ಪುಟ:Yugaantara - Gokaak.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗnಂತರ ಕೋಸಲೇಂದ್ರ : ( ಸಂತುಷ್ಟನಾಗಿ ಮೃಣಾಲಿನಿಯ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು ) ನನ್ನ ಜೀವನದಲ್ಲಿ ಇನ್ನೂ ಒಂದು ಪೂರ್ಣತೆ ಇದೆ. ಅದು ನಿನಗೆ ಗೊತ್ತಿದೆಯೇ ? ಮೃಣಾಲಿನಿ : ಅದಾವುದು, ಕೋಸಲೇಂದ್ರ ? ಕೋಸಲೇಂದ್ರ : ನಾನೂ ನೀನೂ ಬೆರೆತು ನಮ್ಮ ಈ ಚಿಕ್ಕ ಸಂಸಾರದ - ಅರ್ಧನಾರಿ ನಟೇಶ್ವರನಾಗಿರುವದು, ಮೃಣಾಲಿನಿ : ( ತುಸುನಕ್ಕು ) ಆದೆಲ್ಲ ಕವಿಯಾದ ನಿನಗೇ ಗೊತ್ತು. ಮಾರ್ಕ್ಸವಾದಿಯಾದ ನಾನೇನು ಬಲ್ಲೆ, ಕೋಸಲೇಂದ್ರ : ಆದರೆ ಈ ಮಾರ್ಕ್ಸವಾದಿಯೂ ಆಗೀಗ ನನ್ನ ಕವನ ಗಳನ್ನು ಓದುತ್ತಾಳಲ್ಲ. ಮೃಣಾಲಿನಿ : ( ನಕ್ಕು ) ಅದು ನಿಜ. ಓದಬೇಕೆಂದೇ ಕೈ ಹಿಡಿದಿದ್ದಾಳೆ. ಕೋಸಲೇಂದ್ರ: ಮಾತಿನಲ್ಲಿ ನೀನೆಂದಿಗೂ ಸೋಲಲಿಲ್ಲ, ಮೃಣಾಲಿನಿ .... ಎಲ್ಲಿ ನೋಡೋಣ, ಈಗ ನನಗೆ ಬಹಳ ಆಯಾಸವಾಗಿದೆ. ನನ್ನ ಒಂದು ಕವನವನ್ನು ನೀನು ಆಗೀಗ ಅಂದುಕೊಳ್ಳುತ್ತೀಯಲ್ಲ. ಅದನ್ನು ಹೇಳು, ಮೃಣಾಲಿನಿ ಕೇಳುತ್ತ ಸುಮ್ಮನೆ ಇಲ್ಲಿ ಒರಗಿರುತ್ತೇನೆ. ಮೃಣಾಲಿನಿ : ಕವನವನ್ನು ಕಲ್ಪಿಸುವ ಹೃದಯ ನಿನ್ನದು, ಕೋಸಲೇಂದ್ರ, ಅದನ್ನು ನುಡಿಯುವ ಬಾಯಿ ನನ್ನದು. ಹೇಳುತ್ತೇನೆ. ಅದಕ್ಕೇನು ? ( ಕಸಲೇಂದ್ರನು ಕುಳಿತಲ್ಲಿಯೇ ಸೋಫಾದ ಮೇಲೆ ಹಿಂದಕ್ಕೆ ಕಣ್ಣು - ಮುಚ್ಚಿಕೊಂಡು ಒರಗುತ್ತಾನೆ. ಅವನ ಮುಂಗುರುಳನ್ನು ತೀಡುತ್ತ ಮೃಣಾಲಿನಿಯು ಕವನವನ್ನು ಹೇಳುತ್ತಾಳೆ. ) ಒಂದು ಹೂವು, ಒಂದು ಹಣ್ಣು ; ಅದನು ನೋಡುತ್ತಿರುವ ಕಣ್ಣು ; ಕಣ್ಣರಳಿಸಿರುವ ಮನ; ಮನವ ಮಾಗಿಸಿರುವ ಘನ; ಇದೇ ಇದೇ ಜೀವನ. ಎಂದೆಂದಿಗು ಪಾವನ.