ಪುಟ:Yugaantara - Gokaak.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ತುಂಬಿದ ಈ ಚೆಲುವಿದೆಯಲ್ಲ, ಈ ಚೆಲುವೇ ಮಾನವ ಕುಲದ ಧ್ರುವತಾರೆ. ಇದೇ ಅಭ್ಯುದಯದ ಸಂಚಕಾರ, ಮೃಣಾಲಿನಿ, ಈ ಚೆಲುವೇ ದೇವರು, ಮೃಣಾಲಿನಿ: ದಿಲ್ಲಿಯಲ್ಲಿ ಮುಂದೇನು ಮಾಡಿದೆ, ಕೋಸಲೇಂದ್ರ ? ಅದನ್ನು ತಿಳಿಯಲು ಕುತೂಹಲವಾಗಿದೆ, ಕೋಸಲೇಂದ್ರ : ಮುಂದೆ ಜೀವನವು ಭವ್ಯ-ದಿವ್ಯವಾಯಿತು. ಸಾಕ್ಷಿಯಾಗಿ ನಿಂತು ಸುತ್ತಲಿನ ಮಾನವಸೃಷ್ಟಿಯನ್ನು ನೋಡಿದೆ: ಒಂದು ಮೆರವಣಿಗೆ ಅದು; ಕೇರಿ-ಕೇರಿಗಳನ್ನು ತುಂಬಿ ಸಾಗುತ್ತಿತ್ತು. ಅಲ್ಲಿ ಬನಸಿಲಾಲನ್ನಂತಹ ಧೂರ್ತರು-ಜೇಡವು ಮೂಲೆಯಲ್ಲಿ ತನ್ನ ಬಲೆಯನ್ನು ಪಸರಿಸಿದಂತೆ ಸುತ್ತಲು ತನ್ನ ಜಾಲವನ್ನು ಹರಹಿ ಸಾಗುತ್ತಿದ್ದರು, ಕಾಂತಿಚಂದ್ರರಂಥ ಕೀರ್ತಿಲೋಲುಪರು ಮೃಗಜಲದ ಬೆನ್ನು ಹತ್ತಿದ್ದರು. ಕಿಶನ್ ಕಿಶೋರರಂಥ ಧಾರ್ಮಿಕರು ಹೊರಗಿನ ಜಗತ್ತಿನಲ್ಲಿ ಬೆಳಕು ಕಾಣದೆ ಕಣ್ಣು ಮುಚ್ಚಿ ಏನನ್ನೋ ಶೋಧಿಸುತ್ತ ಕಾಲು ಒಯ್ದ ತನಡೆದಿದ್ದರು. ( ತುಸು ನಕ್ಕು ಮೃಣಾಲಿನಿ, ಕೆಲವೊಂದು ಪುಸ್ತಕಗಳನ್ನು ಬರಿ ಗಿಳಿಪಾಠ ಮಾಡಿ ಜೀವನದ ಸತ್ಯಕ್ಕೆ ಕಣ್ಣೆರೆಯದ ಕನ್ನೆಯರೂ ಆ ಗುಂಪಿನಲ್ಲಿದ್ದ ರು. ಮಣಾಲಿನಿ : ( ಕೊಂಕು ನುಡಿಯಿಂದ ) ಮತ್ತೆ........ಕಿರಿದರಲ್ಲಿ ಹಿರಿದನ್ನು ಕಾಣುವ ಕೋಸಲೇಂದ್ರನಂಥ ಕವಿಗಳು ಅಲ್ಲಿದ್ದಿಲ್ಲವೇನು ? ಕೋಸಲೇಂದ್ರ : ಅವರೂ ಇದ್ದರು. ಇಂಥ ಎಲ್ಲ ವ್ಯಕ್ತಿಗಳನ್ನೊಳಗೊಂಡ ಆ ಗುಂಪು, ಆ ಮೆರವಣಿಗೆ ಯಾವ ಮಹಾಕವಿಯ ಸಜೀವ ಸೃಷ್ಟಿ, ಎಂದು ಬೆರಗಾದೆ. ಯುಗಯುಗದಲ್ಲಿ ಈ ನಯನೋತ್ಸವ ಸಂತತವಾಗಿ ಪ್ರವಹಿ ಸುತ್ತಿದೆಯಲ್ಲಾ ! ಎಂದು ತೂಣಗೊಂಡೆ, ಈ ಸಮೂಹದ ಹೃದಯದಿಂದ ಒಂದು ಭಾವನೆಯೇಳುತ್ತಿತ್ತು: ಒಂದೊಂದು ರಾಷ್ಟ್ರವೂ ಬಾಳಿ ಬದುಕ ಬೇಕೆಂದು ಇನ್ನೊಂದು ಭಾವನೆಯೇಳುತ್ತಿತ್ತು. ಜಗತ್ತಿಗೆ ಒಂದೇ ಒಂದು ಕೋಶ, ಒಂದೇ ಒಂದು ಕಣಜ, ಒಂದೇ ಒಂದು ನೀತಿಯಿರಬೇಕೆಂದು. ಆಗ ನನಗೆನಿಸಿತು, ಮಾನವನ ಕರುಣೆಯೇ ಜಗತ್ತಿನ ಪ್ರಗತಿಗೆ ಮೂಲ. ಆನಂದವೇ ವ್ಯಕ್ತಿ ವಿಕಾಸದ ಗುಟ್ಟು, ಕರುಣೆಯು ನಿರ್ಗುಣೋಪಾಸನೆ ಯಾದರೆ ಆನಂದವು ಸಗುಣೋಪಾಸನವೆಂದುಕೊಂಡೆ, ಮೃಣಾಲಿನಿ, ಈ ಕರುಣೆ, ಆನಂದಗಳೇ ದೇವರು,