ಭವತೀ ಕಾತ್ಯಾಯನೀ/೩೯ನೆಯ ಗ್ರಂಥ/೧ ನೆಯ ಪ್ರಕರಣ
೧ ನೆಯ ಪ್ರಕರಣ – ಮನಸ್ಸು
मनएव मनुष्याणां कारणं बंधमोक्षयोः ।।
बंधाय विषयासक्तं मुक्यै निर्विषय॑स्मृतं ।। १ ||
-ब्रझ, वेदूपनिषत.
ಸೃಷ್ಟಪದಾರ್ಥಗಳಲ್ಲಿ ಮನಸ್ಸೆಂಬ ತತ್ವವು ಮಹತ್ತರವಾದದ್ದು , ಮೇಲಿನ ಉಪ
ನಿಷದ್ವಾಕ್ಯದಂತೆ ಅದು ಬಂಧಮೋಕ್ಷ್ಗಗಳೆರಡಕ್ಕೂ ಕಾರಣವಾಗಿರುವದರಮೇಲಿಂದಾದರೂ ಅದರ ಗೌರವವು ಚೆನ್ನಾಗಿ ವ್ಯಕ್ತವಾಗುತ್ತದೆ. ಮನುಷ್ಯ ಮಾತ್ರರಲ್ಲಿ ಮನಸ್ಸಿನ ವ್ಯಾಪಾರದ ಪ್ರಭಾವವನ್ನರಿಯದವರು ಯಾರಿರುವರು? ಪಂಡಿತರಿಂದ ಪಾಮರರವರೆಗೆ ಎಲ್ಲರೂ ಮನಸ್ಸಿನ ಎಳತಕ್ಕೆ ಒಳಗಾಗಿರುವರು. ಆದರೆ ಜ್ಞಾನಿಗಳು ಮಾತ್ರ ಮನಸ್ಸಿನ ಸ್ವರೂಪವನ್ನು ವಿಚಾರಿಸಿ , ಅದನ್ನು ಸ್ವಾಧೀನಪಡಿಸಿಕೊಂಡಿರುವರು ; ಮತ್ತು ಮನಸ್ಸು ಯಾವ ಸ್ಥಿತಿಯಲ್ಲಿ ಬಂಧಕ್ಕೆ ಕಾರಣವಾಗುವದು, ಯಾವಸ್ಥಿತಿಯಲ್ಲಿ ಮೋಕ್ಷಕ್ಕೆ ಕಾರಣವಾಗುವದು , ಎಂಬದನ್ನು ಕುರಿತು ಸ್ವಾನುಭವದಿಂದ ಹೇಳಿರುವರು. ಈ ಮಾತು ಎಲ್ಲರಿಗೂ ಗೊತ್ತಿರುವುದು ಹಿತಕರವಾಗಿರುವುದರಿಂದ, ಮನಸ್ಸನ್ನು ಕುರಿತು ಕೆಲವು ಸಂಗತಿಗಳನ್ನು ಶಾಸ್ತ್ರ ಸಮ್ಮತವಾಗಿ ಯಥಾಮತಿ ಬರೆಯಲುಪಕ್ರಮಿಸಿರುತ್ತೇವೆ ; ನಮ್ಮ ಬರಹವು ಅನುಭವವನ್ನು ತೀರ ಬಿಟ್ಟಿರಲಾರದೆಂಬುದನ್ನು ವಾಚಕರಿಗೆ ನಾವು ತಿಳಿಸು ವೆವು. ಮನಸ್ಸನ್ನು ಕುರಿತು ಬರೆಯಲಿಕ್ಕೆ ಮನೋಜಯಮಾಡಿದ ಮಹಾತ್ಮರೇ ಮುಖ್ಯಾಧಿಕಾರಿಗಳಾಗಿದ್ದರೂ, ಮನಸ್ಸಿನ ಮಂಗಚೇಷ್ಟೆಗಳನ್ನು ವರ್ಣಿಸಲಿಕ್ಕೆ, ಮನಸ್ಸಿಗಧೀ ನರಾದವರೇ ಅನುಭವದದೃಷ್ಟಿ ಯಿಂ ದ ಯೋಗ್ಯಾಧಿಕಾರಿಗಳಾಗಿರುತ್ತಾರೆ. ತಾತ್ಪರ್ಯ ವಿಷ್ಟೇ, ಮುಖ್ಯವಾಗಿ ನಮ್ಮಲೇಖದಲ್ಲಿ ನಾವು ಜ್ಞಾನಿಗಳ ಮತವನ್ನು ಉಲ್ಲೇಖಿಸುವೆವಲ್ಲದೆ, ಪ್ರಸಂಗವಿಶೇಷದಲ್ಲಿ ಮನಸ್ಸಿನ ಮಂಗಚೇಷ್ಟೆಗಳನ್ನಾದರೂ ಅನುಭವದಿಂದ ಹೇಳುವೆವು.
ದೇಹವೆಂಬುದೊಂದು ರಾಜಧಾನಿಯು; ಜೀವಾತ್ಮನೆಂಬವನೇ ಅಲ್ಲಿಯ ಅರಸನು;
ಮನಸ್ಸು ಆತನ ಮಂತ್ರಿಯು; ಪಂಚಪ್ರಾಣಗಳು ದ್ವಾರಪಾಲಕರು; ಜ್ನಾನೇಂದ್ರಿಯಕರ್ಮಂದ್ರಿಯಗಳೇ ಆತನ ಪರಿಚಾರಕರು. ಇವರೆಲ್ಲರೂಕೂಡಿ ಆ ದೇಹದೊಡೆಯನಾದ ಜೀವಾತ್ಮನಿಗೆ ವಿವಿಧಉಪಭೋಗ್ಯವಿಷಯಗಳನ್ನು ಸಂಪಾದಿಸಿಕೊಡುತ್ತಾರೆ. ಆ ವಿಷಯಗಳ ಉಪಭೋಗದಿಂದ ಜೀವಾತ್ಮನಿಗೆ ಸುಖದುಃಖಗಳಾಗುತ್ತವೆಂಬುದು ಅನುಭವಸಿದ್ದ ಮಾತಾಗಿರುತ್ತದೆ. ಮೂಲತಃ ಜೀವಾತ್ಮನು ಸ್ವತಂತ್ರನು, ಆನಂದಸ್ವರೂಪನು; ಆದರೆ, “ಜಾಲಿಯಬಿತ್ತಿ ಕಾಲಿಗೆಮೂಲ ಮಾಡಿಕೊಂಡಂತೆ" , ಆತನು ಮೇಲೆ ಹೇಳಿದ ತನ್ನ ಪರಿವಾ ರದ ಆಧೀನನಾಗಿ ಸ್ವಾತಂತ್ರಸುಖವನ್ನು ಮರೆತು ಬಿಟ್ಟಿದ್ದರಿಂದ, ಪಾರತಂತ್ರ್ಯದ ಬಗೆ ಬಗೆಯ ಕಾಲ್ಪನಿಕ ಸುಖದುಃಖಗಳ ಜಗ್ಗಾಟಕ್ಕೆ ಗುರಿಯಾಗಿ ನೆರಳಬೇಕಾಗಿದೆ. ಜೀವಾತ್ಮನ ಪರಿವಾರದಲ್ಲಿ ಅನ್ಯರ ಸ್ವಾತಂತ್ರವನ್ನು ಅಪಹರಿಸುವ ದುಷ್ಟಚಾಳಿಯ ಸಂಬಂಧದಿಂದ ಮನಸ್ಸು ಮಿಗಿಲಾದದ್ದು, ಅದು ತನ್ನ ಕೈಕೆಳಗಿನ ಇಂದ್ರಿಯಾದಿಗಳ ಸ್ವಾತಂತ್ರವನ್ನಷ್ಟೇ ಅಲ್ಲ, ದೇಹದೊಡೆಯನಾದ ಜೀವಾತ್ಮನ ಸ್ವಾತಂತ್ರವನ್ನೇ ಕಸಿದುಕೊಂಡು, ಕರಮರಿತಿಂದು ಹೆಬ್ಬುಲಿಯಾದಂತೆ, ಎಲ್ಲರನ್ನೂ ಮೀರಿನಿಂತು ಅನಿಯಂತ್ರಿತಾಧಿಕಾರದಿಂದ ಜೀವಾತ್ಮನ ಕುಲಗುರುವಾದ ವಿವೇಕನೆಂಬಾತನ ಆಟವನ್ನು ಸಹ ನಡೆಯಗೊಡದೆ, ಅನರ್ಥ ಪರಂಪರೆಯನ್ನುಂಟುಮಾಡುವುದು; ಆದರೆ ಊರುಸುಟ್ಟರೂ ಹನುಮಪ್ಪನು ಹೊರಗೆ” ಎನ್ನುವಂತೆ, ತಾನು ಯಾವದಕ್ಕೂ ಸಿಲುಕದೆಯಿರುವದು ! ಇಂಥ ವೀಕ್ಷಣವಾದ ಮನಸ್ಸಿನ ಸ್ವರೂಪವೇನು ? ಅದರ ಸಾಮರ್ಥ್ಯವೆಷ್ಟು ? ತನ್ನ ಪರಿವಾರದೊಡನೆ ಅದರಬಳಿಕೆಯು ಹ್ಯಾಗಾಗುವದು ? ಮನೋಜಯಮಾಡುವ ಬಗೆಯೇನು ? ಇತ್ಯಾದಿ ವಿಷಯಗಳನ್ನು ಕುರಿತು ಆಲೋಚಿಸುವುದು ಅವಶ್ಯವಾಗಿರುತ್ತದೆ.
ಈ ಪ್ರಕರಣದಲ್ಲಿ ಮನಸ್ಸಿನಸ್ವರೂಪವನ್ನು ಮುಖ್ಯವಾಗಿ ವರ್ಣಿಸಬೇಕಾಗಿದೆ;
ಆದ್ದರಿಂದ ಮನಸ್ಸೆಂದರೇನು ? ಅದರ ಸ್ವಭಾವವೆಂತಹದು ? ಅದರ ಕರ್ತೃತ್ವಶಕ್ತಿ ಎಷ್ಟು ? ಎಂಬುದನ್ನು ಕುರಿತು ಕ್ರಮವಾಗಿ ಆಲೋಚಿಸುವೆವು, "ಮನು-(ಅವಳೊ ಧನೇ)” ಎಂಬ ಧಾತುವಿನಿಂದ ಸಿದ್ಧವಾದ "ಮನಸ್ಸೆಂ"ಬ ಶಬ್ದವು , ತಿಳುಕೊಳ್ಳುವಶಕ್ತಿಯುಳ್ಳದ್ದೊಂದು ವಸ್ತುವೆಂಬ ಅರ್ಥವನ್ನು ಬೋಧಿಸುತ್ತದೆ ; ಆದರೆ ಈ ಮನಸ್ಸೆಂಬ ವಸ್ತುವಿನ ರೂಪವನ್ನು ಮಾತ್ರ ವರ್ಣಿಸುವುದು ಶಕ್ಯವಲ್ಲ ; ಯಾಕಂದರೆ ಮನಸ್ಸಿಗೆ ಸ್ವತಂತ್ರ ಆಕಾರವೇಇಲ್ಲ. ವ್ಯವಹಾರದಲ್ಲಿ ಪ್ರವಾಹಿರೂಪ-ವಾಯುರೂಪ ಪದಾರ್ಥಗಳಿಗೆ ಸ್ವತಂತ್ರವಾದ ಆಕಾರವಿಲ್ಲೆ೦ದು ಹೇಳುದುದುಂಟು ; ಯಾಕಂದರೆ ಅವನ್ನು ಒಳಕೊಳ್ಳುವಪದಾರ್ಥಗಳ ಅವಕಾಶಗಳ ಆಕಾರದಂತೆ ಅವುಗಳ ಆಕಾರವಾಗುತ್ತದೆ; ಆದರೆ ತೇಜೋಮಯವಾದ ಮನಸ್ಸಿನಸ್ವರೂಪವು ಇದಕ್ಕೂ ವಿಲಕ್ಷಣವಾಗಿರುವುದು; ಯಾಕಂದರೆ ಮನಸ್ಸಿನಆಕಾರವು, ಅದಕ್ಕೆ ಗ್ರಾಹ್ಯವಾದ ಪದಾರ್ಥದಂತೆ ಆಗಿಹೋಗುತ್ತದೆ; ಅಂದರೆ ಮನಸ್ಸು ಆಯಾಪದಾರ್ಥರೂಪವಾಗಿ ಹೋಗುತ್ತದೆ. ಈ ಸಂಬಂಧದಿಂದ “ವೇದಾಂತಪರಿಭಾಷೆ”ಎಂಬಗ್ರಂಥದಲ್ಲಿ -" ಯಥಾ ತಡಾಗೋದಕಂ ಛಿದ್ರಾನ್ನಿರ್ಗತ್ಯ, ಕುಲ್ಯಾತ್ಮನಾ ಕೇದಾರಾನೆ: ಪ್ರವಿಶ್ಯ, ತದ್ವದೇವ ಚತುಷ್ಕೋಣಾದ್ಯಾಕಾರ೦ ಭವತಿ | ತದ್ವತ್ತೀಜಮಪ್ಯ೦ತಃಕರಣ೦ ಚಕ್ಷುರಾದಿದ್ವಾರಾ ನಿರ್ಗತ್ಯ ಘಟಾದಿ ವಿಷಯದೇಶಂ ಗತ್ವಾ ತದಾಕಾರತಯಾ ಪರಿಣಮತೇ ಸ ಏವ ಪರಿಣಾಮೋ ವೃತ್ತಿರಿತ್ಯುಚ್ಯತೆ” ಅಂದರೆ, ಒಂದು ಕೆರೆಯನೀರು ತುಂಬಿನಿಂದ ಹೊರಟು ಕಾಲುವೆಯೊಳಗಿಂದ ಹೊಲಕ್ಕೆಹೋಗಿ ,ಅಲ್ಲಿ ನಾಲ್ಕೂ ಮೋಲೆ ಸಮನಾಗಿ ನಿಂತುಕೊಂಡು ಹೊಲದ ಆಕಾರವನ್ನೇ ಹೊಂದುವುದು . ಇದೇ ಮೇರೆಗೆ ತೇಜೋಮಯವಾದ ಮನಸ್ಸಾದರೂ ಕಣ್ಣು ಮುಂತಾದ ದ್ವಾರಗಳಿಂದ ಹೊರ ಬಿದ್ದು ಗ್ರಾಹ್ಯಪದಾರ್ಥಗಳಿಗೆ ಸಂಬಂಧಿಸಿ ತದಾಕಾರವನ್ನೇ ಹೊಂದುತ್ತದೆ. ಇದಕ್ಕೆ ಮನಸ್ಸಿನ ವೃತ್ತಿಯೆಂದು ಹೇಳಿರುತ್ತದೆ ; ಅಂದಬಳಿಕ ಇಂಥ ಮನಸ್ಸಿನ ರೂಪವನ್ನು ಹೀಗೆಯೇ ಎಂದು ಹ್ಯಾಗೆನಿರ್ಧರಿಸಬೇಕು? ಹೀಗೆ ಮನಸ್ಸು ಮಣಸಿದ ಮಣಿಯುವ ಗುಣವುಳ್ಳದ್ದಾದ್ದರಿಂದಲೇ ಅದು ದುಷ್ಯಸಂಗದಿಂದ ಜೀವಾತ್ಮ ನಬಂಧನಕ್ಕೂ , ಸತ್ಯಂಗ ದಿಂದ ಜೀವಾತ್ಮನಮೋಕ್ಷಕ್ಕೂ ಕಾರಣವಾಗುತ್ತದೆಂದು, ಅಂದರೆ ಉಪನಿಷದ್ವಾಕ್ಯದಂತೆ, ಮನಸ್ಸು ಬಂಧ-ಮೋಕ್ಷಗಳೆರಡಕ್ಕೂ ಕಾರಣವಾಗುತ್ತದೆಂದು ಹೇಳಬೇಕಾಗುತ್ತದೆ.
ಇನ್ನು, ಮನಸ್ಸಿನ ಸ್ವಭಾವವನ್ನು ಕುರಿತು ವಿಚಾರಿಸುವಾ. ಇದರ ಸ್ವಭಾ
ವವು-೧ಚಂಚಲ, ಮತ್ತು ೨ ನಿರ್ಲಿಪ್ತ. ಇವುಗಳಲ್ಲಿ ಮನಸ್ಸಿನ ಚಂಚಲಸ್ವಭಾವವು ಬಹುಪ್ರಸಿದ್ದವಾಗಿರುವದು. ಮನಸ್ಸು ಒಂದು ಸ್ಥಳದಲ್ಲಿ ಕ್ಷಣಮಾತ್ರವೂ ನಿಲ್ಲುವದಿಲ್ಲ; ಬಾಲ ಸುಟ್ಟ ಬೆಕ್ಕಿನ ಹಾಗೆ ಸಮಾಧಾನವಿಲ್ಲದೆ ಅತ್ತಿತ್ತ ತಿರುಗಾಡುತ್ತಲೇ ಇರುವದು. ಇದಕ್ಕೆ ಹೊಸಹೊಸ ಪದಾರ್ಥಗಳ ಮೇಲೆ ಪ್ರೀತಿಒಹಳ; ಮತ್ತು ಇದರ ಕಲ್ಪನಾಶಕ್ತಿ ಯಾದರೂ ಅತ್ಯಂತಪ್ರಬಲವಾದದು; ಇದು ಆಶೆಬುರುಕ ಸ್ವಭಾವದ್ದು; ಆದ್ದರಿಂದ ಇದು ಯಾವಾಗಲೂ ಪದಾರ್ಥಗಳನ್ನೇ ಗೋಚರಿಸುತ್ತಲಿರುತ್ತದೆ. ಈ ಕಲ್ಪನಾಶಕ್ತಿ ಆಶೆಬುರುಕ ತನಗಳೇ ಮನಸ್ಸಿನ ಚಂಚಲವೃತಿ ಯ ಉತ್ತೇಜಕಗಳಾಗಿರುವಂತೆ ತೋರುತ್ತದೆ. ಇದಕ್ಕೆ ಪದಾರ್ಥಗಳ ಜ್ಞಾನವು ಇಂದ್ರಿಯಗಳ ದ್ವಾರದಿಂದಲೂ, ಅಭಿರುಚಿಯ ಜ್ಞಾನವು ದೇಹಾ ಭಿಮಾನಿಯಾದ ಜೀವಾತ್ಮನ ದ್ವಾರದಿಂದಲೂ ಆಗುತ್ತವಲ್ಲದೆ, ಇದಕ್ಕೆ ಸ್ವತಂತ್ರವಾಗಿ ಪದಾ ರ್ಥಗಳ ಜ್ಞಾನವು ಅಥವಾ ಅಭಿರುಚಿಯ ಜ್ಞಾನವು ಆಗುವದಿಲ್ಲ. ತನಗೆ ರುಚಿಸುವ ಪದಾ ರ್ಥಗಳನ್ನಷ್ಟು ಅದು ಸಂಗ್ರಹಿಸಿಕೊಂಡು ಉಳಿದವನ್ನು ಉಗುಳಿಬಿಡುತ್ತದೆ. ಮನಸ್ಸನ್ನು ಫೋಟೋಗ್ರಾಫರನೆಂತಲೂ, ಪಂಚಜ್ಞಾನೇಂದ್ರಿಯಗಳನ್ನು ಫೋಟೋ ತೆಗೆಯುವ ಕನ್ನಡಿ ಗಳೆಂತಲೂ ಭಾವಿಸಬಹುದು. ಈ ಮನಸ್ಸೆಂಬ ಫೋಟೋಗ್ರಾಫರನು ಪಂಚಜ್ಞಾನೇಂದ್ರಿ ಯಗಳೆಂಬ ಕನ್ನಡಿಗಳಿಂದ ರೂಪ, ರಸ, ಗಂಧ, ಸ್ಪರ್ಶ, ಶಬ್ದ ಗಳೆಂಬ ವಿಷಯಗಳ ಫೋಟೋ ಗಳನ್ನು ತಕ್ಕೊಂಡು, ಅವನ್ನು ತನ್ನ ಮಿಮಳೆಂಬ ಪೆಟ್ಟಿಗೆಯಲ್ಲಿ ಬಚ್ಚಿಡುತ್ತಾನೆ. ಬೇಕಾ ದಾಗ ಆ ಫೋಟೋಗಳನ್ನು ಹೊರಗೆ ತೆಗೆಯುವನು, ಬೇಡಾದಾಗ ಬಚ್ಚಿಡುವನು. ಮನಸ್ಸು ತನಗೆ, ಅಂದರೆ ದೇಹಾಭಿಮಾನಿಯಾದ ಜೀವಾತ್ಮನಿಗೆ ಬೇಕಾದ ಸಂಗತಿಯನ್ನು ಹತ್ತಿಪ್ಪತ್ತು ವರ್ಷಗಳವರೆಗೆ, ಅಥವಾ ದೇಹವಿರುವವರೆಗೆ ನೆನಪಿನಲ್ಲಿಟ್ಟಿರುತ್ತದೆ. ಹೆಚ್ಚಿಗೆ ಹೇಳುವದೇನು, ಜನ್ಮಾಂತರದಲ್ಲಿಯೂ ಪೂರ್ವಾನುಭೂತ ಸಂಗತಿಗಳು ಮನಸ್ಸಿನ ನೆನಪಿಗೆ ಬರುತ್ತವೆಂದು ಶಾಸ್ತ್ರಕಾರರು ಹೇಳುವರು; ಆದ್ದರಿಂದಲೇ ಕಾಲಿದಾಸನು-- ಮನೋಹಿ ಜನ್ಮಾಂತರಸಂಗತಿಬ್ಬಂ” ಆದರೆ ಮನಸ್ಸು ಜನ್ಮಾಂತರದ ಸಂಗತಿಗಳನ್ನು ತಿಳಿಯುವಂಥಾಗತ ಎಂದು ಹೇಳಿರುವನು. ಆದ್ದರಿಂದ ಮನಸ್ಸಿನ ಸ್ಮರಣಶಕ್ತಿಯು ಬಲಿಷ್ಠವಾದದ್ದು. ಅದರ ಆಶೆಬುರುಕತನಕ್ಕಂತು ನೆಲೆಯಿಲ್ಲ. ಅಂದಬಳಿಕ ಅದು 'ಚಂಚಲವಾಗಿರದೆ ಏನುಮಾಡೀತು?
ಇಷ್ಟಾದರೂ ಮನಸ್ಸು ನಿರ್ಲಿಪ್ತಸ್ವಭಾವದ್ದೆಂದು ಹೇಳುವದು ಬಲು ಆಶ್ಚರ್ಯಕರ
ವಾಗಿ ತೋರುವದು; ಆದರೆ ಇವರಲ್ಲಿ ಆಶ್ಚರ್ಯವೇನೂ ಇಲ್ಲ. ಮನಸ್ಸನ್ನು ದಲಾಲನಿಗೆ ಹೋಲಿಸಬಹುದು. ವ್ಯಾಪಾರದಲ್ಲಿ ಕೊಡಕೊಳ್ಳುವ ಗಿರಾಕಿಗಳಿಗಾಗುವ ಲಾಭಹಾನಿಗಳ ಸುಖದುಃಖಗಳು, ಆ ಕೊಡಕೊಳ್ಳುವ ಗಿರಾಕಿಗಳ ಪ್ರೇರಣೆಯಿಂದ ದಲಾಲಿಯನ್ನು ಮಾಡುವವಲಾಲನಿಗೆ ಹೇಗೆ ಹತ್ತಬೇಕು? ಆತನು ದಲಾಲಿಯು ದೊರೆಯುತ್ತ ಹೋದಂತೆ ಪರಿಪುಷ್ಟವಾಗುತ್ತ ಹೋಗುವನು, ದಲಾಲಿಯು ದೊರೆಯದಾದಂತೆ ನಾಶವಾಗುತ್ತ ಹೋ ಗುವನು; ಅದರಂತೆ ಜೀವಾತ್ಮನ ಬಂಧನವೂ, ಇಂದ್ರಿಯಗಳ ಪಾಟವೂ ಹೆಚ್ಚುತ್ತ ಹೋದಂತೆ, ಮನಸ್ಸಿನ ವಿಷಯಾಸಕ್ತಿಯು ಹೆಚ್ಚುತ್ತಹೋಗುವದು; ಮತ್ತು ಜೀವಾತ್ಮನ ಬಂಧನವೂ, ಇಂದ್ರಿಯಪಾಟವವೂ ಕ್ಷೀಣವಾಗುತ್ತ ಹೋದಂತೆ ಮನಸ್ಸು ಕ್ಷೀಣವಾಗುತ್ತ ಹೊಗುವದು. ಆದ್ದರಿಂದಲೇ ಮನಸ್ಸು ಪಾಪಪುಣ್ಯಗಳಿಗೂ, ಅವುಗಳ ಫಲಕ್ಕೂ ಸಂ ಬಂಧಿಸದೆ, ಅದಕ್ಕೆ ದೇಹಾಭಿಮಾನಿಯಾದ ಜೀವಾತ್ಮನು ಸಂಬಂಧಿಸುತ್ತಾನೆಂದು ಶಾಸ್ತ್ರಾ ಧಾರಗಳಿಂದ ಸಿದ್ಧವಾಗಿರುತ್ತದೆ. ಉದಾಹರಣಾರ್ಥ, ಕಳವು ಮಾಡಲಿಕ್ಕೆ ಪ್ರೇರಿಸುವದು ಮನಸ್ಸು, ಬಂದೀಖಾನೆಬೀಳುವದು ದೇಹವು, ದುಃಖವು ದೇಹಾಭಿಮಾನಿಯಾದ ಜೀವನಿಗೆ! ದೇಹಾಂತರ್ಗತ ಇಂದ್ರಿಯಗಳ ದ್ವಾರಾ ಆಗುವ ದುಃಖವನ್ನು ಇಂದ್ರಿಯಾಭಿಮಾನಿಯಾದ ಜೀವನು ಭೋಗಿಸುವನೆಂದ ಬಳಿಕ, ಶ್ರೇಷ್ಟ ಇಂದ್ರಿಯವೆನಿಸುವ ಮನಸ್ಸಿಗೆ ಸ್ವತಃ ಪಾಪ ಪುಣ್ಯಗಳ ಲೇಪವು ಅಥವಾ ಸುಖದುಃಖಗಳ ಭೋಗವು ಎಲ್ಲಿ ಉಳಿಯುವದು? ಆದ್ದ ರಿಂದ ಮನಸ್ಸನ್ನು ನಿರ್ಲಿಪ್ತವೆಂತಲೇ ಹೇಳಬೇಕಾಗುವದು. ಹೀಗೆಮನವು ಯಾತರಲ್ಲಿಯೂ, ಯಾವಪೆರ್ಟಗೂ ಸಿಗದೆ ಹಾಗೆಯೇ ಉಳಿದುಕೊಳ್ಳುತ್ತಲಿರುವದರಿಂದ, ವ್ಯಾಕರಣ ಕರ್ತೃ ವಾದ ಪಾಣಿನಿ ಮುನಿಯು ಇದಕ್ಕೆ ನಪುಂಸಕವೆಂದು ತನ್ನ ವ್ಯಾಕರಣ ಗ್ರಂಥದಲ್ಲಿ ಬರೆದಿಟ್ಟಿರುವನು.
ಇನ್ನು, ಮನಸ್ಸಿನ ಕರ್ತೃತ್ವ ಶಕ್ತಿಯನ್ನು ಕುರಿತು ವಿಚಾರಿಸುವಾ, ಭಗವದ್ಗೀತೆ
ಯಲ್ಲಿ ಶ್ರೀ ಕೃಷ್ಣನು "ಇಂದ್ರಿಯಾಣಾಂ ಮನಶ್ಚಾಸ್ಮಿ” ಎಂದು ಹೇಳಿರುವದರಿಂದ ಮನಸ್ಸು ಯಾವತ್ತು ಇಂದ್ರಿಯಗಳಲ್ಲಿ ಶ್ರೇಷ್ಠವಾದದ್ದಿರುತ್ತದೆಂಬ ಮಾತು ವ್ಯಕ್ತವಾಗುತ್ತದೆ ಯಾವತ್ತು, ಇಂದ್ರಿಯಗಳ ಮೇಲೆ ಮನಸ್ಸು ಅಧಿಕಾರ ನಡಿಸುವದನ್ನು ವಿಚಾರಿಸಿದರೆ ಇದೇ ಮಾತು ನಮಗೆ ಗೊತಾ ಗುತ್ತದೆ. ಒಂದು ದೊಡ್ಡ ಯಂತ್ರದಲ್ಲಿ ಹಲವು ಸಣ್ಣದೊಡ್ಡ ಚಕ್ರಗಳಿರುತ್ತವಷ್ಟೆ ? ಅವುಗಳಲ್ಲಿ ಮುಖ್ಯವಾದ ದೊಡ್ಡ ಚಕ್ರವು ತಿರುಗಹತ್ತಿದ ಕೂಡಲೆ ಸಣ್ಣ ಚಕ್ರಗಳು ತಿರುಗಹತ್ತಿ, ಅದು ನಿಂತಕೂಡಲೆ ಅವೂ ನಿಲ್ಲುವವು. ಅದ ರಂತೆ, ದೇಹವೆಂಬ ಯಂತ್ರದಲ್ಲಿ ಮನಸ್ಸು ಮುಖ್ಯ ಚಕ್ರದಂತೆ ಇರುವದು, ಇಂದ್ರಿಯ ಗಳು ಸಣ್ಣ ಚಕ್ರಗಳಾಗಿರುವವು. ಮನಸ್ಸಿನ ವ್ಯಾಪಾರವು ನಡೆದ ಕೂಡಲೆ, ಅದಕ್ಕೆ ಆಧೀನವಾಗಿರುವ ಇಂದ್ರಿಯಗಳ ವ್ಯಾಪಾರವು ನಡೆಯಹತ್ತುತ್ತದೆ. ಮನಸ್ಸು ಏಕಾಗ್ರ ವಾಗಿರುವಾಗ ಅಥವಾ ಅದು ಯಾವದೊಂದು ಕೆಲಸದಲ್ಲಿ ತೊಡಗಿರುವಾಗ, ಅದರಿಂದ ಪ್ರೇರಿಸಲ್ಪಡದ ಇಂದ್ರಿಯಗಳು ನಿರ್ವ್ಯಾಪಾರವಾಗಿರುತ್ತವೆ. ಅಂದರೆ, ಕಣ್ಣು ತೆರೆದಿ ದ್ದರೂ ಅದಕ್ಕೆ ಪದಾರ್ಥಗಳು ಕಾಣುವದಿಲ್ಲ. ಕಿವಿಗಳಿಗೆ ಸಪ್ಪಳವೂ ಕೇಳಿಸುವುದಿಲ್ಲ. ಇದೇ ಮಾತು ಎಲ್ಲ ಇಂದ್ರಿಯಗಳಿಗೂ ಹತ್ತುವದು, ನಿದ್ರೆಯಲ್ಲಿ ಮನಸ್ಸು ಯಾವ ಇಂದ್ರಿಯಗಳನ್ನು ಸೇರಿಸದೆಯಿರುವದರಿಂದ, ಆಗ ಎಲ್ಲ ಇಂದ್ರಿಯಗಳ ನಿರ್ವಾಹಾರ ವಾಗಿರುತ್ತವೆ. ಹೀಗೆ ಇಂದ್ರಿಯಗಳನ್ನು, ಆಧೀನದಲ್ಲಿಟ್ಟುಕೊಳ್ಳುವದಂತು ಇರಲಿ, ಹಿಂದೆ ಹೇಳಿದಂತ ಸ್ವಭಾವತಃ ಸ್ವತಂತ್ರನಾದ ಆತನನ್ನು ಮನಸ್ಸು ಆಧೀನದಲ್ಲಿಟ್ಟು ಕೊಂಡಿರುವದು. ಯಾರಾದರೂ ನನಗೆ ಬುದ್ಧಿಯ ಮಾತನ್ನು ಹೇಳುವಾಗ ಅದು ನಮಗೆ ಸೇರದಿದ್ದರೆ ನಾವು ಬುದ್ಧಿ ಹೇಳುವವರಿಗೆ ನಾನು ನನ್ನ ಮನಸ್ಸಿಗೆ ಬಂದ ಹಾಗೆ ಮಾಡುತ್ತೀನೆ, ನೀನು ಹೇಳುವ ಕಾರಣವಿಲ್ಲೆಂದು ಹೇಳುವೆವು . ಇದರಿಂದ ಮನಸ್ಸಿನ ಅಧಿಕಾರ ಶಕ್ತಿಯ ಪ್ರಾಬಲ್ಯವು ಗೊತ್ತಾಗುತ್ತದೆ. ಆತ್ಮನು ಮನಸ್ಸಿನ ಕೈಯಲ್ಲಿ ಸಿಕ್ಕ ನೆಂದರೆ, ಆ ಮರ್ಕಟ ಸ್ವರೂಪದ ಚಂಚಲಮನಸ್ಸು ಆತ್ಮನನ್ನು ಹ್ಯಾಗೆ ಹ್ಯಾಗೆ ಕುಣಿ ಸುವದೆಂಬದನ್ನು ನಾವು ಹೇಳಲಾರೆವು. ಕೇವಲ ಮನಸ್ಸಿನಕೈಯಲ್ಲಿ ಸಿಕ್ಕಿದ್ದ ನಮ್ಮನ್ನು ಮನಸ್ಸು ಹಾಗೆ ಎಳೆದಾಡುವದೆಂಬದರ ಅನುಭವವು ನ ಮ ಗೆ ಇದ್ದೇ ಇರುತ್ತದೆ. ಒಮ್ಮೆ ನಾವು ಉದ್ಯೋಗತತ್ಪರರಾಗುವೆವು, ಒಮ್ಮೆ ಉದಾಸೀನರಾಗುವೆವು; ಒಮ್ಮೆ ಲುಬ್ಬರಾಗುವೆವು, ಒಮ್ಮೆ ಉದಾರರಾಗುವೆವು, ಒಮ್ಮೆ ಸಂಸಾರಾಸಕ್ತಿಗೆ ಸಿಗುವೆವು, ಒಮ್ಮೆ ವೈರಾಗ್ಯವನ್ನು ತಾಳುವೆವು; ಒಮ್ಮೆ ಒಬ್ಬರ ವಿಷಯವಾಗಿ ಸ್ನೇಹ ತಾಳುವೆವು, ಒಮ್ಮೆ ದ್ವೇಷ ತಾಳುವೆವು. ಹೀಗೆ ಹಲವು ಭಾವನೆಗಳಿಂದ, ಹಾಗು ಆಯಾ ಭಾವನೆ ಗನುಸರಿಸಿದ ಕೃತಿಗಳಿಂದ ಆತ್ಮವು ವ್ಯಥೆಗೊಳ್ಳುತ್ತಿರುತ್ತದೆ; ಆದರೂ ಮನಸ್ಸಿನ ಅಧಿ ಕಾರವನ್ನು ಅತಿಕ್ರಮಿಸುವದು ಆತನಿಂದ ಆಗುವದಿಲ್ಲ.
ಮನಸ್ಸಿನ ಈ ಅಧಿಕಾರಶಕ್ತಿಯಂತೆ ಅದರ ವೇಗಶಕ್ತಿಯು ಅತರ್ಕವಾಗಿರುವದು.
ದೇಹವು ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಹೋಗಬೇಕಾದರೆ, ಅದಕ್ಕೆ ಸರಿ ಯಾದ ಮಾರ್ಗವು ಬೇಕಾಗುತ್ತದೆ. ಇದಲ್ಲದೆ ಅಲ್ಲಲ್ಲಿ ಹೊಳೆ ಹಳ್ಳಗಳಿದರೆ ಅವನು ದಾಟುವದಕ್ಕೆ ಪೂಲುಗಳು ಬೇಕಾಗುವವು. ಮಾರ್ಗದಲ್ಲಿ ಗಿಡಗಂಟಿಗಳಿದ್ದರೆ ತಗ್ಗು ದಿನ್ನೆ ಗಳಿದ್ದರೆ ಅಲ್ಲಿ ಇದರ ಗತಿಯು ಕುಂಠಿಸುತ್ತದೆ, ಮತ್ತು ಹುಲಿ, ಕರಡಿ ಮುಂತಾದ ಪ್ರಾಣಿಗಳು ಎದುರಿಗೆ ಬಂದರೆ ಮುಂದೆ ಹೋಗದೆ ಹಿಂದಕ್ಕೆ ತಿರಗುತ್ತದೆ, ಇದಲ್ಲದೆ ಇದು ಹೋಗುವದಕ್ಕೆ ಕಾಲಪಿಲಂಬವಾಗುತ್ತದೆ. ಮತ್ತು ಗಾಡಿ ಕುದುರೆ ಮುಂತಾದ ಸಾಧನ ಗಳು ಬೇಕಾಗುತ್ತವೆ. ನಡುವೆ ಬೇನೆ ಮುಂತಾದ್ದರ ಸಂಭವವಾದರೆ ಅಲ್ಲಿಯೇ ಕೆಲವು ಕಾಲ ನಿಲ್ಲಬೇಕಾಗುವದು; ಮತ್ತು ಯಾರಾದರೂ ಪ್ರತಿಬಂಧಿಸಿದರೆ, ಮುಂದೆ ಹೋಗುವ ಹಾಗಿಲ್ಲ. ಇವೇ ಮುಂತಾದ ಕಾರಣಗಳಿಂದ ಮಾರ್ಗಕ್ರಮಣದಲ್ಲಿ ದೇಹವು ಸ್ವತಂತ್ರ ವಾದದ್ದಲ್ಲೆಂದು ಸಹಜವಾಗಿ ತಿಳಿದುಬರುತ್ತದೆ. ಮನತ್ರ ಮಾತ್ರ ಹಾಗಲ್ಲ, ಮನವು ಅಲ್ಪ ಸಮಯದಲ್ಲಿಯೇ ಬಹಳ ದೂರ ಹೋಗುತ್ತದೆ. ಅದು ಯಾವ ಪ್ರತಿಬಂಧಕ್ಕೂ ಒಳಗಾಗುವದಿಲ್ಲ. ಇದು ತೇಜೋಮಯವಾಗಿರುವದರಿಂದ ಇದರ ಗತಿಯ, ತೇಜಸ್ಸಿನ ಗತಿಯೂ ಒಂದೇ ಪ್ರಕಾರದವಾಗಿರುವವು. ದೀಪವು ಕುಂಬಳಬೀಜದಷ್ಟು ಇದ್ದರೂ ಅದರ ಪ್ರಕಾಶವು ಬಹಳ ಪ್ರದೇಶಗಳನ್ನು ವ್ಯಾಪಿಸುತ್ತದೆಂಬದು ಸರ್ವರಿಗೂ ಅನುಭೂತ ವಾದ ವಿಷಯವೇ ಇರುತ್ತದೆ. ಇದೇ ಮೇರೆಗೆ ಮನವಾದರೂ ತಾನು ಅಲ್ಪವಿದ್ದರೂ ಅದರ ಪ್ರಕಾಶವು ಬಹಳ ಪ್ರದೇಶಗಳನ್ನು ವ್ಯಾಪಿಸುತ್ತದೆ. ಮತ್ತು ಸೂಕ್ಷ್ಮ ರೀತಿಯಾಗಿ ವಿಚಾರಿಸಿ ನೋಡಿದರೆ ಈ ಮನಕ್ಕೆ ಸೂರ್ಯಪ್ರಕಾಶವುಕೂಡಹತ್ತುವದಿಲ್ಲ. ಯಾಕಂದರೆ, ಸೂರ್ಯಪ್ರಕಾಶಕ್ಕೆ ನಿಲುಕದ ಪ್ರದೇಶವನ್ನೂ ಮನವು ವ್ಯಾಪಿಸುವದು. ಸರ್ವ ಜ ರಾದ ನಮ್ಮ ಪ್ರಾಚೀನಋಷಿಗಳ ಯೋಗಸಿದ್ಧಮನಸ್ಸೇ ಇದಕ್ಕೆ ಉದಾಹರಣವೆಂದು ಹೇಳಬಹುದು. ಮನುಷ್ಯನು ಯೋಗೂಸ್ತ್ರವನ್ನು ಚನ್ನಾಗಿ ಅಭ್ಯಾಸ ಮಾಡಿದಕೂಡಲೆ ಯೋಗಜಜ್ಞಾನವೆಂಬದೊಂದು ಜಾ ನವು ಅವನಲ್ಲಿ ಹುಟ್ಟುತ್ತದೆ. ಅದು ವ್ಯವಹಾರ ಜ್ಞಾನಕ್ಕೂ, ಶಾಸ್ತ್ರಜ್ಞಾನಕ್ಕೂ ಭಿನ್ನವಾಗಿರುತ್ತದೆ. ವ್ಯವಹಾರಜ್ಞಾನ ಶಾಸ್ತ್ರಜ್ಞಾನ ಗಳಿಂದ ಪ್ರಾಪ್ತವಾಗದ್ದು, ಈ ಯೋಗಜಜ್ಞಾನದಿಂದ ಪ್ರಾಪ್ತವಾಗುತ್ತದೆ. ಉದಾಹ ರಣಾರ್ಥ ಸೌಭರಿಯೆಂಬಋಷಿಯು ಅಷಾ »ಂಗಯೋಗದಲ್ಲಿ ಪಾರಂಗತನಾಗಿದ್ದದ್ದು , ಪ್ರಸಿ ದ್ದವಾಗಿರುವದು. ಆತನು ತನ್ನ ಆ ಯೋಗಜಜಾ ನದ ಬಲದಿಂದ ವಿಚಾರಿಸಿನೋಡಲು, ಒಂದುಸಾವಿರ ಜನ್ಮಗಳು ಅತಿಕ್ರಮಿಸಿ ಹೋದಮೇಲೆ ತನಗೆ ಮುಕ್ತಿಯಾಗುವದೆಂಬ ಸಂಗತಿಯು ತಿಳಿದುಬಂದಿತು. ಆಗ ಅವನು ಇಷ್ಟೊಂದುಜನ್ಮಗಳನ್ನು ಹೇಗೆ ಕ್ರಮಿ ಸಲಿ, ಜನ್ಮವನ್ನು ತೆಗೆದುಕೊಂಡಮೇಲೆ ಸಹಜವಾಗಿಯೇ ದೇಹಬರುವದು, ದೇಹವನ್ನು ಧರಿಸಿದಮೇಲೆ ಪುಣ್ಯ , ಪಾಪಗಳ ಮಿಶ್ರಣದಿಂದ ಸುಖ, ದುಃಖಗಳೆರಡೂ ಸಂಭವಿಸು ವವು . ಸುಖವನ್ನನುಭವಿಸಬಹುದು ; ಆದರೆ ದುಃಖವನ್ನನುಭವಿಸುವದು ಬಹಳಕಷ್ಟ, ಎಂದು ಆಲೋಚಿಸಿ , ಮುನಿಯು ತನ್ನಯೋಗಾಭ್ಯಾಸದ ಪ್ರಭಾವದಿಂದ ಒಂದುಸಾವಿರ ಸೌಭರಿಖುಷಿಯ ದೇಹಗಳನ್ನು ತೆಗೆದುಕೊಂಡನು. ಹಲವು ವರ್ಷಗಳಮೇಲೆ ಕ್ರಮ ದಿಂದಾಗಲಿ, ಒಂದೇಕಾಲದಲ್ಲಾಗಲಿ ಆ ದೇಹಗಳೆಲ್ಲ ಬಿದ್ದುಹೋದಕೂಡಲೆ ಮುಕ್ತಿಯನ್ನು ಹೊಂದಿದನು . ಆಗ ಆ ಸಮಯದಲ್ಲಿದ್ದ ಮಹಾನುಭಾವರಾದ ಋಷಿಗಳೆಲ್ಲ ಕೂಡಿ ಆತ ನಿಗೆ ಯೋಗವ್ಯಾಘ್ರಾನೆಂಬ ಹೆಸರುಕೊಟ್ಟರು.
ಹೀಗೆ ಮನಸ್ಸು ವೇಗಶಾಲಿಯಾಗಿರುವದಲ್ಲದೆ , ಅದು ಅತ್ಯಂತ ಉದ್ಯೋಗತತ್ಪರ
ವಾಗಿರುವದು . ಈ ಅಭಿಪ್ರಾಯವನ್ನು “ನಹಿ ಕಶ್ಚಿತ್ ಕ್ಷಣಮಪಿ ಜಾತುತಿಷ್ಯತ್ಯಕ ರ್ಮಕೃತ್” "ಅಂದರೆ "ಮನುಷ್ಯನು ಒಂದುಕ್ಷಣವಾದರೂ ಸುಮ್ಮನಿರದೆ ಕೆಲಸಮಾಡುತ್ತಿ ರುವನೆಂ"ದು ಭಗವದ್ಗೀತೆಯು ಹೇಳುತ್ತದೆ. ಇಲ್ಲಿ ಕೆಲಸಮಾಡತಕ್ಕದ್ದೆಂದರೆ ಮನವೇ. ಆತ್ಮನಲ್ಲ. ಒಂದು ಬ್ರಾಹ್ಮಣಸಮಾರಾಧನದಲ್ಲಿ ಅಡಿಗೆಮುಂತಾದ ಕೆಲಸಗಳನ್ನು ಮಾಡತಕ್ಕವರು ಬೇರೆಯಿದ್ದು, ಯಜಮಾನನು ನೋಡುತ್ತ ಸುಮ್ಮನೆಇರುತ್ತಾನೆ; ಆದರೆ ಆ ಪ್ರಸವುಉತ್ತಮರೀತಿಯಾಗಿ ಜರುಗಿದ ಕೀರ್ತಿಯೂ , ಕೆಟ್ಟರೆ ಅಪಕೀರ್ತಿಯೂ ಏನೂ ಕೆಲಸಮಾಡದಿದ್ದ ಯಜಮಾನನಿಗೆ ಬರುತ್ತವೆ. ಯಾಕಂದರೆ ಆ ಯಜಮಾನನು ಆಕೆಲಸವು ತನ್ನದೆಂದು ಭಾವಿಸಿರುತ್ತಾನೆ. ಆದ್ದರಿಂದ ಅದರಿಂದುಂಟಾಗುವ ಕೀರ್ತಿಗೂ, ಅಪಕೀರ್ತಿಗೂ ಅವನು ಪಾತ್ರನಾಗುತ್ತಾನೆ. ಈ ದೃಷ್ಯಾಂತದ ಮೇಲಿಂದ ಮನ ಮುಂತಾದ ಪರಿವಾರವುಮಾಡಿದ ಕೆಲಸದಫಲವು ಆತ್ಮ ನಿಗೆ ಆಗುತ್ತದೆ. ಮಾಡತಕ್ಕದ್ದು ಪರಿವಾರವೇ. ಫಲವು ಯಜಮಾನನಿಗೆ. ಆದ್ದರಿಂದ ಮೇಲಿನ ಭಗವದ್ಗೀತೆಯವಾಕ್ಯವು ಫಲಾಭಿಪ್ರಾಯದಿಂದ ಜೀವಾತ್ಮವನ್ನುದ್ದೇಶಿಸಿದರೂ ಅದಕ್ಕೆ ಮನವೇಗೋಚರವಾದ್ದೆಂದು