ಪುಟ:Yugaantara - Gokaak.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅ)ಕು 1 ಮೃಣಾಲಿನಿ : ( ನಗುತ್ತ ) ಇದೆಲ್ಲ ಸುಂದರವಾಗಿದೆ, ಕೋಸಲೇಂದ್ರ ! ಆದರೆ ನೀನು ಹೇಳಿದ ಈ ದೇವರಿಗೆ ಅಮರತೆಯೆಲ್ಲಿ? ಪುನರ್ಜನ್ಮದ ರೀತಿಯೇನು? ದೈವ-ಕರ್ಮ- ನಾದಗಳ ಗತಿಯೇನು ? ಕೋಸಲೇಂದ್ರ : ಮೂಲ ವಸ್ತುವನ್ನು ಬಿಟ್ಟು ಬರಿ ಅದರ ರೂಪದ ಲಾಕ್ಷಣಿಕ, ರಾಗಬೇಕೆ, ಮೃಣಾಲಿನಿ ? ಈ ಕರುಣೆ-ಆನಂದಗಳು ನಮಗಿರಲಿ. ಮೀಮಾಂಸಕರಿಗೆ ಉಳಿದುದನ್ನು ಬಿಟ್ಟು ಕೊಡೋಣ, ಅಮರತೆ ಬರಿ ಒಂದು ಶಬ್ದ, ಆಳವಾಗಿ ಅನುಭವಿಸಿದ್ದೇ ಅಮರತೆಯ ಆಗರ. ಇನ್ನುಳಿದ ಅಮರತೆ ಮೃಣಾಲಿನಿ : ಈ ನಿನ್ನ ದೇವರಿಗೂ ಉಳಿದ ಧರ್ಮಗಳಿಗೂ ಸಂಬಂಧವೇನು? ಕೋಸಲೇಂದ್ರ : ಎಲ್ಲ ಧರ್ಮಗಳ ಹೃದಯ, ಈ ನನ್ನ ದೇವರು. ಆದರೆ ಧರ್ಮದ ಹೃದಯವನ್ನು ಬಿಟ್ಟು ಅದರ ಕೈಯನ್ನೋ ಕಾಲನ್ನೋ ಪೂಜಿ ಸುತ್ತಿದ್ದಾರೆ ಜನ. ಮೃಣಾಲಿನಿ: ಈ ನಿನ್ನ ದೇವರ ಮಂದಿರವೆಲ್ಲಿ ? ಕೋಸಲೇಂದ್ರ : ಮನುಷ್ಯನ ಹೃದಯದಲ್ಲಿ. ಮೃಣಾಲಿನಿ : ಅವನ ಪೂಜೆಯ ಮಂತ್ರವಾವುದು ? ಕೋಸಲೇಂದ್ರ : ವಾಹ್ಮಯವೇ ಪೂಜೆಯ ಮಂತ್ರ, ಮೃಣಾಲಿನಿ: ಅವನನ್ನು ಪೂಜಿಸುವ ವಿಧಾನವಾವುದು ? ಕೋಸಲೇಂದ್ರ : ಆ ಆನಂದ-ಕರುಣೆಗಳು ಮಾನವನ ಜೀವನ-ಭಾವನೆ ಗಳಲ್ಲಿ ಸದಾ ಜಾಗ್ರತವಿರುವಂತೆ ತ್ರಿಕರಣಪೂರ್ವಕವಾಗಿ ಯತ್ನಿಸುವದೇ ಆ ವಿಧಾನ, ಮೃಣಾಲಿನಿ: (ಎದ್ದು ನಿಂತು ) ಕೋಸಲೇಂದ್ರ, ಈ ಧರ್ಮಕ್ಕೆ ನಾನು ಒಪ್ಪಿದೆ. ನಿನ್ನ ಮಠದ ಮೊದಲನೆಯ ಶಿಷ್ಯಳು ನಾನು. ಕೋಸಲೇಂದ್ರ : ( ನಕ್ಕು ) ಹಾಗಲ್ಲ, ಮೃಣಾಲಿನಿ, ಇಲ್ಲಿ ಮಠವೂ ಇಲ್ಲ. ಸ್ವಾಮಿಯೂ ಇಲ್ಲ. ಆದರೆ ನನ್ನ ಈ ಧರ್ಮವನ್ನು ನೀನು ಒಪ್ಪುವ ಪಕ್ಷ ದಲ್ಲಿ ನನ್ನ ಸ್ವಾಮಿನಿಯಾಗಬೇಕು ನೀನು.