ಭಕ್ತಿಯೆಂಬ ಸಮಾಧಾನ ಬಸವಣ್ಣನಿಂದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಕ್ತಿಯೆಂಬ
ಸಮಾಧಾನ
ಬಸವಣ್ಣನಿಂದ
ಎನಗಾಯಿತ್ತು.
ಪ್ರಸಾದವೆಂಬ
ಪರಿಣಾಮ
ಮರುಳುಶಂಕರದೇವರಿಂದ
ಎನಗಾಯಿತ್ತು.
ಏಕೋಭಾವದ
ನಿಷ್ಠೆ
ಸಿದ್ಧರಾಮಯ್ಯದೇವರಿಂದ
ಎನಗಾಯಿತ್ತು.
ಸರ್ವಜೀವ
ಪರಿಪೂರ್ಣಕಳೆ
ಚನ್ನಬಸವಣ್ಣನಿಂದ
ಎನಗಾಯಿತ್ತು.
ಆದ
(ಅದರ?)
ನಿಜದ
ನೆಲೆ
ಗುಹೇಶ್ವರಲಿಂಗವೆಂಬ
ನಾಮವಾಯಿತ್ತು.