ಪುಟ:Yugaantara - Gokaak.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು 4 1 . ಪ್ರವೇಶ 1 { ಮಾಹುವಿನ ಹತ್ತಿರದ ಬಂಗಲೆ, ಕಿಶನ್ ಕಿಶೋರ-ರುಕ್ಕಿಣಿದೇವಿ ಯರು ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದಾರೆ. ಸಾಮಾನುಗಳ ಬ್ಯಾಗುಗಳ ಪ್ಯಾಕ್ ಆಗಿ ಅತ್ತಿತ್ತ ಬಿದ್ದಿವೆ. ಓಂಪ್ರಕಾಶ ಹತ್ತಿರ ನಿಂತಿದ್ದಾನೆ } ಕಿಶನ್ ಕಿಶೋರ : ಇನ್ನು ನಾಳೆ ಬೆಳಗಿನ ಗಾಡಿಗೆ ಇಲ್ಲಿಂದ ಹೊರಡೋಣ, ರುಕ್ಕಿಣಿ, ದಿಲ್ಲಿಗೆ ಹೋಗಿ ಮುಂದೆ ಏನೆಂಬುದನ್ನು ನಿಶ್ಚಯಿಸೋಣ. ಅಂತೂ ಇಲ್ಲಿ ನೆಲಿಸಲೆಂದು ನಿನ್ನನ್ನು ಕರೆದುಕೊಂಡು ಬಂದು ಬಹಳ ಹಿಂಸಿಸಿದಂತಾಯಿತು. ರುಕ್ಕಿಣಿದೇವಿ : ನೀವು ಹಾಗೆ ತಿಳಿಯಬೇಡಿರಿ. ಅದು ನನ್ನ ತಪ್ಪು. ದಿಲ್ಲಿ ಯಲ್ಲಿದ್ದು ಅಷ್ಟು ರೂಢಿಯಾಗಿಬಿಟ್ಟಿದೆ ನನಗೆ, ಈ ಅರಣ್ಯದಲ್ಲಿ ಮುಂಜಾನೆ ಯಿಂದ ಸಂಜೆಯ ವರೆಗೆ ಏನು ಮಾಡಬೇಕೆಂಬುದೇ ನನಗೊಂದು ಸಮಸ್ಯೆ ಯಾಗುತ್ತವೆ. ನಿಮ್ಮ ಹಾಗೆ ಧ್ಯಾನದ ಪ್ರೀತಿಯನ್ನು ದೇವರು ನನಗೆ ಕೊಡಲಿಲ್ಲ. ಕೊಟ್ಟಿದ್ದರೆ.......ಕೊಟ್ಟಿದ್ದರೆ ......ಎಷ್ಟು ಚೆನ್ನಾಗಿತ್ತು ! ( ಕಣ್ಣೀರಿಡುವಳು ) ಕಿಶನ್ ಕಿಶೋರ : ( ಅವಳ ಕಣ್ಮರಿಸುತ್ತ ) ಛೇ ! ರುಕ್ಕಿಣಿ ! ನೀನು ಹೀಗೆ ಕಣ್ಣೀರಿಡಬಾರದು. ಮೇಲಾಗಿ ನಾನು ಇಲ್ಲಿಂದ ಕಾಲು ಕಿತ್ತುವದು ನಿನ್ನೆ ಬಳ ಸಲುವಾಗಿ ಎಂದಲ್ಲ. ಹಾವು, ಹುಲಿ, ಪಹರೆಯವ, ಅಡಿಗೆಯವ, ಇವರೆಲ್ಲ ಕೂಡಿ ನನ್ನ ಮನಸ್ಸಿನ ಸಮಾಧಾನವನ್ನೇ ಕಳೆದಿದ್ದಾರೆ. ಶಾಂತ ಮಯ ವಾತಾವರಣದಲ್ಲಿ ನಿಂತು ಧ್ಯಾನವನ್ನು ಬೆಳೆಸುವವೆಂದು ಇಲ್ಲಿಗೆ ಬಂದೆ. ಆದರೆ ಇಲ್ಲಿಯೂ ಒಂದಿಲ್ಲೊಂದು ಚೇಳು ನಿತ್ಯವೂ ಮನಸ್ಸನ್ನು ಕಟಕುತ್ತಿದೆ. ಅಂದ ಮೇಲೆ ನನಗೆ ದಿಲ್ಲಿಯೇನು, ಆರಣ್ಯವೇನು ? ನನ್ನೊ ಳಗೇ ಎಲ್ಲಿಯೋ ಕೀಲ ತಪ್ಪಿದಂತೆ ಕಾಣುತ್ತದೆ. ಅದನ್ನು ಸರಿಪಡಿಸಬೇಕು, ಓಂಪ್ರಕಾಶ : ( ಅಳುಮೊಗದಿಂದ ) ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಬೇಕು, ಸರಕಾರ್,