ಪುಟ:Yugaantara - Gokaak.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1 ಯುಗಾಂತರ ಕಿಶನ್ ಕಿಶೋರ : ನಿನ್ನದೂ ತಪ್ಪಿಲ್ಲ, ಓಂಪ್ರಕಾಶ ! ನನ್ನಲ್ಲಿಯೇ ಇದ್ದ ಅಪೂರ್ಣತೆಯನ್ನು ನೀನು ಇನ್ನಿಷ್ಟು ಸ್ಪುಟವಾಗಿಸಿದೆ, ಅಷ್ಟೆ. ಯಾರದೂ ತಪ್ಪಿಲ್ಲ. ಇದರಲ್ಲಿ ತಪ್ಪು ನನ್ನದೇ :* ಓಂಪ್ರಕಾಶ : ( ಬುಗಿಲ ಕಡೆ ನೋಡುತ್ತ ) ಯಾರೋ ಇಬ್ಬರು ತಮ್ಮ ಕಡೆಗೆ ಬರುತ್ತಿರುವಂತೆ ಕಾಣುತ್ತದೆ, ಸರಕಾರ್, ಓಹೋ ! ” ಕೋಸಲೇಂದ್ರ ಬಾಬುಗಳು ! ಶನ್'ಕಿಶೋರ : ( ತವಕದಿಂದ) ಯಾರು, ಕೋಸಲೇಂದ್ರನೇ ? ಹೇಳಿ ಕಳಿಸಿದಂತೆ ಬಂದನಲ್ಲ! ಹೋಗು; ಕರೆದುಕೊಂಡು ಬಾ. (“ಜೀ' ಎಂದು ಓಂಪ್ರಕಾಶನು ಹೋಗುತ್ತಾನೆ. ) ಕಿಶನ್ ಕಿಶೋರ : ದೇವರು ಕರುಣಿಸಿದಂತೆ ಕಾಣುತ್ತದೆ, ರುಕ್ಕಿಣಿ. ಇದೊಂದು ಹೊ ಸದಾರಿ ತೆರೆಯುವ ಹಾಗೆ ಕಾಣುತ್ತದೆ. ರುಕ್ಕಿಣಿದೇವಿ : ಅದೋ ನೋಡಿರಿ. ಕೋಸಲೇಂದ್ರ ಬಂದ. ( ಕೋಸಲೇಂದ್ರನು ನಮಸ್ಕರಿಸುತ್ತ ಬರುತ್ತಾನೆ. ) ಕಿಶನ್‌ಕಿಶೋರ : ಬಾ, ಕೋಸಲೇಂದ್ರ. ಕರೆಯಿಸಿದ ಹಾಗೆ ಬಂದೆ. ಎಲ್ಲಿಂದ ಬಂದಿದ್ದು ? ಕೋಸಲೇಂದ್ರ : ( ಅತ್ತಿತ್ತ ನೋಡುತ್ತ ) ಓಹೋ ! ಇದೇನು ? ಸಾಮಾನು ಎಲ್ಲ ಕಟ್ಟಿದೆಯಲ್ಲ ? ಇಲ್ಲಿಗೆ ಆರಣ್ಯಕಾಂಡ ಮುಗಿದಂತಾಯಿತೇನು ? ಕಿಶನ್ ಕಿಶೋರ : ( ಸಣ್ಣ ಮೊರೆಯಿಂದ ) ಹೌದು, ಕೋಸಲೇಂದ್ರ, ಈಗ ದಿಲ್ಲಿಗೆ ಹೊರಟು ನಿಂತಿದ್ದೇವೆ. ಕೋಸಲೇಂದ್ರ : ಈ ಮಾರ್ಪಾಟಗೆ ಏನು ಕಾರಣ ? ರುಕ್ಕಿಣಿದೇವಿ : ( ವಿಷಾದದಿಂದ ) ಒಂದು ರೀತಿಯಿಂದ ಇದಕ್ಕೆ ನಾನು ಕಾರಣ, ಕೋಸಲೇಂದ್ರ. ಇಲ್ಲಿ ಬಂದ ಮೇಲೆ ನನ್ನ ಪ್ರಕೃತಿಯೇ ಸರಿ ಯಾಗಿಲ್ಲ. ಇಲ್ಲಿಯ ಅನಾನುಕೂಲಗಳೂ ಇದಕ್ಕೆ ಕಾರಣವಾಗಿವೆ. ಪಹರೆ ಯವನಿಲ್ಲ, ಅಡಿಗೆಯವನಿಲ್ಲ, ಹಾವು ...ಹುಲಿ.......