ಪುಟ:Yugaantara - Gokaak.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

•nt. ಯುಗಾಂತರ ಓಂಪ್ರಕಾಶ : ಕುಳಿತು ಹರಟಿ ಕೊಚ್ಚಲು ರಿಸ್ತರಾಂ ಗೃಹಗಳು, ಸಿನೇಮಾ. ಮತ್ತೆ........ ಮತ್ತೆ...... ಕಿಶನ್ ಕಿಶೋರ : ತಿಳಿಯಿತು ಬಿಡು ಅವರ ಹಣೆಬರಹ ! ಮನುಷ್ಕನು ಪಶುವಾದಾಗ ಈ ಪ್ರಕೃತಿಸೌಂದರ್ಯವು ಅವನಿಗೆ ಬರಿ ಬಣ್ಣದಾಟ. ಇನ್ನು ಲೈಟನ ಗತಿಯೇನು ? ಇವತ್ತು ಸಂಜೆಗಾದರೂ ದೀಪ ಹತ್ತುವವೆ ? ರುಕ್ಕಿಣಿದೇವಿ : ಡೈನಮೋ ಸಂಪೂರ್ಣ ಕೆಟ್ಟಿದೆ. ಇನ್ನೊಂದು ಸಿಗುವಹಾಗಿಲ್ಲ, ಇದರ ಜೊತೆಗೆ ಎಲ್ಲಿ ಗುದ್ದಾಡುವದೆಂದು ಇನ್ನೊಂದು ಕೆಲಸ ಹುಡುಕಿ ಕೊಂಡು ಹೋಗಿದ್ದಾನೆ, ಪವರ್ ಹೌಸಿನ ಮನುಷ್ಯ. ಕಿಶನ್ ಕಿಶೋರ : ಚೆನ್ನಾಗಿದೆ. ಪಹರೆಯವನಿಲ್ಲ, ಅಡಿಗೆಯವನಿಲ್ಲ, ಆಳಿಲ್ಲ. ಬೆಳಕಿಲ್ಲ. ದೇವರು ಒಳ್ಳೆಯ ಪ್ರಸಂಗ ತಂದ ನಮ್ಮ ಮೇಲೆ, ಇನ್ನೂ ಹೊತ್ತಿಗೆ ಸರಿಯಾಗಿ ಊಟವಾದರೂ ಸಿಕ್ಕುತ್ತದೆ. ಇದೇ ನಮ್ಮ ಪುಣ್ಯ. ನಿನ್ನ ಪ್ರಕೃತಿಯನ್ನು ಒಪ್ಪಿಸು, ಓಂಪ್ರಕಾಶ ! ಫಕ್ಕನೆ ನೀನು ಕಾಯಿಲೆ ಯಾಗಿ ಮಲಗಿದರೆ ನಮ್ಮ ಪುಂಗಿಯೇ ಬಂದಾದೀತು. ಓಂಪ್ರಕಾಶ : ಆಗಲಿ, ಸರಕಾರ ! ( ಕೈಯಿಂದ ತಲೆ ಒತ್ತಿ ಹಿಡಿದುಕೊ೦ಡು ) ಇಂದು ಬೆಳಗಿನಿಂದ ಏನೋ ಸ್ವಲ್ಪ ತಲೆಶೂಲಿ ಎದ್ದಂತಿದೆ. ಕಿಶನ್ ಕಿಶೋರ : ( ಗಾಬರಿಯಾಗಿ ) ಏನು ? ತಲೆಶೂಲಿಯೆ ? ರುಕ್ಕಿಣಿ, ಕೂಡಲೆ ಅವನಿಗೆ Aspirin ಕೊಡು ! ಡಬ್ಬಲ್‌ಡೋಜ್? ನಾಳೆ ಬೆಳಿಗೆ ನೀನು ಮಾಹುವಿಗೆ ಕಾರಿನಲ್ಲಿ ಹೋಗಿ ಡಾಕ್ಟರಿಗೆ ಪ್ರಕೃತಿ ತೋರಿಸಿ ಕೊಂಡು ಬಾ, ಓಂಪ್ರಕಾಶ : ಜೀ !.......ಮೊನ್ನೆ ಹೋದಾಗ ಡಾಕ್ಟರು ಕೇಳುತಿದ್ದರು, ಸರಕಾರ್! ನಿಮ್ಮ ಯಜಮಾನರು ಇಲ್ಲಿಯೇ ಇರುವದಾದರೆ ಮಾಹುವಿನಲ್ಲಿ ಏಕೆ ನೆಲಿಸುವದಿಲ್ಲ ? ಹೀಗೆ ಅರಣ್ಯದಲ್ಲಿರಬಹುದೇ ? ನಿಮ್ಮ ಯಜಮಾನತಿ ಯರಿಗೆ ಮೂರ್ಚೆ ಬಂದಾಗ ನಾನು ಬಂದು ಶುಶೂಷಿಸಲು ಒಂದು ಗಂಟೆ ಹಿಡಿಯಿತು, ಆಡವಿಯಲ್ಲಿ ಮನೆಮಾಡಿ ಊರೊಳಗಿದ್ದು ಬೇಕಾದಾಗ ಕಾರಿನಿಂದ ಅಡವಿಗೆ ಹೋಗಬಹುದಲ್ಲ ? ಎಂದರು. ಈ ಮಾತನ್ನು ಕೇಳಿದೆ ನೆಂದು ತಿಳಿಸು ಎಂದು ಒತ್ತಿ ಹೇಳಿದರು,