ಪುಟ:Yugaantara - Gokaak.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೨ ಯುಗಾಂತರ ರೋಹಿಣಿದೇವಿ : ಮಥುರೆಗೆ ಹೊರಟಿದ್ದೇವೆ. ಕಿಶನ್‌ಕಿಶೋರ : ಯಾಕೆ, ಕಾಂತಿಚಂದ್ರಜಿ! ತಾವು ಬಹಳ ಸೊರಗಿದ್ದೀರಲ್ಲ? ರುಕ್ಷ್ಮಿಣಿದೇವಿ: ಹೌದು, ನಾನೂ ಕೇಳಬೇಕೆಂದಿದ್ದೆ, ರೋಹಿಣಿದೇವಿ : ( ಸಣ್ಣ ಮೋರೆ ಮಾಡಿ ) ಅವರ ಪ್ರಕೃತಿಯ ಸಲುವಾಗಿಯೇ ನಾವು ಈಗ ಮಥುರೆಗೆ ಹೊರಟಿದ್ದು, ಮುಂದೆ ಕೆಲವು ದಿನ ನೈನಿತಾಲಕ್ಕೆ ಹೋಗಬೇಕೆಂದಿದ್ದೇವೆ. ಕಾಂತಿಚಂದ್ರ: ಕಿಶನ್ ಕಿಶೋರಜಿ ! ತಮ್ಮೆದುರಿಗೆ ಸತ್ಯವನ್ನು ಹೇಳುವ ದಾದರೆ, ದಿಲ್ಲಿಯು ನನ್ನನ್ನು ನೆಲಕ್ಕುರುಳಿಸಿದೆ, ಬಹಳ ಉತ್ಸಾಹದಿಂದ ನಾನು ಇಲ್ಲಿಗೆ ಬಂದೆ. ಆದರೆ ಆ ಬನಸಿಲಾಲ........ ಕಿಶನ್‌ಕಿಶೋರ : ಓಹೊ ? ಕಾಂತಿಚಂದ್ರ: ಅವನು ನನ್ನನ್ನು ಹಿಂಡಿ ಹಿಪ್ಪೆ ಮಾಡಿದ. ಈಗ ದಿಲ್ಲಿಗಿಂತ ಮಥುರೆಯೆ ಒಳಿತೆಂದು ತಿರುಗುತ್ತಿದ್ದೇವೆ. ( ವಿಷಾದದಿಂದ ನಕ್ಕು ) ಕೋಸ ಲೇಂದ್ರಬಾಬು ನನಗೊಂದು ಔಷಧ ಹೇಳಿದ್ದಾರೆ. ಇನ್ನು ಅದನ್ನು ಸಾಧಿಸ ಬೇಕಾಗಿದೆ. ಕಿಶನ್ ಕಿಶೋರ : ( ನಗುತ್ತ ) ಹೀಗೋ ! ಕೋಸಲೇಂದ್ರನು ತನಗೆ ಯಾವ ಔಷಧ ಹೇಳಿದ ? ಕಾಂತಿಚಂದ್ರ : ಸಂಸತ್ತು-ಅಧಿಕಾರ-ಕೀರ್ತಿಗಳನ್ನು ದಾಟಿ ಒಂದು ಆನಂದ ವಿದೆಯಂತೆ. ಇನ್ನು ಅದನ್ನು ಸಾಧಿಸಬೇಕು. ಕೋಸಲೇಂದ್ರ: ( ನಗುತ್ತ ) ಆದರೆ ಕಾಂತಿಚಂದ್ರಜಿ ! ಇದಕ್ಕಾಗಿ ದಿಲ್ಲಿ ಯನ್ನು ತ್ಯಜಿಸಬೇಕೆಂದು ನಾನು ಹೇಳಿಲ್ಲವಲ್ಲ ? ಈಗ ಬೇಕಾದರೆ ಒಂದೆರಡು ತಿಂಗಳು ಹೋಗಿ ನೈನಿತಾಲದಲ್ಲಿ ವಿಶ್ರಮಿಸಬಹುದು. ಆದರೆ ತಮ್ಮಂಥ ಕಾರ್ಯಶಾಲಿಗಳನ್ನು ದಿಲ್ಲಿಯು ಹೀಗೆ ಕಳೆದುಕೊಳ್ಳಲಾರದು. ರೋಹಿಣಿದೇವಿ : ವಿಶ್ ! ಇದೇನು ಹೇಳುತ್ತೀರಿ, ಕೋಸಲೇಂದ್ರಬಾಬು! ದಿಲ್ಲಿಗೆ ಎರವಾಗಬಾರದೆಂದು ನಾವು ವಿಶ್ವ ಪ್ರಯತ್ನ ಮಾಡಿದೆವು. ಆದರೆ ಈಗ ದಿಲ್ಲಿಯೇ ನಮ್ಮನ್ನು ಹೊರದೂಡುತ್ತಿದೆ. ನಾವು ಯಾರಿಗೂ