ವಿಷಯಕ್ಕೆ ಹೋಗು

ಬಾಳ ನಿಯಮ/ಮುಖ ಭಂಗ

ವಿಕಿಸೋರ್ಸ್ದಿಂದ

ಬಾಳ ನಿಯಮ
ಜಾಕ್ ಲಂಡನ್, translated by ಡಿ. ವಿ. ರಾಘವೇಂದ್ರ

ಮೈಸೂರು: ಭಾರತೀ ಪ್ರಕಾಶನ, pages ೧೦–೨೮

94341ಬಾಳ ನಿಯಮಮುಖ ಭಂಗಡಿ. ವಿ. ರಾಘವೇಂದ್ರಜಾಕ್ ಲಂಡನ್

ಮುಖ ಭಂಗ

[ಸಂಪಾದಿಸಿ]

ಅದೇ ಕೊನೆ. ಮನೋವೇಧಕವೂ, ಭಯಾನಕವೂ ಆದ ದಾರಿಯಲ್ಲಿ ಸುಬೆನ್ ಕೊವ್ ಬಹುದೂರದ ಪ್ರಯಾಣ ಮಾಡಿ ಮನೆಗೆ ಹಿಂದಿರುಗಿ ಹಾರಿ ಬರುವ ಪಾರಿವಾಳದಂತೆ ಯೂರೋಪಿನ ರಾಜಧಾನಿಗಳ ಕಡೆ ಹೊರಟಿದ್ದನು. ಈಗ ಅವನು ಎಲ್ಲಕ್ಕಿಂತಲೂ ದೂರವಾದ ರಷ್ಯನರಿಗೆ ಸೇರಿದ್ದ ಅಮೇರಿಕದ ಭೂ ಭಾಗದ ಹಿಮದಲ್ಲಿ ಕುಳಿತಿದ್ದನು. ಅವನ ಎರಡು ಕೈಗಳನ್ನೂ ಹೆಡಮುರಿ ಕಟ್ಟಲಾಗಿತ್ತು. ಮುಂದೆ ಬರಲಿರುವ ಕ್ರೂರ ಯಾತನೆಯನ್ನು ಅನುಭವಿಸಲು ಕಾದಿದ್ದನು. ಎದುರಿಗೆ ಭಾರಿ ರಾವುತನೊಬ್ಬನನ್ನು ಮಂಜಿನ ಮೇಲೆ ಕೆಳಮೊಗ ಮಾಡಿ ಮಲಗಿಸಿದ್ದರು; ಆತ ನೋವಿನಿಂದ ನರಳುತಿದ್ದುದನ್ನು ಸುಬೆನ್ ವ್ ಅಚ್ಚರಿಯಿಂದ ನೋಡಿದನು. ಆ ದೈತ್ಯನನ್ನು ಶಿಕ್ಷಿಸಿ ಹೆಂಗಸರಿಗಿಂತ ಕಡೆ ಮಾಡಿದ್ದರು. ಆ ಮನುಷ್ಯನ ರೋದನವೇ, ಆತನ ಬಗ್ಗೆ ನಡೆದ ಪೈಶಾಚಿಕ ಶಿಕ್ಷಾಕ್ರಮ ಅಸಾಮಾನ್ಯವಾಗಿತ್ತೆಂಬುದನ್ನು ವ್ಯಕ್ತಪಡಿಸುತಿತ್ತು.


ಸುಬೆನ್ ಕೊವ್ ನಡುಗುತ್ತಾ ನೋಡಿದನು. ಆದರೆ ಅವನು ಸಾವಿಗೆ ಹೆದರುವವನಲ್ಲ. ವಾರ್ಸಾದಿಂದ ನ್ಯುಲಾಟೋ ತನಕ ಬೇಸರದ ಹಾದಿಯಲ್ಲಿ ಜೀವವನ್ನು ಹೊತ್ತು ತಂದವನಿಗೆ, ಸಾವು ಎಂದ ಮಾತ್ರಕ್ಕೆ ಕಂಪಿಸುವಂಥ ಸಂಭವವಿಲ್ಲ. ಆದರೆ ಅವನು ನರಕ ಯಾತನೆಯ ಅನುಭವಕ್ಕೆ ವಿರೋಧಿಯಾಗಿದ್ದನು. ಅದು ಆತ್ಮವಿಶ್ವಾಸಕ್ಕೆ ಧಕ್ಕೆಯುಂಟುಮಾಡಿತ್ತು. ನೋವಿನಿಂದುಂಟಾಗುವ ದುಃಖಮಯ ದೃಶ್ಯ ನೋವಿಗಿಂತಲೂ ನಿಂದನೀಯವಾಗಿತ್ತು. ತಾನು ಕೂಡ ಬಿಗ್ ಇವಾನ್ ಮತ್ತು ಇನ್ನೂ ಮುಂಚೆ ಸತ್ತಿರುವ ಮನುಷ್ಯರ ಹಾಗೆ ಯಾಚಿಸಿ, ಪ್ರಾರ್ಥಿಸಿ, ಮೊರೆಯಿಟ್ಟು ಕಷ್ಟ ಪಡಬೇಕಾಗಬಹುದು ಎಂಬ ಅಂಶವನ್ನು ಸುಬೆನ್‌ಕೋವ್ ತಿಳಿದಿದ್ದನು; ಅಂಥ ಮಾರ್ಗ ಒಳ್ಳೆಯದಲ್ಲ.... ಸರಿಯಾದ ಪರಿಹಾರ ಯಾವುದೆಂದರೆ ಧೈರ್ಯವಾಗಿ, ಯಾರ ಹಂಗೂ ಇಲ್ಲದೆ, ನಗುನಗುತ್ತಾ ಕಣ್ಮರೆಯಾಗುವುದು!.... ಇಲ್ಲದೆ ಶಕ್ತಿ ಕುಗ್ಗಿ, ಮಾಂಸಖಂಡಗಳ ಚುಚ್ಚು ನೋವಿನಿಂದ ತಳಮಳಗೊಂಡು, ಕೋತಿಯಂತೆ ಚೀತ್ಕಾರ ಮಾಡುತ್ತಾ, ಕಿರುಗುಟ್ಟುತ್ತಾ ಶುದ್ಧ ಮೃಗದಂತಾಗುವುದು ಅಬ್ಬಾ, ಅದೇ ಅತ್ಯಂತ ಭೀಷಣವಾದುದು....

ತಪ್ಪಿಸಿಕೊಳ್ಳಲು ಯಾವ ಉಪಾಯವೂ ಇದ್ದಿಲ್ಲ. ಎಂದು ಪೋಲೆಂಡಿನ ಸ್ವಾತಂತ್ರ್ಯದ ದಿವ್ಯ ಕನಸನ್ನು ಕಂಡನೋ, ಅಂದಿನಿಂದ ಅವನು ವಿಧಿಯ ಕೀಲುಗೊಂಬೆಯಾಗಿದ್ದನು. ಮೊದಲಿನಿಂದಲೂ ವಿಧಿಯ ಕೈವಾಡ ನಡೆದಿತ್ತು. ವಾರ್ಸಾ, ಸೇಂಟ್ ಟೈಟರ್ ಬರ್ಗ್, ಸೈಬೀರಿಯದ ಗಣಿಗಳು, ಮತ್ತು ಕಮ್ ಚಟಕ ಸ್ಥಳಗಳಿಂದ ತುಪ್ಪುಳು ಚರ್ಮಕ್ಕಾಗಿ ಬರುವ ಕಳ್ಳರೊಡನೆ ಅಲ್ಲಾಡುವ ದೋಣಿಗಳಲ್ಲಿ ಈ ತುದಿಗೆ ಅವನನ್ನು ತಂದು ನಿಲ್ಲಿಸಿದೆ. ಅವನಂಥ ಕನಸುಗಾರ, ಕಲಾವಿದ, ಸೂಕ್ಷ್ಮಮತಿಗೆ ಈ ಕೊನೆಗಾಲವೇ ? ದೂರದ ಕತ್ತಲ ಪ್ರದೇಶದಲ್ಲಿ, ಅನಾಗರಿಕರ ಮಧ್ಯೆ ಗೋಳಿಡುತ್ತಾ, ಸುಲಭವಾಗಿ ಮನೋವಿಕಾರ ಹೊಂದುತ್ತಾ ________________

ಮುಖ ಭಂಗ ಅವನು ಬಾಳಬೇಕೆಂಬ ವಿಧಿ ನಿಯಮ ಮೊದಲೇ ಆತನಿಗೆ ತಿಳಿಯದಂತೆ ನಿಶ್ಚಿತವಾಗಿತ್ತು. * ಸುಬೆನ್ ಕೊವ್ ನಿಟ್ಟುಸಿರುಬಿಟ್ಟನು...ತನ್ನ ಮುಂದಿದ್ದ ಬಿಗ್ ಇವಾನ್ ದೈತ್ಯಾಕೃತಿಯವನಾದರೂ ಉಕ್ಕಿನ ಮನುಷ್ಯನಾದರೂ ಎದೆಗಾರನಾಗಿದ್ದಿಲ್ಲ. ಅವನು ಮೊದಲು ರಾವುತನಾಗಿದ್ದು ಕಡಲುಗಳ್ಳನಾಗಿ ಮಾರ್ಪಾಟಾದವನು. ಈಗ ಪಶುಪ್ರಾಯನಾಗಿದ್ದನು. ನರಗಳ ಪ್ರತಿಕ್ರಿಯೆ ಬಹು ಕೆಳಮಟ್ಟದ್ದಾಗಿದ್ದು ಸಾಮಾನ್ಯರಲ್ಲಿ ಉಂಟಾಗುವ ತೀವ್ರ ನೋವು ಆತನಿಗೆ ಕೇವಲ ಕಚಕುಳಿ ಯಂತಾಗುತಿತ್ತು. ಆದರೂ ಈ ನ್ಯುಲಾಟೋ ಇಂಡಿಯನರನ್ನು ನಂಬ ಬಹುದು. ಅವರು ಬಿಗ್ ಇವಾನನ ನರವ್ಯೂಹವನ್ನೇ ಭೇದಿಸಿ ಕಂಪಿಸುತ್ತಿದ್ದ ಆತ್ಮದ ಮೂಲವನ್ನು ಹುಡುಕತೊಡಗಿದ್ದರು. ಮನುಷ್ಯನೊಬ್ಬ ಇಷ್ಟು ಯಾತನೆ ಪಡುತ್ತ ಬದುಕಿದ್ದಾನೆಂದರೆ ಊಹಿಸಲಸಾಧ್ಯ. ತನ್ನ ನರ ಕೇಂದ್ರದ ದೃಢತೆಗೆ ತಕ್ಕಂತೆ ಬಿಗ್ ಇವಾನ್ ವರ್ತಿಸಿರಬೇಕು. ಆಗಲೇ ಇತರರಿಗಿಂತ ಎರಡರಷ್ಟು ಹೆಚ್ಚಿನ ಕಾಲಾವಧಿ ಆತನು ಜೀವವನ್ನು ಹಿಡಿದಿದ್ದನು.... ಇನ್ನೂ ಬಹು ಹೊತ್ತು ಈ ನರಳಾಟವನ್ನು ನೋಡಲು ನಾಧ್ಯವಿಲ್ಲವೆಂದು ಸುಬೆನ್ಕೊವ್ ಭಾವಿಸಿದನು-ಇವಾನ್ ಏಕೆ ಸಾಯುವುದಿಲ್ಲ ? ಆ ಚೀರಾಟ ನಿಲ್ಲದಿದ್ದರೆ ತಾನು ಹುಚ್ಚನಾಗುತ್ತೇನೆ. ನಿಂತರೆ ತನ್ನ ಸರದಿ ಬರುತ್ತದೆ. ಮೊದಲೇ ಹಲ್ಲು ಕಿರಿಯುತ್ತಾ ಯಕಾಗ ತನಗಾಗಿ ಕಾದಿದ್ದಾನೆ. ಅವನನ್ನು ಒಂದು ವಾರದ ಹಿಂದೆ ಕೋಟೆಯಿಂದ ಹೊರಕ್ಕೆ ತಳ್ಳಿ, ಅವನ ಮುಖಕ್ಕೆ ನಾಯೆಚಾಟಿಯಿಂದ ತಾನೇ ಹೊಡೆದಿದ್ದನು. ಈಗ ಯಕಾಗನೇ ತನ್ನ ವಿಚಾರಣೆಗೆ ನಿಂತಿದ್ದಾನೆ. ನಿಜವಾಗಿಯೂ ಅವನು ಅತ್ಯಂತ ಕಠಿಣವಾದ ಶಿಕ್ಷಾಕ್ರಮವನ್ನು ತನಗಾಗಿ ಕಾದಿರಿಸಿದ್ದಾನೆ. ತನ್ನ ಕೀಲುಗಳನ್ನು ಸಡಿಲಿಸ ಲಿದ್ದಾನೆ. ಇವಾನ್ ನರಳಾಟವನ್ನು ನೋಡಿದರೆ ಯಕಾಗನ ಶಿಕ್ಷಾಕ್ರಮವೇ ಒಳ್ಳೆಯದಿರಬೇಕು....ಯಕಾರನಿಗೆ ಶಿರಬಾಗಿ ಇಂಡಿಯನರು ಸಂತೋಷದಿಂದ ಕೈ ಚಪ್ಪಾಳೆ ತಟ್ಟಿ ನಗುತ್ತಾ ಹಿಂದೆ ಸರಿದು ನಿಂತರು. ಅಪರಾಧ ಮಾಡಿದ ಭಯಂಕರ ವಸ್ತುವನ್ನು ನೋಡಿ ಸುಬೆನ್ ಕೊವ್ ಕೂಡ ಚಿತ್ರೋದ್ರೇಕದಿಂದ ನಗಲಾರಂಭಿಸಿದನು. ಅದನ್ನು ನೋಡಿ ಇಂಡಿಯನರಿಗೆ ಆಶ್ಚರ್ಯವಾಯಿತು. ಆದರೆ ಅವನು ಮಾತ್ರ ನಗುತ್ತಲೇ ಇದ್ದನು. ಈ ರೀತಿ ಆಗಬಾರದು ಎಂದು ತನ್ನನ್ನು ತಾನೇ ಸುಧಾರಿಸಿಕೊಂಡನು. ಸೆಳೆವಿನ ಎಳೆತ ನಿಧಾನವಾಗಿ ಕಡಿಮೆಯಾಗುತ್ತ ಬಂತು. ಬೇರೆ ವಿಷಯಗಳ ________________

ಬಾಳ ನಿಯಮ ಕಡೆ ಪ್ರಯಾಸದಿಂದ ಯೋಚಿಸತೊಡಗಿದನು. ತನ್ನ ಜೀವನದ ಹಿಂದಿನ ಹಾಳೆಗಳನ್ನು ತಿರುವಿಹಾಕಿ ಸಿಂಹಾವಲೋಕನ ಮಾಡಿದನು ತನ್ನ ಹೆತ್ತವರ ನೆನಪಿನೊಡನೆ, ತನಗೆ ಸೇರಿದ್ದ ಚುಕ್ಕೆಗಳ ಸಣ್ಣ ಕುದುರೆಯ ಜ್ಞಾಪಕವೂ ಬಂತು. ಫ್ರೆಂಚ್ ಕಲಿಸಲು ಬರುತ್ತಿದ್ದ ಉಪಾಧ್ಯಾ ಯರು ತನಗೆ ನೃತ್ಯವನ್ನು ಅಭ್ಯಾಸಮಾಡಿಸಿದ್ದರು. ಅವರಲ್ಲಿದ್ದ ಹಳೆಯ ವಾಲ್ಟೇರ್ ಪುಸ್ತಕವನ್ನು ಅವರಿಗೆ ತಿಳಿಯದ ಹಾಗೆ ವಶಪಡಿಸಿಕೊಂಡಿದ್ದನು. ಮತ್ತೊಂದು ಸಾರಿ ಪ್ಯಾರಿಸ್, ಮಂಕು ಕವಿದ ಲಂಡನ್, ಉಲ್ಲಾಸಭರಿತ ವಿಯನ್ನ ಮತ್ತು ರೋಮ್ ದೇಶಗಳನ್ನು ಕಾಣುವಂತೆ ಭಾಸವಾಯಿತು. ತನ್ನಂತೆಯೇ ಕನಸು ಕಂಡ ಉದ್ರಿಕ್ತ ಯುವಕ ತಂಡದ ನೋಟ ಕಣ್ಣಿಗೆ ಕಟ್ಟ ದಂತಿತ್ತು. ಅವರ ಕನಸು ಪೋಲೆಂಡಿನ ಸ್ವಾತಂತ್ರ್ಯ ಮತ್ತು ವಾರ್ಸಾದಲ್ಲಿ ಪೋಲೆಂಡಿನ ರಾಜನಿಗೆ ಪಟ್ಟಾಭಿಷೇಕ. ಆ ಸ್ಫೂರ್ತಿಯಿಂದಲೇ ಈ ದೊಡ್ಡ ಪ್ರಯಾಣ ಆರಂಭವಾದುದು. ನಿಜ; ನಾನು ಎಲ್ಲರಿಗಿಂತಲೂ ಹೆಚ್ಚು ಕಾಲ ಉಳಿದಿದ್ದೇನೆ. ಸೇಂಟ್ ಪೀಟ‌ಬರ್ಗ್‌ನಲ್ಲಿ ಇಬ್ಬರು ಮರಣದಂಡನೆಗೆ ಗುರಿ ಯಾದ ಮೇಲೆ, ಒಬ್ಬೊಬ್ಬರಾಗಿ ಗತಿಸಿದ ವೀರ ಯೋಧರನ್ನು ಎಣಿಕೆ ಮಾಡ ಬೇಕು. ಒಂದು ಕಡೆ ಒಬ್ಬನು ಜೈಲರಿನಿಂದ ಪ್ರಾಣ ಹೋಗುವ ತನಕ ಏಟು ತಿನ್ನ ಬೇಕಾಯಿತು. ಮತ್ತೊಂದೆಡೆ ರಕ್ತಮಯವಾದ ದೇಶಭ್ರಷ್ಟರ ಮಾರ್ಗ! ಅಲ್ಲಿ ಎಷ್ಟೋ ತಿಂಗಳ ಕಾಲ ಪ್ರಯಾಣಮಾಡಿದ್ದ ಒಬ್ಬಾತ ಕಡೆಗೆ ರಾವುತರ ಒರಟು ಕೈಗಳಿಗೆ ಸಿಕ್ಕಿ ದಾರಿಯಲ್ಲಿ ಬಿದ್ದು ಬಿಟ್ಟನು. ಯಾವಾಗಲೂ ಈ ಮೃಗಸದೃಶವಾದ ಕಾಡುತನ ತಮ್ಮನ್ನು ಬಿಡಲಿಲ್ಲ. ಜ್ವರಪೀಡಿತರಾಗಿ, ಗಣಿ ಗಳಲ್ಲಿ, ಕಶಾಪ್ರಹಾರದಿಂದ ಎಷ್ಟೋ ಜನ ಪ್ರಾಣಬಿಟ್ಟರು. ತಪ್ಪಿಸಿಕೊಂಡು ಬಂದವರಲ್ಲಿ ಇಬ್ಬರು, ರಷ್ಯಾ ರಾಜ್ಯಕ್ಕೆ ಅಧೀನರಾದ ತುರ್ಕಿ ಜನಾಂಗದವ ರೊಡನೆ ಯುದ್ಧ ಮಾಡಿ ಸತ್ತರು. ತಾನೊಬ್ಬ ಮಾತ್ರ ಕಳುವು ಕಾಗದ ಗಳನ್ನೂ, ಹಿಮದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಹಣವನ್ನೂ ಹೊತ್ತು ಕಮ್ಚಟಕಾ ಪ್ರದೇಶಕ್ಕೆ ನುಗ್ಗಿ ಬಂದನು. ಇದೆಲ್ಲವೂ ಅನಾಗರಿಕತೆಯ ಪರಮಾವಧಿಯಲ್ಲದೆ ಬೇರೆಯಲ್ಲ. ಚಲಚಿತ್ರ ಗಳಲ್ಲಿ, ನಾಟಕ ರಂಗಗಳಲ್ಲಿ, ನೃತ್ಯಾಲಯಗಳಲ್ಲಿ ತನ್ಮಯವಾಗಿದ್ದ ತನ್ನ ಹೃದಯವನ್ನು ಈ ದುಷ್ಟ ಶಕ್ತಿಯು ಆವರಿಸಿಬಿಟ್ಟಿತ್ತು. ತನ್ನ ರಕ್ತವನ್ನು ಅರ್ಪಿಸಿ ಜೀವವನ್ನು ಕೊಂಡುಕೊಂಡಿದ್ದನು. ಪ್ರತಿಯೊಬ್ಬರೂ ಕೊಲೆಮಾಡಿದ್ದರು. ತಾನು ಕೂಡ ರಹದಾರಿ ಪಡೆಯಲು ಆ ಪ್ರಯಾಣಿಕನನ್ನು ಕೊಲೆಮಾಡಿದ್ದ. ________________

ಮುಖ ಭಂಗ ತಾನೂ ಒಬ್ಬ ತೂಕದ ವ್ಯಕ್ತಿ ಎನ್ನುವ ಸಮರ್ಥನೆಗಾಗಿ ಒಂದೇ ದಿನದಲ್ಲಿ ಇಬ್ಬರು ರಷ್ಯನ್ ಸಾಹೇಬರೊಡನೆ ದ್ವಂದ್ವ ಯುದ್ಧ ಮಾಡಿದ್ದ. ಹಾಗೆಯೆ ಫರ್ ಕಳ್ಳರ ಗುಂಪಿನಲ್ಲಿ ಸ್ನಾನ ಸಂಪಾದಿಸಲು ಪ್ರಯತ್ನ ಪಟ್ಟು ದೊಡ್ಡ ವಿಜಯವನ್ನೇ ಗಳಿಸಿದ್ದ. ತನ್ನ ಹಿಂದೆ ಸಾವಿರಾರು ಮೈಲಿಗಳ ರಷ್ಯಾ ಮತ್ತು ಸೈಬೀರಿಯದ ಮಾರ್ಗವಿತ್ತು. ಅದೇ ದಾರಿಯಲ್ಲಿ ಹಿಂತಿರುಗಿ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಆದ ರಿಂದ ಕಪ್ಪನೆಯ ಹಿಮಮಯ ಬೆರಿಂಗ್ ಸಮುದ್ರವನ್ನು ಹಾದು ಅಲಾಸ್ಕ, ತಲುಪುವುದೊಂದೇ ಉಳಿದ ಮುಂದಿನ ಕರ್ತವ್ಯವಾಗಿತ್ತು. ಇದರಿಂದಾಗಿ, ಅನಾಗರಿಕತೆಯಿಂದ ಇನ್ನೂ ಹೆಚ್ಚಿನ ಅನಾಗರಿಕತೆಗೆ ಹೋಗಬೇಕಾಗಿತ್ತು. ಫರ್ ಕಳ್ಳರ ಕೀಳುಮಟ್ಟದ ನಾವೆಗಳಲ್ಲಿ ಆಹಾರ ನೀರಿಲ್ಲದೆ, ಕೊನೆಯಿಲ್ಲದ ಅತಿ ರಭಸದಿಂದಿರುವ ಅಲೆಗಳೊಡನೆ ಹೋರಾಡುತ್ತ ಮನುಷ್ಯರು ಪ್ರಾಣಿ. ಗಳಂತೆಯೆ ಮಾರ್ಪಟ್ಟಿದ್ದರು. ಕಮಚಟಕದ ಪೂರ್ವದಿಕ್ಕಿಗೆ ಮೂರು ಬಾರಿ ಸಮುದ್ರಯಾನ ಮಾಡಿದ್ದ. ನಾನಾ ಕಷ್ಟ, ನೋವುಗಳನ್ನು ಅನುಭವಿಸಿ ಜೀವ ಉಳಿಸಿಕೊಂಡು ಮರು ನಾ೦ಯೂ ಹಿಂದಿರುಗಿ ಬರಬೇಕಾಯಿತು. ಸಂದಿಗ್ಧ ಸ್ಥಿತಿಯಲ್ಲಿ ಸಿಕ್ಕಿಕೊಂಡೆವು. ಅಂತೂ ತಾನು ಬಂದ ದಾರಿಯಲ್ಲಿ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಸುರಂಗದ ಸಿಡಿಮದ್ದೂ, ಕಶಾ ಪ್ರಹಾರವೂ ಕಾದಿದ್ದ. ಕಡೆಗೆ ನಾಲ್ಕನೆಯ ಬಾರಿ ಪೂರ್ವಕ್ಕೆ ಪ್ರಯಾಣಮಾಡಿದ್ದ. ಕೇವಲ ಕಾಲ್ಪನಿಕವೆಂದಿದ್ದ ಸೀಲ್ ದ್ವೀಪಗಳನ್ನು ಮೊಟ್ಟ ಮೊದಲು ಕಂಡುಹಿಡಿದ ತಂಡ ದಲ್ಲಿ ತಾನೂ ಇದ್ದ. ಆದರೆ ತಾನು ಹಿಂದಿರುಗಲಿಲ್ಲ. ತುಪ್ಪುಳು ಚರ್ಮದ ಭಾಗ್ಯ ದಲ್ಲಿ ವಾಲಾಗಲು ಕಮ್ಚಟಕ್ ದ್ವೀಪದಲ್ಲಿ ನಡೆದ ಹುಚ್ಚು ಉಲ್ಲಾಸ ಕೋಲಾ ಹಲವು ತಾನು ಭಾಗವಹಿಸಿರಲಿಲ್ಲ. ಪುನಃ ವಾಪಸು ಹೋಗಕೂಡದೆಂದು ಪ್ರತಿಜ್ಞೆ ಮಾಡಿದ್ದ. ತನಗೆ ಪ್ರಿಯವಾದ ಯೂರೋಪಿನ ರಾಜಧಾನಿಗಳನ್ನು ತಲುಪಬೇಕಾದರೆ ಇನ್ನೂ ಮುಂದುವರಿಯಬೇಕೆಂದು ತಿಳಿದಿದ್ದೆ. ಆದ್ದರಿಂದ ನಾವೆಗಳನ್ನು ಬದಲಾಯಿಸಿ ಕತ್ತಲಿನ ಹೊಸ ರಾಜ್ಯದಲ್ಲಿ ನೆಲೆಸಿದ್ದ. ಸ್ಲಾವ್ ಕುಲದ ಬೇಟೆಗಾರರು, ರಷ್ಯದ ಸಾಹಸಿಗಳು, ಮಂಗೋಲರು, ಟಾಟಾರರು ಮತ್ತು ಸೈಬೀರಿಯದ ಮೂಲನಿವಾಸಿಗಳು ತನ್ನ ಸ್ನೇಹಿತರಾಗಿದ್ದರು. ಹೊಸ ಪ್ರಪಂಚದ ಅನಾಗರಿಕರೊಡನೆ ಅವರು ರಕ್ತದ ಕಾಲುವೆಯನ್ನೇ ಹರಿಸಿದ್ದರು. ಫರ್‌ ದಾನ ಮಾಡದ ಎಲ್ಲ ಹಳ್ಳಿಗಳ ಮೇಲೂ ಕಗ್ಗೂಲೆಯನ್ನು ಮಾಡಿದ್ದರು. ________________

ಬಾಳ ನಿಯಮ ಪುನಃ ಪ್ರತಿಫಲವಾಗಿ ಅವರೇ ಹಡಗು ಕಂಪೆನಿಯವರಿಂದ ಸಾಮೂಹಿಕವಾಗಿ ಸಂಹರಿಸಲ್ಪಟ್ಟಿದ್ದರು. ಉಳಿದವರೆಂದರೆ ನಾನು ಮತ್ತು ಇನ್ನೊಬ್ಬ ಫಿನ್ ಜನಾಂಗದವ. ಹಸಿವಿನ ಮತ್ತು ಏಕಾಂತದ ಚಳಿಗಾಲವನ್ನು ಯಾವ ಸಂಪರ್ಕವೂ ಇಲ್ಲದ ಅಲ್ಲೂ ಟನ್ ದ್ವೀಪಗಳಲ್ಲಿ ಕಳೆದಿದ್ದರು. ವಸಂತಕಾಲದಲ್ಲಿ ಯಾವುದಾದರೂ ಫರ್‌ ಹಡಗು ತಮ್ಮ ರಕ್ಷಣೆಗೆ ಬರುವ ಸಂಭವ ಸಾವಿರದಲ್ಲಿ ಒಂದರಷ್ಟು ಅದೃಷ್ಟದ ಮೇಲೆ ನಿಂತಿತು. ಆದರೆ ಸದಾ ಭೀಕರ ಕ್ರೌರ್ಯ ತನ್ನನ್ನು ಸುತ್ತುಗಟ್ಟಿತು. ಹಿಂದಿರುಗದೆ ನಾವೆಯಿಂದ ನಾವೆಗೆ ಸಂಚರಿಸುತ್ತಾ, ಕಡೆಗೆ ದಕ್ಷಿಣ ದಿಕ್ಕಿನಲ್ಲಿ ಶೋಧನೆಗಾಗಿ ಹೊರಟ ಹಡಗನ್ನು ಸೇರಿದ್ದ. ಅಲಾಸ್ಕದ ತೀರದಲ್ಲಿ ಇಳಿಯುತ್ತಿದ್ದಂತೆ ಕಾಡು ಮನುಷ್ಯರ ತಂಡದ ಪ್ರತಿಭಟನೆಯನ್ನು ಮಾತ್ರ ಎದುರಿಸಬೇಕಾಗಿತ್ತು. ನಿರುತ್ಸಾಹಜನಕವಾದ ಮತ್ತು ಕಡಿದಾದ ಬಂಡೆಗಳಿಂದ ಆವೃತವಾಗಿದ್ದ ದ್ವೀಪ ಗಳಲ್ಲಿ ಲಂಗರು ಹಾಕಿ ನಿಲ್ಲಿಸಬೇಕಾದರೆ ಅಲ್ಲೋಲ ಕಲ್ಲೋಲ್ಲದ ಯುದ್ಧವನ್ನೇ ಮಾಡಿದಂತಾಗಿತ್ತು. ಎರಡು ರೀತಿಯ ಶತ್ರುಗಳನ್ನು ಎದುರಿಸಬೇಕಾಗಿತ್ತು. ಒಂದು ವಿನಾಶವನ್ನು ಸೂಚಿಸುವಂತೆ ಬೀಸುತ್ತಿದ್ದ ಚಂಡಮಾರುತ, ಎರಡನೆ ಯಮ, ತೋಡು ದೋಣಿಗಳಲ್ಲಿ ಕೂಗಾಡುತ್ತ ಬರುತಿದ್ದ ಕಾಡು ನಿವಾಸಿಗಳು ; ಅವರ ಮುಖದ ಮೇಲೆ ಯುದ್ಧಾಸಕ್ತಿಯು ಎದ್ದು ಕಾಣುತಿತ್ತು. ಸಮುದ್ರದ ಮೇಲೆ ಓಡಾಡುವವರ ಬಳಿಯಲ್ಲಿ ಸಾಮಾನ್ಯವಾಗಿ ಇರುತಿದ್ದ ಸಿಡಿಮದ್ದಿನ ಕ್ರೂರ ಶಕ್ತಿಯನ್ನು ತಿಳಿಯಲು ಅವರು ಬರುತ್ತಿದ್ದರು. ದಕ್ಷಿಣದ ಕರಾವಳಿ 'ಯಲ್ಲೇ ಹೆಚ್ಚು ಕಾಲ ಸಂಚಾರಮಾಡಿ, ಕಡೆಗೆ ಪುರಾತನ ನಾಡೆನಿಸಿದ್ದ ಕ್ಯಾಲಿ ಫೋರ್ನಿಯಕ್ಕೆ ಬಂದಿದ್ದರು. ಇಲ್ಲಿ ಸ್ಪೇನ್ ಸಾಹಸಿಗಳು ಮೆಕ್ಸಿಕೋಗೆ ಹೋಗಲು ಸುಗಮ ದಾರಿಯನ್ನು ನಿರ್ಮಿಸುತ್ತಿದ್ದಾರೆಂಬ ವದಂತಿಯಿತ್ತು. ಈ ಅಂಶದ ಮೇಲೆ ತಾನು ತುಂಬ ನಂಬಿಕೆಯಿಟ್ಟಿದ್ದ. ಏಕೆಂದರೆ ಅವರೊಡನೆ ತಪ್ಪಿಸಿಕೊಂಡು ಹೊರಟರೆ, ಉಳಿದದ್ದು ಸುಲಭ. ಹೆಚ್ಚು ಕಡಿಮೆ ಒಂದು ಅಥವಾ ಎರಡು ವರ್ಷಗಳಲ್ಲಿ ಮೆಕ್ಸಿಕೋ ತಲಪಬಹುದು ; ಅಲ್ಲಿಂದ ಹಡಗನ್ನೇರಿ ಮತ್ತೆ ಯೂರೋಪ್ ಸೇರಬಹುದು. ಆದರೆ ಅವರಿಗೆ ಸ್ಪೆಯ್ ಸಾಹಸಿಗಳ ಭೇಟಿಯಾಗಲಿಲ್ಲ. ಬದಲಾಗಿ ಹಿಂದಿನಂತೆಯೆ ಅನಾಗರಿಕ ಕೂರಿಗಳ ಅಭೇದ್ಯ ಕೋಟೆಯನ್ನೆದುರಿಸಬೇಕಾಗಿತ್ತು. ಪ್ರಪಂಚದ ಎಲ್ಲೆಗೆ ತಮ್ಮದೇ ಆದ ಮಿತಿ ಕಲ್ಪಿಸಿದ್ದ ಮತ್ತು ಯುದ್ಧಕ್ಕಾಗಿಯೆ ಹುಟ್ಟಿದಂತಿದ್ದ ಆ ನಿವಾಸಿಗರು ಅವರನ್ನು ದಡದ ಹತ್ತಿರವೇ ಸೇರಿಸಲಿಲ್ಲ. ದೋಣಿ ಚೂರಾಯಿತು. ಎಲ್ಲರೂ ________________

೧೫ ಮುಖ ಭಂಗ ಸತ್ತರು. ನಾಯಕನು ಶೋಧನೆಯನ್ನು ನಿಲ್ಲಿಸಿ ಉತ್ತರಮುಖವಾಗಿ ಹೊರಟನು. ವರ್ಷಗಳು ಉರುಳಿದವು. ಮಿಕೆಯೋಲವ್ ಎಂಬ ಹೆಂಗಾಮಿ ಹೊರಕೋಟೆ ನಿರ್ಮಾಣವಾದಾಗ, ತಾನು ಟಿಬೆನ್‌ಕಾಫ್ ಕೈಕೆಳಗೆ ಕೆಲಸ ಮಾಡಿದ್ದ. ಕಸೊ ಸ್ವಿಮ್ ದೇಶದಲ್ಲಿ ಎರಡು ವರ್ಷ ತಳ್ಳಿದ್ದ. ಬೇಸಿಗೆಯಲ್ಲಿ ಕಾಬ್ಜಿಬ್ಯೂ ಜಲಸಂಧಿಯ ಮೇಲ್ವಿಚಾರಕನಾಗಿದ್ದ. ಅದೇ ಸಮಯದಲ್ಲಿ ಮೂಲನಿವಾಸಿಗಳ ಸಾಮಾನುಗಳ ವಿನಿಮಯಕ್ಕೆ ಗುಂಪಾಗಿ ಸೇರುತ್ತಿದ್ದರು. ಅಲ್ಲಿ ನಾನಾ ದೇಶಗಳಿಂದ ಬಂದ ವಸ್ತುಗಳಿದ್ದವು; ಸೈಬೀರಿಯದ ಕಲೆಗಳುಳ್ಳ ಜಿಂಕೆಯ ಚರ್ಮ, ಡಯಾಮೆಡಿಸದ ದಂತ, ಆರ್ಟಕ್ ತೀರದ ಸೀಲ್ ಸಸ್ಯ ಪ್ರಾಣಿಗಳ ಚರ್ಮ, ಆಶ್ಚರ್ಯಕರ ಕಲ್ಲು ದೀಪಗಳು ಮುಂತಾದವು. ಆ ವಸ್ತು ಗಳು ಒಂದು ತಂಡದಿಂದ ಮತ್ತೊಂದಕ್ಕೆ ಕೈ ತಪ್ಪಿ, ಯಾವಾಗ ಒಂದೆಡೆ ಸೇರಿತು ಎಂದು ಖಚಿತವಾಗಿ ಹೇಳಲು ಯಾರಿಗೂ ಸಾಧ್ಯವಿರಲಿಲ್ಲ. ಒಂದು ಸಾರಿಯಂತೂ ಇಂಗ್ಲ ದಿನ ಬೇಟೆಯ ಚಾಕು ಸಿಕ್ಕಿತು ! ಭೂಗೋಳ ಅರ್ಥ ಮಾಡಿಕೊಳ್ಳಲು ಇದೇ ಸರಿಯಾದ ಶಾಲೆ ಎಂದು ಸುಬೆನ್ಕೋವ್ ಭಾವಿಸಿದ. ಏಕೆಂದರೆ ಇಲ್ಲಿ ನಾರ್ಟನ್ ತೀರ, ಕಿಂಗ್ ದ್ವೀಪ, ಸೇಂಟ್ ಲಾರೆನ್ ದ್ವೀಪ, ಪ್ರಿನ್ಸ್ ಆಫ್ ವೇಲ್ಸ್ ಭೂಶಿರ, ಬ್ಯಾರೋ ಮುಂತಾದ ಕಡೆಗಳಿಂದ ಎಸ್ಕಿಮೋ ಜನರನ್ನು ಭೇಟಿಮಾಡಿದ್ದ. ಬೇರೆಯ ಹೆಸರುಳ್ಳ ಇತರ ಪ್ರದೇಶಗಳನ್ನು ಪ್ರಯಾಣದ ಕಾಲಮಾನದಿಂದ ತಿಳಿಯಬೇಕಾಗಿತ್ತು. - ಈ ವ್ಯಾಪಾರಸ್ಥ ಅನಾಗರಿಕರು ಬಹು ವಿಶಾಲ ಪ್ರದೇಶಗಳನ್ನು ದಾಟ ಬರುತ್ತಿರಬೇಕು ; ಆದ್ದರಿಂದಲೇ ಅವರು ಒಂದೇ ರೀತಿಯ ಸಾಮಗ್ರಿಗಳನ್ನು ಪುನಃ ಪುನಃ ತರುತಿದ್ದರು. ಅವುಗಳನ್ನು ತಾನು ಬೆಲೆಯೇರಿಸಿ, ಪುಸಲಾಯಿಸಿ ಲಂಚ ಕೊಟ್ಟು ವಶಪಡಿಸಿಕೊಂಡಿದ್ದ. ದೂರದೇಶದ ಆಕ್ಷಯಭರಿತರಾದ ಹೊಸ ತಂಡದವರು ಯಾರಾದರೂ ಬಂದರೆ ಅವರನ್ನು ತನ್ನ ಮುಂತೆ ಹಾಜರು ಪಡಿಸುತ್ತಿದ್ದರು. ಕಾಡು ಮೃಗಗಳು, ಶತ್ರು ತಂಡಗಳು, ಒಳಹೊಗಲಾಗದ ಅರಣ್ಯಗಳು, ಅದ್ಭುತ ಪರ್ವತ ಶ್ರೇಣಿಗಳು ಮತ್ತು ಅಸಂಖ್ಯಾತ ಊಹಾತೀತ ವಾದ ಗಂಡಾಂತರಗಳು ಹೇಳಲ್ಪಡುತ್ತಿದ್ದುವು. ಆದರೆ ಒಂದು ವದಂತಿ ಯಾವಾಗಲೂ ಹೊರಗಿನವರಿಂದ ಕೇಳಿಬಂತು ....... ಪೂರ್ವ ದಿಕ್ಕಿನ ತುದಿಯಲ್ಲಿ ಬಿಳೀ ಮನುಷ್ಯರಿದ್ದಾರೆಂದು ಅವರ ಕಣ್ಣು ನೀಲಿಯಾಗಿಯೂ, ಕೂದಲು ನುಣುಪಾಗಿಯೂ ಇರುವುದಂತೆ. ಯಾವಾಗಲೂ ತುಪ್ಪುಳು ಚರ್ಮಕ್ಕಾಗಿ ________________

ಬಾಳ ನಿಯಮ ದೆವ್ವದಂತೆ ಹೋರಾಡುತ್ತಾರಂತೆ ...ಇಷ್ಟಾಗಿ ಯಾರೂ ಅವರನ್ನು ನೋಡಿರಲಿಲ್ಲ. ಬೀದಿಯ ಮಾತು ಮಾತ್ರ ಒಬ್ಬರಿಂದೊಬ್ಬರಿಗೆ ಹರಡಿತ್ತು. ಈ ವಿಚಿತ್ರ ಶಾಲೆ ಯಲ್ಲಿ ಸತ್ಯಾಂಶವನ್ನು ಅಪರಿಚಿತ ಭಾಷೆಯ ವಾದ ವಿವಾದದ ಮೂಲಕ ತಿಳಿ ಯಲು ಸಾಧ್ಯವಿರಲಿಲ್ಲ. ಜನರ ಮೆದುಳೋ ವಿಚಾರ ಬೆಳಕಿಲ್ಲದ ಕತ್ತಲಕೋಣೆ ಯಂತಿತ್ತು. ಅವರ ಮಾತಿನಲ್ಲಿ ನಿಜಾಂಶವೂ ಕಲ್ಪನೆಯೂ ಬೆರೆಸಿಹೋಗಿದ್ದವು. ದೂರವನ್ನು ನಿರ್ಧರಿಸುವ ಪ್ರಮಾಣ 'ನಿದ್ರೆ': ವ್ಯಕ್ತಿ ದಾರ್ಡ್ಯದ ಮೇಲೆ ಅವ ಲಂಬಿಸಿರುವ ಸಿದ್ರೆಯನ್ನು ಪ್ರಮಾಣವೆಂದು ನಂಬುವುದು ಹೇಗೆ ? ಆದರೂ 'ಪೂರ್ವದಲ್ಲಿ ದೊಡ್ಡ ನದಿಯೊಂದಿದೆ ; ಅಲ್ಲೇ ಈ ನೀಲಿ ಕಣ್ಣಿನ ಜನರಿದ್ದಾರೆ. ಆ ನದಿಯೇ ಯೂಕಾನ್.' ಎಂಬ ಪಿಸುಮಾತು ನನಗೆ ಧೈರ್ಯ ತಂದಿತು. ರಷ್ಯನರು ಕ್ವಿಕ್ಪಾಕ್ ಎನ್ನುವ ದೊಡ್ಡ ನದಿ ಮಿಕಿಲೊವಸ್ತಿ ಕೋಟೆಯ ದಕ್ಷಿಣದಲ್ಲಿ ವಿಲೀನವಾಗುತ್ತದೆಂಬ ಸುದ್ದಿ ಜನಜನಿತವಾಗಿತ್ತು. (ಆ ಕ್ರಿಕ್ ಪಾಕ್" ನದಿಯೇ ಯೂಕಾನ್' ಎಂಬ ಪಿಸುಮಾತು ಮೆಲ್ಲಗೆ ಹರಡ ತೊಡಗಿತು. ಸುಬೆನ್ಕೋವ್ ಮಿಕೆಯೊಲವ್‌ಸ್ಕಿಗೆ ಮರಳಿ ಹೊರಟಿದ್ದ. ಕ್ವಿಕ್ ಪಾಕ್ ಯಾತ್ರೆಗಾಗಿ ಒಂದು ವರ್ಷ ಕಾಲ ಹಾತೊರೆದಿದ್ದ. ಕಡೆಗೊಬ್ಬ ಸಿಕ್ಕಿದ್ದ. ಆತನೇ ಮೆಲಕಾಫ್ ಎಂಬುವನು. ಮಿಶ್ರಜಾತಿಯವನಾದರೂ ರಷನರ ಸಂಪರ್ಕದಿಂದ ಹುಟ್ಟಿದವನು, ಕಮ್ಚಟಕಾ ದಾಟಿ ಬಂದಿದ್ದ ಕಾರರೂ ಹಿಂಸ್ರ ಪುರುಷರೂ ಆದ ತಾಡಾಡಿಗಳ ಗುಂಪಿನ ಮುಖಂಡನಾಗಿದ್ದನು. ತಾನು ಅವನ ಕೈಕೆಳಗೆ ನಾವಿಕರ ಸೇನಾಧಿಕಾರಿಯಾದನು. ಕ್ವಿಕ್ಪಾಕ್ ನದೀ ಮುಖಜಭೂಮಿ ಬಹು ವಿಶಾಲವಾಗಿತ್ತು. ಅಲ್ಲಿ ದಿಗ್ರಮೆ ಹಿಡಿಸುವಂತಿರುವ ಅನೇಕ ತೊಳಸು ಬಳಸು ಹಾದಿಯಲ್ಲಿ ಪ್ರಯಾಣಮಾಡಿದ್ದರು. ಉತ್ತರ ತೀರದ ಸಣ್ಣ ಬೆಟ್ಟಗಳನ್ನು ಹತ್ತಿದ್ದರು. ತೋಡುದೋಣಿಗಳ ಪಕ್ಕದ ಮೇಲಂಚಿನಲ್ಲಿ ಯುದ್ಧ ಸಾಮಗ್ರಿಗಳನ್ನು ತುರುಕಿದ್ದರು. ಎರಡರಿಂದ ಹತ್ತು ಮೈಲಿಗಳಷ್ಟು ಅಗಲ, ವಿದ ನದಿಯ ನಾಲೆ ತುಂಬ ಆಳವಾಗಿತ್ತು, ಸುಮಾರು ಐನೂರು ಮೈಲಿಗಳ ವರೆಗೆ ಅವರು ದೊಡ್ಡ ಪ್ರವಾಹಗಳನ್ನು ದಾಟಿದರು. ಮೆಲಕಾಫ್ ನ್ಯುಲಾಟೋ ಪ್ರದೇಶದಲ್ಲಿ ವ್ಯಾಪಾರಕ್ಕಾಗಿ ಕೋಟೆಯೊಂದನ್ನು ಕಟ್ಟಲು ನಿಶ್ಚಯಿಸಿದನು. ಸುಬೆನ್ ಕೊವ್ ಇನ್ನೂ ಮುಂದೆ ಹೋಗೋಣವೆಂದು ಪ್ರೇರೇಪಿಸಿದನು. ಆದರೆ ಮರುಕ್ಷಣ ನ್ಯಲಾಟೋವಲ್ಲೇ ನಿಲ್ಲಲು ಒಪ್ಪಿಕೊಂಡನು. ಬಹು ದಿನ ಕಾಡುವ ಚಳಿಗಾಲ ಬರುತ್ತಿದ್ದುದರಿಂದ, ಒಂದು ನೆಲೆಯಲ್ಲಿ ನಿಲ್ಲುವುದು ಉತ್ತಮವೆಂದು. ________________

ಮುಖ ಭಂಗ ಭಾವಿಸಿದನು. ಬೇಸಿಗೆಯಲ್ಲಿ ಮಂಜು ಕಡಿಮೆಯಾಗುತ್ತದೆ; ಆಗ ಕ್ಲಿಕ್ಪಾಕ್ ನದಿಯ ಮೇಲೆ ಯಾರಿಗೂ ತಿಳಿಯದಂತೆ ಪ್ರಯಾಣ ಬೆಳೆಸಿ, ಹಡ್ರನ್ ಕೊಲ್ಲಿಯ ಪಾಳೆಯಗಳಿಗೆ ಸೇರಲು ಪ್ರಯತ್ನ ಪಡಬಹುದು ! ಕ್ರಿಕ್ಪಾಕ್ ನದಿಯೇ ಯಕಾನ್ ಎಂಬ ಪಿಸುಮಾತನ್ನು ಮೆಲೆಕಾಫ್ ಕೇಳಿರಲಿಲ್ಲ. ತಾನು ಕೂಡ ಅವನಿಗೆ ಹೇಳಲಿಲ್ಲ! ವ್ಯಾಪಾರದ ಕೋಟೆಯನ್ನು ಕಟ್ಟಲು ಪ್ರಾರಂಭಿಸಿದರು. ಬಲಾತ್ಕಾರ ದಿಂದ ಕೆಲಸಮಾಡಬೇಕಾಯಿತು. ನ್ಯುಲಾಟೋ ಇಂಡಿಯನರ ನಿಟ್ಟುಸಿರನ್ನೂ ನರಳಾಟವನ್ನೂ ಪ್ರತಿಬಿಂಬಿಸುವಂತೆ ಒಂದರಮೇಲೊಂದು ಮರದ ದಿಮ್ಮಿಗಳು ಏರಿಸಲ್ಪಟ್ಟವು. ಕೆಲವೊಮ್ಮೆ ಚಾಟಿಯ ಏಟು ಬೀಳುತಿತ್ತು. ಆ ಕಾರ್ ವನ್ನು ಕೈಗೊಂಡವರು ಕಡಲುಗಳ್ಳರೇ ! ಕೆಲವು ಇಂಡಿಯನರು ಓಡಿಹೋದರು. ಕೈಗೆ ಸಿಕ್ಕಿ ಬಿದ್ದಾಗ ಅವರ ಕೈಕಾಲುಗಳನ್ನು ಕಟ್ಟಿ ಕೋಟೆಯ ಮುಂದೆ ಬೀಳಿ ಸುತ್ತಿದ್ದರು. ಹಡಗಿನ ಹಗ್ಗಗಳಿಂದ ಬಂಧಿಸುತ್ತಿದ್ದರು. ಮತ್ತು ಕಲಾ ಪ್ರಹಾ ರದ ಪ್ರಭಾವವನ್ನು ಚೆನ್ನಾಗಿ ಅನುಭವಿಸುತಿದ್ದರು. ಕೋಟೆಯ ನಿರ್ಮಾಣ ಕ್ಕಿಂತ ಮುಂಚೆ ಹಿಮ ವಾತಾವರಣ ಕಡಿಮೆಯಾಯಿತು. ಇನ್ನು ತುಪ್ಪುಳು ಚರ್ಮಕ್ಕಾಗಿ ಹೋರಾಡುವ ಕಾಲ. ಇಂಡಿಯನರು ತುಂಬ ಕಾಣಿಕೆಯನ್ನು ನೀಡಬೇಕೆಂದು ಘೋಷಿಸಲಾಯಿತು. ಒದೆತ ಕಶಾಪ್ರಹಾರ ಜೋರಾಗಿ ಮುಂದು ವರಿಯಿತು. ಹೆಂಗಸರು ಮಕ್ಕಳು ಫ‌ಕಳ್ಳರ ಬಂದಿಗಳಾದರು. ನಿಜ; ರಕ್ತದಿಂದ ಅಂಕುರಾರ್ಪಣವಾಯಿತು. ಈಗ ಅದರ ಪ್ರತಿಫಲ ವನ್ನು ಅನುಭವಿಸುವ ಸಮಯ. ವ್ಯಾಪಾರ ಕೋಟೆ ಬಿದ್ದು ಹೋಗಿತ್ತು. ಸುಟ್ಟು ಹೋಗುತ್ತಿರುವ ಅದರ ಬೆಳಕಲ್ಲಿ ಅರ್ಧದಷ್ಟು ಫ‌ ಕಳ್ಳರು ಕೊಲೆಗೀಡಾದರು. ಉಳಿದವರು ನರಳಾಟಕ್ಕೆ ಸಿಕ್ಕಿದರು. ಕಡೆಗೆ ಸುಬೆನ್ ಕೊವ್ ಮಾತ್ರ ಉಳಿ ದಿದ್ದ. ಅಲ್ಲ; ಹಿಮದಲ್ಲಿ ಬಿದ್ದು ಹಲುಬುತ್ತಿರುವ ಆ ದೈತ್ಯಾಕಾರದ ಬಿಗ್ ಇವಾನ್‌ನನ್ನೂ ಸೇರಿಸಿದರೆ ಇಬ್ಬರು ಉಳಿದ ಹಾಗಾಯಿತು. ಯಕಾಗ ತನ್ನ ಕಡೆ ತಿರಸ್ಕಾರಭಾವದಿಂದ ನೋಡಿ ಹಲ್ಲುಕಿರಿಯುತ್ತಿದ್ದಾ ನೆಂದು ಸುಬೆನ್ಕೊಗೆ ತಿಳಿಯಿತು. ಸುಬೆನ್ ಕೊವ್ಗೆ ಯಕಾಗನನ್ನು ಚಾಟಿ ಯಿಂದ ಹೊಡೆದದ್ದು ಜ್ಞಾಪಕವಾಯಿತು. ಆ ಗುರುತು ಯಕಾಗನ ಮುಖದ ಮೇಲೆ ಇನ್ನೂ ಇದ್ದಿತು. ಅವನು ಯಕಾಗನನ್ನು ಬಯವ ಪ್ರಸಂಗ ವಿಲ್ಲ. ಆದರೆ ಯಕಾಗ ಆ ಸೇಡನ್ನು ತೀರಿಸಿಕೊಳ್ಳಲು ಯಾವ ಕ್ರಮ ಕೈಗೊಳ್ಳು ________________

ಬಾಳ ನಿಯಯ ವನೋ ಎಂಬ ಯೋಚನೆ ಬೇಸರ ತರುತ್ತಿತ್ತು, ಎಲ್ಲರಿಗಿಂತಲೂ ಮುಖ್ಯಸ್ಥನಾಗಿದ್ದ ನಕಾಮುಕನನ್ನು ಕಂಡು ಕವೆ ಕೇಳಲೇ ಎಂದು ಸುಬೆನ್ ಕೊವ್ ಯೋಚಿಸಿದನು. ಆದರೆ ಅದು ಪ್ರಯೋಜನ ವಿಲ್ಲವೆಂದು ತನ್ನಲ್ಲಿ ತಾನೇ ತೀರ್ಮಾನಿಸಿದನು. ಹೋಗಲಿ; ಬೇಡಿಗಳನ್ನು ಕಿತ್ತೊಗೆದು ಹೋರಾಡುತ್ತ ಸಾಯೋಣವೆಂದರೆ, ಈ ಪಟ್ಟಿಗಳು ತನಗಿಂತಲೂ ಶಕ್ತಿಯುತವಾಗಿವೆ. ಹೀಗೆಯೆ ಎಣಿಕೆ ಹಾಕುತ್ತ ಸುಬೆನ್ಕೊವ್ ಮತ್ತೊಂದು ರೀತಿಯಲ್ಲಿ ಯೋಚಿಸಿದನು ! ಮಕಾಮುಕನ ಪತ್ರಕ್ಕೆ ರುಜು ಹಾಕಿದನು. ವಿಲಕ್ಷಣವಾದ ಆ ಜನರ ಭಾಷೆಯನ್ನು ತಿಳಿದ ದ್ವಿಭಾಷಿಯೊಬ್ಬನನ್ನು ಕರೆ ತರಬೇಕೆಂದು ಕೇಳಿಕೊಂಡನು. “ಓ, ನಕಾಮುಕ್, ನಾನು ಸಾವಿಗೆ ಗಮನ ಕೊಡುವವನಲ್ಲ. ದೊಡ್ಡ ವ್ಯಕ್ತಿಯಾದ ನನಗೆ ಸಾವೆಂದರೆ ತಿಳಿಗೇಡಿತನದ ಮಾತು. ಸತ್ಯವಾಗಿಯೂ ಸಾಯುವುದಿಲ್ಲ. ಇತರರಂತೆ ನಾನು ಕೇವಲ ಮಾಂಸದ ಮುದ್ದೆಯಲ್ಲ.” ಎಂದು ಸುಬೆನ್ ಕೊವ್ ಎದುರಿಗೆ ನರಳಾಡುತಿದ್ದ ಬಿಗ್ ಇವಾನ್‌ನನ್ನು ತುಟ್ಟಿ ಕರಿಸುವಂತೆ ಕಾಲ್ಪೆರಳಿನಿಂದ ತಿವಿದನು. “ನಾನು ಸಾಯುವಷ್ಟು ದಡ್ಡನಲ್ಲ. ಇಲ್ಲಿ ನೋಡು, ನನ್ನಲ್ಲಿ ಪ್ರಖ್ಯಾತ ಔಷಧಿಯಿದೆ. ಈ ಔಷಧಿ ನನಗೊಬ್ಬನಿಗೆ ಮಾತ್ರ ಗೊತ್ತು. ನಾನು ಸಾಯದೆ ಇರುವುದರಿಂದ, ಈ ಔಷಧಿಯನ್ನು ನಿನಗೆ ವಿನಿಮಯ ಮಾಡಿಕೊಡುತ್ತೇನೆ.” “ಈ ಔಷಧಿ ಯಾವುದು ?” ಎಂದು ಕಾಮುಕ ಆರ್ಭಟಿಸಿದನು. ಇದೊಂದು ಆಶ್ಚರ್ಯಕರವಾದುದು.” ಯಾವುದೋ ಗುಟ್ಟನ್ನು ಬಿಟ್ಟು ಕೊಡುವವನಂತೆ ಸುಬೆನ್‌ಕೊವ್ ತನ್ನಲ್ಲಿ ತಾನೇ ಚರ್ಚಿಸತೊಡಗಿದನು. “ಹೇಳುತ್ತೇನೆ ಕೇಳು. ನನ್ನ ಔಷಧಿಯ ಸ್ವಲ್ಪ ಭಾಗವನ್ನು ಚರ್ಮದ ಮೇಲೆ ತಿಕ್ಕಿದರೆ, ಆ ಚರ್ಮ ಕಲ್ಲಿನಂತೆ ಅಥವಾ ಕಬ್ಬಿಣವಂತೆ ಗಟ್ಟಿಯಾಗು ತದೆ. ಆಗ ಯಾವ ಶಸ್ತ್ರವೂ ಚರ್ಮವನ್ನು ಸಿಗಿಯಲಾರದು. ದೊಣ್ಣೆಯ ಅತ್ಯಂತ ಜೋರಾದ ಹೊಡೆತವೂ ಯಾವ ಪರಿಣಾಮವನ್ನೂ ಮಾಡಲಾರದು. ಮೂಳೆಯಂತಹ ಚಾಕು ಮಣ್ಣಿನ ಮುದ್ದೆಯಂತಾಗುತ್ತದೆ. ನಿಮ್ಮಿಂದ ನಾವು ಪಡೆದ ಕಬ್ಬಿಣದ ಕತ್ತಿಗಳಿವೆಯಲ್ಲ, ಅವುಗಳಿಂದ ಚುಚ್ಚಿದರೆ ಕತ್ತಿಯ ಬಾಯಿ ಮೊಂಡಾಗುತ್ತದೆ. ಇಂತಹ ಔಷಧಿಯ ಗುಟ್ಟನ್ನು ಹೇಳಿದರೆ ನೀನು ನನಗೆ ಏನನ್ನು ಕೊಡುತ್ತಿ?” ________________

ಮುಖ ಭಂಗ “ನಿನ್ನ ಪ್ರಾಣವನ್ನು ಉಳಿಸುತ್ತೇನೆ.” ಎಂದು ಮಕಾಮುಕ್ ದ್ವಿಭಾಷಿಯ ಮೂಲಕ ಉತ್ತರಕೊಟ್ಟನು. ಸುಬೆನ್ ಕೊವ್ ತಿರಸ್ಕಾರ ಭಾವದಿಂದ ನಕ್ಕನು. “ಮತ್ತು ನೀನು ಸಾಯುವತನಕ ನನ್ನ ಮನೆಯಲ್ಲಿ ಸೇವಕನಾಗಿರ ಬೇಕು.” ಪೋಲೆಂಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಸುಬೆನ್ ಕೊವ್ ಮತ್ತಷ್ಟು ತಿರಸ್ಕಾರದಿಂದ ನಕ್ಕನು. ಅವನು ಹೇಳಿದನು, “ಮೊದಲು ನನ್ನ ಕೈ ಕಾಲುಗಳ ಕಟ್ಟನ್ನು ಬಿಚ್ಚಿರಿ. ಆಮೇಲೆ ಮಾತನಾಡೋಣ.” ಮುಖಂಡನ ಆಜ್ಞೆಯಂತೆ ಬೇಡಿಗಳು ಸಡಿಲಗೊಂಡವು. ಆಗ ಸುಬೆನ್ ಕೋವ್ ಹೆದರದೆ ಸಿಗರೇಟನ್ನು ಹಚ್ಚಿ ಸೇದತೊಡಗಿದನು. “ಇದೆಲ್ಲವೂ ಹುಚ್ಚು ಹರಟೆ. ಅಂಥ ಔಷಧಿಯೇ ಇಲ್ಲ ; ಇರಲಾರದು. ಕತ್ತರಿಸುವ ಹರಿತವಾದ ಖಡ್ಡದಲ್ಲಿ ಇರುವಷ್ಟು ಶಕ್ತಿ ಯಾವ ಔಷಧಿಯಲ್ಲೂ ಇಲ್ಲ” ಎಂದನು ಮಕಾಮುಕ್, ಮಕಾಮುಕ್ನಂಥ ಮುಖಂಡ ಯಾವುದರಲ್ಲೂ ನಂಬಿಕೆಯಿಲ್ಲದವನು ; ಆದರೂ ಅವನ ಮನಸ್ಸು ಡೋಲಾಯಮಾನವಾಗಿತ್ತು. ಫರ್ ಕಳ್ಳರು ಮಾಡು ತಿದ್ದ ಬೇಕಾದಷ್ಟು ಇಂದ್ರಜಾಲ ವಿದ್ಯೆಯನ್ನು ನೋಡಿದನು. ಆಮದರಿಂದ ಇದೆಲ್ಲವನ್ನೂ ಸಂಪೂರ್ಣ ನಂಬದಿರಲು ಸಾಧ್ಯವಾಗಲಿಲ್ಲ. “ನಿನ್ನ ಜೀವವನ್ನು ಉಳಿಸುತ್ತೇನೆ. ಮಾತ್ರವಲ್ಲ, ನೀನು ನನ್ನ ಸೇವಕ ನಾಗಿರಬೇಕೆಂಬ ಶಾಸನವನ್ನೂ ತೆಗೆದುಬಿಡುತ್ತೇನೆ” ಎಂದು ಮಕಾನುಕ್ ಘೋಷಿಸಿದನು. “ಇದೊಂದೂ ಸಾಲದು.” ನರಿಯ ಚರ್ಮವನ್ನು ವ್ಯಾಪಾರಮಾಡುವ ರೀತಿಯಲ್ಲಿ ಸುಬೆನ್ ಕೊವ್ ನಿಧಾನವಾಗಿ ತನ್ನ ನಾಟಕವನ್ನಾಡಿದನು. “ಮತ್ತೆ ಹೇಳುತ್ತೇನೆ. ನನ್ನ ಔಷಧಿ ಅಸಾಮಾನ್ಯವಾದುದು. ಅದು ಅನೇಕ ವೇಳೆ ನನ್ನ ಜೀವವನ್ನು ಉಳಿಸಿದೆ. ಇರಲಿ. ಈಗ ನನಗೆ ಬೇಕಾ ದುದು ಇಷ್ಟು ; ನಾಯಿಗಳು ಎಳೆದುಕೊಂಡು ಹೋಗುವ ಸೈಜ್ ಗಾಡಿ ಯೊಂದು, ಜೊತೆಗೆ ಆರು ಜನ ಬೇಟೆಗಾರರು ನನ್ನೊಡನೆ ನದಿ ದಾಟ ಬರಬೇಕು. ಏಕೆಂದರೆ ಅವರಿಂದ ಮಿಕೆಯೊಲವ್ಸ್ಕಿ ಕೋಟೆಯಲ್ಲಿ ನಾನು ________________

ಬಾಳ ನಿಯಮ ಒಂದು ದಿನದ ಮಟ್ಟಿಗಾದರೂ ಸುರಕ್ಷಿತನಾಗಿ ನಿದ್ರಿಸುತ್ತಿರಬೇಕು....” ಆದರೆ ಮಕಾಮುಕ್ ಒಪ್ಪದೆ, “ನೀನು ಇಲ್ಲೇ ಇದ್ದುಕೊಂಡು ನಮಗೆಲ್ಲ ಆ ಅದ್ಭುತವಾದ ಇಂದ್ರಜಾಲ ವಿದ್ಯೆಯನ್ನು ಹೇಳಿಕೊಡು” ಎಂದನು. ಸುಬೆಕೊವ್ ತನ್ನ ಭುಜಗಳನ್ನು ಕುಗ್ಗಿಸುತ್ತಾ ಮೌನವಾಗಿದ್ದನು. ಸಿಗರೇಟು ಹೊಗೆ ಬಿಡುತ್ತಾ, ಬಿಗ್ ಇವಾನನ ಸ್ಥಿತಿ ಎಲ್ಲಿಯ ತನಕ ಬಂದಿರ ಬಹುದು ಎಂದು ಕುತೂಹಲದಿಂದ ನೋಡಿದನು. ಮಕಾಮುಕ್ ಇದ್ದಕ್ಕಿದ್ದಂತೆ ಸುಬೆನ್ಕೋವಿನ ಕತ್ತಿನ ಕಡೆ ತೋರಿ ಸುತ್ತಾ, “ಗಾಯದ ಕಲೆ !” ಎಂದು ಕೂಗಿದನು. ನಿಜ ; ಅಲ್ಲಿ ನೀಲಿಗಟ್ಟಿದ ಗುರುತು ಎದ್ದು ಕಾಣುತ್ತಿತ್ತು, ಕಮ್ಚಟಕದ ಕಾದಾಟದಲ್ಲಿ ಸುಬೆನ್ ಕೊವ್ ಚಾಕುವಿನಿಂದ ಏಟು ತಿಂದಿದ್ದನು. ಮಕಾನುಕ್ ಮತ್ತೆ ಹೇಳಿದನು-ಔಷಧಿ ಪ್ರಯೋಜನವಿಲ್ಲ. ಔಷಧಿ ಗಿಂತ ಕತ್ತಿಯ ಹರಿತವಾದ ಧಾರೆಯೆ ಶಕ್ತಿಯುತವಾದುದು.” ಸುಬೆನ್ಕೊವ್, ತಕ್ಕ ಸಮರ್ಥನೆ ಕೊಡಬೇಕಾದ ಸಂದಿಗ್ಧ ಪರಿಸ್ಥಿತಿ ಒದಗಿತು. “ ನನ್ನೊಡನೆ ಹೊಡೆದಾಡಿದವನು ಅತ್ಯಂತ ಬಲಶಾಲಿ....ಆತ ನಿನ ಗಿಂತಲೂ, ನಿಮ್ಮಲ್ಲಿರುವ ಅತಿ ಪ್ರಬಲ ಬೇಟೆಗಾರನಿಗಿಂತಲೂ ಶಕ್ತ ನಾಗಿದ್ದನು....” ಪುನಃ ತನ್ನ ಪಾದರಕ್ಷೆಯಿಂದ ಬಿಗ್ ಇವಾನ್‌ನನ್ನು ಮುಟ್ಟಿದನು. ಜ್ಞಾನವಿಲ್ಲದ ಇವಾನನ ಸ್ಥಿತಿಯೋ ಹೇಳ ತೀರದು. ಅದೊಂದು ಘೋರ ದೃಶ್ಯ. ಆದರೂ ಅಂಗಚ್ಚೇದವಾದ ಶರೀರದಲ್ಲಿ ನರಳಾಡುತಿದ್ದ ಜೀವ ಬಿಟ್ಟು ಹೋಗುವ ಇಷ್ಟವಿಲ್ಲದೆ ಅಂಟಿಕೊಂಡಿತ್ತು. ಅದೂ ಅಲ್ಲದೆ ಅಲ್ಲಿ ತಯಾರಿಸಿದ ಔಷಧಿಯಲ್ಲಿ ಹೆಚ್ಚು ಸತ್ಯವಿರಲಿಲ್ಲ. ಏಕೆಂದರೆ ಆ ಸ್ಥಳದಲ್ಲಿ ನಮಗೆ ಬೇಕಾಗಿದ್ದ ಬೆರೀ ಜಾತಿಯ ಕಾಯಿಗಳು ಸಿಗು ತಿರಲಿಲ್ಲ. ಇಲ್ಲಾದರೋ ಅವು ಬಹಳವಾಗಿರುವುದನ್ನು ನೋಡಿದ್ದೇನೆ, ಆದ್ದರಿಂದ ಇಲ್ಲಿ ತಯಾರಾಗುವ ಔಷಧಿ ಪ್ರಭಾವಯುತವಾಗುವುದರಲ್ಲಿ ಅನುಮಾನವಿಲ್ಲ.” (ಆಗಲಿ, ನೀನು ನದಿಯ ಬಳಿ ಹೋಗಲು ಆವಕಾಶಕೊಡುತ್ತೇನೆ. ಹಾಗೆಯೆ ಸೈಜ್ ಗಾಡಿ ಮತ್ತು ನಾಯಿಗಳು ಜೊತೆಗೆ ಬರುತ್ತವೆ. ಆರು ಜನ ಬೇಟೆಗಾರರು ನಿನ್ನ ರಕ್ಷಣೆಗಾಗಿ ಇರುತ್ತಾರೆ....” ಎಂದು ಮಕಾಮುಕ್ ಅಪ್ಪಣೆ ಕೊಟ್ಟನು. ________________

ಮುಖ ಭಂಗ ತಕ್ಷಣ ಪ್ರತಿಭಟನೆಯನ್ನು ತೋರಿಸುವಂಥ ಪ್ರತ್ಯುತ್ತರ ಹೊರಬಂತು“ನೀನು ಬಹಳ ನಿಧಾನಿ. ನನ್ನ ಷರತ್ತುಗಳಿಗೆ ತಕ್ಷಣ ಒಪ್ಪದಿದ್ದ ಕಾರಣ, ನೀನು ಔಷಧಿಯ ಬಗ್ಗೆ ಅಪರಾಧವನ್ನು ಮಾಡಿದಂತಾಯಿತು. ಆದುದರಿಂದ ಇನ್ನು ಹೆಚ್ಚಿಗೆ ಕೊಡಬೇಕಾಗುತ್ತದೆ. ನೂರು ಬೀವರ್‌ ಪ್ರಾಣಿಯ ಚರ್ಮಗಳು? (ಮಕಾಮುಕ್ ಮುಖ ವಿಕಾರ ಮಾಡಿದನು) “ ಒಂದು ನೂರು ಪೌಂಡಿನಷ್ಟು ಒಣ ಮಿಾನುಗಳು” (ಮಿಾನುಗಳು ಹೆಚ್ಚಾಗಿಯೂ ಅಲ್ಪ ಬೆಲೆಗೂ ಸಿಕ್ಕುತಿದ್ದು ದ ರಿಂದ ಮಕಾಮುಕ್ ಒಪ್ಪಿಗೆ ಸೂಚಿಸುವಂತೆ ತಲೆ ತೂಗಿದನು.” ಎರಡು ಸೈಜ್ ಗಾಡಿಗಳು; ಒಂದು ನನಗೂ, ಇನ್ನೊಂದು ತುಸುಳು ಚರ್ಮ ಮಿಾನುಗಳನ್ನು ತುಂಬುವುದಕ್ಕೆ ಬೇಕು. ಮತ್ತೆ ನನ್ನ ಬಂದೂಕವನ್ನು ವಾಪಸು ಕೊಡಬೇಕು. ಇಷ್ಟು ಬೆಲೆಯನ್ನು ನೀನು ಒಪ್ಪದಿದ್ದರೆ, ಸ್ವಲ್ಪ ಹೊತ್ತಿನಲ್ಲೇ ಇನ್ನೂ ಏರುವುದು.” ಯಕಾಗ ಮುಖಂಡನ ಕಿವಿಯಲ್ಲಿ ಗುಟ್ಟಾಗಿ ಏನನ್ನೋ ಹೇಳಿದನು. “ಆದರೆ ನಿನ್ನದು ನಿಜವಾದ ಔಷಧಿಯೆಂದು ನಾನು ಹೇಗೆ ನಂಬುವುದು ?” ಎಂದು ಮಕಾಮುಕ್ ಕೇಳಿದನು. “ಬಹಳ ಸುಲಭವಾಗಿ ತಿಳಿಯಬಹುದು. ಮೊದಲು ನಾನು ಕಾಡಿಗೆ ಹೋಗಬೇಕು” ಎಂದನು ಸುಬೆನ್ ಕೊವ್. ಪುನಃ ಯಕಾಗ ಮಕಾಮುಕನೊಂದಿಗೆ ಪಿಸುಮಾತನಾಡಿದನು. ಆಗ ಮಕಾಮುಕ್ ಸಂಶಯಗೊಂಡು ಅಸಮ್ಮತಿಯನ್ನು ಸೂಚಿಸಿದನು. ಸುಬೆನ್ ಕೊವ್ ಮತ್ತೆ ಪ್ರಾರಂಭಿಸಿದನು-“ನನ್ನೊಡನೆ ಇಪ್ಪತ್ತು ಬೇಟೆ ಗಾರರನ್ನು ಕಳುಹಿಸಿದರೂ ಚಿಂತೆಯಿಲ್ಲ. ಮುಖ್ಯವಾಗಿ, ಔಷಧಿಗೆ ಬೇಕಾಗುವ ಕಾಯಿಗಳನ್ನೂ ಕಂದಮೂಲಗಳನ್ನೂ ನಾನು ತರಲೇಬೇಕು. ಆಮೇಲೆ ನೀವು ಮಾಡುವ ಏರ್ಪಾಟಿನ ತನಕ ಕಾಯುತ್ತೇನೆ. ಎರಡು ಸ್ಟೇಜ್ಗಾಡಿ ಗಳನ್ನು ತನ್ನಿ, ಅದರ ಮೇಲೆ ಮಾನು, ಬೀವರ್‌ ಚರ್ಮ, ಬಂದೂಕಗಳನ್ನು ತುಂಬಿರಿ, ನನ್ನೊಡನೆ ಬರುವ ಆರು ಜನ ಬೇಟೆಗಾರರನ್ನು ಸಿದ್ದಪಡಿಸಿರಿ. ಆಗ ಔಷಧಿಯನ್ನು ಕತ್ತಿನ ಮೇಲೆ ತಿಕ್ಕಿಕೊಳ್ಳುತ್ತೇನೆ. ಮತ್ತೆ ಬಗ್ಗಿ ನನ್ನ ಕತ್ತನ್ನು ಮರದ ಕೊರಡಿನ ಮೇಲೆ ಇಡುತ್ತೇನೆ. ಆ ಸಮಯದಲ್ಲಿ ನಿಮ್ಮಲ್ಲಿರುವ ಅತಿ ಪ್ರಬಲನಾದ ಬೇಟೆಗಾರ ಕೊಡಲಿಯನ್ನು ತೆಗೆದುಕೊಂಡು ನನ್ನ ಕತ್ತಿನ ಮೇಲೆ ಮೂರು ಬಾರಿ ಹೊಡೆಯಲಿ. ಏಕೆ ? ನೀನೇ ಮೂರು ಬಾರಿ ಕೊಡಲಿ ಪೆಟ್ಟನ್ನು ಕೊಡಬಹುದು! » ಮಕಾಮುಕನು ತೆರದ ಬಾಯನ್ನು ಮುಚ್ಚದೆ ನಿಂತಿದ್ದನು. ಫರ್ ಕಳ್ಳರ ________________

ಬಾಳ ನಿಯಮ ಇತ್ತೀಚಿನ ಆಶ್ಚರ್ಯಕರ ಯಕ್ಷಿಣಿ ವಿದ್ಯೆಯಲ್ಲಿ ಅವನಿಗೆ ಆಸಕ್ತಿ ಹುಟ್ಟಿತು. “ ಮೊದಲು ಗಮನಿಸಬೇಕಾದ ಅಂಶವೊಂದಿದೆ. ಪ್ರತಿ ಪ್ರಸಾರವಾದ ನಾದ ಮೇಲೂ ನಾನು ಹೊಸ ಔಷಧಿಯನ್ನು ಲೇಪಿಸಿಕೊಳ್ಳಬೇಕು. ಕೊಡಲಿ ಭಾರವಾಗಿಯೂ ಹರಿತವಾಗಿಯೂ ಇರುವುದರಿಂದ, ನಾನು ತಪ್ಪಿ ಬೀಳ ಬಾರದು.” ಎಂದು ಸೂಕ್ಷ್ಮಮತಿಯಾದ ಪೋಲೆಂಡಿನವನು ಆತುರದಿಂದ ಹೇಳಿದನು. ಒಪ್ಪಿಗೆಯನ್ನು ಸೂಚಿಸುವ ಅಷ್ಟೇ ಆತುರದಲ್ಲಿ ಮಕಾಮುಕ್ ಕೂಗುತ್ತಾ, “ ನಿನ್ನ ಕೇಳಿಕೆಗಳೆಲ್ಲವನ್ನು ಒಪ್ಪಿದ್ದೇನೆ. ಇನ್ನು ನಿನ್ನ ಔಷಧಿ ತಯಾರಿಸಲು ಪ್ರಾರಂಭಿಸು” ಎಂದನು. ಸುಬೆನ್ ಕೊವ್ ತನ್ನ ಉತ್ಸಾಹವನ್ನು ಹೊರಗೆ ತೋರ್ಪಡಿಸಲಿಲ್ಲ. ಅವನು ಅತ್ಯಂತ ಅಪಾಯಕರವಾದ ಪಂದ್ಯವನ್ನು ಆಡುತ್ತಿದ್ದನು. ಬಿಗಿ ತಪ್ಪ ದಂತೆ ವರ್ತಿಸಬೇಕಾಗಿತ್ತು. ಆದ್ದರಿಂದಲೇ ಸೊಕ್ಕಿನಿಂದ ಮಾತನಾಡಿದನು. “ ನೀನು ತುಂಬ ನಿಧಾನಿ. ನನ್ನ ಔಷಧಿಯ ಘನತೆಗೆ ಕುಂದುಂಟಾ ಯಿತು. ಇದನ್ನು ಸರಿಪಡಿಸಲು ನೀನು ನಿನ್ನ ಮಗಳನ್ನು ನನಗೆ ಒಪ್ಪಿಸ ಬೇಕು” ಎಂದು ಹತ್ತಿರದಲ್ಲಿದ್ದ ಹುಡುಗಿಯ ಕಡೆ ಕೈ ತೋರಿಸಿದನು. ಮಕಾ ಮುಕನ ಮಗಳು ನೋಟಕ್ಕೆ ಹಿತಕರವಲ್ಲದ ಪಾಣಿಯೇ ಸರಿ. ಅವಳದು ವಕ್ರದೃಷ್ಟಿ, ತೋಳನ ಕೋರೆ ಹಲ್ಲಿನಂತಹ ಒಂದು ಹಲ್ಲು ಎದ್ದು ಕಾಣು ತಿತ್ತು! ನಕಾಮುಕನು ಕೋಪಗೊಂಡನು. ಆದರೆ ಸುಬೆನ್ಕೊವ್ ಶಾಂತ ನಾಗಿದ್ದನು. ಮತ್ತೊಂದು ಸಿಗರೇಟು ಹಚ್ಚಿದನು. ಆ ನಿಶ್ಯಬ್ದ ವಾತಾವರಣದಲ್ಲಿ ಮಂಕು ಕವಿದ ನಾರ್ತ್ ಲ್ಯಾಂಡ್ ಅವನ ದೃಷ್ಟಿಯಿಂದ ಮರೆಯಾಯಿತು. ಇನ್ನೊಂದು ಬಾರಿ ತನ್ನ ಹುಟ್ರದ ಸ್ಥಳ ಮತ್ತು ಫ್ರಾನ್ಸ್ ಕಣ್ಮುಂದೆ ನಿಂತಂತಾಯಿತು. ತೋಳನ ದಾಡೆಯುಳ್ಳ ಹುಡುಗಿಯನ್ನು ನೋಡಿದಾಗ ಮತ್ತೊಂದು ಹುಡುಗಿಯ ಜ್ಞಾಪಕವಾಯಿತು. ಆದರೆ ಇವರಿಬ್ಬರಿಗೂ ಯಾವ ಹೋಲಿಕೆಯೂ ಇಲ್ಲ. ತಾನು ಯುವಕನಾಗಿ ಪ್ಯಾರಿಸ್ಸಿಗೆ ಬಂದಿದ್ದಾಗ ಒಬ್ಬಳ ಪರಿಚಯವಾಗಿತ್ತು, ಅವಳು ಗಾಯಕಿಯೂ, ನರ್ತಕಿಯೂ ಅಗಿದ್ದಳು........ “ ಹುಡುಗಿಯನ್ನು ಕೇಳುವುದರಲ್ಲಿ ಅರ್ಥವೇನು ?” ಎಂದು ಮಕಾ ಮುಕ್ ಕೇಳಿದನು. ________________

ಮುಖ ಭಂಗ “ ಅವಳೊಡನೆ ನದಿ ದಾಟಿ ಹೋಗುತ್ತೇನೆ. ನಿನ್ನ ಮಗಳು ನನ್ನ ಉತ್ತಮ ಹೆಂಡತಿಯಾಗಬಲ್ಲಳು. ನನ್ನ ಔಷಧಿಯ ಘನತೆಗೆ ತಕ್ಕಂತೆ ನಿಮ್ಮ ವಂಶದ ಸಂಬಂಧ ಬೆಳೆಸುವುದು ಗೌರವ ತರತಕ್ಕುದು.” ಎನ್ನುತ್ತಾ ಹುಡು ಗಿಯ ಕಡೆ ಶೋಧಕ ದೃಷ್ಟಿಯನ್ನು ಬೀರಿದನು. ಪುನಃ ಆ ಗಾಯಕಿ ನರ್ತಕಿಯನ್ನು ನೆನಪಿಗೆ ತಂದುಕೊಂಡನು. ಅವಳು ಹೇಳಿಕೊಟ್ಟ ಹಾಡನ್ನು ಅಸ್ಪಷ್ಟವಾಗಿ ಹಾಡಿದನು. ಯಾರದೋ ಜೀವನದ ಘಟನೆಗಳಂತೆ ತನ್ನ ಹಿಂದಿನ ಉತ್ಸಾಹೀ ಜೀವನವನ್ನು ಪ್ರತ್ಯೇಕಿಸಿ ನೋಡಿ ದನು. ಮುಖಂಡನು ಇದ್ದಕ್ಕಿದ್ದಂತೆ ಮೌನವನ್ನು ಭೇದಿಸಿದನು. ಅಂತೆಯೆ ಸುಬೇನ್ಕೊವ್ ಎಚತನು. “ ಹೇಳಿದಂತೆಯೇ ಆಗಲಿ; ಹುಡುಗಿ ನಿನ್ನೊಡನೆ ಬರುತ್ತಾಳೆ. ಆದರೆ ಒಂದು ಅಂಶ ತಿಳಿದಿರಲಿ : ಮೂರು ಬಾರಿಯೂ ಕೊಡಲಿಯಿಂದ ನಿನ್ನ ಕತ್ತಿನ ಮೇಲೆ ಹೊಡೆಯುವವನು ನಾನೇ ” ಎಂದನು ಮಕಾಮುಕ್. ಇಲ್ಲದ ಆತಂಕವನ್ನು ವ್ಯಕ್ತಪಡಿಸುತ್ತಾ, “ ಆದರೆ ನಾನು ಪ್ರತಿ ಸಾರಿಯೂ ಔಷಧವನ್ನು ಲೇಪಿಸಿಕೊಳ್ಳ ಬೇಕು....” ಎಂದನು ಸುಟೆನ್‌ಕೊವ್.

  • ಪ್ರತಿ ಹೊಡೆತವಾದ ಮೇಲೂ ನೀನು ಔಷಧಿಯನ್ನು ಹಚ್ಚಿಕೊಳ್ಳ ಬಹುದು. ಇಗೋ, ನೀನು ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳುವ ಬೇಟೆಗಾರರು ಬಂದಿದ್ದಾರೆ. ಇನ್ನು ಕಾಡಿಗೆ ಹೋಗಿ ಔಷಧಿಗೆ ಬೇಕಾದುದನ್ನು ಶೇಖರಿಸು.”

ಸುಬೆನ್ ಕೊವ್ ನಾವಿನ ದವಡೆಯಲ್ಲಿ ಸಿಕ್ಕಿದ್ದರೂ ಧೈರ್ಯವಾಗಿ ವ್ಯವ ಹರಿಸುವ ರೀತಿಯನ್ನು ನೋಡಿ ಅವನ ಔಷಧಿಯಷ್ಟು ಘನವಾದುದು ಮತ್ತೊ೦ ದಿರಲಾರದೆಂದು ನಕಾಮುಕನು ಭಾವಿಸಿದನು. ಸುಬೆಕೊವ್‌ನ ಅತಿ ದುರಾಶೆಯ ಬೇಡಿಕೆಗಳು ಮಕಾಮುಕನಿಗೆ ಹಿತವೆನಿಸಿತು. ಅಂತೆಯೇ ಔಷ ಧಿಯ ಶಕ್ತಿಯ ಬಗ್ಗೆ ವಿಶ್ವಾಸ ಹುಟ್ಟಿತು. ಸುಬೆನ್‌ಕೌವ್ ತನ್ನ ಪರಿವಾರದೊಡನೆ ಸ್ಪೂನ್ ಮರಗಳ ಮಧ್ಯೆ ಮರೆಯಾದನು. ಆಗ ಮಕಾಮುಕನ ಕಿವಿಯಲ್ಲಿ ಯಕಾಗ “ ಜೊತೆಗೆ ಇನ್ನೊಂದು ವಿಷಯ ; ಔಷಧಿಯ ತಯಾರಿ ತಿಳಿದಮೇಲೆ ನೀನು ಸುಲಭ ವಾಗಿ ಅವನನ್ನು ತೀರಿಸಬಹುದು ! ” ಎಂದನು. ಮಕಾಮುಕ್ ತರ್ಕಿಸಿದನು. “ ಅದು ಹೇಗೆ ಸಾಧ್ಯ ? ಔಷಧಿ ಅವ ________________

ಬಾಳ ನಿಯಮ ನಲ್ಲಿರುವಾಗ ನಾನು ಅವನನ್ನು ನಾಶಪಡಿಸುವ ಸಂಭವವಿಲ್ಲ.” ಆದರೆ ಯಕಾಗ ಹೇಳಿದನು. ಅವನು ಮೈಗೆಲ್ಲ ಔಷಧಿ ಹಚ್ಚಿ ಕೊಳ್ಳು ವುದಿಲ್ಲ. ಆದ್ದರಿಂದ ಹಚ್ಚಿಕೊಳ್ಳದ ಭಾಗವನ್ನು ಗಮನಿಸಬೇಕು. ಅದು ಕಿವಿಗಳೆಂದೇ ಇಟ್ಟುಕೊಳ್ಳೋಣ. ಇನ್ನೂ ಒಳ್ಳೆಯದಾಯಿತು ; ಈಟಿಂ ದನ್ನು ಈ ಕಿವಿಯಿಂದ ಆ ಕಿವಿಯ ತನಕ ತೂರಿಸಿಬಿಡಬಹುದು. ಅಥವಾ ಕಣ್ಣು ಗಳಿರಬಹುದು. ಏಕೆಂದರೆ ಅಂಥ ಔಷಧಿಯನ್ನು ಕಣ್ಣಿನ ಮೇಲಂತೂ ತಿಕ್ಕಿಕೊಳ್ಳಲಾರ....”

  • ಮುಖಂಡನು ತಲೆದೂಗಿದನು. “ ಯಕಾಗ, ನೀನು ನಿಜವಾಗಿಯೂ ಬುದ್ಧಿವಂತ. ಅವನಲ್ಲಿ ಇನ್ಯಾವ ಇಂದ್ರಜಾಲ ವಿದ್ಯೆ ಇಲ್ಲದಿದ್ದ ಪಕ್ಷದಲ್ಲಿ ನಾವು ಅವನನ್ನು ಖಂಡಿತವಾಗಿಯೂ ತೀರಿಸಿಬಿಡಬಹುದು.”

ಸುಬೆನ್ಕೊನ್ ಔಷಧಿಗೆ ಬೇಕಾದ ಸಾಮಗ್ರಿಗಳನ್ನು ಶೇಖರಿಸುವುದರಲ್ಲಿ ಹೆಚ್ಚು ಕಾಲ ವ್ಯಯಮಾಡಲಿಲ್ಲ. ಕೈಗೆ ಯಾವುದು ಸಿಕ್ಕಿತೋ ಅದನ್ನು ಸಂಗ್ರ ಹಿಸಿದನು. ಸ್ಕೂಸ್ ಮುಳ್ಳುಗಳು, ವಿಲೋ ಮರದ ತೊಗಟೆ, ಭೂರ್ಜದ ತುಂಡು, ಸ್ವಲ್ಪ ನಳ್ಳಿಗಳು ಮೊದಲಾದುವನ್ನು ಬೇಟೆಗಾರರು ಹಿಮವನ್ನ ಗೆದು ತೆಗೆಯಬೇಕಾಯಿತು. ಜೊತೆಗೆ ಚಳಿಯ ಹೊಡೆತದಿಂದ ಸುರುಟಿಹೋಗಿದ್ದ ಕೆಲವು ಕಂದ ಮೂಲಗಳನ್ನು ಆಯ್ದು ಸುಬೆನ್ಕೌವ್ ತಿಬಿರದ ಕಡೆ ತಿರು ಗಿದನು. ನುಬೆನ್ಕೊನ್ ತಂದಿದ್ದ ಎಲ್ಲ ರೀತಿಯ ಘಟಕಾಂಶಗಳನ್ನು ಕುದಿಯುವ ನೀರಿನ ಮಡಕೆಗೆ ಸುರಿಯುತ್ತಾ ಬಂದನು. ಮಕಾಮುಕ್ ಮತ್ತು ಯಕಾಗ ಇಬ್ಬರೂ ಅವನ ಹತ್ತಿರ ಬಗ್ಗಿ ನಿಂತು ಸೂಕ್ಷ್ಮವಾಗಿ ನೋಡುತ್ತಿದ್ದರು. “ ಹುಷಾರಾಗಿರಬೇಕು. ಮೊದಲು ನಳ್ಳಿಗಳನ್ನು ಹಾಕಬೇಕು. ಆಮೇಲೆ? ಎರಡನೆಯದಾಗಿ, ಮನುಷ್ಯನ ಬೆರಳು. ಆದ್ದರಿಂದ, ಯಾಗ, ನಿನ್ನ ಬೆರ ಳನ್ನು ಕತ್ತರಿಸಲು ಅವಕಾಶ ಕೊಡು....” ಎಂದನು ಸುಬೆನ್ಕೌವ್, ಆದರೆ ಯಕಾಗ ಕೈಗಳನ್ನು ಹಿಂದಕ್ಕೆಳೆದುಕೊಂಡು ಮುಖ ಗಂಟು ಹಾಕಿದನು. “ ಏನಿಲ್ಲ ; ಸಣ್ಣ ಬೆರಳು ಮಾತ್ರ” ಎಂದು ಸುಬೆನ್‌ಕೌವ್ ಮತ್ತೆ ಬೇಡಿಕೊಂಡನು. “ಯಕಾಗ, ಅವನಿಗೆ ನಿನ್ನ ಬೆರಳನ್ನು ಕೊಡು” ಎಂದು ಮಕಾನುಕ್ ಅಪ್ಪಣೆಮಾಡಿದನು. ________________

ಮುಖ ಭಂಗ ೨೫

  • ಬೇಕಾದಷ್ಟು ಬೆರಳುಗಳು ಸತ್ತಲೂ ಇಲ್ಲವೇ ? ಈ ಹಿಮದಲ್ಲಿ ಎಷ್ಟು ಜನರನ್ನು ಸಾಯುವ ತನಕ ಹೊಡೆದು ಬೀಳಿಸಿಲ್ಲ? ” ಎಂದು ಯಕಾಗ ಆ ಕಡೆ ಸೂಚಿಸಿದನು.

ಸುಬೆನ್ಕೌವ್ ವಿರೋಧಿಸುತ್ತ, “ ನನಗೆ ಬೇಕಾದುದು ಜೀವಂತ ವ್ಯಕ್ತಿಯ ಬೆರಳು ” ಎಂದನು. “ ಹಾಗಿದ್ದರೆ ಜೀವಂತ ವ್ಯಕ್ತಿಯ ಬೆರಳನ್ನೇ ಒದಗಿಸುತ್ತೇನೆ' ಎನ್ನುತ್ತಾ ಯಕಾಗ ಬಿಗ್ ಇವಾನನ ಬೆರಳನ್ನು ಕತ್ತರಿಸಿದನು; “ ಬಿಗ್ ಇವಾನ್ ಇನ್ನೂ ಸತ್ತಿಲ್ಲ. ಅವನದು ಒಳ್ಳೆಯ ಬೆರಳು, ಏಕೆಂದರೆ ಅದು ದಪ್ಪ ನಾಗಿದೆ.” ಎಂದು ಇವಾನನ ರಕ್ತಮಯ ದೇಹವನ್ನು ವಿಜಯೋತ್ಸಾಹದಿಂದ ನುಬೆನ್ಕೌವ್‌ನ ಪಾದದ ಮೇಲೆ ಬೀಳುವಂತೆ ಒದ್ದನು. ಮಡಕೆಯ ಕೆಳಗೆ ಉರಿಯುತ್ತಿದ್ದ ಬೆಂಕಿಗೆ ಆ ಬೆರಳನ್ನು ಎಸೆದು ಸುಬೆಕೊವ್ ಹಾಡಲು ಪ್ರಾರಂಭಿಸಿದನು. ಅದೊಂದು ಫ್ರೆಂಚರ ಪ್ರಣಯ ಗೀತೆ. ಎಲ್ಲವೂ ಒಂದು ಹದಕ್ಕೆ ಬರುತ್ತಿದ್ದಂತೆ, ಅವನು ಗಂಭೀರವಾಗಿ ಹಾಡುತ್ತಿದ್ದನು. “ ನೋಡು, ಈ ರೀತಿ ಹಾಡದಿದ್ದರೆ, ಔಷಧಿ ಸತ್ವಯುತವಾಗುವುದಿಲ್ಲ. ಹಾಡಿನ ಪದಗಳು ಮುಖ್ಯ ಶಕ್ತಿದಾಯಕವಾದುವು....ಸರಿ, ಆಗಲೇ ಸಿದ್ದ ವಾಯಿತು.” ಎಂದು ಸುಬೆನ್ಕೌವ್ ವಿವರಿಸಿದನು. ಮಕಾಮುಕ್, “ ಪದಗಳನ್ನು ನಿಧಾನವಾಗಿ ಹೇಳು. ಏಕೆಂದರೆ ನಾನು ಅದನ್ನು ಕಲಿಯಬೇಕು.” ಎಂದನು. - “ ಇಲ್ಲ; ನನ್ನ ಪರೀಕ್ಷೆಯಾಗುವ ತನಕ ಹೇಳುವುದಿಲ್ಲ. ಮೂರು ಬಾರಿಯೂ ನನ್ನ ಕತ್ತನ್ನು ಕತ್ತರಿಸದೆ ಕೊಡಲಿಯು ಹಿಂದಕ್ಕೆ ಹಾರಿದಾಗ, ನಾನು ನಿನಗೆ ಪದಗಳ ಗುಟ್ಟನ್ನು ಹೇಳಿಕೊಡುತ್ತೇನೆ.” “ ಆದರೆ ಇದು ಒಳ್ಳೆಯ ಔಷಧಿಯಲ್ಲದಿದ್ದರೆ ? ” ಎಂದು ಮಕಾಮುಕ್ ಕಳವಳಗೊಂಡನು. ಸುಬೆನ್‌ಕೌವ್ ಕೋಪದಿಂದ ತಿರುಗಿಬಿದ್ದನು. “ ನನ್ನ ಔಷಧಿ ಯಾವತ್ತೂ ಸರಿಯಾದುದು. ಒಂದು ವೇಳೆ ಅತ್ಯುತ್ತಮ ವಾಗಿಲ್ಲದಿದ್ದರೆ, ಇತರರಂತೆ ನನಗೂ ನೀನು ಶಿಕ್ಷೆ ವಿಧಿಸಬಹುದು ; ಇವಾನ ನಿಗೆ ಮಾಡಿರುವಂತೆ ನನ್ನನ್ನೂ ತುಂಡು ತುಂಡಾಗಿ ಕತ್ತರಿಸಬಹುದು........ ಔಷಧಿ ತಣ್ಣಗಾಗುತ್ತಿದೆ. ಇದರ ಸ್ವಲ್ಪ ಭಾಗವನ್ನು ಕತ್ತಿನ ಮೇಲೆ ಸವರಿ ________________

ಬಾಳ ನಿಯಮ ಕೊಳ್ಳುತ್ತೇನೆ. ಉಳಿದುದನ್ನು ಆಮೇಲೆ ಉಪಯೋಗಿಸುವುದು.” ಅತಿ ಗಭೀರತೆಯಿಂದ ಫ್ರೆಂಚ್ ಗೀತೆಯನ್ನು ತನ್ನದೇ ಆದ ವಿಶಿಷ್ಟ ಸ್ವರ ದಲ್ಲಿ ಉಚ್ಚರಿಸುತ್ತಾ, ಕತ್ತಿನ ಪೂರ್ತ ಔಷಧಿಯನ್ನು ಹಚ್ಚಿಕೊಂಡನು. ಮಧ್ಯದಲ್ಲಿ ಇವಾನನ ಆರ್ತ ಸ್ವರ ಸುಬೆನ್ಕೌವ್‌ನ ಕೆಲಸಕ್ಕೆ ತಡೆಯುಂ ಟುಮಾಡಿತು. ಬಿಗ್ ಇವಾನ್ ಮರಣೋನ್ಮುಖನಾಗಿದ್ದರೂ, ಕೊನೆಯ ಘಳಿಗೆಯಲ್ಲಿ ಮಹತ್ತರ ಶಕ್ತಿಯನ್ನು ಚಲಾಯಿಸುತ್ತಿದ್ದನು. ಸೆಳೆತದಿಂದ ಅವನು ಹಿಮದಲ್ಲಿ ಹೊರಳಾಡುತ್ತಿದ್ದುದನ್ನು ನೋಡಿ ನ್ಯುಲಾಟೋ ನಿವಾಸಿಗಳು ಆಶ್ಚರ್ಯಚಕಿತರಾಗಿ ನಗುತಿದ್ದರು.

  • ಆ ನೋಟದಿಂದ ಸುಬೆನ್ಕೌಟ್ಗೆ ಬೇಸರವಾಯಿತು. ಆದರೆ ಮನ ಸ್ಸಿನ ಅಳುಕನ್ನು ತೋರ್ಪಡಿಸದೆ ಕೋಪಗೊಂಡವನಂತೆ ನಟಿಸಿದನು.
  • ಈ ರೀತಿ ಇದ್ದರೆ ಸಾಧ್ಯವಿಲ್ಲ. ಅವನನ್ನು ತೀರಿಸಿದ ಮೇಲೆಯೇ, ನನ್ನ ಪರೀಕ್ಷೆ ಪ್ರಾರಂಭವಾಗಬೇಕು. ಯಕಾಗ, ಇವಾನನ ಶಬ್ದವನ್ನು ಸಂಪೂರ್ಣ ನಿಲ್ಲಿಸುವ ಏರ್ಪಾಟು ಮಾಡು” ಎಂದು ಸುಬೆನ್ ಕೊವ್ ಎಚ್ಚರಿ ಸಿದನು.

ಇವಾನನ ಸ್ಥಿತಿ ಮುಗಿಯಿತು. ಆಗ ಸುಬೆನ್ನ್ ಮಕಾಮುಕನ ಕಡೆ ನೋಡಿ, " ನೀನು ಜೋರಾಗಿ ಹೊಡೆಯಬೇಕೆಂಬ ಅಂಶವನ್ನು ಜ್ಞಾಪಕ ದಲ್ಲಿಟ್ಟುಕೊ, ಇದು ಮಕ್ಕಳಾಟವಲ್ಲ. ಇಗೋ, ಆ ಕೊಡಲಿಯನ್ನು ತೆಗೆದು ಕೊಂಡು ಮರದ ಕೊರಡಿಗೆ ಹೊಡಿ. ಪ್ರಬುದ್ಧ ಮನುಷ್ಯನಂತೆ ನೀನು ಬಡಿಯುವುದನ್ನು ಮೊದಲು ನಾನು ನೋಡಬೇಕು.” ಎಂದನು. ಮಕಾಮುಕನು ಒಪ್ಪಿ ಜೋರಾಗಿ ಒಂದೇ ಗುರಿಯಿಂದ ಎರಡು ಬಾರಿ ಕೊಡಲಿಯನ್ನು ಬೀಸಿದನು. ಮರದ ಕೊರಡಿನ ದೊಡ್ಡ ಭಾಗ ಕತ್ತರಿಸಿ ಹೋಯಿತು. “ ಭೇಷ್....” ಎಂವನು ಸುಬೆನ್‌ಕೌವ್ ಸುತ್ತಲೂ ನೋಡಿದನು. ಕಾಡುತನವೇ ಮೂರ್ತಿವೆತ್ತಂತೆ ಅನಾಗರಿಕ ಮುಖಗಳು ಕಂಡವು. ವಾರ್ಸಾ ದಲ್ಲಿ ಸಾರ್ ಪೋಲೀಸರಿಂದ ದಸ್ತಗಿರಿಯಾದ ದಿನ ನೆನಪಿಗೆ ಬಂತು. ಅಂದಿ ನಿಂದ ಇಂದಿನವರೆಗೂ ಅವನಿಗೆ ಒಂದೇ ರೀತಿಯ ಬಂಧನದ ಅನುಭವ ವಾಗಿತ್ತು.

  • ಮಕಾಮುಕ್, ಕೊಡಲಿಯನ್ನು ತೆಗೆದುಕೊಂಡು ಸರಿಯಾಗಿ ನಿಂತುಕೊ, ನಾನು ಇಲ್ಲಿ ಮಲಗುತ್ತೇನೆ. ಕೈ ಸನ್ನೆ ಮಾಡಿದಾಗ, ದಮ್ಮು ________________

ಮುಖ ಭಂಗ ಕಟ್ಟಿ ಕೊಡಲಿಯಿಂದ ನನ್ನ ಕತ್ತಿಗೆ ಹೊಡಿ, ಆದರೆ ನಿನ್ನ ಹತ್ತಿರ ಯಾರೂ ನಿಂತಿರಕೂಡದು. ಔಷಧಿ ಸತ್ವಯುತವಾಗಿರುವುದರಿಂದ ಕೊಡಲಿ ನನ್ನ ಕತ್ತಿಗೆ ತಾಗಿದ ಕಣ ಹಿಂದಕ್ಕೆ ಪುಟವಿಟ್ಟು, ನಿನ್ನ ಕೈ ತಪ್ಪಿ ಹೋಗಬಹುದು ! ” - ಎರಡು ಸೈಜ್ ಗಾಡಿಗಳನ್ನೂ, ಅವಕ್ಕೆ ಹೂಡಿದ್ದ ನಾಯಿಗಳನ್ನೂ, ಮೇಲಿದ್ದ ಫರ್ ಮತ್ತು ಮಿಾನುಗಳನ್ನೂ ನೋಡಿದನು. ಬೀವರ್‌ ಚರ್ಮದ ಮೇಲೆ ತನ್ನ ಬಂದೂಕವಿತ್ತು. ಕಾವಲುಗಾರರಾಗಿ ನೇಮಿತರಾಗಿದ್ದ ಆರು ಬೇಟೆಗಾರರು ಸ್ಟೇಜ್ ಪಕ್ಕದಲ್ಲೇ ನಿಂತಿದ್ದರು. “ ಹುಡುಗಿಯೆಲ್ಲಿ ? ಪರೀಕ್ಷೆ ನಡೆಯುವಾಗ ಅವಳು ಗಾಡಿಯ ಮೇಲೆ ನಿಂತಿರಬೇಕು.” ಎಂದು ಸುಬೇನ್‌ಕೌವ್ ಒತ್ತಾಯಮಾಡಿದನು. ಎಲ್ಲ ಏರ್ಪಾಟುಗಳು ನಡೆದಮೇಲೆ, ಸುಸ್ತಾಗಿ ಮಲಗುವ ಮಗುವಿನಂತೆ ಸುಬೆನ್‌ಕೌವ್ ಹಿಮದ ಮೇಲೆ ಮೈ ಚಾಚಿದನು. ಮರದ ಕೊರಡೊಂದು ಅವನ ತಲೆಯ ಕೆಳಗಿನ ದಿಂಬಾಗಿತ್ತು. ಬೇಸರದ ವರ್ಷಗಳನ್ನು ನೂಕಿ. ಸಾಕಾದವನಿಗೆ ನಿಜವಾಗಿಯೂ ಸುಸ್ತಾಗಿತ್ತು. “ ನಾನು ನಿನ್ನ ಮತ್ತು ನಿನ್ನ ಶಕ್ತಿಯ ಬಗ್ಗೆ ಹಾಸ್ಯ ಮಾಡುತ್ತೇನೆ, ಮಕಾಮುಕ್, ಆದ್ದರಿಂದ ಹೊಡಿ, ಜೋರಾಗಿ ಹೊಡಿ....! ” ಕೈ ಸನ್ನೆ ಮಾಡಿದನು. ಮರದ ದಿಮ್ಮಿಯನ್ನು ಚದರವಾಗಿ ಕೆತ್ತಬಲ್ಲ ದೊಡ್ಡ ಕೊಡಲಿಯಿಂದ ಮಕಾಮುಕ್ ಬಲವಾಗಿ ಹೊಡೆಯಲು ಸಿದ್ದನಾದನು. ಮಕಾಮುಕನು ಮೇಲೆತ್ತಿದ್ದ ಒಂದು ಕ್ಷಣ ಆ ಕೊಡಲಿಯು ಹಿಮವಾತಾವರಣ ದಲ್ಲ ಹೊಳೆಯಿತು ; ಆದರೆ ಕೆಳಗಿಳಿದಂತೆ ಸುಬೆನ್‌ಕೌವ್ನ ಕತ್ತಿನೊಡನೆ ಸೇರಿಹೋಯಿತು ! ಮಾಂಸ ಮೂಳೆಗಳನ್ನು ದಾಟಿ ಕೆಳಗಿದ್ದ ಮರವನ್ನೂ ಜೋರಾಗಿ ಸೀಳಿತ್ತು ; ಇಷ್ಟು ಮಾತ್ರ ಸತ್ಯ....ತಲೆ ಒಂದು ಗಜ ದೂರ ಹಾರಿತು. ಎಲ್ಲಿಂದ ? ರಕ್ತ ಚಿಮ್ಮುತಿರುವ ಮುಂಡದಿಂದ ! ಇದನ್ನು ನೋಡಿದ ಅನಾಗರಿಕ ತಂಡ ಆಶ್ಚರ್ಯಗೊಂಡಿತು. ಭ್ರಮೆಯ ವಾತಾವರಣ ; ಎಲ್ಲೆಡೆಯಲ್ಲೂ ಮೌನ. ಅಂಥ ಔಷಧಿ ಇದ್ದಿರಲಾರದೆಂದು ಅವರ ಮನಸ್ಸಿಗೆ ನಿಧಾನವಾಗಿ ಹೊಳೆಯಿತು. '

  • ಫರ್ ಕಳ್ಳ ತಮ್ಮನ್ನು ಮರುಳುಗೊಳಿಸಿದ್ದಾನೆ. ಯಾವ ಕೈದಿಯೂ ಇವನಂತೆ ನರಳಾಟವನ್ನು ತಪ್ಪಿಸಿಕೊಳ್ಳುವ ಉಪಾಯವನ್ನು ಮಾಡಿಲ್ಲ. ಅದಕ್ಕಾಗಿ ಒಂದು ಪಂದ್ಯವನ್ನೇ ಹೂಡಿದನು. ಎಂಥ ಆಟವಾಡಿದನು!

ಇದ್ದಕ್ಕಿದ್ದಂತೆ ನಗೆಯ ಹೊನಲು ಭೋರ್ಗರೆಯಿತು....ಮಕಾಮುಕನು ________________

ಬಾಳ ನಿಯಮ ಅವಮಾನಿತನಾಗಿ ತಲೆ ತಗ್ಗಿಸಿದನು. ಫರ್ ಕಳ್ಳನಿಂದ ತಾನು ತಿಳಿಗೇಡಿ ಯಾದೆನು ; ಅಷ್ಟೆ... ತನ್ನ ಜನಾಂಗದ ಮುಂದೆ - ಮುಖಭಂಗ' ವಾಯಿತು.... ಮತ್ತೆ ತಂಡದವರು ಜೋರಾಗಿ ನಗುತ್ತಲೇ ಇದ್ದರು. ಮಕಾಮುಕನು ಸಹಿಸಲಾರದೆ ಮರೆಯಲ್ಲಿ ಕದ್ದು ಹೋದನು. ಆಜೀವ ಪರ್ಯಂತ ಈ ಅವ ಮಾನ ಹೋಗಲಾರದೆಂದು ತಿಳಿದನು. ಇನ್ನು ಮುಂದೆ ತಾನು ನಕಾಮುಕ್ ನಲ್ಲ; ಮುಖಭಂಗ ಮಹಾಶಯ ! ಮಕಾಮುಕನಂಥ ಮಹಾಮಲ್ಲನಿಗೂ ಮುಖಭಂಗವಾಯಿತು.... - ವಸಂತ ಕಾಲದಲ್ಲಿ ಸಾಮನ್ ಮಿಾನಿಗಾಗಿಯೂ ಅಥವಾ ಬೇಸಗೆಯಲ್ಲಿ ವ್ಯಾಪಾರಕ್ಕಾಗಿಯೂ ತಂಡದವರು ಒಟ್ಟಿಗೆ ಸೇರುತಿದ್ದರು. ಶಿಬಿರಾಗ್ನಿಯ ಸುತ್ತ ಕುಳಿತು ಹರಟೆಹೊಡೆಯುವಾಗ ಫರ್ ಕಳ್ಳನ ಕಥೆ ಕೇಳಿಬರುತಿತ್ತು. ಅವನು ಮುಖಭಂಗ ಮಹಾಶಯನ' ಕೈಯಲ್ಲಿ ಒಂದೇ ಏಟಿಗೆ ಶಾಂತಿಯುತ ವಾಗಿ ಸತ್ತ ಪ್ರಸಂಗವನ್ನು ಸ್ವಾರಸ್ಯವಾಗಿ ವಿವರಿಸುತಿದ್ದರು. ಕಥೆಯ ಓಟವನ್ನು ನಿಲ್ಲಿಸಿ ಯಾವನೋ ಒಬ್ಬ ಸೊಗಸುಗಾರ ಯುವಕ ಕೇಳುತಿದ್ದನು: “ ಆ ಮುಖಭಂಗ ಮಹಾಶಯನಾರು ?” ಅದಕ್ಕೆ ಉತ್ತರ: * ಫರ್ ಕಳ್ಳನ ತಲೆಯನ್ನು ಕತ್ತರಿಸುವುದಕ್ಕಿಂತ ಮುಂಚೆ ಮುಕಾಮುಕನಾ ಗಿದ್ದವನೇ, ಮುಂದೆ ' ಮುಖಭಂಗ ಮಹಾಶಯ ' ನಾದವನು.” ತುಂಡು ಮಾಂಸ ಟಾಮ್ ಕಿಂಗ್ ಕೊನೆಯ ರೊಟ್ಟಿಯ ಚೂರನ್ನು ಅಗಿದನು. ಹಿಟ್ಟು ಮಾಂಸದ ಕಡೆಯ ಕಣವನ್ನೂ ಬಿಡದೆ ತಟ್ಟೆಯನ್ನು ನೆಕ್ಕಿದನು. ನಿಧಾನವಾಗಿ ಯೋಚಿಸುತ್ತ ಜೀರ್ಣಿಸಿಕೊಂಡನು. ಮೇಜು ಬಿಟ್ಟು ಎದ್ದಾಗ, ತಾನು ನಿಜ ವಾಗಿಯೂ ಹಸಿದಿದ್ದೇನೆಂಬ ಅರಿವಾಯಿತು. ಮತ್ತೆ ಆ ಭಾವನೆ ಅವನನ್ನು ಪೀಡಿಸಹತ್ತಿತು. ಅದರೂ ತಾನೊಬ್ಬನೇ ತಿಂದಿರುವುದು. ಇಬ್ಬರು ಮಕ್ಕ ಇನ್ನೂ ಬೇರೆಯ ಕೊಠಡಿಯಲ್ಲಿ ಮಲಗಿಸಲಾಗಿತ್ತು; ನಿದ್ರೆಯಲ್ಲಾದರೂ ಅವರಿಗೆ ಹಸಿವಿನ ಬಾಧೆ ಮರೆಯುವಂತೆ ಏರ್ಪಾಟು ಮಾಡಲಾಗಿತ್ತು. ಅವನ ಹೆಂಡತಿ