ಪುಟ:Yugaantara - Gokaak.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತತೆ ಪ್ರವೇಶ ) { ಬನಬೇಡಿಯ ಹತ್ತಿರ ಹರಿಯುವ ನರ್ಮದೆಯ ತೀರದಲ್ಲಿ. ಅದೇ ಉಷಃಕಾಲ, ಕೂಸಲೇಂದ್ರ-ಮೃಣಾಲಿನಿಯರು ಅಲ್ಲಿ ಒಂದು ಬಂಡೆಗಲ್ಲಿನ ಮೇಲೆ ಕುಳಿತಿದ್ದಾರೆ.} ಕೋಸಲೇಂದ್ರ : ಈ ಒಂದು ವಾರದಲ್ಲಿ ನನ್ನ ಸ್ಫೂರ್ತಿಯ ತವರನ್ನೆಲ್ಲ ನಿಮಗೆ ತೋರಿಸಿದ್ದೇನೆ. ನಮ್ಮ ಹಳ್ಳಿಯಲ್ಲಿ ಎಂಬತ್ತು ವರ್ಷದ ಆ ಕುಷ್ಟ ಕುಷ್ಟ ಮುದುಕಿಯನ್ನು ನೋಡಿದೆಯಲ್ಲ. ನಾನು ಇಂಥವ ಎಂದು ಹೇಳಿ ನಮಸ್ಕರಿಸಿ ದಾಗ ನನ್ನ ಮೇಲೆ ಎಷ್ಟೊಂದು ಪ್ರೀತಿಯನ್ನು ತೋರಿಸಿದಳು ! ನನಗೂ ಆಕೆಗೂ ಯಾವ ಆಸ್ಪತ್ಯವೂ ಇಲ್ಲ. ಚಿಕ್ಕಂದಿನಿಂದ ಈ ಊರಲ್ಲಿ ಬೆಳೆದಿರು ವದೇ ನಮ್ಮ ಸಂಬಂಧ. ಎಂಥ ನಿರ್ವ್ಯಾಜ ಪ್ರೇಮವದು, ಮೃಣಾಲಿನಿ ! ಈ ಪ್ರೇಮವೇ ದೇವರು. ಇದೇ ಮರ್ತ್ಯ ರನ್ನು ದೇವತೆಗಳನ್ನಾಗಿ ಮಾಡುವದು, ಕುಣಾಲಿನಿ : ಸಾಗಲಿ, ನಾನು ಸುಮ್ಮನೆ ಕುಳಿತು ಕೇಳುತೆ ನೆ. ನಿನಗೆ ಒಮ್ಮೆ ಪಾಠವನ್ನು ಕಲಿಸಿದ ತಪ್ಪಿಗೆ ನಿರಂತರವೂ ಈಗ ನಾನು ಕಲಿಯ ಬೇಕಾಗಿದೆ. ಕೋಸಲೇಂದ್ರ ಈ ಹಳ್ಳಿಗೆ ಬಂದಾಗ ನನ್ನ ತಂದೆ- ತಾಯಿಯ ನೆನಪಾಗು ತದೆ. ಎಷ್ಟು ಅಕ್ಕರತೆಯಿಂದ ಅವರು ನನ್ನನ್ನು ಸಲುಹಿದರು! ತಂದೆ ಸಾಲ ದಲ್ಲಿ ಮುಳುಗಿರುತ್ತಿದ್ದ. ಅವನ ಹೊಲಗಳೆಲ್ಲ ಒತ್ತಿ ಬಿದ್ದವು. ನನ್ನನ್ನು ಹಡೆದ ಮೇಲೆ ತಾಯಿಯನ್ನು ಒಂದು ಭಯಂಕರ ವ್ಯಾಧಿಯು ಹಿಡಿದು ಕೊಂಡಿತು. ಒಂದು ದಿನವಾದರೂ ಅವಳು ಸುಖ ಪಡಲಿಲ್ಲ. ತಂದೆಗೆ ಉಡ ಲಿಕೆ ಹರುಕು ಧೋತರವಿರುತ್ತಿರಲಿಲ್ಲ. ಆದರೆ ಪ್ರತಿನಿತ್ಯ ಓರಣದ ಬಟ್ಟೆ ಗಳನ್ನು ಹಾಕಿ ನನ್ನನ್ನು ಸಾಲೆಗೆ ಕಳಿಸುತ್ತಿದ್ದ ತಾಯಿಗೆ ಒಮ್ಮೊಮ್ಮೆ ತಿನ್ನಲು ಕೂಳಿರುತ್ತಿರಲಿಲ್ಲ. ಆದರೆ ಮುಂಜಾನೆ ಒಂದು ಬಟ್ಟಲು ಹಾಲನ್ನು ಕೊಡದೆ ಆಕೆ ನನ್ನನ್ನು ಸಾಲೆಗೆ ಕಳಿಸುತ್ತಿರಲಿಲ್ಲ. ತಂದೆ ಹೇಳುತ್ತಿದ್ದ: “ನನ್ನ ಕಥೆ ಮುಗಿಯಿತು. ಕೋಸಲೇಂದ್ರನೇ ಈ ಮನೆಯ ದೀಪ, ಅವನಿಗೆ ಕಡಿಮೆ