ಪುಟ:Yugaantara - Gokaak.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂತು 4 ಕೋಸಲೇಂದ್ರ : ( ಮುಗುಳುನಗೆಯಿಂದ ) ಯಾವ ಕಾಲಕ್ಕೆ ಏನು ಮಾಡ ಬೇಕೆಂದು ಪ್ರೇರಣೆಯಾಗುವದೋ ಹಾಗೆ ಮಾಡು, ಮೃಣಾಲಿನಿ, ಆ ಪ್ರೇರಣೆ ನನ್ನ ಹೇಳಿಕೆಯನ್ನೇ ಸರ್ಮಥಿ್ರಸುವದು, ರೋಹಿಣಿದೇವಿಯವ. ಮೃಣಾಲಿನಿಯಲ್ಲಿ ಇನ್ನೂ ಒಂದು ಮಾರ್ಪಾಟಾಗಿದೆ. ಮೃಣಾಲಿನಿ ಈಗ ಕಾಮೈಡ್ ಮೃಣಾಲಿನಿಯಲ್ಲ: ಮಾರ್ಕ್ಸವಾದಿಯಾದ ಮೃಣಾಲಿನಿದೆವಿರೆ. ಮಾರ್ಕ್ಸನ ತತ್ವಗಳಲ್ಲಿ ಆಕೆಗೆ ಶ್ರದ್ದೆಯಿದೆ; ಆದರೆ ಆಕೆಯ ಮಾತು ರೀತಿ ಯಲ್ಲಿ ಭಾರತಕ್ಕೆ ಒಪ್ಪುವ ನಯವಿನಯವಿದೆ. ಲೋಹಿಣಿದೇವಿ : ನನಗೆ ಒಬ್ಬ ಮಗಳಿದ್ದರೆ ಹೇಗಿರಬೇಕೆಂದುಕೊಂಡಿದ್ದೆನೋ ತದ್ರೂಪ ಹಾಗೆ ಮೃಣಾಲಿನಿ ಇದ್ದಾಳೆ. ಮೃಣಾಲಿನಿಯ ನಾಲಗೆ ಬಲು ಚುರುಕು, ಅದು ಈಗ ಹದಕ್ಕೆ ಬಂದಿದೆ. ಆದರೆ ಆಕೆಯ ಈ ಮಾರ್ಕ್ಸ ತತ್ವಗಳು ..... ... ಕೋಸಲೇಂದ್ರ ( ನಕ್ಕು ) ಆ ತತ್ವಗಳಿಗೆ ನೀವು ಹೆದರುವ ಕಾರಣವಿಲ್ಲ, ರೋಹಿಣಿದೇವಿ ! ಆ ತತ್ವಗಳೊಡನೆ ಬೇರೆ ತತ್ವಗಳನ್ನೂ ಬೆರೆಸಲು ಮೃಣಾಲಿನಿಯು ಹವಣಿಸಿದ್ದಾಳೆ. ಒಮ್ಮೆ ಆಕೆಯಿಂದ ನೀವು ಪಾಠ ಹೇಳಿಸಿ ಕೊಳ್ಳಬೇಕು. ಆಗ ಆ ತತ್ವಗಳ ಬಗ್ಗೆ ನಿಮಗಿದ್ದ ಭಯವೂ ಹೋಗುವದು. ನಿಮ್ಮ ಮನಸ್ಸಿನಲ್ಲಿ ಪೂರ್ವಗ್ರಹವಿಲ್ಲವೆಂದು ಆಕೆಗೂ ಸಮಾಧಾನ ವಾಗುವದು. ಕೋಹಿಣಿದೇವಿ: ( ನಗುತ್ತ ) ಹಾಗೇ ಆಗಲಿ, ಕೋಸಲೇಂದ್ರಬಾಬು ! ಹಾಗಾದರೆ ನಮ್ಮೊಡನೆ ನೈನಿತಾಲಕ್ಕೆ ನೀವಿಬ್ಬರೂ ನಡೆಯಿರಿ. ಅಲ್ಲಿ ಪಾಠ ಸುರುವಾಗಲಿ. ಕೋಸಲೇಂದ್ರ : ನಾವಿಬ್ಬರೇ ಏಕೆ ? ಕಿಶನ್ ಕಿಶೋರರೂ ರುಕ್ಕಿಣಿದೇವಿ ಯರೂ ಅಲ್ಲಿಗೆ ಬರುತ್ತಾರೆ. ನೀವು ಮಥುರೆಗಂ ಶೂ ಹೋಗಿ ಬನ್ನಿರಿ. ಮೃಣಾಲಿನಿ : ನನ್ನ ಬಗ್ಗೆ ರೋಹಿಣಿಬೆನ್ರಲ್ಲಿ ನೀನು ಮಾಡಿದ ಮಧ್ಯಸ್ತಿಕೆ "ಯನ್ನು ಒಪ್ಪಿದೆ, ಕೋಸಲೇಂದ್ರ, ಆದರೆ ಈ ಪಾಠ ಹೇಳುವ ಕೆಲಸವೇಕೆ? ( ತುಂಟು ನಗೆಯಿಂದ ) ನಾನು ಹೇಳುವ ರೀತಿ ನಿನಗೆ ಒಪ್ಪಿಗೆಯಾಗದಿದ್ದರೆ?