಿ ನಾಲ್ಕೆಂಟು ತಾರು- ಕಂಬಗಳನ್ನು ಕಿತ್ತು ಹಾಕಿ ಒಂದೆರಡು ನಿಲ್ಮನೆಗಳನ್ನು ಸುಟ್ಟು ಜೇಲಿಗೆ ಹೋಗಿ ಕಾಂಗ್ರೆಸ್ಸಿನ ಮುಖ್ಯಸ್ಥರ ಪ್ರೇಮವನ್ನು ಗಳಿಸಿದ್ದಾನೆ. ಮಾರ್ಕ್ಸ್‌ವಾದಕ್ಕೆ ಮತಾಂತರ ನಾಗುವ ಆಸೆ ಹಚ್ಚಿ ನಮ್ಮ ಮೃಣಾಲಿನಿಯಿಂದ ಕಾ:ಿಡ್ ಜೋಶಿಯ ವರೆಗೆ ಎಲ್ಲರ ಮೂಗಿಗೆ ತುಪ್ಪ ಹಚ್ಚಿದ್ದಾನೆ. ಶ್ರೀಮಂತರೂ ಅಧಿಕಾರಿಗಳೂ ಅದೆಂದಿಗೋ ಅವನ ಕಿಸೆಯಲ್ಲಿ ಬಿದ್ದಿದ್ದಾರೆ. ಇಂಥ ಬನಸಿಲಾಲನನ್ನು ವಿರೋಧಿಸಿ ಏನು ಪ್ರಯೋಜನ ? ........ ಸ್ವಲ್ಪ ನೀರು ತಾ, ರೋಹಿಣಿ ! ಮತ್ತೆ ಬಾಯಿ ಆರಿತು. ರೋಹಿಣಿದೇವಿ : ( ನೀರು ಕೊಡುತ್ತ ) ನೀವು ಹಾಗೆ ಮಾತನಾಡಬೇಡಿರಿ, ಕಾಂತಿಚಂದ್ರ ! ವ್ಯರ್ಥ ಆಯಾಸವಾಗುತ್ತದೆ. ನಿದ್ರೆಯಲ್ಲಿಯೂ ಇದೇ