ವಿಷಯಕ್ಕೆ ಹೋಗು

ಭವತೀ ಕಾತ್ಯಾಯನೀ

ವಿಕಿಸೋರ್ಸ್ದಿಂದ

ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).

75893ಭವತೀ ಕಾತ್ಯಾಯನೀವೇಂಕಟೇಶ ತಿರಕೋ ಕುಲಕರಣಿ ಗಳಗನಾಥ

ಭವತೀ ಕಾತ್ಯಾಯನೀ

[ಸಂಪಾದಿಸಿ]

Page

ಪ್ರಸ್ತಾವನೆ

ನಮ್ಮ ಕನ್ನಡದಲ್ಲಿ ಎಲ್ಲಬಗೆಯ ಪುಸ್ತಕಗಳ ಕೊರತೆಯಿರುವಾಗ, ಹೆಣು ಮಕ್ಕಳ ವಾಚನಕ್ಕೆ ತಕ್ಕ ಪುಸ್ತಕಗಳ ಕೊರತೆಯಿರುವದೆಂದು ಬರೆಯುವದು ಅಪ್ರಾಸಂಗಿಕವೇ ಸರಿ. ಈ ಕೊರತೆಯನ್ನು ಅಂಶತಃ ದೂರಮಾಡುವಉದ್ದೇಶದಿಂದ ನಾವು ಈ ಪುಸ್ತಕವನ್ನು ಬಹು ಆಸ್ಥೆಯಿಂದ ಬರೆದಿರುವೆವು. ಈ ಪುಸ್ತಕವನ್ನು ಬರೆಯಲಿಕ್ಕೆ ಶ್ರೀಮದ್ಬಹ್ಮನಿಷ್ಠ ಸಾಂಬದೀಕ್ಷಿತ ಕಾಶೀಕರ ಕೃತ “ಶ್ರೀಯಾಜ್ಞವಲ್ಕ್ಯಚರಿತ,” ಮಹಾರಾಷ್ಟ್ರದೊಳಗಿನ “ಮೈತ್ರೇಯಿ” ಎಂಬ ಪುಸ್ತಕ ಇವು ಸಹಾಯಕಾರಿಗಳಾಗಿದ್ದರೂ ಮುಖ್ಯವಾಗಿ ೪ ನೆಯ ಪ್ರಕರಣವು ಶ್ರೀ ಗುರುಪ್ರೇರಣೆಯಿಂದಲೇ ಬರೆಯಲ್ಪಟ್ಟಿದ್ದೆಂದು ನಾವು ಸೂಚಿಸದೆಯಿರಲಾರೆವು. ಶ್ರೀ ಭಗವತೀ-ಕಾತ್ಯಾಯನಿಯನ್ನು ಅನುಕರಿಸುವಂಥ ಮಾತೃ-ಭಗಿನೀವರ್ಗವು ಕನ್ನಡಿಗರಲ್ಲಿ ಹೆಚ್ಚಲೆಂತಲೂ, ನಮ್ಮ ಚಿರಂಜೀವಿಗಳಾದ ಸೌಭಾಗ್ಯಕಾಂಕ್ಷಿಣಿಯರು ಸುಬ್ಬಕ್ಕ, ರೇಣಕ್ಕ ಇವರು ಸದ್ಗುಣಿಗಳಾಗುವಂತೆ ಅನುಗ್ರಹಿಸಬೇಕೆಂತಲೂ ಆ ಭಗವತಿಯನ್ನೇ ಭಕ್ತಿಯಿಂದ ಪ್ರಾರ್ಥಿಸುವೆವು.

ಈ ಪುಸ್ತಕದ ಕಡೆಯ ಫಾರಮನ್ನು ನಜರಚೂಕಿಯಿಂದ ತಪ್ಪುಗಳನ್ನು ತಿದ್ದದೆ ಹಾಗೇ ಹಾಕಿದ್ದರಿಂದ, ಮುಖ್ಯವಾಗಿ ಕಡೆಯ ಪಾನಿನಲ್ಲಿ ಬಹಳ ತಪ್ಪುಗಳು ಉಳಿದವೆ. ಅವುಗಳಲ್ಲಿ ದೊಡ್ಡ ತಪ್ಪುಗಳ ತಿದ್ದುಪಡೆಯನ್ನು ಮಾತ್ರ ಕೆಳಗೆ ಕೊಟ್ಟಿರುತ್ತದೆ. ಅವನ್ನಷ್ಟು, ವಾಚಕರು ದಯಮಾಡಿ ಲಕ್ಷದಲ್ಲಿಟ್ಟು ಓದಬೇಕೆಂದು ಪ್ರಾರ್ಥಿಸುವೆವು.

ಪುಟ.
೩೬
೩೯
೩೯
೩೯
೩೯
೪೦

ಸಾಲು.
೨೩
೧೫
೨೩
೨೬
೨೯

ಅಶುದ್ಧ.
ತರುಣೋಪಾಯ
ದೈವತವು
ಸಮೃದ್ಧಿಯ
ಕರ್ತವ್ಯವೆಂದು
ಮಾಯಾಮ್ಮೊಹಿರ
ಒಬ್ಬನೊಬ್ಬ

ಶುದ್ಧ.
ತರುಣೋಪಾಯ
ದೈವತವು
ಸಮಾದಿಯ
ಕರ್ತವ್ಯವೆಂದು
ಮಾಯಾಮೋಹಿತ
ಒಬ್ಬನೊಬ್ಬ

ಹಾವೇರಿ.
೧೮೪೧ ಚೈತ್ರ ವದ್ಯ ೫.
ಕನ್ನಡಿಗರ ಸೇವಕ,
ಕುಲಕರಣಿ.(ಗಳಗನಾಥ)
ಶ್ರೀ ಯಾಜ್ಞವಲ್ಕ್ಯ ಗುರುಭ್ಯೋನಮಃ

ಭಗವತೀ-ಕಾತ್ಯಾಯನೀ.

೧ನೆಯ ಪ್ರಕರಣ.

ಯೋಗೀಶ್ವರನು |

वंदेऽहं मंगलात्मानं भास्वंतं वेदविप्रहं ॥

याज्ञवल्क्यं मुनिश्रेष्ठं जिष्णुं हरिहरप्रभु ॥

ಪೂರ್ವದಲ್ಲಿ ದೇವರಾತನೆಂಬ ಹೆಸರಿನ ತಪೋಧನನಾದ ಬ್ರಾಹ್ಮಣನೊಬ್ಬನು ಇದ್ದನು. ಆತನು ಪರಮ ಶಿವಭಕ್ತನು , ಅನ್ನದಾನತತ್ಪರನು . ಆತನು ಪುತ್ರೇಚ್ಛೆಯಿಂದ ಕೇದಾರ ಕ್ಷೇತ್ರದಲ್ಲಿ ಘೋರತಪಸ್ಸನ್ನಾಚರಿಸಲು, ಸಾಕ್ಷಾತ್ ಪರಮೇಶ್ವರನೇ ಪುತ್ರರೂಪದಿಂದ ಆತನ ಉದರದಲ್ಲಿ ಜನಿಸಿದನು. ದೇವರಾತನು ಮಗನಿಗೆ ಯಾಜ್ಞವಲ್ಕ್ಯನೆಂದು ಹೆಸರಿಟ್ಟನು. ಪರಮತೇಜಸ್ವಿಯಾದ ಯಾಜ್ಞವಲ್ಕ್ಯನು ಲೋಕಾನಂದಕರನಾಗಿ ಬೆಳೆಯುತ್ತಿರಲು, ದೇವರಾತನು ಯಥಾವಿಧಿ ಆತನ ಮೌಂಜೀಬಂಧನವನ್ನು ಮಾಡಿದನು. ಮೇಖಲಾ, ಕೃಷ್ಣಾ ಜಿನಾದಿ ಬ್ರಹ್ಮಚರ್ಯಲಕ್ಷಣಗಳಿಂದ ಯುಕ್ತನಾಗಿ ಆತನು ವೇದಪ್ರತಿಪಾದಿತವಾದ ಬ್ರಹ್ಮಚರ್ಯವ್ರತವನ್ನು ಆಚರಿಸಹತ್ತಿದನು. ಪಾತಃಸ್ನಾನ, ಸಂಧ್ಯಾವಂದನ, ಅಗ್ನಿಕಾರ್ಯ, ಆಚಾರ್ಯೋಪಾಸನಾದಿ ಕರ್ಮಗಳನ್ನು ಮಾಡುತ್ತ, ಗುರುಕುಲವಾಸದಿಂದ ವೇದಾಧ್ಯಯನವನ್ನು ಮಾಡಹತ್ತಿದನು. ಮೊದಲು ಬಾಷ್ಕಲನೆಂಬ ಋಷಿಯಬಳಿಯಲ್ಲಿ ಆ ಗುರುಸೇವಾತತ್ಪರನ ಋಗ್ವೇದಾಧ್ಯಯನವು ಸಂಪೂರ್ಣವಾಗಿ ಆಯಿತು. ಆಮೇಲೆ ಜೈಮಿನಿಯಬಳಿಯಲ್ಲಿ ಆತನು ಸಾಮವೇದದ ಸಹಸ್ರಶಾಖೆಗಳ, ಹಾಗು ಅಥರ್ವಣವೇದದ ಅಧ್ಯಯನವನ್ನು ಮಾಡಿದನು. ಆ ಮೇಲೆ ಯಜುರ್ವೇದಾಧ್ಯಯನಮಾಡುವ ಉತ್ಸುಕತೆಯಿಂದ ಆ ಮಹಾವಿದ್ಯಾಂಸನಾದ ಯಾಜ್ಞವಲ್ಕ್ಯನು ವೈಶಂಪಾಯನರ ಬಳಿಯಲ್ಲಿ ಬ್ರಹ್ಮಚರ್ಯದಿಂದ ಯಜುರ್ವೇದಾಧ್ಯಯನವನ್ನು ಮಾಡಿದನು. ಶಾಂತಿ, ಇಂದ್ರಿಯನಿಗ್ರಹ, ವಿರಕ್ತಿ, ಸಹನಶೀಲತೆ, ಗುರುಸೇವಾ ತತ್ಪರತೆ, ನಿರಹಂಕಾರಾದಿಗುಣಗಳು ಶ್ರೀ ಯಾಜ್ಞವಲ್ಕ್ಯರಲ್ಲಿ ಮೂರ್ತಿಮತ್ತಾಗಿ ಇದ್ದದ್ದರಿಂದ, ಅಷ್ಟಸಿದ್ದಿಗಳು ಅವರನ್ನು ಸದಾಸೇವಿಸುತ್ತಲಿದ್ದವು. ವೈಶಂಪಾಯನರ ಬಳಿಯಲ್ಲಿ ಮುನ್ನೂರಾಅರವತ್ತು ಜನಶಿಷ್ಯರು ಇದ್ದರು. ಅವರಲ್ಲಿ ಯಾಜವಲ್ಕ್ಯರು ಪರಮತೇಜಸ್ಸಿಗಳಾಗಿ ನಕ್ಷತ್ರಗಳ ಮಧ್ಯದಲ್ಲಿ ಚಂದ್ರನಂತೆ ಒಪ್ಪುತ್ತಲಿದ್ದರು. 

2

ಹೀಗಿರುವಾಗ ಯಾಜ್ಞವಲ್ಕ್ಯ ರಿಗೂ, ವೈಶಂಪಾಯನರಿಗೂ ವಿವಾದವುಂಟಾಯಿತು.

ವಿವಾದದ ಕಾರಣಗಳು ಬೇರೆಬೇರೆ ಪುರಾಣಗಳಲ್ಲಿ ಬೇರೆಬೇರೆ ವಿಧವಾಗಿ ಹೇಳಲ್ಪಟ್ಟರುವವು, ಈ ಸಂಬಂಧದಿಂದ ಭಾಗವತ, ಹಾಗು ವಿಷ್ಣು ಪುರಾಣಗಳಲ್ಲಿ ಹೇಳಿರುವದರ ಸಾರಾಂಶವೇನಂದರೆ-ವ್ಯಾಸಶಿಷ್ಯರಾದ ವೈಶಂಪಾಯನರು ತಮಗೆ ದೊರೆತ ಯಜುರ್ವೇದದ ಇಪ್ಪತ್ತೇಳು ಶಾಖೆಗಳನ್ನು ಮಾಡಿ, ಶಿಷ್ಯರಿಗೆ ಅಧ್ಯಯನಮೂಡಿಸಿದರು. ಆ ಶಿಷ್ಯರಲ್ಲಿ ಯಾಜ್ಞವಲ್ಕ್ಯರು ಇದ್ದರು. ಅವರು ಅತ್ಯಂತಗುರುಭಕ್ತಿಪರಾಯಣರಾಗಿದ್ದರು. ಮುಂದೆ ಒಂದುದಿವಸ ಎಲ್ಲ ಋಷಿಗಳು ಕೂಡಿ-" ಇಂದು ಎಲ್ಲರೂ ಮೇರುಪರ್ವತಕ್ಕೆ ಹೋಗ ಬೇಕು, ಇದಕ್ಕೆ ಯಾರಾದರೂ ತಪ್ಪಿದರೆ ಅವರಿಗೆ ಏಳುದಿನ ಬ್ರಹ್ಮಹತ್ಯೆಯ ದೋಷವು ಘಟಿಸುವದು ” ಎಂದು ನಿಯಮಮಾಡಿಕೊಂಡರು. ಈ ನಿಯಮವನ್ನು ವೈಶಂಪಾಯನರು ತಪ್ಪಿ ಬ್ರಹ್ಮಹತ್ಯೆಗೆ ಗುರಿಯಾದದ್ದಲ್ಲದೆ, ಅವರು ಕಾರಣವಶಾತ್ ಗಡಿಬಿಡಿಯಿಂದ ಹೋಗುತ್ತಿರುವಾಗ ಪ್ರಾಮಾದದಿಂದ ತಮ್ಮ ತಂಗಿಯ ಸಣ್ಣ ಕೂಸನ್ನು ತುಳಿಯಲು, ಕೂಡಲೆ ಅದರ ಪ್ರಾಣೋತ್ಕ್ರಮಣವಾಗಿ ಬಾಲಹತ್ಯೆಯ ದೋಷವೂ ಘಟಿಸಿತು. ಆಗ ವೈಶಂಪಾಯನರು ತಮ್ಮ ಶಿಷ್ಯರನ್ನೆಲ್ಲ ಕರೆದು “ನಮ್ಮಿಂದ ಬ್ರಹ್ಮಹತ್ಯೆಯ ಪಾತಕವು ಒದಗಿರುವದು. ಅದರ ನಾಶಕ್ಕಾಗಿ ನೀವೆಲ್ಲರೂ ತಪಸ್ಸನ್ನಾಚರಿಸಬೇಕು,” ಎಂದು ಆಜ್ಞಾಪಿಸಿದರು. ಅದನ್ನು ಕೇಳಿ ಯಾಜ್ಞವಲ್ಕ್ಯರು-"ಇಂಥ ತಪಸ್ಸನ್ನಾಚರಿಸಲಿಕ್ಕೆ ಇವರು ಸಮರ್ಥರಲ್ಲ, ಸುಮ್ಮನೆ ಇವರಿಗೆ ಆಯಾಸವನ್ನು ಯಾಕೆ ಉಂಟುಮಾಡುವಿರಿ ? ನಾನೊಬ್ಬನೇ ತಪಸ್ಸನ್ನಾಚರಿಸಿ, ನಿಮ್ಮ ಬ್ರಹ್ಮಹತ್ಯೆಯ ಪಾತಕವನ್ನು ಕಳೆಯುವೆನು” ಅನ್ನಲು, ಶಿಷ್ಯನ ಈ ಔದ್ಧತ್ಯಕ್ಕಾಗಿ ವೈಶಂಪಾಯನರಿಗೆ ಕೋಪವುಂಟಾಯಿತು. ಅವರು ಯಾಜ್ಞವಲ್ಕ್ಯರನ್ನು ಕುರಿತು- "ನೀನು ಇವರನ್ನು ಅಸಮರ್ಥರೆಂದು ಹೀಯಾಳಿಸುವದರಿಂದ ವಿಪ್ರಾವಮಾನಕನಿರುತ್ತೀ; ಮೇಲಾಗಿ ತನ್ನ ಆಜ್ಞಾಭಂಗ ಮಾಡಿರುತೀ; ಆದ್ದರಿಂದ ಇಂಥ ಶಿಷ್ಯನು ನನಗೆ ಬೇಡ. ನೀನು ನನ್ನಲ್ಲಿ ಮಾಡಿದ ಅಧ್ಯಯನವನ್ನು ನನಗೆ ಒಪ್ಪಿಸು,”ಎಂದು ನಿಷ್ಟುರವಾಗಿ ನುಡಿದರು. ಅದಕ್ಕೆ ಯಾಜ್ಞವಲ್ಕ್ಯರು-" ನಾನು ತಮ್ಮ ಮೇಲಿನ ಉತ್ಕಟಭಕ್ತಿಯಿಂದ ಹೀಗೆ ನುಡಿದೆನಲ್ಲದೆ, ವಿಪ್ರಾವಮಾನಕ್ಕಾಗಿ ನುಡಿದವನಲ್ಲ. ನಾನು ನಿರಪರಾಧಿಯಿದ್ದು, ತಾವು ಹೀಗೆ ನುಡಿಯುವದರಿಂದ ನಿಮ್ಮ ವೇದವನ್ನು ನೀವು ತೆಗೆದುಕೊಳ್ಳಿರಿ,ಎಂದು ಗುರುಗಳನ್ನು ನಮಸ್ಕರಿಸಿ, ವೇದವ ವಮನಮಾಡಿ ಹೊರಟುಹೋದರು. ಹೀಗೆ ರಕ್ತರೂಪದಿಂದ ವಮನಮಾಡಿದ ವೇದವನ್ನು ಗುರುಗಳಾದ ವೈಶಂಪಾಯನರ ಆಜ್ಞೆಯಂತೆ ಉಳಿದ ಶಿಷ್ಯರು ತಿತ್ತಿರಿಪಕ್ಷಿಗಳ ರೂಪದಿಂದ ಗ್ರಹಣಮಾಡಲು, ತೈತ್ತಿರೀಯವೆಂಬ ಉತ್ತಮಶಾಖೆಯು ಉಂಟಾಯಿತು. ಮುಂದೆ ಯಾಜ್ಞವಲ್ಕರು ಸೂರ್ಯನ ಆರಾಧನೆಯಿಂದ ಶುಕ್ಲಯಜುರ್ವೇದವನ್ನು ಸಂಪಾದಿಸಿದರು.

ಇದು ವಿಷ್ಣುಪುರಾಣ-ಭಾಗವತಗಳಲ್ಲಿಯ ಸಂಗತಿಯಾಯಿತು. ಇನ್ನು ಮಹಾ ಭಾರತದ ಶಾಂತಿಪರ್ವದ ಮೋಕ್ಫಧರ್ಮದ ೩೧೮ನೆಯ ಅಧ್ಯಾಯದಲ್ಲಿ ವಿವಾದದ ಕಾರಣವು ಬೇರೆ ವಿಧವಾಗಿ ಹೇಳಲ್ಪಟ್ಟಿದೆ. ಆ ಕಾರಣವನ್ನು ಸ್ವತಃ ಯಾಜ್ಞವಲ್ಕ್ಯರೇ

3

ಜನಕರಾಜನಮುಂದೆ ಹೇಳಿದ್ದು ಹೇಗೆಂದರೆ-"ಜನಕರಾಜನೇ, ನಿನ್ನ ತಂದೆಯು ಯಜ್ಞ ಮಾಡಿದಾಗ, ನನ್ನ ಸೋದರಮಾವಂದಿರಾದ ವೈಶಂಪಾಯನರ ಸಲುವಾಗಿ ನಾನು ಹೋಗಿ ಯಜ ವನ್ನು ಸಾಂಗಮಾಡಿದೆನು. ಆಗ ದೇವಲಋಷಿಯ ಸಾಕ್ಷಿಯಿಂದ ನಾನು ಅರ್ಧ ದಕ್ಷಿಣೆಯನ್ನು ತಕ್ಕೊಳ್ಳಲು, ಆ ದಕ್ಷಿಣೆಯ ಸಲುವಾಗಿ ವೈಶಂಪಾಯನರು ನನ್ನ ಸಂಗಡ ಜಗಳವಾಡಿದರು. ಆಗ ನಿನ್ನ ತಂದೆಯೂ, ಸುಮಂತು, ಪೈಲ, ಜೈಮಿನಿ ಮೊದಲಾದ ಋಷಿಗಳೂ ನನ್ನನ್ನು ಬಹುಮಾನಪೂರ್ವಕ ಸಮಾಧಾನಪಡಿಸಿದರು. ಆಮೇಲೆ ನಾನು ಸೂರ್ಯನನ್ನು ಆರಾಧಿಸಿದೆನು. ಆತನ ಪ್ರಸಾದದಿಂದ ಪ್ರತ್ಯಕ್ಷ ಸರಸ್ವತಿಯು ನನ್ನ ಮುಖದಲ್ಲಿಪ್ರವೇಶಿಸಿದಳು. ಆಮೇಲೆ ಹದಿನೈದು ಶಾಖೆಗಳನ್ನೂ, ಶತಪಥಬ್ರಾಹ್ಮಣವನ್ನೂ, ರಹಸ್ಯಯುಕ ಸರ್ವವೇದಜಾತವನ್ನೊ ಶಿಷ್ಯರಿಗೆ ಉಪದೇಶಿಸಿ, ಆ ವಿದ್ಯೆಯು ಸುಪ್ರತಿಷ್ಠ ತವಾದಮೇಲೆ ನಾನು ಅಧ್ಯಾತ್ಮಚಿಂತನದಲ್ಲಿ ತೊಡಗಿದೆನು.”

ಇವುಗಳ ಹೊರತು ಸ್ಕಂದಪುರಾಣದ ಗೋದಾವರೀಖಂಡದ ವಿರಜಾಮಾಹಾತ್ಮ್ಯ

ದಲ್ಲಿರುವ ಕಥೆಯ ತಾತ್ಪರ್ಯವೇನಂದರೆ, -- ಯಜ್ಞವಲ್ಕ್ಯರು ತಮ್ಮಗುರುಗಳ ಬಳಿಯಲ್ಲಿ ಅಧ್ಯಯನಮಾಡುತಿರುವಾಗ, ಗುರುಗಳ ಆಶ್ರಮದ ಸಮೀಪದಲ್ಲಿ ದ್ರುಮನೆಂಬ ಅರಸನ ರಾಜಧಾನಿಯು ಇತ್ತು. ಆ ಅರಸನಿಗೆ ಪ್ರತಿನಿತ್ಯ ಫಲಮಂತ್ರಾಕ್ಷತೆಯು ಶಿಷ್ಯಮುಖಾಂ ತರವಾಗಿ ಸರತಿಯಿಂದ ಮುಟ್ಟುತ್ತಿತ್ತು. ಒಂದುದಿನ ಯಾಜ್ಞವಲ್ಕ್ಯರ ಸರತಿಯು ಬರ ಲು, ಅವರು ಫಲಮಂತ್ರಾಕ್ಷತೆಯನ್ನು ತಕ್ಕೊಂಡು ಅರಮನೆಗೆ ಹೋದರು. ಆಗ ಅರಸ ನಿದ್ದಿಲ್ಲ, ರಾಜಸ್ತ್ರೀಯರು ಕುಳಿತುಕೊಂಡಿದ್ದರು. ಅವರು ಯಾಜ್ಞವಲ್ಕ್ಯರ ಅನಾದರ ಮಾಡಿ, ಇವನಾವನೋ ಜಟಾಧಾರಿಯಾದ ನಪುಂಸಕನು ಬಂದಿರುವನೆಂದು ತಮ್ಮೊಳಗೆ ಉಪಹಾಸಮಾಡುತ್ತ, ಫಲಮಂತ್ರಾಕ್ಷತೆಯನ್ನು ತಕ್ಕೊಳ್ಳದೆ ಹಾಗೇ ಒಳಗೆ ಹೊರಟುಹೋ ದರು. ಇದನ್ನು ನೋಡಿ ಋಷಿವರ್ಯರಾದ ಯಾಜ್ಞವಲ್ಕ್ಯರು ಅಶ್ವಶಾಲೆಯೊಳಗಿನ ಖಂಬಗಳ ಮೇಲೆ --"ಫಲಿನೋಯೇ ಫಲೈರ್ಹಿನಾಃ ಪುಷ್ಪರ್ಹೀನಾಶ್ಚ ಪುಷ್ಪಣಃ ಮತ್ಪ್ರಸಾದೇನ ತೇಸರ್ವೇ ಸಫಲಾಶ್ಚ ಭವಂತ್ವಿತಿ ”|| ಎಂಬ ಆಶೀರ್ವಚನಪೂರ್ವಕ ವಾಗಿ ಮಂತ್ರಾಕ್ಷತೆಯನ್ನುಚಲ್ಲಿದರು. ಕೂಡಲೆ ಆ ಕಂಬಗಳೆಲ್ಲ ಪುಷ್ಟಫಲ ಸಂಪನ್ನ ವಾದವು. ಬಳಿಕ ಯಾಜ್ಞವಲ್ಕ್ಯರು ಗುರ್ವಾಶ್ರಮಕ್ಕೆ ತಿರುಗಿಹೋದರು. ಮುಂದೆ ಕೆಲವು ಹೊತ್ತಿನಮೇಲೆ ಅರಸನು ಬರಲು, ಈ ಅಲೌಕಿಕ ಚಮತ್ಕಾರವು ಆತನ ಕಣ್ಣಿಗೆ ಬಿದ್ದಿತು. ಆಗ ಆತನು ಇಂದು ಇಲ್ಲಿಗೆ ಯಾರು ಬಂದಿದ್ದರೆಂದು ಕೇಳಲು, ಸ್ತ್ರೀಯರು ನಡೆದ ಸಂಗತಿಯನ್ನೆಲ್ಲ ಹೇಳಿದರು . ಅದನ್ನು ಕೇಳಿ ಅರಸನು ಸಾನಂದಾಶ್ಚರ್ಯ ಗೊಂಡನು. ಕೂಡಲೆ ಆತನು ವೈಶಂಪಾಯನರಬಳಿಗೆ- “ ಇಂದು ನಮ್ಮಮನೆಗೆ ಬಂದ ಶಿಷ್ಯನನ್ನೇ ದಿನಾಲು ಕಳಿಸುತ್ತ ಹೋಗಬೇಕು, ” ಎಂದು ಹೇಳಿಕಳಿಸಿದನು. ಅರಸನ ಈ ಸಾಚನೆಯಂತೆ ನಡೆದುಕೊಳ್ಳುವದಕ್ಕಾಗಿ ಯಾಜ್ಞವಲ್ಕ್ಯರನ್ನು ಆಜ್ಞಾಪಿಸ ಬೇಕೆಂದು ವೈಶಂಪಾಯನರು ಅವರನ್ನು ಕರೆಸಿ, ಅರಸನ ಏಚಾರವನ್ನು ಅವರಿಗೆ ಹೇಳಿ

"ಪ್ರತಿನಿತ್ಯ ಅರಮನೆಗೆ ನೀನೇಹೋಗಬೇಕೆಂ"ದು ಕಟ್ಟುನೊಡಿದರು. ಅದಕ್ಕೆ ಯಜ್ಞ
4

ವಲ್ಕ್ಯರು-“ನಾನು ದಿನಾಲು ಹೋಗುವದಿಲ್ಲ. ನನ್ನ ಸರತಿಬಂದಾಗ ಹೋಗುವೆನು" ಎಂದು ಉತ್ತರಕೊಟ್ಟರು. ಅದನ್ನು ಕೇಳಿ ವೈಶಂಪಾಯನರು ಕೋಪಗೊಂಡು-- "ಆಮ್ನಾಯಂ ದೇಹಿ ಮೇ ಶೀಘ್ರಂ ಯದಿ ತತ್ರ ನ ಗಚ್ಛಸಿ| ನಿರ್ಗಚ್ಚ ಭವನಾದಸ್ಮಾ ನ್ನೃಶಂಸ ಗುರುನಿಂದಕ || ” ಅಂದರೆ, “ ಅರಸನ ಬಳಿಗೆ ಹೋಗದಿದ್ದರೆ ನನ್ನ ವೇದವನ್ನು ನನಗೆ ತಿರುಗಿ ಕೊಟ್ಟು ಇಲ್ಲಿಂದ ಹೊರಟುಹೋಗು; ಯಾಕಂದರೆ ನೀನು ಗುರ್ವಾಜ್ಞೆ ಯನ್ನು ಮೀರುವವನೂ, ಗುರುನಿಂದಕನೂ ಆಗಿರುತ್ತೀ ” ಎಂದು ನುಡಿದರು. ಆಗ ಯಜ್ಞವಲ್ಕ್ಯರು ರಕ್ತರೂಪದಿಂದ ವೇದವನ್ನು ಕಾರಿ, ಗುರುವನ್ನು ನಮಸ್ಕರಿಸಿ ಹೊರ ಟುಹೋದರು. ಉಳಿದ ಶಿಷ್ಯರು ಗುರುವಿನ ಆಪ್ಪಣೆಯಿಂದ ತಿತ್ತಿರಿರೂಪಗಳನ್ನು ಧರಿಸಿ ಆ ಕಾರಿಕೆಯನ್ನು ಭಕ್ಷಿಸಿದರು. ಆದ್ದರಿಂದ ತೈತ್ತಿರೀಯಶಾಖೆಯು ಉತ್ಪನ್ನವಾಯಿತು. ಮುಂದೆ ಯಜ್ಞವಲ್ಕ್ಯರು ವಿರಜಾತೀರ್ಥಕ್ಕೆ ಬಂದು ಶಿವನನ್ನು ಆರಾಧಿಸಿದರು. ಆಗ ಶಿವನು ಪ್ರತ್ಯಕ್ಷನಾಗಿ ಯಾಜ್ಞವಲ್ಕ್ಯರನ್ನು ಸೂರ್ಯನ ಬಳಿಗೆ ಕಳಿಸಿದನು. ಅಲ್ಲಿ ಹೋಗಿ ಯಜ್ಞವಲ್ಕ್ಯರು ಋಗಾದಿ ಯಾವತ್ತು ವೇದಗಳ ಅಧ್ಯಯನ ಮೂಡಿದರು.

ಈ ವಿವಾದದ ರಹಸ್ಯವು ವಿಚಾರಣೀಯವಾಗಿರುತ್ತದೆ; ಇತ್ತ ವೈಶಂಪಾಯನರು

ಸಾಮನ್ಯರಲ್ಲ ; ಬ್ರಹ್ಮಜ್ಞರು, ಶಾಂತರು, ವ್ಯಾಸಶಿಷ್ಯರು. ಅತ್ತ ಯೊಜ್ಞವಲ್ಕ್ಯರೂ ಸಾಮನ್ಯರಲ್ಲ ; ಮಹಾಜ್ಞಾನಿಗಳು, ಅತ್ಯಂತ ತೇಜಸ್ವಿಗಳು, ತಮ್ಮ ಆಶೀರ್ವಚನದಿಂದ ನಿರ್ಜೀವವಸ್ತುವನ್ನು ಸಜೀವಗೊಳಿಸುವಂಥ ಮಹಾಮಹಿಮೆಯುಳ್ಳವರು. ಅಂದಬಳಿಕ ಇಂಥವರಲ್ಲಿ ವಿವಾದವು ಉತ್ಪನ್ನವಾದ ಬಗೆಯೇನು ? ಲೋಕಕಲ್ಯಾಣಕ್ಕಾಗಿ ಪ್ರಕಟ ವಾಗುವ ಸತ್ಪುರುಷರೂಪ ವಿಭೂತಿಗಳ ಪ್ರತಿಒಂದು ಕೃತಿಯಿಂದ - ಆಕೃತಿಯು ಶ್ಲಾಘ್ಯ ವಿರಲಿ, ಅಶ್ಲಾ‍ಘ್ಯವಿರಲಿ ಲೋಕಕಲ್ಯಾಣವೇ ಆಗುವದೆಂದು ಹೇಳಬೇಕಾಗುತ್ತದೆ. ಅಜ್ಞಾ ನಿಗಳುಮಾತ್ರ ಇದನ್ನು ಎಣಿಸದೆ ವಿಕಲ್ಪವನ್ನು ಭಾವಿಸುವರು. ಮಹಾಮಹಾಋಷಿಗಳು ಪ್ರತ್ಯಕ್ಷ ದೇವರನ್ನು ಶಪಿಸಿ ಲೋಕಕಲ್ಯಾಣವನ್ನುಂಟುಮೂಡಿರುವರು. ಭಗವಂತನ ದಶಾ ವತಾರಗಳೇ ಇದಕ್ಕೆ ಸಾಕ್ಷಿಯಾಗಿರುವವು. ಸತ್ಪುರುಷರ ನಿಗ್ರಹಾನುಗ್ರಹಗಳಂತ, ಅವರ ಸ್ನೇಹ-ಕಲಹಗಳೆರಡೂ ಕಲ್ಯಾಣಕಾರಕಗಳಾಗಿಯೇ ಇರುವವೆಂಬದನ್ನು ಮರೆಯಲಾ ಗದು. ಮಹಾತ್ಮರಾದ ವೈಶಂಪಾಯನರು ಬ್ರಹ್ಮಹತ್ಯಾದೋಷದಿಂದ ವ್ಯಾಕುಲಚಿತ್ತರಾಗಿ ಶಿಷ್ಯನನ್ನು ನಿಗ್ರಹಿಸಿದಂತೆ ತೋರಿದರೂ, ಅದರಿಂದ ಶಿಷ್ಯನ ನಿಜವಾದ ತೇಜೋವೈಭವವು ಪ್ರಕಟವಾಗಿ, ಅದು ಜಗತ್ತಿನ ಕಲ್ಯಾಣಕ್ಕೇ ಕಾರಣವಾದದ್ದರಿಂದ ಇದೊಂದು ಈಶ್ವರೀ ಸಂಕಲ್ಪವೆಂತಲೇ ಒಪ್ಪಬೇಕಾಗುವದು. ಇರಲಿ. ಯೋಗೀಶ್ವರರಾದ ಯಾಜ್ಞವಲ್ಕ್ಯರು ಗುರ್ವಾಜ್ಞೆಯಂತೆ ಯಜುರ್ವೇದವನ್ನು ಕಾರಿ, ಸೂರ್ಯನಾರಾಯಣನನ್ನು ಕುರಿತು ತಪ ಸ್ಪನ್ನಾಚರಿಸಲು, ಆ ಲೋಕಚಕ್ಷುವು ಪ್ರಸನ್ನನಾಗಿ- "ಎಲೈ ಬ್ರಾಹ್ಮಣಶ್ರೇಷನೇ, ನಿನಗೆ ಕಲ್ಯಾಣವಾಗಲಿ. ನಿನ್ನ ತಪಸ್ಸು ಸಿದ್ಧವಾಗಿರುವದು. ನಿನಗೆ ಬೇಕಾದದ್ದನ್ನು ಬೇಡಿಕೋ” ಎಂದು ಹೇಳಿದನು. ಆಗ ಯಾಜ್ಞವಲ್ಕ್ಯರು ಸೂರ್ಯನಾರಾಯಣನನ್ನು ಪೂಜಿಸಿ ಕೈ

ಜೋಡಿಸಿ ನಿಂತುಕೊಂಡು-- "ನೀನು ವರಪ್ರದಾನವೂಡುವದಾದರೆ, ನಮ್ಮ ಗುರುಗಳಾದ 
5

ವೈಶಂಪಾಯನರಿಗೆ ಯಾವದು ಗೊತ್ತಿರುವದಿಲ್ಲವೋ, ಯಾವದರ ಹೊರತು ಯಾವ ಶ್ರೇಷ ಕೃತ್ಯವೂ ಸಿದ್ದವಾಗುವದಿಲ್ಲವೋ ಅಂಥ ಯಜುರ್ವೇದವನ್ನು ನನಗೆ ದಯಪಾಲಿಸು.” ಎಂದು ಬೇಡಿಕೊಂಡರು. ಆಗ ಅಶ್ವರೂಪಧಾರಣಮಾಡಿದ ಆ ಮಹಾಮುನಿಯನ್ನು ಶ್ರೀಸೂರ್ಯನು ತನ್ನರಥದಲ್ಲಿ ಕರಕೊಂಡು ಸುಹಾಸ್ಯವದನದಿಂದ – "ಪೂರ್ವದಲ್ಲಿ ಋಷಿಗಳು ಮಂದಮತಿಗಳ ಉದ್ಧಾರಕ್ಕಾಗಿ ವೇದರಾಶಿಯಲ್ಲಿ ನಾಲ್ಕು ಭಾಗಮಾಡು ವಾಗ, ಯಜುರ್ವೇದ ಶಾಖೆಯೊಳಗಿನದೊಂದು ಮುಷ್ಟಿಯನ್ನು, ಮುಂದೆ ನೀನು ಬೇ ಡುವೆಯೆಂಬ ಭವಿಷ್ಯವನ್ನರಿತು ನನ್ನಬಳಿಯಲ್ಲಿ ಇಟ್ಟು ಉಳಿದ ಎಲ್ಲವೇದದ ವಿಸ್ತಾರ ವನ್ನು ಜಗತ್ತಿನಲ್ಲಿ ಮಾಡಿದರು. ಯಾವವೇದದಲ್ಲಿ ಕರ್ಮ, ಉಪಾಸನಾ, ಜ್ಞಾನ ಗಳೆಂಬ ಮೂರು ಪ್ರಕರಣಗಳು ಇರುವವೋ ಆ ಅಯಾತಯಾಮ ಸಂಜ ಕವಾದ ವೇದ ವನ್ನು ನಾನು ನಿನಗೆ ಉಪದೇಶಿಸುವೆನು. ಈ ವೇದದಲ್ಲಿ ಶ್ರೌತಕರ್ಮದ ಆಚಾರಗಳೆಲ್ಲ ಸಾದ್ಯಂತವಾಗಿ ಹೇಳಲ್ಪಟ್ಟಿರುವವು. ಮಧ್ಯಭಾಗದಲ್ಲಿ ಮುಕ್ತಿದಾಯಕವಾದ ಶಿವೋ ಪಾಸನೆಯು ಹೇಳಲ್ಪಟ್ಟಿರುವದು. ಜೀವಬ್ರಮ್ಹವಿಷಯದ ಭ್ರಮವನ್ನು ದೂರಮಾಡು ವಂಥ, ಆತ್ಮಸಾಕ್ಷಾತ್ಕಾರವನ್ನುಂಟುಮಾಡುವಂಥ, ನಾಮದಿಂದಲೂ, ಅರ್ಥದಿಂದಲೂ ಶ್ರೇಷ್ಟವಾಗಿರುವಂಥ " ಈಶ " ವೆಂಬ ಉಪನಿಷದ್ರತ್ನವು ಆವೇದದ ಕಡೆಯಭಾಗದಲ್ಲಿ ಒಪ್ಪುತ್ತಿರುವದು. ಇದಲ್ಲದೆ ಬ್ರಹದಾರಣ್ಯಕವೆಂಬ ಶ್ರೇಷ್ಟ ಉಪನಿಷತು ಈ ಶುಕ್ಲ ಯಜುರ್ವೇದಕ್ಕೆ ಸಂಬಂಧಿಸಿರುವದು. ನಿನ್ನಸಲುವಾಗಿ ಬಹುಪ್ರಯಾಸದಿಂದ ಕಾದು ಇಟ್ಟಿದ್ದ ಪರಮಶ್ರೇಷ್ಟವಾದ ಯಜುರ್ವೇದದ ಈ ಶಾಖೆಯನ್ನು ನಿನಗೆ ಉಪದೇಶಿಸು ವನು. ಮೊದಲೇ ವೇದವು ತೇಜೋಮಯ , ಅದರಲ್ಲಿ ನನ್ನತೇಜಸ್ಸು ಬೆರೆತಿರುವದು.” ಎಂದು ಹೇಳಿ , ವೇದವನ್ನು ಉಪದೇಶಿಸಿ ಅಂತರ್ಧಾನಹೊಂದಿದನು.

ಹೀಗೆ ಅಗಾಧ ತಪಸ್ಸಿನಿಂದ ಸಂಪಾದಿಸಿದ ಅಯಾತಯಾಮ ವೇದವನ್ನೂ, ಉ

ಳಿದ ಋಗಾದಿ ವೇದಗಳನ್ನೂ ಉಪದೇಶಿಸುವದಕ್ಕಾಗಿ ಶ್ರೀಯಾಜ ವಲ್ಕ್ಯರು ಪಾಠಶಾಲೆ ಯನ್ನು ಏರ್ಪಡಿಸಿದರು. ಯಾಜ್ಞವಲ್ಕ್ಯರ ಕೀರ್ತಿಪ್ರಭೆಯು ಸಮಸ್ತದಿಗಂತವನ್ನು ಬೆಳಗುತಿ ತ್ತು. ವಿದ್ಯಾರ್ಥಿಗಳು ನಾಲ್ಕೂ ದಿಕ್ಕುಗಳಿಂದ ಗುಂಪುಗುಂಪಾಗಿ ಹೊರಟು, ಯಾಜ್ಞವಲ್ಕ್ಯರಲ್ಲಿ ಗುರುಕುಲವಾಸಮಾಡಬೇಕೆಂದು ಬರುತ್ತಿದ್ದರು. ಅಲ್ಪಕಾಲದಲ್ಲಿಯೇ ಪಾಠಶಾಲೆಯು ವಿದ್ಯಾರ್ಥಿಗಳಿಂದ ತುಂಬಿಹೋಯಿತು. ಜನಕನು ಆ ವೇದ ಶಾಲೆಗೆ ಪ್ರೋತ್ಸಾಹಕನಾಗಿ, ಒಂದು ವೇದಮಂದಿರವನ್ನು ಕಟ್ಟಿಸಿ, ಅಲ್ಲಿ ವಿದ್ಯಾರ್ಥಿ ಗಳ ಅನ್ನಪಾನಗಳ ಅನುಕೂಲತೆ ಮಾಡಿಕೊಟ ದ್ದನು. ಆ ಮಂದಿರದಲ್ಲಿ ವಿದ್ಯಾರ್ಥಿ ಗಳೆಲ್ಲರೂ ಯಾಜ ವಲ್ಕ್ಯರ ಸಹಾಯೋಪಾಧ್ಯಾಪಕರ ವ್ಯವಸ್ಥೆಗೆ ಒಳಪಟ್ಟು, ವಿದ್ಯಾ ಭ್ಯಾಸವನ್ನು ಮಾಡುತ್ತಲಿದ್ದರು. ಯಾಜವಲ್ಕ್ಯರು ಒಂದು-ನಿಯಮಿತಕಾಲದಲ್ಲಿ ತಾವೇ ಅಲ್ಲಿಗೆ ಹೋಗಿ ವೇದಪಾಠವನ್ನು ಹೇಳುತ್ತಿದ್ದರು. ಅಲ್ಲಿ ಸೇರಿದ್ದ ವಿದ್ಯಾರ್ಥಿಗಳಲ್ಲಿ ಬ್ರಾ ಹ್ಮಣ, ಕ್ಷತ್ರಿಯ, ವೈಶ್ಯರೆಂಬ ಮೂರುಬಗೆಯ ದ್ವಿಜರಿದ್ದರು. ಪಾಠಶಾಲೆಯಲ್ಲಿ ಆರು

ವೇದಾಂಗಗಳ ಬೇರೆಬೇರೆ ತರಗತಿಗಳಿದ್ದವು. ಯಾಜ್ಞವಲ್ಕ್ಯರ ಹೆಸರು, ಸಾಮಾನ್ಯ
6

ವಾಗಿ ಯಜುರ್ವೇದದ ವಿಷಯದಲ್ಲಿ ಬಹಳ ಪ್ರಸಿದ್ಧವಾಗಿದ್ದರೂ, ಅವರಿಗೆ ಋಕ್ಸಾಮಾದಿಗಳಲ್ಲಿಯೂ ಅಪಾರವಾದ ಪರಿಚಯವಿತ್ತು. ಅವರು ಈ ಮೂರುವೇದ ಗಳಲ್ಲಿಯೂ ಪಾಠವನ್ನು ಹೇಳುತ್ತಲಿದ್ದರು; ಆದರೆ ಅವರ ಶುಕ್ಲ ಯಜುರ್ವೇದ ವಿಷಯದ ಉಪನ್ಯಾಸಗಳು, ಉಳಿದವೇದವೇದಾಂಗಗಳ ಉಪನ್ಯಾಸಗಳಿಗಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳ ಚಿತ್ತವನ್ನು ಆಕರ್ಷಿಸುತ್ತಲಿದ್ದವು. ವೇದವ್ಯಾಸರ ಮೊಮ್ಮಗನಾದ (ಮಗಳಮಗನಾದ) ಮಹಾಯೋಗಿ ಬ್ರಹ್ಮದತ್ತನು ಯಾಜ್ಞವಲ್ಕ್ಯರ ಶಿಷ್ಯನಾಗಿ, ನಾಲ್ಕೂ ವೇದಗಳ ಅಧ್ಯಯನಮಾಡಿದನು. ಮುಂದೆ ಬ್ರಹ್ಮದತ್ತನು ಒಂದುಶ್ರೇಷ್ಠ ವಾದ ಯಜ್ಞವನ್ನು ಆರಂಭಿಸಲು, ವೈಶಂಪಾಯನ, ಪೈಲ, ಮೊದಲಾದ ದೊಡ್ಡದೊಡ್ಡ ಋಷಿಗಳು ಕೂಡಿದರು. ಆಗ ಕೆಲವರು ಶಂಕಿತರಾಗಿ ಯಾಜ್ಞವಲ್ಕ್ಯರನ್ನು ಕುರಿತು -- "ಪೌರುಷೇಯವಾಗಿ ತೋರುವ ಈ ಶುಕ ಯಜುರ್ವೇದದ ಅಧ್ಯಯನವನ್ನು ನೀವು ಯಾರಬಳಿಯಲ್ಲಿ ಮಾಡಿದಿರಿ ?” ಎಂದು ಪ್ರಶ್ನೆಮಾಡಲು, ಯಾಜ್ಞವಲ್ಕ್ಯರು ಅವರಿಗೆ -- "ಸಾವಧಾನಚಿತ್ತದಿಂದ ಸ್ವಲ್ಪಹೊತ್ತು ಕುಳಿತುಕೊಳ್ಳಿರಿ, ಅಂದರೆ ಈ ವೇದವನ್ನು ಉಪ ದೇಶಿಸಿದ ಗುರುವನ್ನು ತೋರಿಸುವೆನು” ಎಂದು ಹೇಳಿದರು.

ಈ ಮೇರೆಗೆ ನುಡಿದು ಯಾಜ್ಞವಲ್ಕ್ಯರು ಏಕಾಗ್ರಚಿತ್ತರಾಗಿ ಸೂರ್ಯನನ್ನು ಧ್ಯಾ-

ನಿಸತೊಡಗಿದರು. ಆಗ ಸೂರ್ಯನಾರಾಯಣನು ಪ್ರಕಟನಾಗಲು, ಎಲ್ಲರ ಕಣ್ಣುಗಳು ಮುಚ್ಚಬಡಿದದ್ದರಿಂದ "ರಕ್ಷಿಸು, ರಕ್ಷಿಸು” ಎಂದು ಅವರು ಪ್ರಾರ್ಥಿಸತೊಡಗಿದರು. ಆಗ ಮೇಘದಂಥ ಗಂಭೀರಧ್ವನಿಯಿಂದ ಶ್ರೀಸೂರ್ಯನಾರಾಯಣನು ಋಷಿಗಳನ್ನು ಕುರಿತು -- “ಈ ಅಯಾತಯಾಮ ಸಂಜ್ಞಕವಾದ ವೇದವನ್ನು ಯಾಜ್ಞವಲ್ಕ್ಯರಿಗೆ ನಾನು ಉಪದೇಶಿಸಿರುವೆನು. ಪೌರುಷೇಯವಾಗಿ ತೋರುವ ಈ ವೇದದ ವಿಷಯವಾಗಿ ಯಾವ ಬಗೆಯ ಸಂಶಯವನ್ನೂ ಪಡಬಾರದು. ನಿಃಸಂಶಯವಾದ ಅಂತಃಕರಣದಿಂದ ಯಾಜ್ಞ ವಲ್ಕ್ಯರಿಂದ ಸಹಿತರಾಗಿ, ಶುದ್ಧವಾದ ಅಧ್ವರಭಾಗದೊಡನೆ ಒಪ್ಪುತ್ತಿರುವ ಶುಕ್ಲಯಜುರ್ವೇದದಿಂದ ಯಜ್ಞಭಾಗವನ್ನು ಸಂಪೂರ್ಣವಾಗಿ ಮಾಡಿರಿ” ಎಂದು ಹೇಳಿ, ಆ ಜಗಚ್ಚಕ್ಷುವು ಅಂತರ್ಧಾನವನ್ನು ಹೊಂದಿದನು. ಆ ಮೇಲೆ ಋಷಿಗಳೆಲ್ಲರೂ ಕಣ್ದೆ ರೆದು ಯಾಜ್ಞವಲ್ಕ್ಯರ ಸೋತ್ರಮಾಡಿದರು. ತಮ್ಮ ಶಿಷ್ಯನ ಮಹತ್ವವನ್ನು ನೋಡಿ ವೈಶಂಪಾಯನರು ಸಂತೋಷಭರಿತರಾಗಿ ಸದ್ಗದಿತಾಂತಃಕರಣದಿಂದ ಯಾಜ್ಞವಲ್ಕ್ಯರನ್ನು ಬಿಗಿಯಾಗಿ ಅಪ್ಪಿಕೊಂಡರು; ಮತ್ತು ತಮ್ಮ ಶಿಷ್ಯನ ಅದ್ಭುತವಾದ ಯೋಗಶಕ್ತಿಯನ್ನು ಯಾವತ್ತು ಋಷಿಗಳಮುಂದೆ ಶ್ಲಾಘಿಸಿ, ಶಿಷ್ಯ ನನ್ನು ಆಶೀರ್ವದಿಸಿ ತಾವು ಆ ಯಜ್ಞದಲ್ಲಿ ಋತ್ವಿಕ್ಕರ್ಮವನ್ನು ಸ್ವೀಕರಿಸುವವರಾದರು. ಆಮೇಲೆ ಯಾಜ್ಞವಲ್ಕ್ಯರು ಯಾವತ್ತು ಋಷಿಗಳೊಡನೆ ಬ್ರಹ್ಮದತ್ತನ ಯಜ್ಞವನ್ನು ಸಾಂಗಗೊಳಿಸಿದರು. ಇಂಥ ಮಹಾ ಪ್ರಭಾವಶಾಲಿಗಳಾದ ಶ್ರೀಯಾಜ್ಞವಲ್ಕ್ಯರಿಂದ ಶುಕ್ಲ ಯಜುರ್ವೇದವು ಹೀಗೆ ಪ್ರಸ್ಥಾ ಪಿತವಾಯಿತು.

ಒಮ್ಮೆ ಜನಕಮಹಾರಾಜನು ಏಕಾಂತದಲ್ಲಿ ಕುಳಿತಿದ್ದ ಯಾಜ್ಞವಲ್ಕ್ಯರನ್ನು

07

ಭಕ್ತಿ ಪುರಸ್ಸರ ನಮಸ್ಕರಿಸಿ ವಿನಯದಿಂದ -- “ ಸದ್ಗುರುವೇ , ಬ್ರಹ್ಮಜ್ಞಾನೋಪ ದೇಶದಿಂದ ನನ್ನನ್ನು ಘೋರಸಂಸಾರಸಾಗರದಿಂದ ಮುಕ್ತಮಾಡಬೇಕು . ” ಎಂದು ಪ್ರಾರ್ಥಿಸಿದನು. ಅದಕ್ಕೆ ಯಾಜ್ಞವಲ್ಕ್ಯರು -- " ಎಲೈ ಮಹಾಮತಿಯೇ, ನೀನು ಒಂದು ಯಜ್ಞಮಾಡಿ ಅದಕ್ಕೆ ಯಾವತು ಮಹರ್ಷಿಗಳನ್ನು ಕರಿಸು. ಹೀಗೆ ಯಜ್ಞಾ ರ್ಥವಾಗಿ ಬಂದ ಋಷಿಗಳಲ್ಲಿ ನಿನ್ನ ಬುದ್ಧಿಯಿಂದ ಬ್ರಹ್ಮನಿಷ್ಠರನ್ನು ಆರಿಸಿ, ಅವರಿಗೆ ನೀನು ಶರಣು ಹೋಗು. ಅಂದರೆ ಸದ್ಗುರುವಿನಲ್ಲಿ ದೃಢಭಕ್ತಿಯು ಉತ್ಪನ್ನವಾಗಿ ನೀನು ಮುಕ್ತನಾಗುವೆ . ದೃಢಭಕ್ತಿಯ ಹೊರತು ಬ್ರಹ್ಮಜ್ಞಾನವು ಆಗಲಾರದು, ಸದ್ಗುರುವು ಪ್ರಾಪ್ತನಾದವನಿಗೇ ಬ್ರಹ್ಮತತ್ವದ ಜ್ಞಾನವಾಗುವುದೆಂದು ಶ್ರುತಿವಚ ನವಿರುತ್ತದೆ . ” ಎಂದು ಹೇಳಲು, ಯೋಗೀಶ್ವರರ ಅಪ್ಪಣೆಯಂತೆ ಜನಕಮಹಾರಾ ಜನು ಒಂದು ಶ್ರೇಷ್ಠಯಜ್ಞವನ್ನು ಆರಂಭಿಸಿದನು. ಕರೆಕಳುಹಿದಂತೆ ದೊಡ್ಡದೊಡ್ಡ ಬ್ರಹ್ಮರ್ಷಿಗಳೂ , ಅರಸರೂ, ಪಂಡಿತರೂ ಯಜ್ಞಮಂಟಪಕ್ಕೆ ಬಂದರು. ಅವರಲ್ಲಿ ಕಹೋಳ, ಆಶ್ವಲ, ಶಾಕಲ್ಯ, ವೇದವ್ಯಾಸ , ಪೈಲಾದಿ ಬ್ರಾಹ್ಮಣರೂ, ಶಿಷ್ಯರಿಂದ ಸಹಿತರಾಗಿ ಯಾಜ್ಞವಲ್ಕ್ಯರೂ , ಬಾಷ್ಕಳಾದಿ ಮಹಾ ಮಹಾಋಷಿಗಳೂ ಇದ್ದರು. ಎಲ್ಲರೂ ಕೂಡಿ ಜನಕರಾಜನ ಯಜ್ಞವನ್ನು ಸಾಂಗಗೊಳಿಸಿದರು. ಅವಭೃತಸ್ನಾನ ವಾದ ಮೇಲೆ ಬ್ರಹ್ಮಜ್ಞರ ಶೋಧಕ್ಕಾಗಿ ಜನಕಮಹಾರಾಜನು ಸುವರ್ಣಾಲಂಕಾರಗ ಳಿಂದ ಅಲಂಕೃತಗಳಾದ ಸಹಸ್ರ ಆಕಳುಗಳನ್ನು ಯಜ್ಞಮಂಟಪದಲ್ಲಿ ತಂದು ನಿಲ್ಲಿಸಿ- "ಬ್ರಾಹ್ಮಣರೇ, ಬ್ರಹ್ಮಜ್ಞಾನಿಯಾದವನು ಈ ಸಹಸ್ರಗೋಗಳ ಸ್ವೀಕಾರಮಾಡ ಬೇಕು ” ಎಂದು ವಿಜ್ಞಾಪಿಸಿದನು . ಅದನ್ನು ಕೇಳಿ ಎಲ್ಲ ಬ್ರಾಹ್ಮಣರು ವಿಚಾರ ಮಗ್ನರಾಗಿ ಸುಮ್ಮನೆ ಕುಳಿತುಕೊಂಡರು. ಒಂದು ಪ್ರಹರವಾದ ಮೇಲೆ ಪುನಃ ಜನಕ ರಾಜನು ಬ್ರಾಹ್ಮಣರಿಗೆ -- "ಬ್ರಹ್ಮಜ್ಞನು ಈ ಧೇನುಗಳನ್ನು ಸ್ವೀಕರಿಸಬೇಕು" ಎಂದು ಪ್ರಾರ್ಥಿಸಿದನು. ಆದರೂ ಒಬ್ಬ ಬ್ರಾಹ್ಮಣನೂ ಏಳದಾದನು. ಈ ಸಭೆ ಯಲ್ಲಿ ನಾನೊಬ್ಬನೇ ಬ್ರಹ್ಮಜ್ಞನೆಂದು ಯಾರು ಮುಂದೆ ಬರುವರು? ಅದನ್ನು ನೋಡಿ ಮತ್ತೆ ಜನಕರಾಜನು-- " ಈ ಕೃತಯುಗದಲ್ಲಿ ಬ್ರಹ್ಮಜ್ಯರಹಿತ ಪೃಥ್ವಿಯಾಯಿತೇ" ಎಂದು ಕೇಳಿದನು.ಆಗ ಯಾಜ್ಞವಲ್ಕ್ಯರು ಎದ್ದು ನಿಂತು ಸಾಮಶ್ರವನೆಂಬ ತಮ್ಮ ಶಿಷ್ಯ ನನ್ನು ಕರೆದು--"ಸಾಮಶ್ರವಾ, ಈ ಆಕಳುಗಳನ್ನು ಅಟ್ಟಿಕೊಂಡು ಆಶ್ರಮಕ್ಕೆ ನಡೆ' ಎಂದು ಹೇಳಿದರು. ಯಾಜ್ಞವಲ್ಕ್ಯರ ಈ ಮಾತನ್ನು ಕೇಳಿ ಯಾವತ್ತು ಬ್ರಾಹ್ಮ ಣರು ಕ್ರೋಧಸಂತಪ್ತರಾದರು. ಅವರು ಆಕಳುಗಳನ್ನು ಅಟ್ಟಿಕೊಂಡು ಹೋಗ ಬಂದ ಸಾಮಶ್ರವನನ್ನು ತಡೆದು ಆವೇಶದಿಂದ-- "ನೀನು ಈ ಆಕಳುಗಳನ್ನು ಮುಟ್ಟ ಲಾಗದು. ಯಾಜ್ಞವಲ್ಕ್ಯಾ, ಈ ದೊಡ್ಡ ದೊಡ್ಡ ಬ್ರಹ್ಮಜ್ಞ ಬ್ರಾಹ್ಮಣರು ಇರು ತ್ತಿರಲು , ನೀನೇ ಶ್ರೇಷ್ಠ ಹ್ಯಾಗೆ ? ಇಷ್ಟು ಜನಬ್ರಾಹ್ಮಣರಲ್ಲಿ ಬ್ರಹ್ಮಜ್ಞತ್ವದ ಗರ್ವವನ್ನೂ , ಆಕಳುಗಳ ವಿಷಯದ ಇಚ್ಛೆಯನ್ನೂ ಪ್ರಕಟಿಸುವ ನೀನು ಬ್ರಹ್ಮ

ಜ್ಞನು ಹೇಗೆ ಇದ್ದೀ ? ನೀನು ಬ್ರಹ್ಮಜರಲ್ಲಿ ಶ್ರೇಷ್ಠನಾಗಿದ್ದರೆ ನಮ್ಮ ಪ್ರಶ್ನೆಗಳಿಗೆ
8

ಉತ್ತರಕೊಡು. ನಿನ್ನ ಉತ್ತರಗಳು ಯೋಗ್ಯವಾಗಿ ತೋರಿದರೆ, ನಾವು ಗೆಲ್ಲಲ್ಪ ಟ್ಟವರಾಗುವೆವು , ಆಮೇಲೆ ಈ ಆಕಳುಗಳನ್ನು ನಿನ್ನ ಆಶ್ರಮಕ್ಕೆ ಅಟ್ಟಿಕೊಂಡು ಹೋಗುವೆಯಂತೆ ; ಅಲ್ಲಿಯವರೆಗೆ ಈ ಆಕಳುಗಳನ್ನು ಮುಟ್ಟಲಾಗದು,” ಎಂದು ನಿರ್ಬಂಧಿಸಿದರು.

ಬ್ರಾಹ್ಮಣರ ಈ ನಿರ್ಬಂಧವನ್ನು ಕೇಳಿ ಯಾಜ್ಞವಲ್ಕ್ಯರು ಆಸನದಿಂದ ಎದ್ದು

ನಿಂತು ಬ್ರಾಹ್ಮಣರನ್ನು ನಮಸ್ಕರಿಸಿ ಕೈಜೋಡಿಸಿಕೊಂಡು -- "ನಾನು ಬ್ರಹ್ಮಜ್ಞ ನಲ್ಲ , ಬ್ರಹ್ಮಜ್ಞರಾದ ಬ್ರಾಹ್ಮಣಶ್ರೇಷ್ಠರೇ, ನಿಮ್ಮನ್ನು ನಮಸ್ಕರಿಸುವೆನು. ನಾನು ಗೋ ಕಾಮುಕನಾಗಿರುವದು ನಿಜವು; ಆದರೆ ತಮ್ಮ ಇಚ್ಚೆಯಿದ್ದರೆ ಪ್ರಶ್ನೆ ಮಾಡ ಬಹುದು . ಯಥಾವತಿ ಅವುಗಳಿಗೆ ಉತ್ತರಕೊಡುವೆನು. ಇದು ದೊಡ್ಡಜನರೊಳ ಗಿನ ವಾದವಿರುವದರಿಂದ , ದುರಾಗ್ರಹಕ್ಕೆ ಆಸ್ಪದವಿರಬಾರದು , ಶ್ರುತಿಮಾರ್ಗವ ನ್ನನುಸರಿಸಿ ವಿಚಾರವಾಗಬೇಕು . ಕುತರ್ಕಗಳು ಹೊರಡಲಾಗದು. ಇಂಥ ಬ್ರಹ್ಮ ವಾದದ ಕಾಲದಲ್ಲಿ ಸ್ವಾಭಿಮಾನವು ಮಹಾಪುರುಷರ ವೈರಿಯಾಗಿರುವದು; ಆದ್ದರಿಂದ ಅದನ್ನು ಬಿಟ್ಟುಕೊಟ್ಟು ಸುಖಸಮಾಧಾನದಿಂದ ವಾದವಿವಾದವನ್ನು ಮಾಡಬೇಕು. ಈ ಮಂತ್ರಿತವಾದ ಕುಶಗ್ರಂಥಿಯು ಈ ವಾದದಲ್ಲಿ ಅನ್ಯಾಯಮಾಡುವವರ ಶಾಸನ ಕ್ಕಾಗಿ ವಜ್ರದಂತೆ ಇರುವದು. ಇದನ್ನರಿತು ವಾದವಿವಾದವನ್ನು ಅವಶ್ಯವಾಗಿ ಮಾಡತಕ್ಕದ್ದು.

ಹೀಗೆ ನುಡಿದು ಯಾಜ್ಞವಲ್ಕ್ಯರು ಕುಳಿತುಕೊಳ್ಳಲು, ಅವರ ಮೇಲೆ ಪ್ರಶ್ನೆಗಳ

ಮಳೆಗರೆಯಹತ್ತಿತು. ಆ ಮಹಾ ಸಭೆಯಲ್ಲಿ ಪ್ರಶ್ನೆ ಮಾಡದವರು ಉಳಿಯಲೇ ಇಲ್ಲವೆಂ ದು ಹೇಳಬಹುದು. ಜನಕರಾಜನ ಆ ಯಜ್ಞದಲ್ಲಿ ಹೋತೃಭಾಗವನ್ನು ಸಾಗಿಸುವ ಆಶ್ವಲನೆಂಬ ಋಷಿಯೂ, ಜರತ್ಕಾರುವೂ, ಬಾಹ್ಯಾನನ ಪುತ್ರನಾದ ಭುಜ್ಯುಋಷಿಯೂ, ಚಕ್ರಾಯಣ ಪುತ್ರನಾದ ಉಪಸ್ತಾ ಎಂಬ ಋಷಿಯೂ, ಕೌಷೀತಕನ ಮಗನಾದ ಕಹೋ ಲಋಷಿಯೂ ಆಧ್ಯಾತ್ಮಜ್ಞಾನದ ಸಂಬಂಧದಿಂದ ಹಲವು ಪ್ರಶ್ನೆಗಳನ್ನು ಮಾಡಿ, ಯಾಜ್ಞ ವಲ್ಕ್ಯರ ಸಮರ್ಪಕ ಉತ್ತರದಿಂದ ಸಮಾಧಾನಪಟ್ಟು , ಯಾಜ್ಞವಲ್ಕ್ಯರು ಬ್ರಹ್ಮಜ್ಞ ರೆಂದು ಒಡಂಬಟ್ಟು ಸುಮ್ಮನೆ ಕುಳಿತುಕೊಂಡರು. ಈ ವಾದದಲ್ಲಿ ಜರತ್ಕಾರುವಿಗೆ ಆತ್ಮಜ್ಞಾನವಾಯಿತು. ಆ ಮೇಲೆ ವಾಚಕ್ರವಿಯ ಮಗಳಾದ ಗಾರ್ಗಿಯೆಂಬ ದಿಗಂಬರ ವೃತ್ತಿಯ ಸ್ತ್ರೀಯು ಯಾಜ್ಞವಲ್ಕ್ಯರಿಗೆ ಹಲವು ಪ್ರಶ್ನೆಗಳನ್ನು ಮಾಡಿ, ಯಾಜ್ಞವಲ್ಕ್ಯರ ಬ್ರಹ್ಮಜ್ಞತ್ವವನ್ನು ಒಡಂಬಟ್ಟು, ಇವರು ಬ್ರಹ್ಮವಿದ್ವರಿಷ್ಟರೆಂದು ಉಳಿದ ಋಷಿಗಳಿಗೆ ಹೇಳಿದಳು. ಆ ಮೇಲೆ ಅರುಣಪುತ್ರನಾದ ಉದ್ದಾಲಕನು ಮುಂದಕ್ಕೆ ಬಂದು --“ಯಾ ಜ್ಞವಲ್ಕ್ಯಾ, ಅಯೋಗ್ಯ ಪ್ರಶ್ನೆ ಮಾಡಿದರೆ ಶಿರಚ್ಛೇದವಾದೀತೆಂದು ದರ್ಭಗ್ರಂಥಿಯ ಭಯ ವನ್ನು ತೋರಿಸಿ, ಜನರನ್ನು ನಿಷ್ಕಾರಣ ಬೆದರಿಸಬೇಡ. ನೀನು ಗೋಕಾಮುಕನಾಗಿ ರುವದರಿಂದ ನಿನ್ನ ಶಿರಚ್ಛೇದವು ಯಾಕಾಗಬಾರದು ಹೇಳು. ಬ್ರಹ್ಮಜರು ನಿರಿಚ್ಛರಾ

ಗಿರುವರು." ಎಂದು ಹೇಳಿ, ಹಲವು ಪ್ರಶ್ನೆಗಳನ್ನು ಮಾಡಿದನು. ಅವುಗಳಿಗೆಲ್ಲ
9

ಯಾಜ್ಞವಲ್ಕ್ಯರು ಸಮರ್ಪಕ ಉತ್ತರಕೊಟ್ಟರು. ಆಗ ಉದ್ದಾಲಕನು ಯಾಜ್ಞ ವಲ್ಕ್ಯರನ್ನು ನಮಸ್ಕರಿಸಿ ಸುಮ್ಮನಾದನು. ಆಮೇಲೆ ಮಹಾಪಂಡಿತರಾದ ಶಾಕಲ್ಯ ಋಷಿಗಳು ವಾದಾರ್ಥವಾಗಿ ಮುಂದಕ್ಕೆ ಸರಿದರು. ಅವರು ಹಲವು ಪ್ರಶ್ನಗಳನ್ನು ಮಾಡುತ್ತ ಕಡೆಗೆ ಅಯೋಗ್ಯ ಪ್ರಶ್ನ ಮಾಡಲು, ಯಾಜ್ಞವಲ್ಕ್ಯರು--"ಎಲೈ ಶಾಕ ಲ್ಯನೇ, ಹೀಗೆ ಮಾರ್ಗಬಿಟ್ಟು ಪ್ರಶ್ನಮಾಡಬೇಡ, ನಿನ್ನ ಶಿರಚ್ಛೇದವಾದೀತು,” ಎಂದು ಹೇಳಿದರು; ಆದರೆ ಶಾಕಲ್ಯರು ಅದನ್ನು ಲೆಕ್ಕಿಸದೆ ಪುನಃ ಅದೇ ಪ್ರಶ್ನಮಾಡಿದರು. ಆಗ ಒಮ್ಮಿಂದೊಮ್ಮೆ ಶಾಕಲ್ಯರ ಶಿರಚ್ಛೇದವಾಯಿತು. ಅದನ್ನು ನೋಡಿ ಸಭಾಸದರೆ ಲ್ಲರೂ ಬೆದರಿ ಸುಮ್ಮನೆ ಕುಳಿತುಕೊಂಡರು. ಆಗ ಯಾಜ್ಞವಲ್ಕ್ಯರು ಯಾವತ್ತು ಋಷಿಗಳನ್ನು ವಂದಿಸಿ -- "ಸಭಾಸದರೇ , ಇನ್ನು ಏನಾದರೂ ಪ್ರಶ್ನಮಾಡುವದಿದ್ದರೆ ಭಯಪಡದೆ ಮಾಡಬೇಕು ; ಅಥವಾ ನಾನೇ ಯಾವದೊಂದು ಪ್ರಶ್ನಮಾಡಲೋ ” ಎಂದು ಕೇಳಲು , ದರ್ಭಗ್ರಂಥಿಯ ಭಯದಿಂದ ಯಾರೂ ಮಾತಾಡದೆ ಸುಮ್ಮನೆ ಕುಳಿ ತುಕೊಂಡರು. ಇದನ್ನರಿತು ಯಾಜ್ಞ ವಲ್ಕ್ಯರು ತಾವು ಒಂದು ಪ್ರಶ್ನಮಾಡಿ ಇದರ ಉತ್ತರ ಹೇಳಬೇಕೆಂದು ಕೇಳಿಕೊಂಡರು. ಅದಕ್ಕೆ ಋಷಿಗಳು--"ಇದರ ಉತ್ತರವು ನಮಗೆ ಗೊತ್ತಿಲ್ಲ , ನೀವೇ ಹೇಳಬೇಕು ” ಎಂದು ನುಡಿಯಲು , ಯಾಜ್ಞವಲ್ಕ್ಯರು ಉತ್ತರ ಹೇಳಿ ,ನಿಜವಾದ ಬ್ರಹ್ಮಜ್ಞರೇ ಈ ಮೃತಶಾಕಲ್ಯನನ್ನು ಬದುಕಿಸಬಲ್ಲರು, ಎಂದು ನುಡಿದರು . ಆಗ ಯಾವತ್ತು ಋಷಿಗಳು ಯಾಜ್ಞವಲ್ಕ್ಯರನ್ನು ವಿಜ್ಞಾಪಿ ಸಲು , ಅವರು ತಮ್ಮ ಶಾಂತವಾದ ಹಸ್ತಸ್ಪರ್ಶದಿಂದ ಶಾಕಲ್ಯಋಷಿಯನ್ನು ಬದುಕಿ ಸಿದರು ! ಆಗ ಯಾಜ್ಞವಲ್ಕ್ಯರು ಬ್ರಹ್ಮಜ್ಞರೆಂದು ಜಯಜಯಕಾರವಾಯಿತು. ಆ ಶಾಕಲ್ಯಋಷಿಗಳು ಯಾಜ್ಞವಲ್ಕ್ಯರನ್ನು ದೃಢವಾಗಿ ಅಪ್ಪಿಕೊಂಡು ಸಾಮಶ್ರವ ನಿಗೆ-- "ಆಕಳುಗಳನ್ನು ಒಯ್ಯಬೇಕೆಂ"ದು ಆದರದಿಂದ ಹೇಳಿದರು. ಮುಂದೆ ಜನಕ ಮಹಾರಾಜನು ಬ್ರಹ್ಮವಿದ್ವರಿಷ್ಠರಾದ ಯಾಜ್ಞವಲ್ಕ್ಯರಿಂದ ಬ್ರಹ್ಮಜ್ಞಾನವನ್ನು ಪಡೆದು ವಿದೇಹಜನಕನೆಂದು ಪ್ರಸಿದ್ಧನಾದನು.

೨ ನೆಯ ಪ್ರಕರಣ.

ನಿರ್ಮಲ ಹೃದಯಪ್ರಭಾವ.

ನಕಮಹಾರಾಜನು ನೆರಿಸಿದ ಮಹಾಸಭೆಯಲ್ಲಿ ಭಗವಾನ್ ಯಾಜವಲ್ಕ್ಯರೊ

ಡನೆ ಬೇರೆ ಬೇರೆ ಋಷಿವರ್ಯರು ಮಾಡಿದ ವಿವಾದವನ್ನು ನಾವು ಉಲ್ಲೇಖಿಸದಿರುವದನ್ನು ನೋಡಿ ವಾಚಕರು ನಮ್ಮ ಮೇಲೆ ಸಿಟ್ಟಾಗಬಾರದು; ಯಾಕಂದರೆ, ಭಗವತೀ ಕಾತ್ಯಾಯನಿಗೆ ಆಶ್ರಯಭೂತನಾಗಿರುವ ಮಹಾತ್ಮನ ಘನತರವಾದ ಯೋಗ್ಯತೆಯನ್ನು

ತಿಳಿಸುವದಕ್ಕಾಗಿ ಮಾತ್ರ ನಾವು ಹಿಂದಿನ ಪ್ರಕರಣನ್ನು ಬರೆದಿರುವೆವು. ಸಾಮಾನ್ಯಜನ
10

ಸಮಾಜದ ವಿಚಾರದ, ಹಾಗು ಆಚಾರದ ಅಳವಿನೊಳಗೆ ಬಾರದ ಗಹನವಾದ ವೇದಾಂ ತವಿಷಯದ ಚರ್ಚೆಯನ್ನು ಸುಮ್ಮನೆ ಬರೆಯುತ್ತ ಹೋಗಿ, ಜನರನ್ನು ಬೇಸರಗೊಳಿ ಸುವದು ನಮ್ಮ ಕೆಲಸವಲ್ಲ. ವೇದಾಂತಶ್ರವಣಕ್ಕೆ ಅನಧಿಕಾರಿಯಾದ್ದರಿಂದ ತಮ್ಮ ಪ್ರಿಯಪತ್ನಿಗೂ ಆ ವಿಷಯವನ್ನು ತಾವಾಗಿ ಉಪದೇಶಿಸುವ ಗೊಡವಿಗೆ ಭಗವಾನ್ ಯಾ ಜ್ಞವಲ್ಕ್ಯರೇ ಹೋಗದಿರುವಾಗ, ವೇದಾಂತದ ಅನುಭವವಿಲ್ಲದ ನಮ್ಮಂಥ ಪಾಮರರ ಪಾಡೇನು ? ಮಹಾತ್ಮರಾದ ಯಾಜ್ಞವಲ್ಕ್ಯರಿಗೆ ಕಾತ್ಯಾಯನೀ, ಮೈತ್ರೇಯಿ ಎಂಬ ಇಬ್ಬರು ಹೆಂಡಿರು. ಅವರಲ್ಲಿ ಮುಖ್ಯವಾಗಿ ಸದ್ಗುಣಸಂಪನ್ನೆಯೂ, ಕರ್ತವ್ಯದಕ್ಷಳೂ, ಪತಿಭಕ್ತಿಪರಾಯಣಳೂ, ಪುತ್ರವತ್ಸಲಳೂ ಮೇಲೆ ಯಾಜ್ಞವಲ್ಕ್ಯಪಾಣಿಗ್ರಹಣದಿಂದ ಆತ್ಮನಿಷ್ಠಳೂ ಆದ ಭಗವತೀ ಕಾತ್ಯಾಯನಿಯಂಥ ಭಗಿನೀವರ್ಗವೂ, ಮಾತೃವರ್ಗವೂ ನಮ್ಮ ಕನ್ನಡಸಮಾಜದಲ್ಲಿ ಉಂಟಾಗುವದು ಹಿತಕರವೆಂದು ನಮ್ಮ ಭಾವನೆಯಿರುವದ ರಿಂದ, ನಾವು ಈ ಪುಸ್ತಕಕ್ಕೆ ಭಗವತೀಕಾತ್ಯಾಯನೀಯೆಂದು ಹೆಸರಿಟ್ಟರುವೆವು; ಮತ್ತು ಸೀತಾ, ದ್ರೌಪದೀ ಮೊದಲಾದ ಪೌರಾಣಿಕಕಾಲದ ಸ್ತ್ರೀಯರ ಸಂಗ್ತಿಯಲ್ಲಿ ಕಣ್ಣು ಮು- ಚ್ಚಿಕೊಂಡು ಕುಳ್ಳಿರಿಸಬಹುದಾಗಿದ್ದ ಆ ಮಹಾತ್ಮಳ ಅನುಕರಣಮಾಡಬೇಕೆಂದು ಬುದ್ದಿ ಪೂರ್ವಕವಾಗಿ ನಾವು ನಮ್ಮ ಮಾತೃಭಗಿನೀವರ್ಗವನ್ನು ಪ್ರಾರ್ಥಿಸುವೆವು. ಭಗವತೀ- ಕಾತ್ಯಾಯನಿಯರಂಥ ಕರ್ತಾರರು ಲೋಕಕ್ಕೆ ಅನುಕರಣೀಯರೆಂತಲೂ, ಭಗವತೀ- ಮೈತ್ರೇಯಿಯರಂಥ ಬ್ರಹ್ಮವಾದಿಗಳು ಲೋಕಕ್ಕೆ ಪೂಜ್ಯರೆಂತಲೂ ತಿಳಿಯತಕ್ಕದ್ದು. ಬ್ರಾಹ್ಮಣರು ಪುಣ್ಯಾಹವಾಚನ ಕರ್ಮದಲ್ಲಿ "ಅರುಂಧತೀಪುರೋಗಾ ಏಕಪತ್ನ್ಯಃಪ್ರೀಯಂ ತಾಂ” ಎಂದು ಉಚ್ಚರಿಸುವದರ ಸಾಲಿನಲ್ಲಿಯೇ "ಭಗವತೀಕಾತ್ಯಾಯನೀ ಪ್ರೀಯತಾಂ” ಎಂದು ಉಚ್ಚರಿಸುವದರ ಮರ್ಮವನ್ನು ವಾಚಕರು ಅವಶ್ಯವಾಗಿ ವಿಚಾರಿಸತಕ್ಕದ್ದು ಇರಲಿ. ಇನ್ನು ಪ್ರಕೃತವಿಷಯವನ್ನು ಕೈಕೊಳ್ಳೋಣ.

ಪ್ರಾತಃಕಾಲದ ಸುಸಮಯವು. ಜನಕಮಹಾರಾಜನ ರಾಜಧಾನಿಯಾದ ಜನಕ

ಪುರದಬಳಿಯ ಗಹನಾರಣ್ಯ - ಅದೇ ಸೂರ್ಯೋದಯವಾಗಿದೆ. ಮಂದಮಾರುತನು ಸುಳ್ಳನೆ ಸುಳಿದು ಗಿಡಬಳ್ಳಿಗಳ ಚಿಗುರುಗಳನ್ನು ಅಲ್ಲಾಡಿಸುತ್ತ ಸದ್ದಿಲ್ಲದೆ ಸಂಚರಿಸತೊಡ ಗಿದಾನೆ. ಭಗವಾನ್ ಶ್ರೀ ಸೂರ್ಯನಾರಾಯಣನ ಸ್ವಾಗತಾರ್ಥವಾಗಿ ಪಕ್ಷಿಗಣವು ಮಂಜುಲಸ್ವರದಿಂದ ಗಾನಮಾಡತೊಡಗಿದೆ. ಚಿಗರೆಗಳು ಚಂಡಿನಂತೆ ಟಣ್ಣ ಟಣ್ಣನೆ ಜಿಗಿ ಯುತ್ತ ನಡೆದವೆ. ಇಂಥ ಸಮಯದಲ್ಲಿ ಮೂವರು ದಾರಿಕಾರರು ದಾರಿಯಹಿಡಿದು ಜನಕ ಪುರದ ಕಡೆಗೆ ಸಾಗಿದ್ದರು. ಅವರು ಮೂವರೂ ಕಸುವಿನ ಮೈಕಟ್ಟಿನವರಾಗಿದ್ದು, ನಿಲುವಿಕೆಯಲ್ಲಿ ಎತ್ತರವಾಗಿದ್ದರು . ಒಟ್ಟಿನಲ್ಲಿ ಅವರ ಆಕೃತಿಗಳು ಭವ್ಯವಾಗಿದ್ದವು. ಅವರಲ್ಲಿ ಇಬ್ಬರು ಉಣ್ಣಿಯ ಅಂಗಿಗಳನ್ನು ಹಾಕಿಕೊಂಡು, ಉದ್ದವಾದ ತಮ್ಮ ಚಂಡಿಕೆ ಗಳಿಗೆ ಗಂಟುಹಾಕಿದ್ದರು. ಅವರಿಬ್ಬರಿಗೂ ಗಡ್ಡಗಳಿದ್ದವು. ಅವರು ಹೇಳಿಕೊಳ್ಳು ವಂಥ ಸುಂದರರಾಗಿರದಿದ್ದರೂ, ಅವರ ಮುಖಮುದ್ರೆಯಲ್ಲಿ ಶೌರ್ಯದ ಕಳೆಯು ಉಕ್ಕು

ತ್ತಿತ್ತು ಅವರ ಬೆನ್ನಿಗೆ ಬತ್ತಳಿಕೆಯಿದ್ದು, ಕೆಳಗೆ ಕಾಲತನಕ ಇಳಿಬಿದ್ದಂಥ ಧನುಸ್ಸನ್ನು
11

ಅವರು ಹೆಗಲಿಗೆ ಹಾಕಿದ್ದರು. ಅವರ ಟೊಂಕದಲ್ಲಿ ಖಡ್ಗವು ಅಲೆದಾಡುತ್ತಿತ್ತು. ಇವರಿಬ್ಬರಿಂದ ತೀರ ಭಿನ್ನವಾದ ವೇಷವು ಮೂರನೆಯವನದಿತ್ತು. ಅವನು ಚಿಗರಿಯ ಚರ್ಮವನ್ನು ಹೊದ್ದಿದ್ದನು. ಆತನ ತಲೆಗೂದಲುಗಳ ರಚನೆಯು ಮೇಲಿನ ಇಬ್ಬರು ಗೃಹಸ್ಥರ ತಲೆಗೂದಲುಗಳ ರಚನೆಯಂತೆಯೇ ಇತ್ತು. ಮೈಮೇಲೆ ಭಸ್ಮದ ಪಟ್ಟಿ ಗಳಿದ್ದು, ಕೈಯಲ್ಲಿ ಉದ್ದವಾದದೊಂದು ಕೋಲು ಇತ್ತು. ಆತನ ಉಡಿಗೆ-ತೊಡಿಗೆಗಳು ತೀರ ಸಾದಾತರದವಾಗಿದ್ದರೂ, ಸುವ್ಯವಸ್ಥಿತವಾಗಿದ್ದವು. ಆತನ ಮುಖಮುದ್ರೆಯು ಗಂಭೀರವಾಗಿದ್ದು, ಅದರಲ್ಲಿ ನಿರ್ಧಾರದ ಚಿಹ್ನವು ಒಡೆದು ಕಾಣುತ್ತಿತ್ತು. ಆತನ ಮಾತುಗಳು ಅತ್ಯಂತ ಪವಿತ್ರವಾದವೂ, ಪರಿಶುದ್ಧವಾದವೂಇದ್ದವು. ಈ ಎಲ್ಲ ಚಿಹ್ನ ಗಳಿಂದ ಆತನು ಬ್ರಾಹ್ಮಣನಿದ್ದನೆಂಬದನ್ನೂ, ಉಳಿದವರಿಬ್ಬರು ಕ್ಷತ್ರಿಯರಿದ್ದರೆಂಬದನ್ನೂ ವಾಚಕರಿಗೆ ನಾವು ತಿಳಿಸುವ ಅವಶ್ಯವಿಲ್ಲ. ಆ ತೇಜಃಪುಂಜನಾದ ಬ್ರಾಹ್ಮಣನು ಜನಕ ರಾಜನ ವಿಶ್ವಾಸದ ಶ್ರೇಷ್ಠ ಮಂತ್ರಿಯಾದ ಮಿತ್ರನೆಂಬವನಾಗಿದ್ದನು. ಉಳಿದ ಕ್ಷತ್ರಿಯ ವೀರರಿಬ್ಬರನ್ನು ಬೆಂಗಾವಲಾಗಿ ನಿಯಮಿಸಿ, ಜನಕರಾಜನು ಕಾರ್ಯನಿಮಿತ್ತವಾಗಿ ಆ ತನ್ನ ಮಂತ್ರಿಶ್ರೇಷ್ಠನನ್ನು ನೆರೆಯಗ್ರಾಮಕ್ಕೆ ಕಳಿಸಿದ್ದನು. ಆ ಕಾರ್ಯವನ್ನು ಸಾಧಿಸಿ ಕೊಂಡು ಈ ಮೂವರು ಮೇಲೆ ಹೇಳಿದಂತೆ ತಮ್ಮ ರಾಜಧಾನಿಯಾದ ಜನಕಪುರಿಯ ಕಡೆಗೆ ಸಾಗಿದ್ದರು. ಜನಕರಾಜನು ಅದೇ ನೆರಿಸಿದ್ದಮಹಾಸಭೆಯಸುದ್ಧಿಯನ್ನೂ ,ಯಾಜ್ಞ- ವಲ್ಕ್ಯರ ಪ್ರಭಾವವನ್ನೂ ಕುರಿತು ಅವರು ಮಾತಾಡುತ್ತಲಿದ್ದರು. ಮಿತ್ರನು ಯಾಜ್ಞವ ಲ್ಕ್ಯರ ಸ್ನೇಹಿತನಾಗಿದ್ದು, ಘನಪಂಡಿತನಾಗಿದ್ದನು. ಯಾಜ್ಞವಲ್ಕ್ಯರು ಶ್ರೀ ಸೂರ್ಯ ನಾರಾಯಣನ ಉಪದೇಶರೂಪಪ್ರಸಾದದಿಂದ ಹೊಸದಾಗಿ ರಚಿಸುತ್ತಿದ್ದ ಶುಕ್ಲಯಜು ರ್ವೇದ-ವ್ಯವಹಾರದಲ್ಲಿ ಮಿತ್ರನ ಅಂಗವು ಇತ್ತು. ಈ ಕಾರ್ಯಕ್ಕಾಗಿ ಹಲವು ಋಷಿಗಳು ಯಾಜ ವಲ್ಕ್ಯರ ಗೃಹದಲ್ಲಿಕೂಡುತ್ತಿದ್ದರು. ಈ ಮಿತ್ರನಿಗೆ ಮೈತ್ರೇಯಿಯೆಂಬ ಒಬ್ಬ ಅವಿ ವಾಹಿತಳಾದಮಗಳಿದ್ದಳು. ಆಕೆಗೆ ಈಗ ಹದಿನೆಂಟುವರ್ಷದಪ್ರಾಯವಿತ್ತು. ಮೈತ್ರೇಯಿಯ ಸದುಣಗಳ, ಹಾಗು ಲೋಕೋತ್ತರ ಸೌಂದರ್ಯದ ಕೀರ್ತಿಯು ಎಲ್ಲಕಡೆಯಲ್ಲಿಯೂ ಪಸರಿಸಿತ್ತು. ದೊಡ್ಡ ದೊಡ್ಡ ವಿದ್ವಾಂಸರಾದ ತರುಣಬ್ರಾಹ್ಮಣರು ಮೈತ್ರೇಯಿಯ ಪಾಣಿ ಗ್ರಹಣದ ಸುಯೋಗವು ತಮ್ಮ ಪಾಲಿಗೆ ಇರಬಹುದೇ, ಎಂದು ಎದುರು ನೋಡು ತಿದರು. ಆಗಿನಕಾಲದಲ್ಲಿ ಸ್ತ್ರೀಯರು ಆಜನ್ಮ ಬ್ರಹ್ಮಚರ್ಯದಿಂದ ಕಾಲಹರಣಮಾ ಡುವ ಪ್ರಚಾರವಿತ್ತು. ಗಾರ್ಗಿಯು ಇದಕ್ಕೆ ಪ್ರಸಿದ್ಧವಾದ ಉದಾಹರಣವಾಗಿದ್ದಳು. ಗಾರ್ಗಿಯು ಸಾಮಾನ್ಯಸ್ತ್ರೀಯಲ್ಲ, ಯಾಜ್ಞವಲ್ಕ್ಯರೊಡನೆ ಮಹಾಸಭೆಯಲ್ಲಿ ವಾದ ಮಾಡಿದವರಲ್ಲಿ ಆಕೆಯು ಅಗ್ರಗಣ್ಯಳಾಗಿದ್ದಳು. ಗಾರ್ಗಿಯು ಮೈತ್ರೇಯಿಯ ಅಬ ಚಿಯು, ಅಂದರೆ ಮಿತ್ರನ ಹೆಂಡತಿಯ ತಂಗಿಯು. ಮೈತ್ರೇಯಿಯ ಮೇಲೆ ಗಾರ್ಗಿಯ ಪ್ರೀತಿಯು ಬಹಳ. ಅಬಚಿಯ ಸಹವಾಸದಿಂದ ಮೈತ್ರೇಯಿಯ ವಿಚಾರಗಳು ಪರಿ ಪಕ್ವವಾಗತೊಡಗಿದ್ದವು. ಆಕೆಯ ಒಲವು ಅಧ್ಯಾತ್ಮವಿಷಯದಕಡೆಗೆ ವಿಶೇಷವಾಗಿತ್ತು.

ಆದ್ದರಿಂದ ಲಗ್ನ ಮಾಡಿಕೊಳ್ಳುವದರಕಡೆಗೆ ಆಕೆಯಲಕ್ಷವು ವಿಶೇಷವಾಗಿದ್ದಿಲ್ಲ. ತನ್ನ ಅಬಚಿ
12

ಯಂತೆ ಮೈತ್ರೇಯಿಯು ಬ್ರಹ್ಮಚರ್ಯದಿಂದ ಕಾಲಹರಣಮಾಡುವಳೆಂದು ಜನರು ಅನ್ನುತ್ತಿದರು. ಹೀಗೆ ಸದುಣಮಂಡಿತಳೂ, ಲೋಕೋತ್ತರ ಸುಂದರಿಯಾ ಆದ ಮಗಳಿಗೆ ತಕ್ಕವರನನ್ನು ಆರಿಸುವವಿಷಯದಲ್ಲಿ ಮಿತ್ರನು ಯಾವಾಗಲೂ ಚಿಂತಿಸುತ್ತಿದನು. ಮಗಳು ಕಣ್ಣಿಗೆ ಬಿದಾಗೆಲ್ಲ, ಮತ್ತು ಆಕೆಯ ನೆನಪುಆದಾಗೆಲ್ಲ ಮಿತ್ರನ ಮನಸ್ಸು ವಗ್ರವಾಗುತ್ತಿತು. ಹೆಣ್ಣು ಹಡೆದವರ ಸಿತಿಯು ಹೀಗೆಯೇ ಸರಿ!

ಮೇಲೆ ಹೇಳಿದಂತೆ ಮಿತ್ರನುಇಬ್ಬರು ಕ್ಷತ್ರಿಯವೀರರೊಡನೆ ಜನಕಪುರದಕಡೆಗೆ ಹೊರ

ಟದ್ದಾಗ, ಆತನಿಗೆ ಮಗಳ ನೆನಪಾಗಿ ಆತನ ಮನಸ್ಸು ವ್ಯಗ್ರವಾಗಿತ್ತು. ಮಾತಿನಕಡೆಗೆ ಆತನ ಲಕ್ಷವಿದ್ದಿಲ್ಲ. ಈ ಸಂಗತಿಯು ಆ ಕ್ಷತ್ರಿಯವೀರರಿಗೆ ಗೊತ್ತಾಗಿತ್ತು. ತಮ್ಮ ಮಾತಿನಕಡೆಗೆ ಮಿತ್ರನ ಲಕ್ಷವಿಲ್ಲೆಂಬದನ್ನೂ, ಮಹಾಸಭೆಯಾದಂದಿನಿಂದ ಇತ್ತಿತ್ತಲಾಗಿ ಮಿತ್ರನು ಬಹುತರ ಯಾವಾಗಲೂ ಚಿಂತಾಮಗ್ನನಾಗಿರುವನೆಂಬುದನ್ನೂ ಅವರು ಅರಿತಿದ್ದರು; ಮಿತ್ರ ನಂಥ ಜ್ಞಾನಧನನ ಚಿಂತೆಯಕಾರಣವು ಗೊತ್ತಾಗದ್ದರಿಂದ ಅವನ್ನು ಅರಿತುಕೊಳ್ಳಲಿಕ್ಕೆ ಅವರು ಆತುರಪಡುತ್ತಿದ್ದರು; ಆದರೆ ಒಮ್ಮೆಲೆ ಮಿತ್ರನನ್ನು ಕೇಳುವ ಧೈರ್ಯವು ಅವರಿಗೆ ಆಗಿದ್ದಿಲ್ಲ. ಆ ಕ್ಷತ್ರಿಯವೀರರಿಬ್ಬರೂ ಮಿತ್ರನ ಆದರಕ್ಕೆ ಪಾತ್ರರಾಗಿದ್ದರೂ, ಯಾವದೊಂದು ಮಾತನ್ನು ಕುರಿತು ಮಿತ್ರನನ್ನು ತಟ್ಟನೆ ಕೇಳಲಿಕ್ಕೆ ಅವರು ಆತಂಕಪಡುತ್ತಿದ್ದರು. ಆ ಕ್ಷತ್ರಿಯವೀರರಿಬ್ಬರಲ್ಲಿ ಯಜ್ಞದತ್ತನೆಂಬುವನು ಮಿತ್ರ, ನನ್ನು ಕುರಿತು ವಿನಯದಿಂದ -- "ಭಗವನ್, ತಾವು ಚಿಂತಾತುರರಾಗಿರುವಂತೆ ತೋರುತ್ತದೆ. ಮಹಾಸಭೆಯಾದಂದಿನಿಂದ ನಿಮ್ಮ ಮನಸ್ಸಿಗೆ ಸ್ಪಷ್ಟವಿಲ್ಲ. ಮಹಾಸಭೆಗೂ ನಿಮ್ಮ ಚಿಂತೆಗೂ ಸಂಬಂಧವೇನೋ ತಿಳಿಯದಾಗಿದೆ. ಚಿಂತೆಯಕಾರಣವು ನಾನು ಕೇಳ ತಕ್ಕದ್ದಾಗಿದ್ದರೆ ದಯಮಾಡಿ ಹೇಳೋಣಾಗಬೇಕು, ಆಜ್ಞಾಧಾರಕರಾದ ನಮ್ಮಲ್ಲಿ ಪರಕೀಯತ್ವವನ್ನು ವಹಿಸಬಾರದು” ಎಂದು ಕೇಳಿಕೊಂಡನು. ಅದಕ್ಕೆ ಮಿತ್ರನು --

"ವತ್ಸಾ, ನೀನೂ, ವಿಷ್ಣುಮಿತ್ರನೂ ನನಗೆ ಹೊರಗಿನವರಲ್ಲ. ನಿಮ್ಮ ಮುಂದೆ ಹೇಳಲಿಕ್ಕೆ ಯಾವ ಬಗೆಯ ಸಂಕೋಚವೂ ನನಗೆ ಆಗುವಹಾಗಿಲ್ಲ. ನನ್ನ ಚಿಂತೆಯಕಾರಣವು ನನ್ನ ಮಗಳು ಆಗಿರುವಳು. ಆಕೆಯ ಲಗ್ನದ ಚಿಂತೆಯು ಯಾವಾಗಲೂ ನನ್ನನ್ನು ಬಾಧಿಸುತ್ತದೆ. ಅದೊಂದು ಕಾರ್ಯವು ಆದರೆ ನನ್ನ ಮನಸ್ಸಿಗೆ ಸಮಾಧಾನವಾಗುವದು. ಯಜ್ಞದತ್ತಾ, ಏನುಮಾಡುವದು ಹೇಳು. ಬ್ರಹ್ಮಸಂಕಲ್ಪವಿದ್ದಂತೆ ಆಗುತ್ತದೆಂದು ಬಾಯಿಂದ ಯಾರಾದರೂ ಹೇಳಬಹುದು; ಆದರೆ ಹಾಗೆಹೇಳುವದು ಕೇವಲ ಪ್ರಯತ್ನಾಂತದಲ್ಲಿ ಸಮಾಧಾನಪಡಲಿಕ್ಕೆ ತಕ್ಕಮಾತಲ್ಲದೆ, ಪ್ರಯತ್ನ ಮಾಡದೆ ಆ ಮಾತನ್ನು ನಂಬಿ ಸುಮ್ಮನೆ ಕುಳಿತುಕೊಳ್ಳತಕ್ಕದಲ್ಲ. ಯತ್ನಮಾಡುವದು ನಮ್ಮ ಕರ್ತವ್ಯವಾದ್ದರಿಂದ ಯೋಗ್ಯವರಪ್ರಾಪ್ತಿಗಾಗಿ ಯತ್ನಮಾಡಲೇಬೇಕು. ಹಾಗೆ ನಾನು ಈವರೆಗೆ ಯತ್ನಿಸಿದ್ದರೂ, ಆಯತ್ನಕ್ಕೆ ಸಿದ್ದಿಯು ದೊರೆತಿರುವದಿಲ್ಲ. ಮೈತ್ರೇಯಿಯ ಶಿಕ್ಷಣದ ವಿಷಯವಾಗಿ ನಾನು ದುರ್ಲಕ್ಷಮಾಡಿರುವದಿಲ್ಲ. ಗಾರ್ಗಿಯಂಥ ಯೋಗ್ಯತಾಸಂಪನ್ನಳಾದ ಸ್ತ್ರೀಯಸಹವಾಸವೂ ಮೈತ್ರೇಯಿಗೆ ಇರುತ್ತದೆ. ಆದ್ದರಿಂದ ಆ ನನ್ನಮಗಳು ಕೇವಲ ವಿಷಯೋಪ
15

ಭೋಗದ ದೃಷ್ಟಿಯಿಂದ ಲಗ್ನ ಮಾಡಿಕೊಳ್ಳಬೇಕೆಂದು ಇಚ್ಛಿಸುವದಿಲ್ಲ. ಕೇವಲ ಶ್ರೀಮಂತನಾದ ವರನು ಆಕೆಗೆ ಸೇರನು. ಆಕೆಯ ವಿದ್ಯೆಯೇ ಆಕೆಯ ಲಗ್ನಕ್ಕೆ ವಿಘ್ನವಾದ ತಾಗಿದೆ. ಮೊನ್ನೆ ಮಹಾಸಭೆಯಲ್ಲಿ ಯಾಜ್ಞವಲ್ಕರ ವಿದ್ಯಾಪ್ರಭಾವವನ್ನು ನೋಡಿ ಮೈತ್ರೇಯಿಯು--" ( ಆದರೆ ಯಾಜ್ಞವಲ್ಯರನ್ನು ಮದುವೆಯಾಗಬೇಕು, ಇಲ್ಲದಿದ್ದರೆ ತನ, ಅಬಚಿಯಾದ ಗಾರ್ಗಿಯಂತೆ ಆಜನ್ಮ ಬ್ರಮ್ಮಚರ್ಯದಿಂದ ಇರಬೇಕು, ” ಎಂದು ನಿಶ್ಚಯಸಿರುವಂತೆ ಕೇಳುತ್ತೇನೆ; ಆದ್ದರಿಂದ ನನಗೆ ನೀಗಲಾರದ ಚಿಂತೆಯು ಪ್ರಾಪ್ತ ವಾದಂತಾಗಿರುತ್ತದೆ .

ಮಿತ್ರನ ಈ ಮಾತುಗಳನ್ನು ಕೇಳಿ ಯಜ್ಞದತ್ತನು- ಭಗವನ್ , ಹದಿನೆಂಟ

ನೆಯ ವರ್ಷದ ವಯಸ್ಸಿನಲ್ಲಿಯೇ ಆಧ್ಯಾತ್ಮವಿಷಯದ ಕಡೆಗೆ ಮನಸ್ಸು ತಿರುಗಿ , ಯಾಜ್ಞವಲ್ಕರಂಥ ಬ್ರಹ್ಮನಿಷ್ಟರನ್ನು ಲಗ್ನವಾಗಲು ಬಯಸುವದು ನಿಮ್ಮ ಮಗ ಳಿಗೆ ಭೂಷಣವೇ ಸರಿ ನಿಮ್ಮ ಮಗಳಲ್ಲಿಯಲ್ಲದೆ ಇಂಥ ಘನತರವಾದ ಯೋಗ್ಯ, ತೆಯು ಅನರಲ್ಲಿ ಹಾಗೆ ಬರಬೇಕು ? ಕೇವಲ ದ್ರವಕ್ಕೆ, ರೂಪಕೆ, ವಿದ್ಯೆಗೆ, ಆಡಂಬರಕ್ಕೆ ಮರುಳಾಗಿ ಲಗ್ನವಾಗುವದು ಸಾಮಾನ್ಯವಧುಗಳ ಮಾತಾಯಿತು; ಆದರೆ ತಮ್ಮಂಥವರ ಮಗಳು ಯಾಜ್ಞವಲ್ಕರಂಥ ಬ್ರಹ್ಮನಿಷ್ಠರನ್ನು ವರಿಸಲಿಚ್ಛಿಸುವದು ಸಂತೋಷದ ಸಂಗತಿಯೇ ಸರಿ! ಯಾಜ್ಞವಲ್ಯರಿಗಾದರೂ ನಿಮ್ಮ ಮಗಳನ್ನು ಲಗ, ವಾಗುವದು ಬಹುಮಾನದ ಲಕ್ಷಣವೇ ಆಗಿರುವದು! ಮೈತ್ರೇಯಿಯಂಥ ತಮಗೆ ಅನು ರೂಪವಾದ ವಧುವು , ಹುಡುಕುತ್ತ ಹೋದರೂ ಯಾಜ್ಞವಲ್ಯರಿಗೆ ದೊರಕಲಿಕ್ಕಿಲ್ಲ. ಆದ್ದರಿಂದ ಯಾಜ್ಞವಲರೂ ಸಂತೋಷದಿಂದ ಮೈಯಿಯ ಪಾಣಿಗ್ರಹಣ ಮಾಡ ಬಹುದು ; ಅಂದಬಳಿಕ ತಾವು ಚಿಂತಿಸುವದೇಕೆ?' ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಮಿತ್ರನು--LC ವತ್ಸಾ , ಯಾಜ್ಞವಲ್ಯರ ಸಂಸಾರಸುಖದ ಕಲ್ಪನೆಯು ನಿನಗೆ ಇರುವ ದಿಲ್ಲಾದ್ದರಿಂದ, ಅವರು ಸಹಜವಾಗಿ ನನ್ನ ಮಗಳನ್ನು ಲಗ್ನವಾಗಬಹುದೆಂದು ನೀನು ತಿಳಿಯು; ಆದರೆ ಹಾಗೆ ತಿಳಿಯುವದು ಸರ್ವಥಾ ಯೋಗ್ಯವಲ್ಲ, ಯಾಜ್ಞವ ಲ್ಯರ ಲಗ್ನವಾಗಿರುವದೆಂಬದಿ ನಿನಗೆ ಗೊತ್ತಿರಬಹುದು , ನನ್ನ ಪ್ರಿಯಮಿತ

ನಾದ ಕಾತ್ಯನೆಂಬವನ ಮಗಳಾದ ಕಾತ್ಯಾಯನಿಯೊಡನೆ ಅವರ ಲಗ್ನವಾಗಿರುವದು. ಆ ತರುಣಿಯು ಬಹುತರ ಎಲ್ಲಬಗೆಯಿಂದಲೂ ಯಾಜ್ಞವಲ್ಕರಿಗೆ ಒಪ್ಪುವಂಥ ಹೆಂಡತಿ ಯಾಗಿರುತ್ತಾಳೆ. ಆಕೆಯು ಅತ್ಯಂತ ಸುಂದರಿಯು, ಗೃಹಕೃತ್ಯದಲ್ಲಿ ದಕಳು , ಸೌಮ್ಯ ಸ್ವಭಾವದವಳು , ಮಧುರಭಾಷಣವು ಆಕೆಯ ಹುಟ್ಟುಗುಣವಾಗಿರುವದು. ಒಮ್ಮೆ ಕಾತ್ಯಾಯನಿಯನ್ನು ನೋಡಿದವರ ಮನಸ್ಸಿನಲ್ಲಿ ಆ ಸದ್ದುಣಮಂಡಿತವಾದ ಪ್ರೇಮಲಮೂರ್ತಿಯು ಸ್ಥಿರಗೊಳ್ಳುವದು, ನಾನು ಯಾಜ್ಞವಲ್ಯರ ಮನೆಗೆ ಹೋದಾ ಗೆಲ್ಲ ಆ ಪತಿಭಕ್ತಿಪರಾಯಣಳು, ಪ್ರಮಪುರಸ್ಕೃರವಾದ ಮೃದುಹಾಸದಿಂದ ನನ್ನ, ಸಾ'ಗತಮಾಡುವಳು. ನನ್ನ ವಿಷಯವಾಗಿ ಆಕೆಯ ಅಂತಃಕರಣದಲ್ಲಿ ಅತ್ಯಂತ ಆದರ ಭಾವವು ವಾಸಿಸುತ್ತಿರುವದರಿಂದ ನನ್ನನ್ನು ನೋಡಿದಕೂಡಲೆ ಆಕೆಯ ನಗೆಮೊಗದಲ್ಲಿ
14

ಅತ್ಯಂತ ವಿನಯಭಾವವು ವ್ಯಕ್ತವಾಗುತ್ತದೆ. ಆ ಕಾಲದ- ಆ ದಿನ ಮೂರ್ತಿಯನ್ನು ನೋಡಿದಕೂಡಲೆ , ಸಾಕ್ಷಾತ್ ದೇವತೆಯೇ ಭೂತಳದಲ್ಲಿ ಅವತರಿಸಿರುವಂತೆ ನನಗೆ ಭಾಸ ನಾಗುತ್ತದೆ. ಇಂಥ ಸದ್ಗುಣಸಂಪನ್ನಳಾದ ಹೆಂಡತಿಯ ಮೇಲೆ ಯಾಜ್ಞವಲ್ಐಕರ ಅಕೃತ್ರಿಮಪ್ರೇಮವು ಎಷ್ಟಿರುತ್ತದೆಂಬದನ್ನು ನಾನು ಬಲ್ಲೆನು; ಆದ್ದರಿಂದ ಒಂದು ಪಕ್ಷ ಧಲ್ಲಿ ಯಾಜ್ಞವಲ್ಕ್ಯ ನಮ್ಮ ಮೈತ್ರೇಯಿಯನ್ನು ಲಗ್ನವಾಗಲಿಚ್ಛಿಸಿದರೊ ,ಅವರ ಸುಂದರಸಂಸಾರದಲ್ಲಿ ಮಣ್ಣುಗೂಡಿಸುವ ಎರಡನೆಯ ಲಗ್ನದ ಯೋಗವನ್ನು ನಾನು ಎಂದಿಗೂ ತರಲಿಚ್ಛಿಸುವದಿಲ್ಲ. ಅದರಲ್ಲಿ ನನ್ನ ಮಗಳು ತರುಣಿಯೂ, ಅನನುಭವಿಯ ಇರುವದರಿಂದ, ಆಕೆಯು ಅವರೊಡನೆ ಯಾವಾಗಲೂ ವಿವೇಕದಿಂದ ನಡೆದುಕೊಳ್ಳುವ ಳೆಂಬ ನಿಯಮವೂ ಇಲ್ಲ ! ಅಂದಬಳಿಕ ಯಾಜ್ಞವಲ್ಕರಿಗೆ ಇಲ್ಲದ ತೊಂದರೆಯನ್ನು ನಾನು ಯಾಕೆ ಉಂಟುಮಾಡಲಿ ?

ಮಿತ್ರನ ಈ ಮಾತುಗಳನ್ನು ಕೇಳಿ ಯಜ್ಞದತ್ತನಿಗೆ ಸ್ವಲ್ಪ ಸಂಶಯ ಉಂಟಾ,

ಯಿತು. ಆತನು ಮತ್ತೆ ಮಿತ್ರನನ್ನು ಕುರಿತು-"ಮುನಿಶ್ರೇಷ್ಠಾ, ಭಗವತೀಕಾತ್ಯಾಯನಿ ಯು ಪ್ರತ್ಯಕ್ಷ ದೇವತೆಯು ಅವತರಿಸಿದಂತೆ ಇರುವಳೆಂದು ನೀವು ಹೇಳುತ್ತಿರುವಾಗ, ಆಕೆ ಯು ಬಹುತರ ಯಾಜ್ಞವಲ್ಕರಿಗೆ ಒಪ್ಪುವಂಥ ಹೆಂಡತಿಯಾಗಿರುವಳೆಂದು ಹೇಳಿದ್ದರಿಂದ ನನಗೆ ಸಂಶಯ ಉಂಟಾಯಿತು. "ಬಹುತರ"ಎಂಬ ಶಬ್ದ ಪ್ರಯೋಗದಿಂದ ಕಾತ್ಯಾಯನಿ ಯಲ್ಲಿ ಏನೋ ಕೊರತೆಯಿದ್ದಂತೆ ತೋರುತ್ತದೆ; ಆದರೆ ಆ ಕೊರತೆಯು ಯಾವದು ?" ಎಂದು ಕೇಳಲು, ಮಿತ್ರನು _"ವತ್ಸಾ, ಕಾತ್ಯಾಯನಿಯ ಒಲವು ಆಧ್ಯಾತ್ಮವಿಷಯದ ಕಡೆಗೆ ವಿಶೇಷವಾಗಿ ಇಲ್ಲೆಂಬದೇ ಆ ಕೊರತೆಯು, ಆ ಕೊರತೆಯು ಕೇವಲ ಯಾಜ್ಯ ವಲ್ಕರ ದೃಷ್ಟಿಯಿಂದಲ್ಲದೆ, ಅನ್ಯರ ದೃಷ್ಟಿ ಯಿಂದ ಅಲ್ಲ. ಕಾತ್ಯಾಯನಿಯು ಪತಿಸೇವೆ, ಮಕ್ಕಳಆರೈಕೆ, ಬೇರೆ ಗೃಹಕೃತ್ಯಗಳು ಇವುಗಳಲ್ಲಿ ಯಾವಾಗಲೂ ತೊಡಗಿಹೋಗಿರುವದ ರಿಂದ, ಆಧ್ಯಾತ್ಮವಿಚಾರಕ್ಕೆ ಆಕೆಗೆ ಅವಸರವೇ ದೊರೆಯುವದಿಲ್ಲ. ಆಧ್ಯಾತ್ಮ ದೃಷ್ಟಿಯಿಂ ದ ಇದು ಕೆಲಮಟ್ಟಿಗೆ ಅನಿಷ್ಟವಾಗಿ ತೋರಿದರೂ, ಸುಂದರ ಸಂಸಾರದೃಷ್ಟಿಯಿಂದ ಇದು ಅತ್ಯಂತ ಇಷ್ಟವಾಗಿರುವದು,”ಅನ್ನಲು ಎಷ್ಟು ಮಿತ್ರನು-ಭಗವನ್, ನೀವು ಏನು ಹೇಳಿದರೂ, ಯಾಜ್ಞವಲ್ಕ್ಯರು ನಿಮ್ಮ ಮಗಳೊಡನೆ ಲಗ್ನವಾಗುವದಕ್ಕೆ ಈ ಕೊರ ತೆಯು ಆಸ್ಪದಕೊಡುತ್ತದೆಂದು ನಾನು ಹೇಳದೆ ಇರಲಾರೆನು; ಆದರೆ ಈ ಕೊರತೆಯನ್ನು ಪೂರ್ಣಮಾಡಿಕೊಳ್ಳುವದು ಬಿಡುವದು ಯಾಜ್ಞವಲ್ಕ್ಯರ ಕಡೆಗಿರುವದೆಂಬದು ನಿಜವು. ತಮ್ಮಂಥವರು ಅದಕ್ಕಾಗಿ ಪ್ರಯತ್ನ ಮಾಡುವದು, ಸ್ವಾರ್ಥವೆಂಬ ದೃಷ್ಟಿಯಿಂದ ಗೌಣವಾ ದದ್ದೇಸರಿ, ತಮ್ಮಂಥವರು ಅದಕ್ಕೆ ಮನಸ್ಸೊ ಮಾಡಲಾರಿರಿ,” ಎಂದು ನುಡಿಯುತ್ತಿರಲು, ಮಿತ್ರನ ಲಕ್ಷವು ಆ ಅರಣ್ಯದೊಳಗಿನ್ನದೊಂದು ದಿನ್ನೆಯ ಕಡೆಗೆ ಹೋಯಿತು. ಆತನು ಒಮ್ಮಿಂದೊಮ್ಮೆ ನಿಂತು ಆ ದಿನ್ನೆಯಕಡೆಗೆ ನೋಡಹತ್ತಿದನು. ಆತನ ದೃಷ್ಟಿಯು ಭಯ ರಸವಾಯಿತು. ಆ ಮೂವರು ದಟ್ಟವಾದ ಅರಣ್ಯದಲ್ಲಿ ಸಾಗಿದ್ದು, ಅವರು ಕ್ರಮಿಸು

ತಿದ್ದ ಕಾಲಧಾರಿಯು ಬಲುಕಿರಿದಾಗಿತ್ತು. ಮಾರ್ಗದ ಎಡ-ಬಲದಲ್ಲಿ ಗಗನಚುಂಬಿತ
15

ವೃಕ್ಷಗಳ ದಟ್ಟಣೆಯಿತ್ತು. ಮಿತ್ರನಿಗೆ ಆ ದಿನ್ನೆಯ ಮೇಲೆ, ಗಿಡಗಳಲ್ಲಿ ಮುಚ್ಚಿದಂತೆ ಆಗಿದ್ದ ಒಂದು ಮನುಷ್ಯಾಕೃತಿಯು ಕಾಣಿಸಿತು. -ಮುಂದಕ್ಕೆ ಸ್ವಲ್ಪ ಸಾಗಿಹೋಗಲು, ಯಾವನೋ ಒಬ್ಬ ತಪೋನಿಷ್ಠ ಮುನಿಯು ಧ್ಯಾನಸ್ಥನಾಗಿ ಕುಳಿತಿದ್ದು, ಒಂದು ಭಯಂಕ ರವಾದ ಹುಲಿಯು ಅವನ ಮೇಲೆ ಬೀಳುವದಕ್ಕೆ ಜಪ್ಪು ಹಾಕಿತ್ತು. ಇದನ್ನು ನೋಡಿ ಮಿತ್ರನು ಮುಂದಕ್ಕೆ ಸಾಗುತ್ತಿರಲು, ಆ ತಪೋನಿಷ್ಠನು ಯಾಜ್ಞವಲ್ಕ್ಯರೇ ಎಂಬದು ಆತನಿಗೆ ಗೊತ್ತಾಯಿತು. ಈಶ್ವರಧ್ಯಾನಾಸಕ್ತರಾದ ಯಾಜ್ಞವಲ್ಕ್ಯರಿಗೆ ಹುಲಿಯ ಸುದ್ದಿ ಯು ಹ್ಯಾಗೆ ಗೊತ್ತಾಗಬೇಕು? ಯಾಜ್ಞವಲ್ಕರಮೇಲೆ ಒದಗಿದ ಸಂಕಟವನ್ನು ಮಿತ್ರನು ತನ್ನ ಕ್ಷತ್ರಿಯ ವೀರರಿಗೆ ತಿಳಿಸಲು, ಕೂಡಲೆ ಅವರು ಬಾಣಗಳನ್ನು ಗುರಿಯಿಟ್ಟು ಹುಲಿಯಮೇಲೆ ಬಿಟ್ಟರು. ಆಗ ಆ ಎರಡು ಬಾಣಗಳು ಹುಲಿಯ ಒಂದೊಂದು ಕಣ್ಣು ಗಳಲ್ಲಿ ಸೇರಿ, ಅದರ ಹೃದಯವನ್ನು ಪ್ರವೇಶಿಸಿದವು. ಅಷ್ಟರಲ್ಲಿ ಮತ್ತೆ ಆ ಕ್ಷತ್ರೀಯ ವೀರರ ಕೆಲವು ಬಾಣಗಳು ಹುಲಿಯ ಹೃದಯವನ್ನು ಭೇದಿಸಲು, ಹುಲಿಯು ನೆಲಕ್ಕುರು ಳಿತು. ಅದು ಪ್ರಾಣಸಂಕಟದಿಂದ ಭಯಂಕರವಾಗಿ ಗರ್ಜಿಸುವಾಗ ಧ್ಯಾನಸ್ಥರಾದ ಯಾ ಜ್ಞವಲ್ಕ್ಯರು ಎಚ್ಚತ್ತರು. ಅಷ್ಟರಲ್ಲಿ ಮಿತ್ರನೂ, ಯಜ್ಞದತ್ತ-ವಿಷ್ಟು ಮಿತ್ರರೂ ಧಾವಿಸಿ ಅಲ್ಲಿಗೆ ಹೋಗಿದ್ದರು. ಯಾಜ್ಞವಲ್ಕ್ಯರು ಕಣ್ಣೆರೆದು ನೋಡಲು, ಒದಗಿದ ಪ್ರಸಂ ಗವು ಅವರ ಕಣ್ಣಿಗೆ ಬಿದ್ದಿತು. ಆಗ ಯಾಜ್ಞವಲ್ಕ್ಯರು ಕೃತಜ್ಞತೆಯಿಂದ ಮಿತ್ರನ ಚರಣಸ್ಪರ್ಶಮಾಡಿ, ಕ್ಷತ್ರಿಯವೀರರನ್ನು ಪ್ರೇಮದಿಂದ ಆಲಿಂಗಿಸಿದರು. ಆಕಸ್ಮಿಕ ಪ್ರಸಂ ಗದಿಂದ ತಮಗೊದಗಿದ ಸಂಕಟದ ನಿವಾರಣವಾಯಿತೆಂದು ಯಾಜ್ಞವಲ್ಕ್ಯರು ಕೃತಜ್ಞ ತೆಯಿಂದ ಶತಶಃ ಆ ಮೂವರ ಅಭಿನಂದನಮಾಡಿದರು.

ಮೇಲೆ ಹೇಳಿದಂತೆ ಮಿತ್ರನು ಯಾಜ್ಞವಲ್ಕ್ಯರ ಪ್ರಾಣರಕ್ಷಣಮಾಡಿದರೂ, ತಾನು

ಮಾಡಿದ ಉಪಕೃತಿಯ ಭಾರವನ್ನು ಆತನು ಯಾಜ್ಞವಲ್ಕ್ಯರಮೇಲೆ ಸರ್ವಥಾ ಹೊರಿಸ ಲಿಲ್ಲ. ನನ್ನಿಂದ ನಿಮ್ಮ ಪ್ರಾಣರಕ್ಷಣವಾಗಿರುವದರಿಂದ ನನ್ನ ಮಗಳ ಪಾಣಿಗ್ರಹಣಮಾ ಡಬೇಕೆಂದು ಹೇಳುವ ವಿಚಾರವು ಸಹ ಆ ಮುನಿಯ ಮನಸ್ಸಿನಲ್ಲಿ ಹೊಳೆಯಲಿಲ್ಲ. ಆ ಕಾಲದ ಆರ್ಯಾವರ್ತದ ಸಾಮಾಜಿಕ ಪದ್ಧತಿಯಂತೆ, ಮಾದಲಲಗ್ನವಾದ ಮನುಷ್ಯನಿ ಗೂ ಸುಸ್ವರೂಪಿಯೂ, ಸದ್ಗುಣಸಂಪನ್ನಳೂ ಆದ ಹುಡುಗೆಯನ್ನು ಕೊಡುವದು ಅಯೋಗ್ಯವೆಂದು ತಿಳಿಯಲ್ಪಡುತ್ತಿದ್ದಿಲ್ಲ. ಇಂಥ ಸದ್ಗುಣ ಸಂಪನ್ನಳಾದ ಸುಂದರಕನ್ಯೆಯ ಪ್ರಾಪ್ತಿಯಾಗುವದು ಬಹುಮಾನದ ಲಕ್ಷಣವೆಂದು ಆಗಿನ ಜನರು ತಿಳಿಯುತ್ತಿದ್ದರು; ಆದರೆ ಇದುಸಮಾಜದೊಳಗಿನ ಸರ್ವಸಾಧಾರಣ ಜನರಮಾತಾಯಿತು; ಆದರೆಯಾಜ್ಞವಲ್ಕ್ಯರೂ, ಮಿತ್ರನೂ ಸಾಮಾನ್ಯಜನರೊಳಗಿನವರಲ್ಲವೆಂಬದನ್ನು ನಾವು ವಾಚಕರಿಗೆ ಬರೆದು ತಿಳಿಸಲ ವಶ್ಯ ವಿಲ್ಲ; ಆ ದ್ದ ರಿ ೦ ದ, ಲೋ ಕ ವ ೦ ದ್ಯ ರಾ ದ ಯಾಜ್ಞವಲ್ಕ್ಯರೊಡನೆ ಮೈತ್ರೇಯಿಯ ದ್ವಿತೀಯ ಸಂಬಂಧವಾಗುವದು ಶಕ್ಯವಾಗಿದ್ದಿಲ್ಲ. ಮೇಲೆ ಹೇಳಿ

ದಂತೆ ಯಾಜ್ಞವಲ್ಕ್ಯರ ಪ್ರಾಣರಕ್ಷಣದ ಯೋಗವು ಒದಗಿದ್ದರಿಂದ ಮಿತ್ರನೊಡನೆ
16

ಯಾಜ್ಞವಲ್ಕ್ಯರ ಸ್ನೇಹದ ಅಭಿವೃದಿ ಯಾಗಿ, ಅವರಿಬ್ಬರ ಮನೆಯೊಳಗಿನ ಹೆಣ್ಣು ಮಕ್ಕಳ ಪರಸ್ಪರ ಸ್ನೇಹವೂ ಹೆಚ್ಚಿತು. ಒಬ್ಬರು ಮತ್ತೊಬ್ಬರ ಮನೆಗೆ ಮೇಲೆ ಮೇಲೆ ಬರಹತ್ತಿದರು, ಹೋಗಹತ್ತಿದರು. ಕಾತ್ಯಾಯನೀ-ಮೈತ್ರೇಯಿಯರ ಪ್ರೇ ಮವು ದಿನದಿನಕ್ಕೆ ಹೆಚ್ಚುತ್ತ ಹೋಯಿತು. ಕಾತ್ಯಾಯನಿಯು ಮೈತ್ರೇಯಿಗಿಂತ ಎರಡೇ ವರ್ಷಕ್ಕೆ ಹಿರಿಯಳಿದ್ದದ್ದರಿಂದ, ಅವರಿಬ್ಬರು ಸಾಧಾರಣ ಓರಿಗೆಯವರಾಗಿದ್ದ ರೆಂದು ಹೇಳಬಹುದು. ಕಾತ್ಯಾಯನಿಯಂತೆ ಮೈತ್ರೇಯಿಯೂ ಲಾವಣ್ಯವತಿಯಾಗಿ ದ್ದಳು. ಇಷ್ಟರಮಟ್ಟಿಗೆ ಅವರಲ್ಲಿ ಸಾಮ್ಯವಿದ್ದು, ಅವರಲ್ಲಿಯ ಗುಣಗಳು ತೀರ ವಿರು ದ್ದವಾಗಿದ್ದವು . ವಿರುದ್ಧ ಗುಣಗಳೆಂದರೆ, ಒಬ್ಬರಲ್ಲಿಯವು ಸದ್ಗುಣಗಳು, ಇನ್ನೊ ಬ್ಬರಲ್ಲಿಯವು ದುರ್ಗುಣಗಳು, ಎಂಬರ್ಥವಲ್ಲ. ಇಬ್ಬರೂ ಸದ್ಗುಣಿಗಳೇ ಆಗಿದ್ದರು. ಕಾತ್ಯಾಯನಿಯಲ್ಲಿಯ ಸದ್ಗುಣಗಳು ಸಾಂಸಾರಿಕವಾಗಿದ್ದವು , ಮೈತ್ರೇಯಿಯಲ್ಲಿಯವು ಆಧ್ಯಾತ್ಮಿಕವಾಗಿದ್ದವು. ಒಬ್ಬರ ಗುಣಗಳು ಮತ್ತೊಬ್ಬರಿಗೆ ಮಹತ್ವದವಾಗಿ ತೋರಿ, ಅವು ತನ್ನಲ್ಲಿರದೆ ಈಕೆಯಲ್ಲಿರುತ್ತವೆಂದು ತಿಳಿದು ಅವರು ಒಬ್ಬರನ್ನೊಬ್ಬರು ಆದರಿಸುತ್ತಿದ್ದರು , ಪ್ರೀತಿಸುತ್ತಿದ್ದರು. ಪರಸ್ಪರ ದರ್ಶನದಿಂದ ಅವರಿಗೆ ಆನಂದ ವಾಗುತ್ತಿತ್ತು, ವಿಯೋಗದಿಂದ ದುಃಖವಾಗುತ್ತಿತ್ತು. ಕಾತಾ ಯನಿಯ ಅಂತಃಕರ ಣವು ಅತ್ಯಂತ ಕೋಮಲವಿದ್ದದ್ದರಿಂದ , ಯಾವದೊಂದು ಸಂಗತಿಯ ಪರಿಣಾಮವು ಆಕೆಯ ಮನಸ್ಸಿನ ಮೇಲೆ ಬಹುಬೇಗ ಆಗುತ್ತಿತ್ತು. ತನಗೆ ಅನುಕೂಲವಾಗಿ ತೋರುವ ವಸ್ತುಗಳ ಮೇಲೆ ಆಕೆಯ ಪ್ರೇಮವು ತಟ್ಟನೆ ಕುಳಿತುಕೊಳ್ಳುತ್ತಿತ್ತು; ಅವುಗಳ ಗುಣದೋಷಗಳ ವಿವೇಚನದ ಕಡೆಗೆ ಆಕೆಯ ಮನಸ್ಸು ಹರಿಯುತ್ತಿದ್ದಿಲ್ಲ. ಆಕೆಯ ಸೇರಿಕೆಯ ವಸ್ತುವು ಆಕೆಯ ಎದುರಿಗೆ ಬಂದರಾಯಿತು, ಕೂಡಲೆ ಲೋಹ ಚುಂಬಕದಂತೆ ಆಕೆಯ ಮನಸ್ಸು ಅತ್ತಕಡೆಗೆ ಹರಿದುಹೊಗುತಿತ್ತು. ಆಕೆಯ ಮನೋವಿಕಾರಗಳು ಅತ್ಯಂತ ತೀವ್ರವಾಗಿದ್ದವು . ತನಗೆ ಅನುಕೂಲ ಸಂಗತಿಗಳ ಯೋಗವಾದ ಕೂಡಲೆ ಆಕೆಯಮುಖವು ಪ್ರಫುಲ್ಲಿತವಾಗಿ , ಅದರಲ್ಲಿ ಮುಗುಳುನಗೆಯು ಮಿನುಗುತ್ತಿತ್ತು. ಇದಕ್ಕೆ ವಿರುದ್ಧವಾಗಿ, ಆಕೆಗೆ ಸೇರದಸಂಗತಿಯ ಯೋಗವಾದ ಕೂಡಲೆ ಆಕೆಯ ಚಿತ್ತವು ಕ್ಷೋಭಿಸುತಿತ್ತು. ದುಃಖದ ಪ್ರಸಂಗವನ್ನು ಕಣು! ಮುಟ್ಟಿ ನೋಡುವದಂತು ಇರಲಿ , ಕಿವಿಯಿಂದ ಕೇಳಿದರೆ ಸಾಕು , ಆಕೆಯ ಕಣ್ಣುಗ ಳಲ್ಲಿ ನೀರು ಬರುತ್ತಿದ್ದವು. ಆಕೆಯ ಮನಸ್ಸು ಗಂಭೀರವಾದದ್ದಲ್ಲ. ಆಕೆಯು ವಿಲಾ ಸದಲ್ಲಿಯೂ, ಕಥೆ ಕೇಳುವಲ್ಲಿಯೂ ತಾಸಿಗೆ ತಾಸು ಕಳೆಯುತ್ತಿದ್ಧಳು. ಆಕೆಯ ಪತಿಯು ಅಂಥ ವಿದ್ವಾಂಸನಿದ್ದರೂ , ಆತನಸಂಗಡ ಪಾರಮಾರ್ಥಿಕ ವಿಷಯದ ಭಾಷಣ ಮಾಡಲಿಕ್ಕೆ ಆಕೆಯ ಮನಸ್ಸು ಇಚ್ಚಸುತಿ ದಿಲ್ಲ ; ಹೀಗಿದ್ದರೂ ತನ್ನ ಸಂಸಾರಕ್ರುತ್ಯ ಗಳಲ್ಲಿ ಆಕೆಯು ಅತ್ಯಂತ ಜಾಗರೂಕಳಾಗಿದ್ದಳು . ಆಕೆಯ ಪತಿಭಕ್ತಿಯು ಶ್ಲಾಘ ನೀಯವಾಗಿತು . ತನ್ನ ಮಕ್ಕಳ ಮೇಲಿನ ಆಕೆಯ ಅಕ್ಕರೆಯು ವಿಲಕ್ಷಣವಾಗಿತ್ತು. ತನ್ನ ಮಕ್ಕಳು ತನಗೆ ಅಲಂಕಾರವೆಂದು ಆಕೆಯು ತಿಳಿಯುತ್ತಿದ್ದಳು. ಮಕ್ಕಳ

ಸಂಗೋಪನದಲ್ಲಿ ಸರ್ವಥಾ ದುರ್ಲಕ್ಷ ಮಾಡುತ್ತಿದ್ದಿಲ್ಲ. ಪತಿಗೆ ಸುಖವನ್ನುಂಟು
17

ಮಾಡುವಲ್ಲಿ, ಮಕ್ಕಳ ಆರೈಕೆಯಲ್ಲಿ ಆಕೆಯ ಕಾಲಹರಣವಾಗುತ್ತಿತ್ತು. ಆಕೆಯ ಮನೆಯೆ‍೦ದರೆ ಸ್ವಚ್ಛತೆ, ಓರಣ, ಅಚ್ಚು ಕಟ್ಟು ವನಗಳ ಶ್ರೇಷ್ಠಮಾದರಿಯಗಿತ್ತೆ೦ದು ಹೇಳಬಹುದು. ಇದೆ ಸಂಸಾರಸುಬಗ ವಲ್ಲವೇ !

ಮೈತ್ರೇಯಿಯ ಸ್ವಭಾವ ಎಷ್ಟೋ ಸಂಗತಿಗಳಲ್ಲಿ ಕಾತ್ಯಾಯನಿಯ ಸ್ವಭಾ

ವಕ್ಕೆ ತೀರ ವಿರುದ್ಧವಾಗಿತ್ತು. ಮೈತೆಯಿದು ಅಂತಃಕರಣದಲ್ಲಿ ಪ್ರೇಮಕ್ಕೆ ಆಸ್ಪ ದವಿದ್ದಿಲ್ಲವೆಂತಲ್ಲ ; ಆದರೆ ಆಕೆಯ ಪ್ರೇಮಕ್ಕೆ ಙ್ಞಾನದ ಮಯ್ರಾದೆಯಿದ್ದದ್ದರಿ೦ದ, ಕಾತ್ಯಾಯನಿಯ ಪ್ರೇಮದಂತೆ ಅದು ಯಾವ ವಸ್ತುವಿನ ಮೇಲೆಯೂ ತಟ್ಟನೆ ಕುಳಿತು ಕೊಳ್ಳುತ್ತಿದ್ದಿಲ್ಲ. ಯಾವದೊಂದು ಸಂಗತಿಯ, ನಿಜವಾದ ಸ್ವರೂವಜ್ಞಾನವಾದಹೊ ರತು ಮೈತ್ರೇಯಿಯ ಪ್ರೇಮಕ್ಕೆ ಮಾತ್ರ ಆಗುತಿದ್ದಿಲ್ಲ . ಆಕೆಯ ಮನೋವಿ ಕಾರಗಳಿಗೆ ವಿವೇಕರ ಪ್ರತಿಬಂಧವಿದ್ದದ್ದರಿಂದ, ಸುಖ ದಃಖಗಳ, ಅಥವಾ ಶತ್ರುತ್ವ- ಮಿತ್ರತ್ವಗಳ ಪರಿಣಾಮವು ಆಕೆಯ ಮನಸ್ಸಿನ ಮೇಲೆ ತಟ್ಟನೆ ಆಗುತ್ತಿದ್ದಿಲ್ಲಿ. ಪ್ರೌಢ ರಲ್ಲಿಯ ಗಾಂಭೀರ್ಯ, ದೊಡ್ಡಸ್ತಿಗೆ , ನಿರ್ದಾರ ಇ ಮೈತ್ರೆಯಿಯ ಮುಖದಲ್ಲಿ ಈಗಿನಿಂದಲೇ ಮಿನುಗುತ್ತಿದ್ದವು . ಸ್ತ್ರಿಯರ ಮನೋರಂಜನದ ಸ್ವಾಭಾವಿಕ ಸಾಧನ ಗಳಾದ ವಿಲಾಸ , ಕಥಾತ್ರವಣ ಇವುಗಳು ಮೈತ್ರೇಯಿಯ ಮನಸ್ಸು ಬಹಳಹೊತ್ತು ತೊಡಗಿರುತ್ತಿದ್ದಿಲ್ಲ. ಆಳೆದು ಕಣ್ಣುಗಳು ಮಹಾತ್ಮನ ಸ್ವರೂಪವನ್ನು ನೋಡುವ ವಿಷಯದಲ್ಲಿಯೂ , ಕಿವಿಗಳು ವರಮಾತ್ಮನ ಗುಣಾನುವಾದಗಳನ್ನು ಕೇಳುವ ವಿಷಯ ದಲ್ಲಿಯೂ ತತ್ಪರವಾಗಿದ್ದಿದ್ದರಿoದ, ಕ ಚಿ೦ತನೆಯಹ್ರಸ್ಥಿತಿಯ ಕಡೆಗೂ , ಸೌಂದ ರ್ಯದ ಕಡೆಗೂ ಆಕೆಯ ಮನಸ್ಸು ಹರಿಯುತ್ತಿದ್ದಿಗಲ್ಲ, ವಿಷಯೋಪಭೋಗದ ವಿಷ ಯುದಲ್ಲಿ ಆಕೆಯು ಅತ್ಯಂತ ಉದಾಸೀನಳಾಗಿದ್ದಳು, ಆಧ್ಯಾತ್ಮವಿಷಯದ ಗಂಭೀರ ವಿಚಾರಮಾಡುವಲ್ಲಿಯೇ ಆಕೆಯ ಕಲಹರಣವ ಗುಸ್ತಿದದರಿ೦ದ, ಸಾಂಸಾರಿಕ ಕೃತ್ಯಗ ಳಲ್ಲಿ ಆಕೆಯು ಉದಾಸೀನಳಾಗಿದ್ದಳು. ತಂದೆಯ ಪತಿಯಲ್ಲಿ ಮಾಡದಿದ್ದರೆ ನಡೆಯದಿ ರುವ ಸಂಸಾರಕ್ಕತಗಳನ್ನು ಔದಾಸೀನದಿ೦ದ ನಿವ್ರಾಹವಿಲ್ಲದೆ ಮಾಡುತ್ತಿದ್ದಳು. ಆಕೆಯ ಕೆಲಸವಲ್ಲಿ ವ್ಯವಸ್ಥೆ, ಅಚ್ಚುಕಟ್ಟುತ, ಓರಣ ಇವು ತೋರುವವರ ಬದಲು, ಹ್ಯಾಗಾದರೂ ಕೆಲಸವಾಯಿತೆ೦ದರ ಲಕ್ಷಣಗಳು ತೋರುತ್ತಿದ್ದವು. ತಿರುಗಿ ಕೇಳಿ ದರೆ, ಇಷ್ಟುಸಹ ಸಂಸಾರದ ಕಡೆಗೆ ಲಕ್ಷಕೊಡುವ ಆಕೆಗೆ ಸೇರುತ್ತಿದ್ದಿಲ್ಲ. ಆಧ್ಯಾ ತ್ಮಿಕ ವಿಚಾರಕ್ಕೆ ತಕ್ಕ ಗುರುವೆಂಬ ದ್ರುಷ್ಠಿಯಿ೦ದಲೇ ಆಲೆಯು ಯಾಜ್ಞವಲ್ಕ್ಯರ ಫಾಣಿಗ್ರಹಣ ಮಾಡಲು ಇಚ್ಛಿಸುತ್ತಿದ್ದನು, ಈ ಯೋಗವು ಒದಗಿಲಾರದಿದ್ದರೆ ಆಜನ್ಮ ಬ್ರಹ್ಮಚರ್ಯದಿಂದಿರಬೇಕೆಂದು ಆಕೆಯು ಸಂಕಲ್ಪಿಸಿದಳು. ಆಕೆಯಲ್ಲಿ ಸೌಜನ್ಯಕ್ಕೂ, ವಿವೇಕಕ್ಕೂ ಕೊರತೆಯಿಲ್ಲ. ತನ್ನನ್ನು ಯಾಙ್ಞವಲ್ಕ್ಯರು ಲಗ್ನವಾಗುವದರಿಂದ ಕಾತ್ಯಾಯನಿಯ ಸುಖಕ್ಕೆ ಕೊರತೆಯಾಗುವಂತಲೂ , ಈ ಸಂಗತಿಯು ಕಾತ್ಯಾಯ

ನಿಯ ಮನಸ್ಸನ್ನು ನೋಯಿಸತಕ್ಕದ್ದಿಂತಲೂ ಆಕೆಯು ತಿಳಿದಿದ್ದಳು. ಆಕೆಯು ಮಾತ್ಸ ರ್ಯರಹಿತಳಿದ್ದಳು. ಸ್ವಾರ್ಧದ ಗಂಧವುಕೂದ ಆಳಿಯಲ್ಲಿ ಸುಳಿಯುತ್ತಿದ್ದಿಲ್ಲ; ಅಂದಬ
18

ಳಿಕ ಕಾತ್ಯಾಯನಿಯ ಮನಸ್ಸನ್ನು ನೋಯಿಸಿ ಯಾಜ್ಞ್ಯವಲ್ಕರ ಪಾಣಿಗ್ರಹಣದಿಂದ ತನ್ನ ಹಿತವನ್ನು ಸಾಧಿಸಿಕೊಳ್ಳಲಿಕ್ಕೆ ಆಕೆಯು ಹ್ಯಾಗೆ ಇಚ್ಛಿಸುವಳು ? ಕಾತ್ಯಾಯ ನಿಯ ಸುಕುಮಾರಗುಣಗಳಿಗೆ ಮೈತ್ರೇಯಿಯು ಲುಬ್ಧಳಾಗಿರುವಂತೆ , ಮೈತ್ರೇಯಿಯ ಗಂಭೀರಗುಣಗಳಿಗೆ ಕಾತ್ಯಾಯನಿಯೂ ಲುಬ್ಧಳಾಗಿದ್ದದ್ದರಿಂದ ಅವರು ಒಬ್ಬರನ್ನೊಬ್ಬರು ಕಂಡರೆ ಬಿದ್ದು ಸಾಯುತ್ತಿದ್ದರು. ತನ್ನ ಪತಿಯ ಪಾಣಿಗ್ರಹಣಕ್ಕಾಗಿ ಕುಳಿತವಳೆಂದು ಕಾತ್ಯಾಯನಿಯಾಗಲಿ , ತನ್ನ ಪಾಣಿಗ್ರಹಣಕ್ಕೆ ಅಡ್ಡಬಂದು ಕುಳಿತವಳೆಂದು ಮೈತ್ರೇ ಯಿಯಾಗಲಿ ಪರಸ್ಪರರನ್ನು ಮತ್ಸರಿಸುವಹಾಗಿದ್ದಿಲ್ಲ! ಅಯೋಗ್ಯ ಕಾರ್ಯಕ್ಕೆ ಕೈಹಾ ಕತಕ್ಕವರಲ್ಲವೆಂಬದನ್ನು ಪರಸ್ಪರರು ಅರಿತುಕೊಂಡಿದ್ದರಾದ್ದರಿಂದ ಒಬ್ಬರ ವಿಷಯವಾಗಿ ಮತ್ತೊಬ್ಬರ ಅಪನಂಬಿಗೆಯು ಹುಟ್ಟುವಹಾಗಿದ್ದಿಲ್ಲ. ಮೈತ್ರೇಯಿಯು ಕಾತ್ಯಾಯ ನಿಗೆ ಅತ್ಯಂತ ಪ್ರಿಯಳಾಗುತ್ತನಡೆದದ್ದರಿಂದ, ಕಾತ್ಯಾಯನಿಯ ಸ್ವಭಾವಕ್ಕನುಸರಿಸಿ ಆಕೆಗೆ ಮೈತ್ರೇಯಿಯ ಹಂಬಲವು ವಿಶೇಷವಾಗಿ ಹತ್ತಿತು. ಆಕೆಯು ಮೈತ್ರೇಯಿ ಯನ್ನು ಒಂದು ಕ್ಷಣವಾದರೂ ಅಗಲಿ ಇರದಾದಳು! ಮೈತ್ರೇಯಿಯ ವಿಯೋಗದ ಕಲ್ಪನೆಯು ಸಹ ಆಕೆಗೆ ದುಸ್ಸಹದುಃಖವನ್ನು ಕೊಡಹತ್ತಿತು !! ನಿರ್ಮಲಾಂತಃಕರ ಣದ ಪ್ರಭಾವವನ್ನು ನಾವು ಇದಕ್ಕೂ ಹೆಚ್ಚಿಗೆ ಏನು ವರ್ಣಿಸೋಣ ?

19

೩ ನೆಯಪ್ರಕರಣ.

ಸ್ವಾರ್ಥಪರಿತ್ಯಾಗೇಚ್ಛೆ!

ನಿರ್ಮಲಾಂತಃಕರಣದ ಪ್ರಭಾವವೇ ವಿಲಕ್ಷಣವಾದದ್ದು. ಶುದ್ಧಾಂತಃಕರಣವನು

ಶುಭ್ರವಾದ ಗಂಜಿಯ ಅರಿವೆಗೆ ಹೋಲಿಸಬಹುದು. ಗಂಜಿಯ ಅರಿವೆಯ ಮೇಲೆ ಮೂಡಿದ ಬಣ್ಣವು ವ್ಯಕ್ತವಾಗಿ ತೋರುವಂತೆ, ಶುದ್ಧಾಂತಃಕರಣದಲ್ಲಿ ಮೂಡಿದ ವಿಕಾರ ಗಳು ವ್ಯಕ್ತವಾಗಿ ತೋರುವವು; ಇದಲ್ಲದೆ ಅವು ಅನುಕೂಲ ಪರಿಸ್ಥಿತಿಯಲ್ಲಿ ಉತ್ತರೋ ತ್ತರ ವೃದ್ಧಿಂಗತವಾಗುತ್ತಲೂ ಹೋಗುವವು. ಅದರಂತೆ, ಕಾತ್ಯಾಯನಿಯ ಶುದ್ಧಾಂತಃ ಕರಣದಲ್ಲಿ ಮೂಡಿದ ಮೈತ್ರೇಯಿಯ ವಿಷಯದ ಪ್ರೇಮವೆಂಬ ವಿಕಾರವು, ಮೈತ್ರೇಯಿಯ ಘನತರವಾದ ಯೋಗ್ಯತೆಯ ಅನುಕೂಲಪರಿಸ್ಥಿತಿಯಲ್ಲಿ ಅಭಿವೃದ್ಧವಾಗುತ್ತ ಹೋಯಿತು. ಆಕೆಯು ಮೈತ್ರೇಯಿಯನ್ನು ಕಾಣಲಿಕ್ಕೆ ಮೇಲೆ ಮೇಲೆ ಹೋಗಹತ್ತಿದಳು. ಬರಬರುತ ಆಕೆಯ ವಿಯೋಗದ ಕಲ್ಪನೆಯಿಂದ ಕಾತ್ಯಾಯನಿಯ ಹೃದಯವು ಕಂಪಿಸ ಹತ್ತಿತು. ದಿನದಂತೆ ಕಾತ್ಯಾಯನಿಯು ಮೈತ್ರೇಯಿಯನ್ನು ಕಾಣಲಿಕ್ಕೆ ಹೋದಾಗ, ಆ ಮಾತು ಈಮಾತು ಹೊರಟು ಕಡೆಗೆ ಕಾತ್ಯಾಯನಿಯು ಮೈತ್ರೇಯಿಯನ್ನು ಕುರಿತು-

ಕಾತ್ಯಾಯನಿ--ತಂಗೀ, ಮೈತ್ರೇಯಿಾ, ನಿನ್ನ ಲಗ್ನವಾದಬಳಿಕ ನೀನು ಇಲ್ಲಿ ಯಾಕೆ

ಇರುವೆ ? ನಿನ್ನ ವಿಯೋಗವು ನನಗೆ ಹ್ಯಾಗೆ ಸಹನವಾದೀತೆಂಬ ಚಿಂತೆಯು ಈಗಿನಿಂದಲೇ ಹಗಲು-ರಾತ್ರಿ ನನ್ನನ್ನು ಬಾಧಿಸಹತ್ತಿದೆ. ಇನ್ನು ನಿನ್ನ ಲಗ್ನದಕಾಲವು ಸಮೀಪಿಸಿತೆಂದು ಹೇಳಬಹುದು ! ನನ್ನ ಪ್ರತಿ ಒಬ್ಬ ತಂಗಿಯ ವಿವಾಹವೆಂದರೆ, ನನ್ನ ಮನಸ್ಸಿಗೆ ವಿಯೋಗ ದುಃಖವು ಎಷ್ಟರಮಟ್ಟಿಗೆ ಆಗುವದೆಂಬದನ್ನು ಪರೀಕ್ಷಿಸುವ ಒರೆಗಲ್ಲಾಗಿರುತ್ತದೆ. ಆ ನನ್ನ ತಂಗಿಯರ ವಿಯೋಗದ ದುಃಖವನ್ನು ಈಗೀಗ ನಾನು ಸ್ವಲ್ಪ ಮರೆಯುತ್ತಿರಲು, ಪುನಃ ನಿನ್ನ ವಿಯೋಗದುಃಖವನ್ನು ಅನುಭವಿಸುವ ಪ್ರಸಂಗವು ಬಂದೊದಗಿರುತ್ತದೆ. ಈವರೆಗೆ ನಾನು ಅನುಭವಿಸಿದ ವಿಯೋಗದುಃಖಗಳನ್ನೆಲ್ಲ, ನಿನ್ನ ಸಂಬಂಧದ ವಿಯೋಗ ದುಃಖವು ಮೀರುವಹಾಗೆ ತೋರುತ್ತದೆ.

ಈಮೇರೆಗೆ ನುಡಿಯುವಾಗ ಕಾತ್ಯಾಯನಿಯಕಣ್ಣೊಳಗಿಂದ ಬಳ ಬಳ ನೀರು ಸುರಿ

ಯಹತ್ತಿದವು. ಆಕೆಯು ಅತ್ಯಂತ ಪ್ರೇಮದಿಂದ ಮೈತ್ರೇಯಿಯನ್ನು ನೋಡಹತ್ತಿದಳು. ಆಗಿನ ಆ ಕರುಣಾಮೂರ್ತಿಯ ನಿರ್ಮಲ ಸ್ವರೂಪವನ್ನು ನೋಡಿ ಮೈತ್ರೇಯಿಯ ಮನಸ್ಸೂ ಕರಗಿ ಆಕೆಯ ನೇತ್ರಗಳೂ ಅಶ್ರುಪೂರ್ಣವಾದವು. ಸಹೃದಯರ ಹೃದಯ ಗಳ ಚಾರಿತ್ರ್ಯದ ಮಹಿಮೆಯೇ ಅಂತಹದು. ಅವರು ಕಲ್ಲನ್ನು ಕೂಡ ಕರಗಿಸಬ ಲ್ಲರು. ಹೀಗೆ ಕಾತ್ಯಾಯನೀ-ಮೈತ್ರೇಯಿಯರಿಬ್ಬರೂ ಅಕೃತ್ರಿಮ ಪ್ರೇಮದಿಂದ ಒಬ್ಬ ರನ್ನೊಬ್ಬರು ನೋಡುತ್ತಿರುವಾಗ, ಮೈತ್ರೇಯಿಯು ಕಾತ್ಯಾಯನಿಯನ್ನು ಕುರಿತು-

ಮೈತ್ರೇಯಿ-ಅಕ್ಕಾ, ನಿನ್ನ ಹೃದಯವು ಎಷ್ಟು ಕೋಮಲವಮ್ಮಾ, ನಿನ್ನ ಮನಸ್ಸಿನ

ನೈರ್ಮಲ್ಯವಾದರೂ ಎಷ್ಟಿರುವದದು ? ಗೆಳತೀ, ಕಾತ್ಯಾಯನೀ, ನನ್ನ ವಿಯೋಗಕ್ಕಾಗಿ ನೀನು ಸರ್ವಥಾ ದುಃಖಿಸಬೇಡ ಕಂಡೆಯಾ ! ನಮ್ಮಿಬ್ಬರ ವಿಯೋಗವು ಎಂದಿಗೂ ಆಗ ಲಾರದು. ಇನ್ನಾದರೂ ನಿನಗೆ ಸಮಾಧಾನವಾಗಬಹುದಲ್ಲವೆ ?

ಕಾತ್ಯಾಯನಿ--" ವಿಯೋಗವಾಗಲಾರದು ! ಈ ನಿನ್ನ ಮಾತಿನ ಅರ್ಥವೇನು?

ಇಲ್ಲಿಯೇ ಎಲ್ಲಿಯಾದರೂ ಸಮೀಪದಲ್ಲಿ ನಿನ್ನನ್ನು ಕೊಟ್ಟರೆ, ಮೇಲೆಮೇಲೆ ನಾನುನಿನ್ನನ್ನು ಕಾಣಬಹುದೆಂಬದು ನಿ ಜ ವು; ಆದರೆ ನಿನ್ನ ಅತಿ ಯಮನೆಯು ಸಮೀಪದಲ್ಲಿಯೇ ದೊರೆಯುವದೆಂದು ಯಾರು ಹೇಳಬೇಕು ? ಪ್ರಶಸ್ತ ಮನೆತನ ನೋಡಿ ನಿನ್ನನು ಕೊಡಬೇಕಾಗುತ್ತದೆ.”

ಮೈತ್ರೇಯಿ-ನಾನು ಲಗ್ನ ಮಾಡಿಕೊಳ್ಳುವೆನೆಂದಾದರೂ ನೀನು ಯಾತರ ಮೇಲಿಂದ ಹೇಳುತ್ತೀ ?

ಕಾತ್ಯಾಯನಿ-- ಏನಂದಿ ? ನೀನು ಲಗ್ನ ಮಾಡಿಕೊಳ್ಳುವದಿಲ್ಲವೆ ? ಅವಿವಾಹಿತ

೪ಾಗಿಯೇ ಇರುವೆಯಾ ? ಅವ್ವಯ್ಯಾ,ಸಖೀ, ಮೈತ್ರೇಯಿಾ, ಸ್ತ್ರೀಯರು ಅವಿವಾಹಿತ ರಾಗಿ ಇರುವ ಕಲ್ಪನೆಯೇ ನನಗೆ ವಿಲಕ್ಷಣವಾಗಿ ತೋರುತ್ತದೆ. ಅದರಲ್ಲಿ ನಿನ್ನಂಥವಳ ಪಾಣಿಗ್ರಹಣಕ್ಕೆ ಯಾರು ಆತುರಪಡಲಿಕ್ಕಿಲ್ಲ ? ತಂಗೀ, ನಿನ್ನಂಥವರು ಹಾದಿಯಲ್ಲಿ ಬಿದ್ದಿರು

ವರೇ ? ಮನೆಮನೆಗೆ ಒಟ್ಟಿರುವರೇ ?

20

ಮೈತ್ರೇಯಿ--ನನ್ನ ಪಾಣಿಗ್ರಹಣಕ್ಕೆ ಬಹುಜನರು ಸಿದ್ದರಾಗಿರಬಹುದು; ಆದರೆ

ಅವರಲ್ಲಿ ಯಾರೂ ನನ್ನ ಮನಸ್ಸಿಗೆ ಬಾರದಿದ್ದರೆ ?

ಕಾತ್ಯಾಯನಿ--ಹಾಗಾದರೆ ನೀನು ಅವಿವಾಹಿತಳಾಗಿಯೇ ಇರುವವಳೇನು ? ಸೇರ

ದಮ್ಮಾ ನನಗೆ ಈ ನಡತೆ ! ಸಂಸಾರವೇ ಸ್ತ್ರೀಯರ ಕರ್ತವ್ಯವೆಂದು ನನಗೆ ಯಾವಾಗಲೂ ತೋರುತ್ತದೆ. ನಿರಾಶ್ರಿತರಾಗಿ ಹೆಂಗಸರು ಇರಬಹುದೆ? ಹಾಗೆ ಇದ್ದರೆ ಚಂದಕಾಣಬಹುದೆ?

ಮೈತ್ರೇಯಿ-ಸಖೀ,ನಿನ್ನ ಮಾತನ್ನು ನಾನು ಅಲ್ಲಗಳೆಯುವದಿಲ್ಲ. ಸ್ತ್ರೀ

ಯರು ಬ್ರಹ್ಮಚರ್ಯದಿಂದಿರುವದು ಸುಲಭವಲ್ಲ. ಇದ್ದರೆ ಚಂದವೂ ಕಾಣುವದಿಲ್ಲ. ಅಂತೇ ಸ್ತ್ರೀಯರು ಬ್ರಹ್ಮಚರ್ಯದಿಂದಿರುವದು ತೀರಕಡಿಮೆ;ಆದರೆ ಸಂಸಾರವು ಕೇವಲ ಸ್ತ್ರೀಯರ ಸಲುವಾಗಿಯೇಯಿರುತ್ತವೆಂಬಮಾತು ನನಗೆ ಒಪ್ಪಿಗೆಯಾಗಿರುವದಿಲ್ಲ. ಅದು ಸ್ತ್ರೀಯರ ಸಲುವಾಗಿ ಇರುವಂತೆ ಪುರುಷರ ಸಲುವಾಗಿಯೂ ಇರುತ್ತದೆ. ಸ್ತ್ರೀ-ಪುರುಷ ರಿಬ್ಬರಿಗೂ ಸಂಸಾರವು ಸಂಬಂಧಿಸಿರುವುದು. ಗೃಹಕೃತ್ಯವು ಕೇವಲ ಸ್ತ್ರೀಯರದೇ ಎಂದು ಮುಖ್ಯವಾಗಿ ಪುರುಷರು ತಿಳಿದು ನಡೆಯುತ್ತಿರುವದರಿಂದ, ಗೃಹಕೃತ್ಯದಹೊರತು ಸ್ತ್ರೀಯರು ಬೇರೆ ಏನೂ ಮಾಡತಕ್ಕವದಿಲ್ಲವೆಂದು ಎಲ್ಲರೂ ತಿಳಿದಿರುವರು.

ಕಾತ್ಯಾಯನಿ-ಗೃಹಕೃತ್ಯದ ಹೊರತು ನಾವು ಹೆಂಗಸರು ಬೇರೆ ಏನು ಕೆಲಸ

ಮಾಡಬೇಕಾಗಿರುವದು ? ಪಾರಮಾರ್ಥಿಕವಿಚಾರವೆ? ಆಗಲಿ.ಸಂಸಾರಕೃತ್ಯಗಳಲ್ಲಿ ಪಾರ ಮಾರ್ಥಿಕ ಸಂಗತಿಗಳು ಪೋಣಿಸಲ್ಪಟ್ಟೇಇರುವವಲ್ಲ  ? ಯಜ್ಞ-ಯಾಗಗಳಲ್ಲಿ ಪತಿಗೆ ಸಹಾಯ ಮಾಡುವದು, ಈಶಸ್ತವನ, ಜಪ, ತಪ ಮೊದಲಾದವುಗಳು ಪಾರಮಾರ್ಥಿಕ ಸಂಗತಿಗಳಲ್ಲದೆ ಮತ್ತೇನು ? ಇವೆಲ್ಲ ಕೆಲಸಗಳನ್ನು ವಿವಾಹಿತ ಸ್ತ್ರೀಯು ಮಾಡಲೇಬೇ ಕಾಗುವದು. ಅಂದಬಳಿಕ ಸಂಸಾರಕೃತ್ಯಗಳೊಡನೆ ಆಕೆಯು ಪಾರಮಾರ್ಥಿಕ ವಿಚಾರ ವನ್ನೂ ಮಾಡಿದಹಾಗಾಗುವದಿಲ್ಲವೊ ? ಪತಿಯು ದೈವವೆಂದು ತಿಳಿದು ನಡೆಯುವದ ರಿಂದಲೇ ಸತಿಗೆ ಸದ್ಗತಿಯಾಗುವದವಲ್ಲವೆ?

ಮೈತ್ರೇಯಿ--ನೀನಾಡುವದು ಸರಿಯಾದದ್ದು; ಇವುಗಳ ಹೊರತು ಸ್ತ್ರೀಯರ

ಕರ್ತವ್ಯವೇನೂ ಇರುವುದಿಲ್ಲವೆ? ಆತ್ಮಜ್ಞಾನವನ್ನು ಪಡೆಯುವದು ಸ್ತ್ರೀಯರ ಮಹತ್ವದ ಕರ್ತವ್ಯವೆಂದು ನಿನಗೆ ತೋರುವದಿಲ್ಲವೆ ?

ಕಾತ್ಯಾಯನಿ--ತೋರುವುದು ನಿಜವು , ಆದರೆ ಈ ಕೆಲಸವು ವಿದ್ವಾಂಸರದು,

ನಮ್ಮ೦ಥ ಹೆಂಗಸರದ್ದಲ್ಲ. ಈಗ ವಿದುಷಿಯರಾದ ಸ್ತ್ರೀಯರು ಎಷ್ಟು ಜನರಿರುವರು ? ನಿನ್ನ ಅಬಚಿಯಾದ ಗಾರ್ಗಿಯಂತ ಬುದ್ಧಿವೈಭವವೂ, ಕಾಲಾನುಕೂಲವೂ ಉಳ್ಳ ಸ್ತ್ರೀ ಯರೇ ಆತ್ಮಜ್ಞಾನಪ್ರಾಪ್ತಿಗಾಗಿ ಪ್ರಯತ್ನ ಮಾಡುವರು; ಆದರೆ ಇಂಥ ಸ್ತ್ರೀಯರು ಒಟ್ಟಿ ನಲ್ಲಿ ಬಹು ಸ್ವಲ್ಪ ಜನವಾದ್ದರಿಂದ, ಆತ್ಮಜ್ಞಾನದ ಕೆಲಸವು ಮುಖ್ಯವಾಗಿ ಪುರುಷರದಾ ಗಿರುವದು.ನಾವು ಆ ಕೆಲಸಕ್ಕೆ ತಕ್ಕವರಲ್ಲ.

ಮೈತ್ರೇಯಿ--ನಿನ್ನ ಮಾತನ್ನು ಕೇಳಿ ನನಗೊಂದು

ಕಾತ್ಯಾಯನಿ--ನಾನಂತು ಕಥೆಯ ಭಕ್ತಳು. ನನಗೆ ಆ ಕಥೆಯನ್ನು ಹೇಳು.


21

ಮೈತ್ರೇಯಿ--ನಾನು ಹೇಳುವದು ಕಥೆಯಂತೂ ಸರಿಯೆ; ಆದರೆ ಅದು ಬಹು

ಮಹತ್ವದ್ದಾಗಿರುವದು. ಆ ಕಥೆಯು ಕೇವಲ ಮನೋರಂಜನಕ್ಕಾಗಿ ಕೇಳತಕ್ಕದ್ದಲ್ಲ. ಅದರ ರಹಸ್ಯವನ್ನು ಚನ್ನಾಗಿ ವಿಚಾರಿಸತಕ್ಕದು . ಇಂಥ ಕಥೆಗಳನ್ನು ಕೇಳಿ ಆನಂ ದಪಡುವದಕ್ಕಿಂತ, ಅವುಗಳೊಳಗಿನ ಮೂಲತತ್ವವನ್ನು ನೆನಪಿನಲ್ಲಿಟ್ಟು ಅದರಂತೆ ನಡೆ ಯುವದು ಹಿತಕರವಾಗಿರುವದು.

ಕಾತ್ಯಾಯನಿ -ದಾಗಿಯೇ ಆಗಲಿ, ನಿನ್ನ ಕಥೆಯು ಬೋಧಪ್ರದವಾಗಿದರೂ

'ಚಿಂತೆಯಿಲ್ಲ. ಹೇಳು, ನಾನು ಮನಸ್ಸುಗೊಟ್ಟು ಕೇಳುವೆನು . ಮೈತ್ರೇಯಿ, ನನಗೆ ಎಷ್ಟು ಕಥೆ ಕೇಳಿದರೂ ಬೇಸರವಿಲ್ಲ ನೋಡು ! ಕಥೆ ದೊಡ್ಡದಿದ್ದಷ್ಟುಟ ಸಂತೋಷ !

ಮೈತ್ರೇಯಿ-ಒಳ್ಳೆದು, ಬೀಳುತ್ತೇನೆ ಕೇಳು. ಒಂದು ಪೂರ್ಣ ಗರ್ಭಿಣಿ

ಯಾದ ಸಿಂಹವು ಹಸಿವೆಯಿಂದ ವ್ಯಾಕುಲವಾಗಿ ಆಹಾರ ಹುಡುಕಲಿಕ್ಕೆ ತನ್ನ ಗವಿಯಿಂದ ಹೊರಬಿದ್ದಿತು. ಅದು ದೂರ ಹೋಗುವದರೊಳಗೆ ಒಂದು ಕುರಿಯ ಹಿಂಡು ಮೇಯುತ್ತಿ ರುವದು ಅವರ ಕಣ್ಣಿಗೆ ಬಿದ್ದಿತು. ಸಿಂಹವು ಸರಾಸರಿ ಹಿಂಡಿನ ಸನಿಯಕ್ಕೆ ಹೋಗಿ ಒಂದು ಕುರಿಯ ಮೇಲೆ ಜಿಗಿಯಲು ಜಪ್ಪುಹಾಕಿತು. ಹಸಿವೆಯು ಬಹಳವಾದದ್ದರಿಂದಲೂ, ತನ್ನ ಮಾಕ್ರಮದ ವಿಷಯವಾಗಿ ಅದಕ್ಕೆ ನಂದಿಗೆಯು ವಿಶೇಷವಾಗಿದ್ದ್ದದರಿಂದಲೂ ಆ ಸಿಂಹವು ಅಷ್ಟು ದೂರದಿಂದಲೇ ಕುರಿಯ ಮೇಲೆ ಹಾರಿತು; ಆದರೆ ಪೂರ್ಣ ಗರ್ಭಿಣಿ ಯಿದ್ದದ್ದರಿಂದ ಜಿಗಿತವು ತಪ್ಪಿ ಅದು ಕಸುವಿನಿಂದ ನೆಲಕ್ಕೆ ಅಪ್ಪಳಿಸಿತು. ಆದ್ದರಿಂದ ಹೊಟ್ಟೆಯೊಳಗಿನ ಗಂಡುಮುರಿಯು ಹೊರಬಿದ್ದು, ಸಿಂಹವು ಮರಣಹೊಂದಿತು. ತನ್ನ ಮರಿಯ ಮೋಹಪಾಶದಲ್ಲಿ ಸಿಕ್ಕಿಕೊಳ್ಳಲಿಕ್ಕೆ ಆ ಸಿಂಹವು ಬದುಕಿಉಳಿಯಲಿಲ್ಲ.

ಕಾತ್ಯಾಯನಿ--ಇದೇನೇ ಮೈತ್ರೇಯಿ, ಮಕ್ಕಳ ಮೋಹವು ನಿನಗೆ ಪಾಶವಾಗಿ

ತೋರುವದೆ? ತಮ್ಮ ಮಕಳು ತಮ್ಮ ಸುತ್ತು ಮುತ್ತು ಆಡುತ್ತಿರುವಾಗ ಆಗುವ ಆನಂ ದವು ಸ್ವರ್ಗದಲ್ಲಿಯಾದರೂ ದೊರೆಯಬಹುದೆ? ತಾಯಿಯ ಕರಳು ಹ್ಯಾಗಿರುತ್ತದೆಂಬುದು ಮಕ್ಕಳ ತಾಯಂದಿರಾದವರಿಗಲ್ಲದೆ ಅನ್ಯರಿಗೆ ತಿಳಿಯುವದಿಲ್ಲೆಂಬ ಮಾತು ಸುಳ್ಳಲ್ಲ. ಹಾಗ ಲ್ಲದಿದ್ದರೆ ಹುಚ್ಚಿಯ ಹಾಗೆ ನೀನು ಹೀಗೆ ಅನ್ನುತ್ತಿದಿಲ್ಲ. ಮಕ್ಕಳನ್ನು ಹೀಗೆ ನಿರಾ ಕರಿಸಬಾರದಮ್ಮಾ! ಮಕ್ಕಳ ತಾಯಂದಿರಾಗಲಿಕ್ಕೆ ಪುಣ್ಯಬೇಕು !

ಮೈತ್ರೇಯಿ -- ಅದೇನೇ ಇರಲಿ ; ಮಕ್ಕಳೇನು ಜೀವಕ್ಕೆ ಮುಕ್ಕಳೋ, ಅವು

ಮೊಹಪಾಶವಾಗಿರುವವೋ, ಅವುಗಳಿಂದ ಮೋಕ್ಷವು ಸಾಧಿಸುವದೋ? ಎಂಬದನ್ನು ಹಿಂದುಗಡೆ ನೋಡೋಣವಂತೆ ; ಸದ್ಯಕ್ಕೆ ಕಥೆಯನ್ನಂಶು ಕೇಳು.

ಕಾತ್ಯಾಯನಿ -- ಹಾಗೆ ಆಗಲಿ ಹೇಳು , ದುರ್ದೈವಿಯಾದ ಆ ಹೆಣ್ಣು ಸಿಂಹವು

ತನ್ನ ಮರಿಯ ಲಾಲನ-ಪಾನವ, ಹಾಗು ಬಾಲಕ್ರೀಡೆಯ ಸುಖವನ್ನು ಅನುಭವಿಸು ಪದಕ್ಕಾಗಿ ಬದುಕಿ ಉಳಿಯಲಿಲ್ಲ. ಹು ಮುಂದೇನಾಯಿತು ?

ಮೈತ್ರೇಯಿ (ನಕ್ಕು) – ಒಳ್ಳೇದು , ನೀನುದಂತೆಯೇ ಆಗಲಿ, ಆ ಹಿಂದಿ

22

ನಲ್ಲಿ ಕುರಿಗಳು ಬಹಳ ಇದ್ದವು , ಆ ಪರದೇಶಿಮರಿಯನ್ನು ನೋಡಿ ಅವಕ್ಕೆ ದಯವು ಉತ್ಪನ್ನವಾಯಿತು ; ಆದ್ದರಿಂದ ಅನಾಥವಾದ ಆ ಮರಿಯನ್ನು ಸಂರಕ್ಷಿಸುವ ಇಚ್ಛಯು ಅವಕ್ಕೆ ಆಯಿತು .

ಕಾತ್ಯಾಯನಿ (ನಡುವೇ ಬಾಯಿಹಾಕಿ)- ಪಾಪ! ಇಚ್ಛೆಯಾಗದೇನು ಮಾಡೀ

ತು. ಮಕ್ಕಳ ತಾಯಂದಿರ ಅನುಭವವು ಆ ಕುರಿಗಳಿಗಿದ್ದಬಳಿಕ ಪರದೇಶಿಕೂಸಿನಸಂರ ಕ್ಷಣ ಮಾಡದೆ ಅವು ಯಾಕೆ ಬಿಟ್ಟಾವು ? ಹು ಮುಂದೆ ಹೇಳು.

ಮೈತ್ರೇಯಿ-- ಬಳಿಕ ಕುರಿಗಳು ಸಿಂಹದ ಆ ಗಂಡುಮರಿಯನ್ನು ತಕ್ಕೊಂಡು

ಹೋಗಿ ಅದರ ಸಂಗೋಪನ ಮಾಡತೊಡಗಿದವು . ಆಡು-ಕುರಿಗಳು ತಿನ್ನುವ ಪದಾ ರ್ಥಗಳನ್ನೇ ಆ ಸಿಂಹದ ಮರಿಯು ತಿನ್ನತೊಡಗಿತು , ಕುರಿಗಳು ಕುಡಿಯುವ ನೀರನ್ನೇ ಅದು ಕುಡಿಯಹತ್ತಿತು. ಅದು ಯಾವಾಗಲೂ ಕುರಿಗಳ ಸಹವಾಸದಲ್ಲಿದ್ದು, ಅವುಗ ಳೊಡನೆ "ಬ್ಯಾ ಬ್ಯಾ” ಎಂದು ಕೂಗುತ್ತ ಓಡಾಡುತ್ತಿತ್ತು. ಹೀಗೆ ಆಕುರಿಗಳ ಸಹ ವಾಸದಿಂದ ಸಿಂಹದ ಮರಿಗೆ -- " ನಾನು ಕುರಿಯೇ ಇರುತ್ತೇನೆಂಬ ಭ್ರಾಂತಿಯು ಉತ್ಪನ್ನವಾಯಿತು. ಅದಕ್ಕೆ ತನ್ನ ನಿಜವಾದ ಸ್ವರೂಪದ ವಿಸ್ಮೃತಿಯು ಪೂರ್ಣ ವಾಗಿ ಆಗಿಹೋಯಿತು. ಸಿಂಹಾದಿ ಮೃಗಗಳನ್ನು ನೋಡಿದ ಕೂಡಲೆ ಬಾಯಲ್ಲಿ ಎಸ ರುಇಲ್ಲದಂತೆ ಕುರಿಗಳು ಓಡುವಾಗ, ಆ ಸಿಂಹದ ಮರಿಯು ತಾನೂ ಅವುಗಳ ಸಂಗಡ ಓಡಿಹೋಗುತ್ತಿತ್ತು . ಶತ್ರುವಿನೊಡನೆ ಕಾದಿ ತನ್ನ ಪ್ರತಾಪವನ್ನು ತೋರಿಸುವ ಅದರ ಜನ್ಮಸ್ವಭಾವದ ವಿಸ್ಮೃತಿಯು ಅದಕ್ಕೆ ಪೂರ್ಣವಾಗಿ ಆಗಿಹೋಯಿತು . ಒಟ್ಟಿಗೆ ಹೇಳತಕ್ಕದ್ದೇನಂದರೆ, ಅದರ ಆತ್ಮಸ್ವರೂಪದ ಸುತ್ತಲು ಅಜ್ಞಾನದ ಮುತ್ತಿಗೆಯು ಬಿದ್ದು , ನಾನು ಎಲ್ಲ ಬಗೆಯಿಂದಲೂ ಕುರಿಯೇ ಇರುತ್ತೇನೆಂದು ಅದು ತಿಳಿದುಕೊಂಡಿತು.

ಕಾತ್ಯಾಯನಿ (ನಡುವೆ ಆತುರದಿಂದ) -- ಛೀ ಛೀ! ಮೈತ್ರೇಯಿಾ , ವನರಾಜ

ನೆನಿಸುವ ಸಿಂಹವು ಕ್ಷುದ್ರಪ್ರಾಣಿಯಾದ ಕುರಿಯಾಗಿ ಹೋಯಿತಲ್ಲ! ಪಾಪ, ಅದರ ತಾಯಿಯಾದರೂ ಯಾಕೆ ಸತ್ತಿದ್ದೀತೇ ? ಆ ಮರಿಯು ಬಲು ದೈವಗೇಡಿಯು ! ಸಖೀ , ಕಡೆಗೂ ಆ ಸಿಂಹದ ಮರಿಗೆ ತಾನು ಸಿಂಹನೆಂಬ ಅರಿವು ಆಗಲೇ ಇಲ್ಲವೇನು ? ಅದು ಕುರಿಯಾಗಿ ಹೋಯಿತೆ ?

ಮೈತ್ರೇಯಿ-- ಅಕ್ಕಾ, ಸ್ವಲ್ಪ ಸಮಾಧಾನತಾಳು. ಎಷ್ಟಾದರೂ ಅದು

ಸಿಂಹವಲ್ಲವೆ ? ಅದು ಕುರಿಯು ಹ್ಯಾಗಾದೀತು ? ನನ್ನ ಕಥೆಯನ್ನು ಪೂರ್ಣವಾಗಿ ಕೇಳು, ಅಂದರೆ ಎಲ್ಲಾ ನಿನಗೆ ತಿಳಿಯುವದು . ಒಂದು ದಿನ ಆ ಕುರಿಯ ಹಿಂಡು ಆ ಸಿಂಹದ ಮರಿಯೊಡನೆ ಒಂದು ಹಳ್ಳದಲ್ಲಿ ನೀರು ಕುಡಿಯುತಿ ತ್ತು. ಅಷ್ಟರಲ್ಲಿ ವಿಶಾಲ ದೇಹಿಯಾದ ಒಂದು ಸಿಂಹವೂ ನೀರು ಕುಡಿಯುವದಕ್ಕಾಗಿ ಅದೇ ಹಳ್ಳಕ್ಕೆ ಬಂದಿತು . ಸಿಂಹವು ನೀರು ಕುಡಿಯುತ್ತಿದ್ದಲ್ಲಿಂದ ಅದಕ್ಕೆ ಕುರಿಗಳ ಹಿಂಡು ಕಾಣುತಿ ತ್ತು; ಕುರಿಗ

ಳಿಗೆ ಮಾತ್ರ ಸಿ೦ಹವು ಕಾಣುತ್ತಿದ್ದಿಲ್ಲ. ಕುರಿಗಳ ಹಿಂಡಿನಲ್ಲಿ ಸಿಂಹದ ಮರಿಯು ನೀರು ಕುಡಿಯುತ್ತಿರುವದನ್ನು ನೋಡಿ ಆ ಸಿಂಹಕ್ಕೆ ಬಹಳ ಆಶ್ಚರ್ಯವಾಯಿತು. ಅದು
23

ತನ್ನೊಳಗೆ-- “ ಇದೇನಾಶ್ಚರ್ಯವು ! ಕುರಿಯ ಹಿಂಡಿನಲ್ಲಿ ಸಿಂಹದ ಮರಿಯೇ ! ಈ ಮರಿಯು ಜಪ್ಪು ಹಾಕಿ ಕುರಿಗಳನ್ನು ಹಿಡಿಯುತ್ತದೆನ್ನಬೇಕೆಂದರೆ ಹಾಗೇನು ಕಾಣು ವದಿಲ್ಲ ! ಕುರಿಗಳನ್ನು ಹಿಡಿಯುವದಂತು ಇರಲಿ , ತಾನೂ ಕುರಿಗಳಂತೆ "ಬೇ ಬೇ ಬೇ ” ಎಂದು ಒದರುತ್ತದಲ್ಲ ಎಂದು ಅಂದುಕೊಂಡು, ಬಹಳ ಅಸಮಾಧಾನಪಟ್ಟಿತು. ಅದು ಸಿಂಹದಮರಿಗೆ ಎರಡು ಮಾತು ಹೇಳಿನೋಡಬೇಕೆಂದು ಮುಂದಕ್ಕೆ ಬರಲು , ಅದನ್ನು ನೋಡಿ ಕುರಿಗಳೆಲ್ಲ ದೆಸೆಗೆಟ್ಟು ಓಡತೊಡಗಿದವು. ಅವುಗಳ ಸಂಗಡ ಸಿಂಹದ ಮರಿಯ ಓಡತೊಡಗಿತು.

ಕಾತ್ಯಾಯನಿ (ಆತುರದಿಂದ) -- ಅಯ್ಯೋ ! ಎಂಥ ದುರ್ದೈವಿಯದು ! ತನ್ನನ್ನು

ಎಚ್ಚರಗೊಳಿಸಿ ಹಿತಮಾಡಬಂದ ಸಿಂಹನನ್ನು ತಿಳಿಯದೆ ಹೋಯಿತಲ್ಲ , ಮುಂದೆ ಗತಿಯೇನು ?

ಮೈತ್ರೇಯಿ -- ಸಖೀ , ಸ್ವಲ್ಪ ಸಮಾಧಾನತಾಳಿ ಕಥೆಯನ್ನು ಪೂರ್ಣವಾಗಿ

ಯಾದರೂ ಕೇಳು. ಸ್ವಜಾತಿಯ ಪ್ರಾಣಿಯು ಸ್ವಜಾತಿಯ ಪ್ರಾಣಿಗೆ ಬೆನ್ನು ತೋರಿಸಿ ಓಡಿಹೋಗುವದನ್ನು ನೋಡಿ ಸಿಂಹವು ಬಹಳ ವ್ಯಸನಪಟ್ಟಿತು. "ಇದಕ್ಕೆ ಮೂಲ ಸ್ವರೂಪದ ವಿಸ್ಕೃತಿಯು ಇನ್ನು ಯಾಕಾಗಿರಬಹುದೆಂ"ಬದರ ಗೊತ್ತು ಆ ಸಿಂಹಕ್ಕೆ ಆಗಲೊಲ್ಲದು . "ಈಗ ಓಡಿಹೋಗಲಿ, ಇನ್ನೊಮ್ಮೆ ಇದನ್ನು ಏಕಾಂತದಲ್ಲಿ ಕಂಡು ಎಚ್ಚರಗೊಳಿಸೋಣ , ” ಎಂದು ಯೋಚಿಸಿ ಸಿಂಹವು ಅದನ್ನು ಆಗ ಸುಮ್ಮನೆ ಹೋಗ ಗೊಟ್ಟಿತು. ಮುಂದೆ ಹೊತ್ತು ಸಾಧಿಸಿ ಆ ಮರಿಯು ಒಂದೇ ಇದ್ದಾಗ ಅದಕ್ಕೆ ಸಿಂಹವು ಗಂಟುಬಿದ್ದಿತು . ಏಕಾಂತದಲ್ಲಿ ಆ ಭಯಂಕರ ಸಿಂಹವನ್ನು ನೋಡಿ ಸಿಂಹದ ಮರಿಯು ಗಡಗಡನೆ ನಡುಗಹತ್ತಿತು , ಅದು "ಬೇ ಬೇ” ಎಂದು ಒದರುತ್ತ ದೀನ ವಾಣಿಯಿಂದ ಸಿಂಹನನ್ನು ಕುರಿತು -=“ಮಹಾರಾಜ , ನೀವು ದೊಡ್ಡವರು , ಉದಾರ ಸ್ವಭಾವದವರು ; ನಾನೊಂದು ಕ್ಷುದ್ರ ಕುರಿಯವರಿಯು; ನನ್ನಂಥವನನ್ನು ಕೊಲ್ಲು ವದರಿಂದ ನಿಮಗಾಗುವ ಲಾಭವೇನು ? ಎಂದು ನುಡಿಯಲು, ಅದನ್ನು ಕೇಳಿ ಸಿಂಹಕ್ಕ ಬಹಳ ವ್ಯಸನವಾಯಿತು. ಅದು ಮರಿಗೆ-- "ತಮ್ಮಾ, ನಾನು ದೊಡ್ಡವನು , ನೀನು ಸಣ್ಣವನು ; ಶಕ್ತಿಯ ಮಾನದಿಂನ ನನಗಿಂತ ನೀನು ದುರ್ಬಲನೆಂದು ಹೇಳಬ ಹುದು ; ಆದರೆ ನಾನು ಸಿಂಹನೇ ಅಲ್ಲ , ಹೊಲಸುಜಾತಿಯ ಕುರಿಮರಿಯಿರುತ್ತೇನೆಂಬ ತಿಳುವಳಿಕೆಯು ನಿನಗೆ ಹ್ಯಾಗೆ ಆಯಿತು” ಎಂದು ಪ್ರಶ್ನೆ ಮಾಡಿತು. ಅದಕ್ಕೆ ಮರಿಯು- ಮಹಾರಾಜ , ಮೂಲತಃ ನಮ್ಮ ಜಾತಿಯೇ ಕುರಿಯದು , ಅಂದಬಳಿಕ ನಾನು ಕುರಿಯ ಮರಿಯೆಂದು ಹೇಳದೆ ಏನುಮಾಡಲಿ ? ನಾವು ಹೊಲಸು ಜಾತಿಯವರೆಂಬದು ನಿಜವು . ಅಂತೇ ನನ್ನನ್ನು ಬಿಟ್ಟುಬಿಡಬೇಕೆಂದು ನಿಮ್ಮನ್ನು ಪ್ರಾರ್ಥಿಸುವೆನು , ಎಂದು ಉತ್ತರ ಕೊಟ್ಟಿತು , ಕಾತ್ಯಾಯನೀ , ಇನ್ನು ಮುಂದೆ ಆದ ಅವುಗಳ ಸಂಭಾಷಣವನ್ನು ಲಕ್ಷ ಗೊಟ್ಟು ಕೇಳು; ಯಾಕಂದರೆ , ಯಾರಾದರೊಬ್ಬರು ತಾವು ಕೆಲಸಕ್ಕೆ ಬಾರದವರು,

ತಮ್ಮ ಯೋಗ್ಯತೆಯು ಹೀನವಾದದ್ದು, ನಾವು ಹೀಗೆಯೇ ಇರತಕ್ಕವರು, ಅಂಥವ
24

ರನ್ನು ನಾವು ಹಾಗೆ ಸುತ್ತಿ ನ ? ಎಂಬ ಭವನೆಯ, ತಾಳಿದರೆ, ಅವರ ಉದ್ಧಾ ರವಾಗುವದು ಎಷ್ಟಾ ಕುಣರಾಗುರನೆಂಬದು ಅದುವ ಯುವದು . ಸಿಂಹದ ಮರಿಯು ಅಜ್ಞಾವಿಂದ ಕುಲಯ ನ , ಎಂ ಸಿಡಿದು ಕುಳಿತವನ್ನು ನೋಡಿ ಸಿಂಹವು ಕನಿಕರವಂದ--

ಸಿಂಹ-- ತಮ್ಮಾ, ನ್ಮಲ್ರ ನಮಾತಾಳು, ಮತ-ನೀರು ಸೀರುಕುಡಿ

ಯುತ್ತಿರುವಾಗ ನಿನ್ನ ಪ್ರತಿ- ಸೀರಲ್ಲಿ ಮೂತ್ತಲ್ಲ, ಅದು ರುರಿಯದಾಗೆ ಏನು?

ಸಿ೦ಹದಮಂ-- ಇಲ್ಲ, ಕುಯಮನಾಗೆ ಇಲ್ಲ. ಬೇರೆ ವಿಧವಾಗಿ ಇತ್ತು.

ಸಿಂಹ--ನೀನು ಕವಿಯಾದೆ ? ನಿನು, ಪ್ರತಿ ಒವು ತಯನರಿಯ

ಹಾಗೆಯೇ ಇರಬೇಕು ? ದಾಗಿರನೆ ಅದು ಬೇರಧವರ ನವೇನು ?

ಸಿಂಹವನುಂ-- -- ಒಬ್ಬರುದಾತ್ತಾತರೆ ? ನಾನು ಕುರಿಗಿಂತ ಬೇರೆ

ವಿಧವಾಗಿರಬಹುದು; ಆದರೆ ಮದಾರಾಬ , ನಿಮ್ಮನ್ನು ಕಂದು ನನಗೆ ಬಹಳ ಅಂಬೆಗೆ ಬರುತ್ತದೆ. ನನ್ನನ್ನು ಬಿಟ್ಟು ದ ರಿ .

ಸಿಂಹ--, ಎಲ್ಲಗೆ ದೋಲುರ್ತೀ: ? ಒಬ್ಬರ ದಾಗೆ ಒಬ್ಬರು ಇರುವದಿಲ್ಲೆಂದು

ಹೇಳಿ, ನನ್ನನ್ನು ಸಮಾಧಾರಗೋ- - ಸಪಿದೆ, ", ಕುಂದು ಕೊರ`o- ತೀರ ಭಿನ್ನ ವಾದ ರೂಪವು ನಿನ್ನದಿರುವುದು ಅಪಿ: ಸಿನಗೆ ಇರುವ ಎಲ್ಲವೆ : ನರ, ಆ ಬಾವಿಯ ದಂಡೆಯಮೇಲೆ ನಿಂತು ನಿನ್ನನೆರೆ ನೋರುರೋ

ಈ ಮೇರೆಗೆ ನುಡಿದು ಬಾಲಾತಾ ರದಿಂದ ಆ ಸಿಂಹದ. ಮಯನ್ನು ಎಳ

ಕೊಂಡುಹೋಗಿ, ಅದನ್ನು ದಯಪಿಲ್ಲ ತನ್ನ ಬಗ್ಗೆ ನಿಲ್ಲಿಸಿಕೊಂಡು, ಆ ಬಾವಿಯೊಳುನ ಮುರುದಿನಾ."ನನ್ನ ನೋಡಿ ಸ್ವರಗಗೊಂಡಿತು. ಹ್ಯಾಗೆ ಕಾಣಿಸುತ್ತಟೆ ದೆಳೂ,” ಆಗ ಸಿರ ಮರು ಅಂತ್ತಜುಂ ಜುತ್ತ ಬಾವಿಕ ಎರದೊ ಬಂದೇ ಇದು ನ್ನನ ಸೊವಗೊಂಡಿತು? ಅದು ಮನಸ್ಸಿನಲ್ಲಿ---"ನಾನೊ ರ: ಹಿಂದೆ ಇರು? ನ್ನ ಸ್ವರೂಪವು ಭಿನ್ನ ವಾಗಿರುತ್ತದೆಂದು ನಾವು ಯಕೆ ಇದುನನ್ನ ? ಇದು ನಂದುಘಲವು. ನೀಚಸಂಗತಿಯಿಂದು. -ಸಮ ಸರದ ಅನ್ನ ತಿಯಿತು. ತಾನು ಸಿಂ ಹನು, ಕುರಿಯಲ್ಲ "ಎಂದು ಹರಿಸಿರುಸು ಸಿಂಪಂಬು ಗುರುತು ಹದಕೂ ಡಲೆ ಆ ಮರಿಗೆ ಆತ್ಯಾನಂದದಾ. ತು. ಲಮ ಆನಂದ ಇಂದ ಒಮ್ಮೆಮ್ಮೆ ಗರ್ಜಿಸಿತು. ಆ ವ್ರತಮಾತಾಮಿತುದ ಸಿಯದ ಮನಂದು. ನವ ವನ್ಯಪಶು ಮೃಗಗಳು ನಡು: ' ., ಕು ?, ಆ ಸಿನ ಮಗ' ನಿನಗೂ ಆತ್ಮವಿಸ್ಮ್ಯತಿಯಗಿರುತ್ತನೆ.

ಕಾತ್ಯಾಯ' --ನಬೀ, ನಿನ್ನ ಕಧೆಕೇಳಿ ನನಗೆ ಸ್ವಲ್ಪ ಗೊಂದದ್ದಾಗಿದೆ,

ಸ್ವಲ್ಪ ನಿಲ್ಲು, ವಿ.ರವಾಸಿ, ವಿವಾಏನಂದಿ ? ಸಿಂಹದ ಮರುಳಾಗೆ ನನಗೆ ಆತ್ಮ

ವಿಸ್ಕೃ ತಿಯಾಂದು ನೀನು ಹೇಳಿದಯ್ವಿಟೆ? ಆತ್ಮ್ರತಿಯೆಂದರೇನು ?
25

ಮೈತ್ರಯೋ••ನಾನೆಲ್ಲ ನಿನಗೆ ಹೇಳುವನು; ಆದರೆ ಕಥೆಯೆಲ್ಲ ನೆನಪಿನಲ್ಲಿರಲಿ.

ಸಖೀ , ನಾನು ಕೇಳುವ ಒಂದೆರಡು ಪ್ರಶ್ನೆಗಳಿಗೆ ಮೊದಲು ಉತ್ತರಕೊಡು , ಆತ್ಮನು ಬರಿಯ ಪುರುಷರಲ್ಲಿಯೇ ಇರುವನೋ, ಆತನು ಸ್ತ್ರೀಯರಲ್ಲಿಯೂ ಇರುವನೋ ?

ಕಾತ್ಯಾಯನೀ---( ನಕ್ಕು) ಇದೇನು ಕೇಳುವದು ? ಆತ್ಮನು ಪುರುಷರಲ್ಲಿದ್ದಂತೆ

ಸ್ತ್ರೀಯರಲ್ಲಿಯೂ ಇರುವನು; ಶರೀರರಚನೆಯಲ್ಲಿಯ ಅಲ್ಪಸ್ವಲ್ಪ ಭೇದವಲ್ಲದೆ ಉಳಿದ ಯಾವ ಮಾತುಗಳಲ್ಲಿಯೂ ಪುರುಷರಿಗೂ, ಸ್ತ್ರೀಯರಿಗೂ ಭೇದವಿರುವದಿಲ್ಲ. ಪುರುಷ ರಂತೆ ಸ್ತ್ರೀಯರಿಗೂ ಪಂಚಜ್ಞಾನೇಂದ್ರಿಯಗಳೂ, ಪಂಚಕರ್ಮೇಂದ್ರಿಯಗಳೂ, ಮನ ಸೈಂಬ ಅಂತರಿಂದ್ರಿಯವೂ ಇರುತ್ತವೆ; ಅಂದಬಳಿಕ ಇವನ್ನೆಲ್ಲ ಪ್ರೇರಿಸುವ ಆತನು ಇಬ್ಬ ರಲ್ಲಿಯೂ ಇರಲೇಬೇಕು ,

ಮೈತ್ರೇಯಿ~-ಒಳ್ಳೇದು, ಸ್ತ್ರೀ-ಪುರುಷರಿಬ್ಬರಲ್ಲಿ ಆತ್ಮನು ಸರಿಯಾಗಿರುವನೋ,

ಪುರುಷರಲ್ಲಿ ಹೆಚ್ಚು , ಸ್ತ್ರೀಯರಲ್ಲಿ ಕಡಿಮೆಯಾಗಿ ಇರುವನೋ?

ಕಾತ್ಯಾಯನೀ--( ಪುನಃ ನಕ್ಕು) ಇಬ್ಬರಲ್ಲಿಯೂ ಸರಿಯಾಗಿಯೇ ಇರುವನು.

ಹೆಚ್ಚು ಕಡಿಮೆಯಾಗಿರುವದಿಲ್ಲ; ಯಾಕಂದರೆ, ನಿತ್ಯ ವ್ಯವಹಾರದಲ್ಲಿಯ ಸಂಗತಿಗಳಿಂದ ಅದು ಅನುಭವಕ್ಕೆ ಬರುವ ಮಾತಾಗಿದೆ .

ಮೈತ್ರೇಯಿ,--ಸರಿ. ಆತ್ಮಜ್ಞಾನವಾಗದೆ ಮೋಕ್ಷವಾಗಲಾರದೆಂಬ ಮಾತನ್ನು

ಯಾಜ್ಞವಲ ಪತ್ನಿಗೆ ನಾನು ಹೇಳಲವಶ್ಯವಿಲ್ಲ. ಯಾಕಂದರೆ, ಮಹಾತ್ಮರಾದ ಅವರ ಅಗಾಧ ಜ್ಞಾನದ, ಹಾಗು ಅಲೌಕಿಕ ಮಾಹಾತ್ಮದ ಪ್ರಸಿದ್ಧಿಯು ಸಾರ್ವತ್ರಿಕ ವಾಗಿರುವದು .

ಕಾತ್ಯಾಯನೀ--ಹೌದಮಾ ಮೈತ್ರೇಯಿ, ನೀನು ಆ ಮಾತನ್ನು ಹೇಳಲವ

ಶ್ಯವಿಲ್ಲ. ನಾನು ಅದನ್ನು ಪತಿಮುಖದಿಂದ ಹಲವು ಸಾರೆ ಕೇಳಿದ್ದೇನೆ; ಮುಕ್ತಿಯನ್ನು ಸಂಪಾದಿಸುವದು ಪುರುಷರಿಗೆ ಅವಶ್ಯವಾಗಿರುವಂತೆ ಸ್ತ್ರೀಯರಿಗೂ ಅವಶ್ಯವಾಗಿರುತ್ತದೆ. ತಲೂ ಕೇಳಿದ್ದೇನೆ ,

ಮೈತೆಯಿ-ಅಂದಬಳಿಕ ಸಖೀ, ಆತ್ಮಜ್ಞಾನವ ಸಂಪಾದಿಸುವ ಸಂಬಂಧ

ದಿಂದ ಪುರುಷರ ಕರ್ತವ್ಯಗಳು ಭಿನ್ನವಾಗುವದು ಹ್ಯಾಗೆ ನೀನೇ ಹೇಳು, ಸಂಸಾರ ಕ ತ ಗ ಳಲ್ಲಿ ದಕ್ಷರಾಗಿರುವದಷ್ಟೇ ಸ್ತ್ರೀಯರಕರ್ತವ್ಯವಲ್ಲ. ಆ ತ್ಮ ಜ್ಞಾನ ಸಂಪಾಧಿಸುವದೂ ಸ್ತ್ರೀಯರಕರ್ತವ್ಯವಾಗಿರುತ್ತದೆ. ಅದನ್ನು ನಾವು ಸಂಪಾದಿಸ ದಿದ್ದರೆ ಆದಕ್ಕೆ ಪುರುಷರಾದರೂ ಏನುಮಾಡಬೇಕು ?

ಕಾತ್ಯಾಯನೀ-ಸಖೀ, ನಿನ್ನ ಮಾತು ನಿಜವು, ಆತ್ಮಜ್ಞಾನದ ಸಂಬಂಧದಿಂದ

ನಾನು ತೀರ ಉದಾಸೀನಳಾಗಿದ್ದೆನು. ನಿನ್ನ ಬೋಧದಿಂದ ಇಂದು ನನ್ನ ಕಣ್ಣುಗಳು ತೆರೆದವು. ನಾವೇ ಉದಾಸೀನರಾದರೆ ಪುರುಷರಾದರೂ ಏನುಮಾಡಬೇಕು? ನನ್ನನ್ನೇ ನೋಡಬಾರದೆ? ನಾನೇ ಉದಾಸೀನಳಾದದ್ದರಿಂದ ನಮ್ಮ ಯೋಗೀಶ್ವರರೂ ಈ ಸಂಬಂ ಧದಿಂದ ನನ್ನನ್ನು ಉದಾಸೀನಮಾಡಿರುವರು, ನನಗೇ ಸೃಸ್ವರೂಪಜ್ಞಾನವು ಬೇಡಾ 
26

ಗಿರುವಾಗ ಅವರಾದರೂ ಏನುಮಾಡಬೇಕು ? ಸಾಂಸಾರಿಕ ವಿಷಯಗಳಲ್ಲಿಯೇ ಸದಾ ಮಗ್ನಳಾಗಿರುವ ನನ್ನೊಡನೆ, ಆ ವಿಷಯಗಳನ್ನು ಕುರಿತೇ ಅವರು ಪ್ರಸ್ತಾಪಿಸುತ್ತಿರು ವರು. ಸಖಿ, ಯಾಜ್ಞವಲ್ಯ ಪತಿಯೆನಿಸುವ ನನಗೆ ಈ ಮಾತು ಅತ್ಯಂತ ಲಾಂಛನವೇ ಸರಿ! ನಮ್ಮಂಥ ಸ್ತ್ರೀಯರಿಗೆ ಸಿಂಹದ ಮರಿಯಂತೆ ಆತ್ಮವಿಸ್ಮತಿಯಾಗಿರುತ್ತದೆಂದು ನಿರ್ಬಾಧವಾಗಿ ಹೇಳಬಹುದು.

ಮೈತ್ರೇಯಿ – ಅಕ್ಕಾ, ನಿನಗೆ ನಾನು ಹೆಚ್ಚಿಗೆ ಹೇಳುವದೇನು? ದ್ರವ್ಯವನ್ನು

ಸಂಪಾದಿಸುವದು, ಸಂಸಾರದ ಬೇರೆ ಕೃತ್ಯಗಳನ್ನು ಮಾಡುವದು ಪುರುಷರ ಕರ್ತವ್ಯ ವಾಗಿರುವಂತೆ, ಮನೆಗೆಲಸಗಳನ್ನು ದಕ್ಷತೆಯಿಂದ ಮಾಡುವದು ಸ್ತ್ರೀಯರ ಕರ್ತವ್ಯ ವಾಗಿರುತ್ತದೆ. ಸ್ತ್ರೀ-ಪುರುಷರು ತಮ್ಮ ತಮ್ಮ ಈ ಕರ್ತವ್ಯಗಳನ್ನು ಯಥಾಸ್ಥಿತವಾಗಿ ಮಾಡಿಕೊಂಡು, ಇಬ್ಬರೂ ಮೋಕವಿಷಯಕ ವಿಚಾರವನ್ನು ಮಾಡತಕ್ಕದ್ದು; ಆದರೆ ಪುರುಷರಂತೆ ಸ್ತ್ರೀಯರು ಈ ಮಾತನ್ನು ಅವಶ್ಯವೆಂದು ಭಾವಿಸುವದಿಲ್ಲ. ಮನೆಗೆಲಸ ಮಾಡಿದರೆ ತಾವು ಕೃತಕೃತ್ಯರಾದೆವೆಂದು ಅವರು ತಿಳಿದುಬಿಡುತ್ತಾರೆ . ಇದಕ್ಕೂ ಹೆಚ್ಚಿನದೇನು ಮಾಡುವದಿರುವದಿಲ್ಲೆಂದು ಅವರು ಭಾವಿಸಿರುವರು.

ಕಾತ್ಯಾಯನೀ-ನೀನನ್ನುವದು ನಿಜವು. ನಮ್ಮ ಸಮಾಜದ ತಿಳುವಳಿಕೆಯೇ

ಹೀಗಿರುತ್ತದೆ; ಅದರಲ್ಲಿ ನಾನಂತು ಬಹಳ ನಾಚಬೇಕಾಗಿದೆ; ಯಾಕಂದರೆ ನನಗೆ ಎಲ್ಲ ಬಗೆಯ ಉತ್ತಮಸಾಧನಗಳು ಉಪಲಬ್ಬವಾಗಿದ್ದು, ಅವುಗಳ ಉಪಯೋಗವನ್ನು ನಾನು ಮಾಡಿಕೊಂಡಿರುವದಿಲ್ಲ.

ಮೈತ್ರೇಯಿ--ಸಖೀ, ಕಾತ್ಯಾಯನೀ, ನೀನು ಬಹುಭಾಗ್ಯವತಿಯು ಕಂಡೆಯಾ?

ವಿದ್ವಾಂಸನೂ, ಸದ್ಗುಣಸಂಪನ್ನನೂ ಆದಪತಿಯು ದೊರೆಯಲು ಪೂರ್ವಾರ್ಜಿತ ಪುಣ್ಯ ವು ಬೇಕು. ನೀನು ಬಹು ಪುಣಶಾಲಿಯು! ಅಂತೇ ಯಾಜ್ಞವಲ್ಕರಂಥ ಮಹಾತ್ಮರ ಪಾಣಿಗ್ರಹಣಮಾಡಿರುವೆ. ತಮ್ಮ ಪತಿಯನ್ನು ಆರಿಸಿಕೊಳ್ಳಲು ಸ್ವಾತಂತ್ರವಿರುವ ಸ್ತ್ರೀಯರಿಗೆ, ವಿಶೇಷವಾಗಿ, ಉಚ್ಚವರ್ಗದೊಳಗಿನ ಸ್ತ್ರೀಯರಿಗೆ ಕೇವಲ ಧನಿಕನೂ, ಸ್ವಸುಖಾಭಿಲಾಷಿಯೂ ಆದ ಪುರುಷನನ್ನೇ ಪತಿಯಾಗಿ ಆರಿಸಿಕೊಳ್ಳುವ ಮನಸ್ಸು ಯಾಕಾಗುತ್ತದೋ ನಾನರಿಯೆನು! ಗುಣಗಳಗಿಂತಲೂ ಐಶ್ವರ್ಯವೂ , ತೇಜಸ್ವಿತೆ ಗಿಂತಲೂ ಸುಖಲೋಲುಪತೆಯೂ, ಕರ್ತೃತ್ವಕ್ಕಿಂತಲೂ ವಿಷಯಾಸಕ್ತಿಯೂ ಹೆಚ್ಚಿ ನವೆಂದು ತಿಳಿಯುವ ಸ್ತ್ರೀಯರೇ ವಿಶೇಷವಾಗಿರುವರು. ನಿನ್ನಂಥ ವಿವೇಕಿಗಳು ತೀರ ಕಡಿಮೆ. ವಿದ್ಯಾಂಸನೂ, ವಿವೇಕಿಯೂ, ಸತ್ಪುರುಷನೂ, ಮೋಕ್ಷಪ್ರಾರ್ಥವಾಗಿ ಸಹಾಯಮಾಡುವವನೂ ಆದ ಭಗವಾನ್ ಯಾಜ್ಞವಲ್ಕರಂಥ ಪತಿಯನ್ನು ಆರಿಸಿ ನೀನು ಕೃತಕೃತ್ಯಳಾಗಿರುವೆ ! ಸಖೀ, ಕಾತ್ಯಾಯನೀ, ನಿನ್ನ ಮಹತ್ವವನ್ನು ನಾನೇನು ವರ್ಣಿ

ಸಲಿ! ವಿದೇಹಜನಕನೆಂದು ಪ್ರಸಿದ್ಧನಾಗಿದ್ದ ರಾಜನುಕೂಡ ನಿನ್ನ ಪತಿಯ ಶಿಷ್ಯಪ್ರಕೆ ಟಿಯಲ್ಲಿ ಸೇರಿರುವನು. ಮೊನ್ನಿನಮಹಾಸಭೆಯಲ್ಲಿ ನಿನ್ನ ಪತಿಯು ಬ್ರಹ್ಮನಿಷ್ಟರಲ್ಲಿ ಪರಮಶ್ರೇಷ್ಟನೆಂದು ಮಹಾಮಹಾಜ್ಞಾನಿಗಳು ಒಪ್ಪಿಕೊಂಡರು! ಅಂಥ ಮಹನೀ
27

ಯನ ಅರ್ಧಾಂಗಿಯೆನಿಸುವ ನಿನಗೆ ಆತ್ಮಜ್ಞಾನಪಡೆಯಲು ಏನು ಪ್ರಯಾಸವಾಗುವದು?

ಕಾತ್ಯಾಯನೀ-- ಮೈತ್ರೇಯಿಾ, ನಿನ್ನ ಮಾತು ಒಂದೂ ಸುಳ್ಳಲ್ಲ . ಹತ್ತರ

ಕಾಮಧೇನುವನ್ನಿಟ್ಟುಕೊಂಡು ಮಜ್ಜಿಗೆಗಾಗಿ ಮನೆಮನೆ ತಿರುಗಿದಂತೆ ನನ್ನ ಗತಿಯಾ ಗಿದೆ. ನನ್ನ ಪತಿಯಮಹತ್ವವನ್ನು ತಿಳಿದುಕೊಳ್ಳುವ ಯೋಗ್ಯತೆಯೂ ನನ್ನಲ್ಲಿಲ್ಲ. ಇಂದು ನನ್ನ ಮೇಲೆ ನೀನು ದೊಡ್ಡ ಉಪಕಾರ ಮಾಡಿದಂತಾಯಿತು . ಸಖೀ,ಆತ್ಮ ಜ್ಞಾನಪ್ರಾಪ್ತಿಗಾಗಿ ನಾನು ಇನ್ನು ಅವರಿಗೆ ಶರಣು ಹೋಗುವೆನು. ಪ್ರತ್ಯಕ್ಷ ನನ್ನ ಪತಿಯ ಚಿರಸಹವಾಸದ ಮಹಾತ್ಮ್ಯದಿಂದ ನನಗಾಗದೆಯಿದ್ದ ಜಾಗ್ರತಿಯು, ಇಂದು ನಿನ್ನ ಸಹವಾಸದಿಂದ ಆಗಿರುತ್ತದೆ. ನಿನ್ನ ಈ ಉಪಕಾರವನ್ನು ನಾನು ಎಂದೂ ಮರೆಯಲಾರೆನು .

ಈ ಮೇರೆಗೆ ಸಂಭಾಷಣವು ನಡೆದಿರುವಾಗ ಕಾತ್ಯಾಯನಿಯ ಒಬ್ಬ ಸೇವಕನು

ಪಲ್ಲಕ್ಕಿಯನ್ನು ತಕ್ಕೊ೦ಡು ಮಿತ್ರನ ಮನೆಯಬಳಿಗೆ ಬಂದನು . ಈ ವರ್ತಮಾನ ವನ್ನು ಆತನು ಕಾತ್ಯಾಯನಿಗೆ ತಿಳಿಸಲು, ಆಕೆಯು ಸೇವಕನನ್ನು ಒಳಗೆ ಕರೆಸಿಕೊಂ ಡಳು , ಸೇವಕನು ಭಗವತೀ-ಕಾತ್ಯಾಯನಿಯನ್ನು ನಮಸ್ಕರಿಸಿ--" ದೇವೀ, ತಾವು ಇಲ್ಲಿಗೆ ಬಂದು ಬಹಳ ಹೊತ್ತಾದದ್ದರಿಂದ ಹುಡುಗರು ತಮ್ಮ ಹಾದಿಯನೋಡುತ್ತ ಒಂದೇಸವನೆ ಚಡಪಡಿಸುತ್ತಿರುವವು . ತಮ್ಮನ್ನು ಯಾವಾಗ ನೋಡೇವೆನ್ನುವಹಾಗೆ ಅವಕ್ಕೆ ಆಗಿದೆ . ಹೊತ್ತು ಮುಣುಗುತ್ತ ಬಂದಿತು. ತಮ್ಮ ಪಲ್ಲಕ್ಕಿಯು ಹೊರಗೆ ಸಿದ್ದವಾಗಿದೆ. ದೇವಿಯವರ ಅಪ್ಪಣೆಯಂತೆ ನಡೆದುಕೊಳ್ಳುವೆನು ” ಎಂದು ಹೇಳಿ ದನು . ಸೇವಕನ ಈ ಮಾತುಗಳನ್ನು ಕೇಳಿದ ಕೂಡಲೆ ಕಾತ್ಯಾಯನಿಗೆ ಮಕಳ ನೆನ ಪಾಗಿ, ತಾನು ಮನೆಗೆ ಯಾವಾಗ ಹೋದೇನೆನ್ನುವಾಗೆ ಆಯಿತು . ಆಕೆಯು ಆಧ್ಯಾ ತ್ಮಿಕ ವಿಷಯವನ್ನು ಕುರಿತು ಮಾತಾಡುತ್ತ ಕುಳಿತುಕೊಂಡದ್ದು ಇದೇ ಮೊದಲು. ತನ್ನ ಮಕ್ಕಳ ನೆನಪಾದ ಕೂಡಲೆ ಆಕೆಗೆ ಚಡಪಡಿಕೆಯಾಯಿತು. ಇಷ್ಟು ಹೊತ್ತಿಗೆ ತಾನು ಮಾಡಿಸಬೇಕಾಗಿದ್ದ ಮನೆಗೆಲಸಗಳೆಲ್ಲ ಹಾಗೇ ಉಳಿದದ್ದರಿಂದ ಆಕೆಯ ಮನಸ್ಸು ಅಸ್ಥಿರವಾಯಿತು. ಒಣ ಮಾತಿನಿಂದ ಕಾಲಹರಣವಾದಾಗ ಕರ್ತವ್ಯನಿಷ್ಠರಿಗೆಲ್ಲ ಹೀಗೆಯೇ ಚಡಪಡಿಕೆಯಾಗುವದು . ಕಾತ್ಯಾಯನಿಯು ಅತ್ಯಂತ ಕರ್ತವ್ಯನಿಷ್ಠಳು; ಸುವ್ಯವಸ್ಥಿತಳು ; ಆಲಸ್ಯರಹಿತಳು. ಆಕೆಯ ಬಲವತ್ತರವಾದ ಸಂಸಾರವಾಸನೆಯು ಆಕೆಯನ್ನು ಹಿಡಿದೆಳೆಯಹತ್ತಿತು. ಆಕೆಯು ಅವಸರದಿಂದ ಕುಂಕುಮ ಹಚ್ಚಿಸಿ ಕೊಂಡು ಮೈತ್ರೇಯಿಯ ಅನುಜ್ಞೆಪಡೆದು ಪಲ್ಲಕ್ಕಿಯಲ್ಲಿ ಕುಳಿತು ಮನೆಗೆ ಬಂದಳು.

28

೪ ನೆಯಪ್ರಕರಣ.

ವರಪ್ರದಾನ.

ಸಂತಕಾಲನ; ಚೈತ್ರಪೌರ್ಣಿಮೆಯ ರಾತ್ರಿಯ ಮೂರುತಾಸಿನ ಸಮಯ;

ಹಿಟ್ಟು, ಚಲ್ಲಿದಹಾಗೆ ಬೆಳದಿಂಗಳು ಬಿದ್ದಿದೆ. ಭಗವಾನ್ ಯಾಜ್ಞವಲ್ಕ್ಯರ ಪುಣ್ಯಾಶ್ರಮದ ಉಪವನದಲ್ಲಿ ಸುಳಿದಾಡಿ ಪವಿತ್ರವಾಗುವನೆವದಿಂದ ಮಂದಮಾರುತನು ಸುಳ್ಳ ಸುಳ್ಳನೆ ಸುಳಿದಾಡುತ್ತಲಿದ್ದಾನೆ. ಮಲ್ಲಿಗೆ, ಪಾರಿಜಾತ, ಪಾಟಲ ಮೊದಲಾದವುಗಳ ಅರಳ ಮೊಗ್ಗೆಗಳು ಮೆಲ್ಲ ಮೆಲ್ಲನೆ ಅರಳಹತ್ತಿ ಸುತ್ತಲು ಸುಗಂಧವನ್ನು ಬೀರುತ್ತಲಿವೆ. ಆಶ್ರ ಮದ ಮುಂಭಾಗದ ಪ್ರಶಸ್ತವಾದ ಅಂಗಳವನ್ನು ಸಾರಿಸಿ ಹಾಕಿದ ರಂಗವಲ್ಲಿಗಳು, ಅದೇ ಕಸಬೊಳೆದದ್ದರಿಂದ ಮಸಮಸಕಾಗಿ ತೋರುತ್ತಲಿವೆ. ಕೃಷ್ಣಾಜಿನ, ದರ್ಭಾಸನಾದಿಗಳು ಸುವ್ಯವಸ್ಥೆಯಿಂದ ಹಾಕಿವೆ. ಅಲ್ಲಿಯೇ ಸಮೀಪದಲ್ಲಿ ಆಶ್ರಮಸ್ಥ ಗೋಗಳು, ಹರಿಣ ಗಳು ಸ್ವಚ್ಛಂದದಿಂದ ಮೆಲಕಾಡಿಸುತ್ತ ಮಲಗಿಕೊಂಡಿವೆ. ಸತ್ಕರ್ಮ, ಸದ್ವಿಚಾರ, ಸದ್ಬೋಧ, ಸದಾನಂದಗಳಸಮಿಾಚೀನತೆಯಿಂದ ಆ ಆಶ್ರಮಪದವು ಶಾಂತಿರಸದಿಂದ ತುಂಬಿ ತುಳುಕುತ್ತಲಿದೆ. ಶ್ರೀ ಯಾಜ್ಞವಲ್ಕ್ಯರ ಶಿಷ್ಯವೃಂದದ ಸದ್ವಿದ್ಯಾವ್ಯಾಸಂಗವು ಆಸ್ಥೆ ಯಿಂದ ಸಾಗಿದೆ. ಚತುರ್ವೇದಗಳ, ಬ್ರಾಹ್ಮಣಗಳ, ಉಪನಿಷತ್ತುಗಳ ಪವಿತ್ರವಾದ ಮಂಜುಲಧ್ವನಿಯ ಕಿವಿಗೆ ಇಂಪಾಗಿ ದೂರದಿಂದ ಕೇಳುತ್ತಲಿದೆ. ಲೋಕಕಲ್ಯಾಣೇ ಚ್ಛುಗಳಾದ ಭಗವಾನ್ ಯಾಜ ವಲ್ಕ್ಯರು ಅದೇಬಂದು ಸುಖಾಸನದಲ್ಲಿ ವಿಶ್ರಮಿಸಿದ್ದಾರೆ. ಒಂದು ಚಿಗರೆಯಮರಿಯು ಅವರ ಆಸನದ ಬಳಿಯಲ್ಲಿ ಮಲಗಿಕೊಂಡು ಮೆಲಕು ಹಾಕುತ್ತಲಿದೆ. ಅಂಗಳದಲ್ಲಿ ಆಕಳಕರಗಳು, ಸ್ವಚ್ಛಂದದಿಂದ ಹಾರಾಡುತ್ತಿರಲು, ಅವುಗಳ ತಾಯಿಗಳು ಪ್ರೇಮಭರದಿಂದ ಕಿವಿಚಾಚಿ ನೋಡುತ್ತ ಮೆಲಕಾಡಿಸುತ್ತಲಿವೆ. ನಡನಡುವೆ ನವಿಲು, ಗಿಳಿ, ಮೊದಲಾದ ಆಶ್ರಮಸ್ಥ ಪಕ್ಷಿಗಳ ಮಂಜುಲಧ್ವನಿಗಳು ಇಂ ಪಾಗಿ ಕೇಳುತಲಿವೆ. ಅಷ್ಟರಲ್ಲಿ ಭಗವತೀ-ಕಾತ್ಯಾಯನಿಯು ಗೃಹಕೃತ್ಯಗಳನ್ನೆಲ್ಲ ತೀರಿ ಸಿಕೊಂಡು ಮಕ್ಕಳನ್ನು ಮಲಗಿಸಿ, ನಗೆಮೊಗದಿಂದ ಪತಿಯ ಸನ್ನಿಧಿಗೆ ಪ್ರಾಪ್ತವಾದಳು. ಆ ಪ್ರೇಮಲಸ್ವಭಾವದ ಸಾಧ್ವಿಯನ್ನು ನೋಡಿ ಯಾಜ್ಞವಲ್ಕ್ಯರಿಗೆ ಪರಮಾನಂದವಾ ಯಿತು. ಅವರು ಅತ್ಯಂತ ಆದರದಿಂದ ತಮ್ಮ ಪ್ರಿಯ ಅರ್ಧಾಂಗಿಯನ್ನು ಕುರಿತು---- "ದೇವೀ, ಗೃಹಕೃತ್ಯಗಳೆಲ್ಲ ತೀರಿದವಷ್ಟೆ ? ನಿನ್ನಂಥ ಕರ್ತವ್ಯನಿಷ್ಠರಾದ ಪ್ರೇಮಲ ಹೃ ದಯದ ಸಾಧ್ವಿಯರ ಪ್ರಾಪ್ತಿಯಿಂದಲೇ ಸಂಸಾರವು ಸುಖಮಯವಾಗುವದುಕಂಡೆಯಾ! ಅಸಾರವಾದ ಸಂಸಾರವು ನಿಮ್ಮಂಥವರ ಯೋಗದಿಂದಲೇ ಸಾರಮಯವಾಗುವಲ್ಲಿ ಸಂಶಯ ವಿಲ್ಲ. ಭಗವತೀ, ಬಾ, ಕುಳಿತುಕೋ. ಕಾರ್ಯದಕ್ಷಳಾದ ನಿನಗೆ ಕೆಲಸದ ದಣಿವಾಗ ದಿದ್ದರೂ, ನನ್ನ ಹೃದಯವು ಸದಾ ಕೃತಜ್ಞತಾಪೂರ್ಣವಾಗಿರುತ್ತದೆ. ನಿನ್ನ ಯೋಗ

ದಿಂದ ನನ್ನ ಗೃಹಸಾ ಶ ಮದ ಮಾರ್ಗವು ಅತ್ಯಂತ ಸುಗಮವಾಗಿ ಹೋಗಿದೆ.” ಎಂದು
29

ನುಡಿಯುತ್ತಿರಲು, ಕಾತ್ಯಾಯನಿಯು ಮುಗುಳುನಗೆನಗುತ್ತ--" ಇದೆಲ್ಲ ತಮ್ಮ ಮಹಾ ಮಹಿಮೆಯ ಪ್ರಭಾವವಲ್ಲದೆ ಮತ್ತೇನು? ಕಾತ್ಯಾಯನಿಯು ಹ್ಯಾಗಿದ್ದರೂ, ಕಾತ್ಯಾಯನಿಯ ಆಶ್ರಯಸ್ಥಾನವು ಭದ್ರವೂ, ಮಂಗಲಕರವೂ ಆಗಿರುವದಷ್ಟೆ ? ಆಶ್ರಯಸ್ಥಾನದ ಗುಣ

ಗಳೇ ಆಶ್ರಿತರಲ್ಲಿ ಬರುವವು.” ಎಂದು ನುಡಿಯುತ್ತ, ಮುನಿಗಳ ಬಳಿಯ ಆಸನದಲ್ಲಿ ಕುಳಿತುಕೊಂಡಳು

ಮೊದಲೇ ಕಾತ್ಯಾಯನಿಯು ಅತ್ಯಂತ ಪತಿಭಕ್ತಿಪರಾಯಣಳು; ಅದರಲ್ಲಿ ಮೈತ್ರೇ

ಯಿಯ ಸಹವಾಸದಿಂದ ತನ್ನ ಪತಿಯಗಂಭೀರವಾದ ಯೋಗ್ಯತೆಯ ಜ್ಞಾನವಾಗ ಹತ್ತಿ ದ್ದರಿಂದ, ಆಕೆಯ ಪತಿ ಭಕ್ತಿ ಪರಾ ಯ ಣ ತೆ ಯು ಪವಿತ್ರ ಜ್ಞಾನಮೂಲವಾಗ ತೊಡಗಿತ್ತು. ತಾನು ಧರ್ಮಾರ್ಥ-ಕಾಮ-ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ ಗಳನ್ನು ಕೊಡುವ ಕಲ್ಪವೃಕ್ಷರೂಪವಾದ ತಪೋಧನನನ್ನೇ ಆಶ್ರಯಿಸಿದ್ದರಿಂದ, ಧನ್ಯ ಳೆಂದು ಕಾತ್ಯಾಯನಿಯು ಯಾವಾಗಲೂ ಭಾವಿಸುತ್ತಲಿದ್ದಳು. ಆ ಪವಿತ್ರದಂಪತಿ ಗಳು ಪರಸ್ಪರರ ಗುಣಗಣಳನ್ನು ಗೌರವಿಸುತ್ತಿರುವಾಗ, ಪರಸ್ಪರರಿಗೆ ಪರಸ್ಪರರು ಅತ್ಯಂತ ಮನೋಹರವಾಗಿ ತೋರಹತ್ತಿದರು. ಭಗವಾನ್ ಯಾಜ್ಞವಲ್ಕ್ಯರು ಮೂವ ತು ವರ್ಷದ ವಯಸ್ಸಿನವರಾಗಿದ್ದರು. ಕಾತ್ಯಾಯನಿಯ ವಯಸ್ಸು ಇಪ್ಪತ್ತೈದು ವರ್ಷದ ಹೊರಗೊಳಗಿರಬಹುದು. ಆ ವೈದಿಕಕಾಲದಲ್ಲಿ ಪ್ರೌಢವಿವಾಹವು ಪ್ರಚಾರದಲ್ಲಿ ತ್ತೆಂದು ವಾಚಕರಿಗೆ ನಾವು ಬರೆದುತಿಳಿಸಲವಶ್ಯವಿಲ್ಲ. ಹೀಗೆ ಪ್ರಬುದ್ಧಸ್ಥತಿಯಲ್ಲಿತಮಗೆ ಅನುರೂಪರಾದವರನ್ನು ಆರಿಸಿಕೊಂಡು ದಾಂಪತ್ಯವನ್ನುಂಟುಮಾಡಿಕೊಳ್ಳುತಿದ್ದವರ ಸಂಸಾರಸುಖವನ್ನು, ಈಗಿನ ಹೀನಕಾಲದ ಮೂಢರಾದ ನಾವು ವರ್ಣಿಸಲು ಶಕ್ತರಾಗ ಬಹುದೆ ? ಇರಲಿ. ನಮ್ಮ ಪೂಜ್ಯರಾದ ಆ ತರುಣ ಋಷಿದಂಪತಿಗಳು ಮೌನದಿಂದ ಪರ ಸ್ಪರರನ್ನು ಅಭಿನಂದಿಸುತ್ತಿರಲು, ಭಗವತೀಕಾತ್ಯಾಯನಿಯು ತನ್ನಪತಿಯನ್ನು ಕುರಿತು-

ಕಾತ್ಯಾಯನಿ-- ಭಗವನ್, ಏನಾದರೂ ನಾನು ತಮಗೆ ತಕ್ಕ ಹೆಂಡತಿಯಲ್ಲ.

ತಾವು ಬ್ರಹ್ಮಜ್ಞಾನಿಗಳಲ್ಲಿ ಅತ್ಯಂತ ಶ್ರೇಷ್ಠರಾಗಿದ್ದು, ನಾನು ಅತ್ಯಂತ ಸಂಸಾರಾಸಕ್ತ ಳಾಗಿರುವೆನು. ಸಂಸಾರವು ನಶ್ವರವಾದದ್ದೆಂತಲೂ, ಸಾಂಸಾರಿಕ ಸುಖಗಳೆಲ್ಲ ಐಂದ್ರ ಜಾಲದಂತೆ ತೋರಿ ಅಡಗತಕ್ಕವೆಂತಲೂ, ಒಬ್ಬ ಆತ್ಮನು ನಿತ್ಯನೆಂತಲೂ ತಾವು ಜನ ರನ್ನು ಬೋಧಿಸುತಿ ರುವದನ್ನು ನಾನು ಎಷ್ಟು ಸಾರೆ ಕೇಳಿರುವೆನೋ ಏನೋ! ಆದರೆ ದಿನದಿನಕ್ಕೆ ನನ್ನ ಸಂಸಾರಾಸಕ್ತಿಯು ಹೆಚ್ಚುತ್ತಿರುವದಲ್ಲದೆ, ಕಡಿಮೆಯೆಲ್ಲಿ ಆಗುತ್ತಿರು ವದು ? ಅಜ್ಞಾನಿಗಳಾದ ಕೂಸುಗಳ ಲೀಲೆಯನ್ನು ನೋಡಿ ಜ್ಞಾನಿಗಳು ಕೌತುಕಪಡು ವಂತೆ, ಜ್ಞಾನಿವರ್ಯರಾದ ತಾವು ಪಾಮರಳಾದ ನನ್ನ ಸಂಸಾರಾಸಕ್ತಿಯನ್ನು ನೋಡಿ ಕೌತುಕಪಡುತ್ತಿರಬಹುದು; ಆದರೆ ಅಷ್ಟರಿಂದ ತಮ್ಮ ಅರ್ಧಾಂಗವೆನಿಸಲಿಕ್ಕೆ ನಾನು ಸರ್ವಥಾ ಅಯೋಗ್ಯಳೇ ಸರಿ!

ಯಾಜ್ಞವಲ್ಕ ( ಆಶ್ಚರ್ಯದಿಂದ)--ದೇವಿ, ನಿನ್ನ ಬುದ್ಧಿ ಭೇದವು ಇಂದು ಯಾ-

ರಿಂದಾಯಿತು? ಕರ್ತವ್ಯನಿಷ್ಠೆಯಿಲ್ಲದೆ ವೇದಾಂತದ ಬರಿಯ ಹಾಳುಮಾತುಗಳನ್ನಾಡು
30

ವದರಿಂದ ಏನೂ ಪ್ರಯೋಜನವಿಲ್ಲೆಂಬದನ್ನು ಚನ್ನಾಗಿ ಲಕ್ಷದಲ್ಲಿಡು . ಭೂತಗಳಲ್ಲಿ ಪ್ರಾಣಿಗಳು , ಪ್ರಾಣಿಗಳಲ್ಲಿ ಬುದ್ಧಿಯುಳ್ಳವು,. ಬುದ್ಧಿಯುಳ್ಳವುಗಳಲ್ಲಿ ಮನುಷ್ಯರು, ಮನುಷ್ಯರಲ್ಲಿ ಬ್ರಾಹ್ಮಣರು, ಬ್ರಾಹ್ಮಣರಲ್ಲಿ ವಿದ್ವಾಂಸರು, ವಿದ್ವಾಂಸರಲ್ಲಿ ಸುಸಂಸ್ಕೃತ ಬುದ್ಧಿಯುಳ್ಳವರು, ಸುಸಂಕೃತಬುದ್ಧಿಯುಳ್ಳವರಲ್ಲಿ ಕರ್ತೃತ್ವಶಾಲಿಗಳು, ಕರ್ತೃತ್ವ ಶಾಲಿಗಳಲ್ಲಿ ಬ್ರಹ್ಮಜ್ಞಾನಿಗಳು ಶ್ರೇಷ್ಥರಿರುವದರಿಂದ, ಕರ್ತೃತ್ವಶಾಲಿಯಾದ ನೀನು ಬ್ರಹ್ಮ ಜ್ಞಾನಕ್ಕೆ ತೀರ ಸಮಿಾಪಿಸಿರುತ್ತೀ. ನೀನು ಯೋಗ್ಯತಾಸಂಪನ್ನಳಾದ್ದರಿಂದಲೇ ನಿನ್ನನ್ನು ನಾನು ಲಗ್ನವಾಗಿರುವೆನು. ವಶಿಷ್ಠರಿಗೆ ಅರುಂಧತಿಯಂತೆ ನೀನು ನನಗೆ ತಕ್ಕ ಹೆಂಡತಿ ಯಾಗಿರುತ್ತೀ! ನಿನ್ನ ಯೋಗ್ಯತೆಯು ಸಾಮಾನ್ಯವೆಂದು ತಿಳಿಯಬೇಡ. ನೀನು ನನ ಶಕ್ತಿಸರ್ವಸ್ವವಾಗಿರುತ್ತೀ. ನಿನ್ನಂಥ ಕಾರ್ಯದಕ್ಷಳ ಸಹಾಯವಿರುವದರಿಂದಲೇ ನಾನು ಗೃಹಸ್ಥಾಶ್ರಮಿಯಾಗಿರುವೆನು. ನಿನ್ನಂಥ ಗೃಹಿಣಿಯ ಸಹಾಯದಿಂದಲೇ ಯೋಗ್ಯವಾದ ಸಂಸಾರದ ಮಾದರಿಯನ್ನು ಲೋಕಕ್ಕೆ ತೋರಿಸಲಿಕ್ಕೆ ನಾನು ಸಮರ್ಥನಾಗಿರುತ್ತೇನೆ. ದೇಹವಿರುವದರೊಳಗಾಗಿ ಅಭಿಮಾನಬಿಡುವದು ಮಹತ್ವವಾಗಿರುವಂತೆ, ಸಂಸಾರದಲ್ಲಿದ್ದು ಸಂಸಾರಪರಿತ್ಯಾಗ ಮಾಡುವದು ಮಹತ್ವದ್ದಾಗಿರುತ್ತದೆ.

ಕಾತ್ಯಾಯನಿ--ಭಗವನ್, ಪತಿತರನ್ನು ಕ್ಷಣದಲ್ಲಿ ಉದ‍್ಧರಿಸಲು ಸಮರ್ಥರಾದ

ತಮಗೆ ಯಾವದು ತಾನೆ ಅಸಾಧ್ಯವು! ಸಂಸಾರದಲ್ಲಿದ್ದೂ ತಾವು ಸಂಸಾರ ಪರಿತ್ಯಾಗ ವನ್ನು ಮಾಡಿರಬಹುದು; ಆದರೆ ಸಂಸಾರವು ಅಸಾರವಾದದ್ಧೂ, ತಿರಸ್ಕರಣೀಯವಾ ದದ್ದೂ ಎಂದು ಜ್ಞಾನಿಗಳು ಹೇಳುವರಲ್ಲ! ಅದರ ಮರ್ಮವೇನು?

ಯಾಜ್ಞವಲ್ಕ್ಯ----ದೇವಿ, ಇರುವಹಾಗೆಇದ್ದರೆ ಯಾವದೂ ಕೆಡಕಲ್ಲ ನೋಡು.

ನಿಜವಾದ ಸಂಸಾರಕ್ಕೂ, ನಿಜವಾದ ಪಾರಮಾರ್ಥಕ್ಕೂ ಭೇದವಿಲ್ಲೆಂತಲೂ, ಸಂಸಾರವನ್ನು ಬಿಟ್ಟು ಪರಮಾರ್ಥವನ್ನು ಹಿಡಿಯುವವನೂ, ಪರಮಾರ್ಥವನ್ನು ಬಿಟ್ಟು ಸಂಸಾರ ವನ್ನುಹಿಡಿಯುವವನೂ ಜ್ಞಾನಿಯಲ್ಲೆಂತಲೂ ಅದೇ ಜ್ಞಾನಿಗಳೇ ಹೇಳಿರುವರು. ಸಂಸಾ ರವು ಹೇಯವಾಗಿದ್ದರೆ ವಶಿಷ್ಯಾದಿಗಳು ಸಂಸಾರದ ಅವಲಂಬನವನ್ನು ಯಾಕೆ ಮಾಡುತ್ತಿ ದ್ದರು? ಯಾವ ಸಂಸಾರದಲ್ಲಿ ಆಲಸ್ಯ-ದುರಾಚರಣೆಗಳಿಗೆ ಆಸ್ಪದವಿರುವದಿಲ್ಲವೋ, ಯಾವ ಸ೦ ಸಾ ರ ವು ಅತಿಸಂಚಯದಿಂದ ದೂಷಿತವಾಗಿರುವದಿಲ್ಲವೋ, ಯಾವ ಸಂಸಾರವು ಪ್ರೇಮ-ದಯೆಗಳ ಆಗರವಾಗಿರುವದೋ, ಯಾವ ಸಂಸಾರದಲ್ಲಿ ದೇವ,-ಗುರು,-ಪಿತೃ,- ಅತಿಥಿಗಳ ಪೂಜಾ-ಸತ್ಕಾರಗಳು ಯಥಾಸ್ಥಿತವಾಗಿ ಸದಾ ಆಗುತ್ತಿರುವವೋ, ಆ ಸಂಸಾ ರವು ಪರಮಧನ್ಯವೂ, ಅತ್ಯಂತ ಸಾರಯುಕ್ತವೂ, ಶ್ರೇಷ್ಥಗತಿಪ್ರದವೊ ಆಗಿರುವದು. ಭಗವತೀ, ಹೇಳು, ನಿನ್ನಯೋಗದಿಂದ ನಮ್ಮ ಸಂಸಾರದಲ್ಲಿ ಯಾವಮಾತಿನಕೊರತೆಯದೆ? ಸಂಸಾರದ ತಿರಸ್ಕಾರವನ್ನು ನಾನು ಎಂದಾದರೂ ನಿನ್ನ ಮುಂದೆ ಮಾಡಿರುವೆನೆ ?ಯಾಕೆ ಮಾಡಲಿ? ನಿನ್ನಯೋಗದಿಂದ ಸಂಸಾರದಲ್ಲಿ ನನಗೆ ಸ್ವರ್ಗಸುಖವು ಪ್ರಾಪ್ತವಾಗಿರುವದು!

ಕಾತ್ಯಾಯನಿ (ಕೈ ಜೋಡಿಸಿ)--ಋಷಿವರ್ಯರಿಗೆ ಈ ದಾಸಳ ಅನಂತ ಪ್ರಣಾ

ಮಗಳಿರಲಿ! ಭಗವನ್, ಸಂನಾರಧರ್ಮಗಳನ್ನು ನಾನು ಅರಿತವಳಲ್ಲ' ಚರಣಸೇವೆಯ
31

ಪ್ರಭಾವವು ನನ್ನನ್ನು ಪ್ರೇರೇಪಿಸಿದಂತೆ ನಾನು ನಡೆದುಕೊಳ್ಳುತ್ತಿರುವೆನು; ಆದರೆ ದೇ- ಹಾದಿ ಬಾಹ್ಯವಸ್ತುಗಳ ವಿಚಾರದಲ್ಲಿಯೇ ನನ್ನ ಕಾಲಹರಣವಾಗುತ್ತಿರುವದರಿಂದಲೂ, ಅನುಭವದಿಂದ ನಶ್ವರವಾಗಿರುವ ವಸ್ತುಜಾಲಗಳ ಪ್ರಾಪ್ತಿಯಲ್ಲಿಯೇ ನನ್ನ ಮನಸ್ಸು ರಮಿಸುತ್ತಿರುವದರಿಂದಲೂ ಶಾಶ್ವತವಸ್ತುವಿನ ವಿಚಾರದ ಕಡೆಗೆ ನನ್ನ ಮನಸ್ಸು ತಿರು ಗುವದೇ ಇಲ್ಲ. ಈ ಸ್ಥಿತಿಯು ನನಗೆ ಹಿತಕರವಾಗಿ ತೋರದಾಗಿದೆ. ಆತ್ಮರೂಪಸತ್ಯ ವಸ್ತುವಿನ ಚರ್ಚೆಯು ಈ ಪುಣ್ಯಾಶ್ರಮದಲ್ಲಿ ಸದಾ ನನ್ನ ಕಿವಿಗೆ ಬೀಳುತ್ತಿದ್ದರೂ, ಅದರ ಕಡೆಗೆ ನನ್ನ ಮನಸ್ಸು ಹೊರಳದಿರುವದು ಸೋಜಿಗವಲ್ಲವೆ? ಭಗವನ್, ಗುರು ವರ, ಹೀಗೆ ನಾನು ಆತ್ಮವಿಚಾರ ವಿಮುಖಳಾಗಿರುವದು ಹಿತಕರವಾಗಬಹುದೋ?

ಯಾಜ್ಞವಲ್ಕ್ಶ--ದೇವಿ, ಹಿತಕರವಾಗುವದೆಂದು ನಾನು ಹೇಗೆ ಹೇಳಲಿ? ನಿತ್ಯ

ವಸ್ತುವಾದ ಆತ್ಮನ ಜ್ಞಾನವನ್ನು ಪಡೆಯದವರಿಗೆ, ಆ ನಿತ್ಯವಸ್ತುವಿನ ವಿಕಾರಗಳೆನಿ ಸುವ ಬಾಹ್ಯವಸ್ತುಗಳ ನಿಜವಾದ ಜ್ಞಾನವು ಹ್ಯಾಗಾಗಬೇಕು? ತನ್ನ ಜ್ಞಾನವೇ ತನ ಗಿಲ್ಲದವನಿಗೆ ಪರರಜ್ಞಾನವಾಗಬಹುದೆ? ಮೂಲ ವಸ್ತುವಿಗಿಂತಲೂ ಮೂಲ ವಸ್ತುವಿನ ವಿಕಾರದ ಕಡೆಗೆ ಲೋಕದ ಒಲವು ವಿಶೇಷವಾಗಿರುವದು. ಬಂಗಾರಕ್ಕಿಂತ ಬಂಗಾರದ ಒಡವೆಗಳಲ್ಲಿ ಆಸಕ್ತಿಯು ಹೆಚ್ಚು ಇರುವಂತೆ, ಹತ್ತಿಗಿಂತ ಹತ್ತಿಯಿಂದಾದ ಮನೋಹರ ವಸ್ತ್ರಗಳಲ್ಲಿ ಆಸಕ್ತಿಯು ಹೆಚ್ಚು ಇರುವಂತೆ, ಮೂಲವಾದ ಆತ್ಮವಸುವಿ ಗಿಂತ ಆತ್ಮದ ವಿಕಾರಗಳೆನಿಸುವ ಸೃಷ್ಟ ಪದಾರ್ಥಗಳಲ್ಲಿ ಲೋಕದ ಆಸಕ್ತಿಯು ಹೆಚ್ಚು ಇರುವದು. ಈ ಲೌಕಿಕಾಸಕ್ತಿಯಿಂದ ನೀನು ವಿಮುಖಳಾಗಿ ನಿತ್ಯವಸ್ತುವಿನ ಜ್ಞಾನದ ಕಡೆಗೆ ಮನಸ್ಸು ಮಾಡಿದ್ದನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತದೆ.

ಕಾತ್ಯಾಯನಿ--ಇದಕ್ಕೆಲ್ಲ ತಮ್ಮ ಪುಣ್ಯಪ್ರಭಾವವೇ ಕಾರಣವು; ಆದರೆ

ತಮಂಥವರ ಚಿರಸಹವಾಸದಲ್ಲಿದ್ದು ಈ ಮೊದಲೆ ನನ್ನ ಮನಸ್ಸು ನಿತ್ಯವಸ್ತುವಿನ ಜ್ಞಾನದ ಕಡೆಗೆ ತಿರುಗದೆಯಿದ್ದದ್ದಕ್ಕಾಗಿಯೂ, ನನ್ನನ್ನು ಬುದ್ಧಿಪೂರ್ವಕ ತಾವು ಜಾಗ್ರತಗೊಳಿಸದೆಯಿದ್ದದ್ದಕ್ಕಾಗಿಯೂ ನನಗೆ ಚಡಪಡಿಕೆಯಾಗಿದೆ; ಸಥಿಯ ಮೂಲಕ ನಾನು ಹೀಗೆ ಆಡುವದು ಅಪರಾಧವಾಗಿರುವದು.

ಯಾಜ್ಞವಲ್ಕ್ಶ-- ದೇವಿ, ಅಪರಾಧವೆಂದು ಭಾವಿಸಬೇಡ. ನನ್ನ ಮಾತನ್ನು

ಲಕ್ಷವಿಟ್ಟು ಕೇಳು. "नाप्ट्सष्ट: कसश्य्चिद़बयाद़” ಅಂದರೆ ಕೇಳದೆ ಏನೂ ಹೇಳಬಾರದೆಂಬ ಮನುವಚನದಂತೆ, ಕೇಳದೆ ಹೇಳುವದು ತಪ್ಪಿನಲ್ಲಿ ಬರುವದು. ಕಸಕಾಯನ್ನು ಒತ್ತಿ ಹಣ್ಣು ಮಾಡಿದರೆ ಹಣ್ಣಾಗಬಲ್ಲದೆಯೆ? ಮಾವಿನ ಸಸಿಯು ಬೇಗನೆ ಫಲಕೊಡಬೇ ಕೆಂದು ಚಡಪಡಿಸಿದರೆ ಅದಕ್ಕೆ ಫಲಗಳಾಗಬಹುದೆ? ಯಾವದಕ್ಕಾದರೂ ತಕ್ಕ ಸಮ ಯವು ಒದಗಬೇಕಾಗುತ್ತದೆ. ಈ ಬುದ್ದಿಯು ನನಗೆ ಈಮೊದಲೆ ಹುಟ್ಟಲಿಲ್ಲೆಂದು ನೀನು ಚಡಪಡಿಸುವದು ಹ್ಯಾಗೆ ಯೋಗ್ಯವಾಗುವದು ಹೇಳು! ವಸ್ತಾಲಂಕಾರಗಳಲ್ಲಿ,

ಸಂತತಿ-ಸಂಪತ್ತುಗಳಲ್ಲಿ ಅತ್ಯಂತ ಆಸಕ್ತರಾದ ಹೆಣ್ಣುಮಕ್ಕಳ ಸಂಸಾರವಾಸನೆಯು ವೇದಾಂತಶ್ರವಣದಿಂದ ನಷ್ಟವಾಗಬಹುದೆ?
82

ಕಾತ್ಯಾಯನಿ--ಭಗವನ್, ಅಜ್ಞಾನದ ಮೂಲಕ ಮತ್ತೆ ಪ್ರಶ್ನೆ ಮಾಡುವದ

ಕ್ಕಾಗಿ ಕ್ಷಮೆ ಬೇಡುವೆನು. ಕಾಲಕ್ಕನುಸರಿಸಿ ಎಲ್ಲ ತಾನೇ ಆಗುತ್ತದೆಂದಬಳಿಕ, ಬಾಹ್ಯಾನುಕೂಲತೆಗಳು ವ್ಯರ್ಥವೆಂದು ಹೇಳಬೇಕಾಯಿತಲ್ಲ!

ಯಾಜ್ಞವಲ್ಕ್ಯ--ಬಾಹ್ಯಾನುಕೂಲತೆಗಳು ವ್ಯರ್ಥವೆಂದು ಹೇಳಬಹುದೇ ?

ಮಾವಿನ ಸಸೆ ಹಚ್ಚಿ ಅದಕ್ಕೆ ನೀರು-ಗೊಬ್ಬರಗಳನ್ನು ಒದಗಿಸಿಕೊಡದೆ, ತಾನೇ ದೊಡ್ಡದಾಗುವದೆಂದು ಬಿಟ್ಟುಬಿಟ್ಟರೆ ಅದು ದೊಡ್ಡದಾಗಿ ಫಲ ಕೊಡಬಹುದೇ? ಅದರಂತೆ , ಪ್ರಾರಬ್ಧಕರ್ಮಾನುಸಾರಿಯಾಗಿರುವ ಬುದ್ಧಿರೂಪ ವೃಕ್ಷಕ್ಕೆ ಸತ್ಸಮಾಗ ಮವೆಂಬ ದಿವ್ಯಜಲವನ್ನೂ, ತಪಶ್ಚರ್ಯವೆಂಬ ಸಾರಯುಕ್ತ ಗೊಬ್ಬರವನ್ನೂ ಅನು ಕೂಲಿಸಿ ಕೊಡದಿದ್ದರೆ, ಆ ಬುದ್ಧಿರೂಪ ವೃಕ್ಷಕ್ಕೆ ಮೋಕ್ಷರೂಪ ಫಲವು ಹ್ಯಾಗೆ ಬಿಟ್ಟೀತು? ನಿನಗೆ ಇವೆರಡರ ಅನುಕೂಲತೆಯೂ ಪರಿಪೂರ್ಣವಾಗಿರುವದರಿಂದಲೇ ನಿನ್ನ ಬುದ್ಧಿರೂಪ ವೃಕ್ಷವು ಈಗ ಮುಮುಕ್ಷುತ್ವವೆಂಬ ಹೂವು ಬಿಡುತ್ತಿರುವದು.

ಕಾತ್ಯಾಯನಿ--ಅದು ಏನೇ ಇರಲಿ, ಮೈತ್ರೇಯಿಯೆಂಬ ನನ್ನ ಸಖಿಯ ಸಹ

ವಾಸದಿಂದ ಈ ಬುದ್ದಿಯು ನನಗೆ ಹುಟ್ಟಿದ್ದರಿಂದ, ಆಕೆಯ ವಿಯೋಗವು ನನಗೆ ಎಂದೂ ಒದಗದಂತೆ ಮುನಿಗಳು ಅನುಗ್ರಹಿಸಬೇಕು.

ಯಾಜ್ಞವಲ್ಯ್ಕ--ಕಾತ್ಯಾಯನಿ, ಇದೇನು ನಿನ್ನ ಬೇಡಿಕೆಯು! ಮೈತ್ರೇ

ಯಿಯ ವಿಯೋಗವಾಗದಂತೆ ನಾನು ಅನುಗ್ರಹಿಸುವದು ಹ್ಯಾಗೆ? ನಾಳೆ ವಿವಾಹಾ ನಂತರ ಮೈತ್ರೇಯಿಯು ತನ್ನ ಪತಿಯನ್ನು ಹಿಂಬಾಲಿಸಿ ಹೋಗತಕ್ಕವಳಲ್ಲವೆ?

ಕಾತ್ಯಾಯನಿ--ಭಗವನ್, ನನ್ನ ಅತಿಪ್ರಸಂಗದೋಷವನ್ನು ಎಣಿಸಬಾರದು.

ಮೈತ್ರೇಯಿಯು “ಮಾಡಿದರೆ ತಮ್ಮ ಪಾಣಿಗ್ರಹಣವನ್ನೇ ಮಾಡಬೇಕು, ಇಲ್ಲದಿದ್ದರೆ ಆಜನ್ಮಬ್ರಹ್ಮಚರ್ಯದಿಂದ ಇರಬೇಕು” ಎಂದು ನಿಶ್ಚಯಿಸಿರುವಂತೆ ನಾನು ಅನ್ಯಮುಖ ದಿಂದ ಕೇಳಿದ್ದೇನೆ; ಯೋಗ್ಯಪತಿಯು ದೊರೆಯದಿದ್ದರೆ, ನಾನು ನನ್ನ ಅಬಚಿಯಾದ ಗಾರ್ಗಿಯಂತೆ ಬ್ರಹ್ಮಚರ್ಯದಿಂದಲೇ ಇರುವೆನೆಂದು ಸ್ವತಃ ಮೈತ್ರೇಯಿಯೇ ನನ್ನ ಮುಂದೆ ಹೇಳಿದ್ದಾಳೆ. ಅಂದಬಳಿಕ ತಾವು ಮೈತ್ರೇಯಿಯ ಪಾಣಿಗ್ರಹಣವನ್ನು ಮಾಡಿ ನನಗೆ ಆಕೆಯ ಚಿರಸಹವಾಸವನ್ನು ಯಾಕೆ ಒದಗಿಸಿಕೊಡಬಾರದು?

ಯಾಜ್ಞವಲ್ಕ್ಯ(ಆಶ್ಚರ್ಯದಿಂದ)--ಇದೊಂದು ನಿನ್ನ ವಿಲಕ್ಷಣಬೇಡಿಕೆಯು!

ನೀನು ಜಾಲಿಯಬಿತ್ತಿಕಾಲಿಗೆಮೂಲಮಾಡಿಕೊಳ್ಳುತ್ತಿರುವಂತೆ ನನಗೆ ತೋರುತ್ತದೆ, ಇಬ್ಬರು ಹೆಂಡಿರಿಂದ ಸಂಸಾರದ ಸವಿಯೇ ಕೆಟ್ಟು ಹೋಗುವದೆಂಬುದು ನಿನಗೆ ಗೊತ್ತಿಲ್ಲವೆ? ಕಾತ್ಯಾ ಯನೀ, ನಾನು ಮೈತ್ರೇಯಿಯ ಪಾಣಿಗ್ರಹಣ ಮಾಡಿದರೆ ನಿನಗೆ ಸಮ್ಮತವಾಗುವದೆ?

ಕಾತ್ಯಾಯನಿ--ಸಮ್ಮತವಾಗದೇನುಮಾಡುವದುಮಹಾರಾಜ, ಈ ಸುಯೋ

ಗವು ಒದಗಿದರೆ ನನ್ನ ಸಖಿಯ ಮನೋದಯವು ಪೂರ್ಣವಾದಂತಾಗಿ, ನನಗೆ ಆಕೆಯ ಚಿರಸಹವಾಸವು ಒದಗಿದಹಾಗಾಗುವದು. ಈ ಯೋಗವು ಒದಗದಿದ್ದರೆಮಾತ್ರ ನನಗೆ ಒಂದು ಬಗೆಯ ವ್ಯಸನವಾಗುವದು.
33

ಯಾಜ್ಞವಲ್ಕ್ಯ--ದೇವೀ, ವಿಚಾರಮಾಡು. ಸವತಿಮತ್ಸರವು ಕೆಟ್ಟದು. ನಾನು

ಮೈತ್ರೇಯಿಯ ಪಾಣಿಗ್ರಹಣಮಾಡುವದರಿಂದ ನಿನ್ನಲ್ಲಿ ಆಕೆಯ ವಿಷಯದ ಮತ್ಸರವು ನಿಶ್ಚಯವಾಗಿ ಉತ್ಪನ್ನವಾಗುವದು.

ಕಾತ್ಯಾಯನಿ--ದ್ವೈತಭಾವವಿದ್ದರೆ ಸವತಿಮತ್ಸರವಷ್ಟೆ? ನನಗೂ ಮೈತ್ರೇ

ಯಿಗೂ ದ್ವೈತಭಾವವು ಉತ್ಪನ್ನವಾಗುವ ಹಾಗೆಯೇ ಇಲ್ಲ. ವಿಷಯಸುಖಾಪೇಕ್ಷಿಗಳಲ್ಲಿ ಮತ್ಸರವು. ಅದೆಮೂಲತಃ ನಮ್ಮಲ್ಲಿರುವದಿಲ್ಲ. ನಾನು ಪತಿಯು ದೈವತವೆಂದು ತಿಳಿದು, ಪತಿಮೂಲವಾದ ಸಂಸಾರವನ್ನು ಪತಿಸೇವೆಯೆಂದು ತಿಳಿದು ಅತ್ಯಾಸಕ್ತಿಯಿಂದ ನಡಿಸುತ್ತಿರುವೆನು. ಮೈತ್ರೇಯಿಯಂತು ಜ್ಞಾನಲುಬ್ಧಳಾಗಿ ಕೇವಲ ನಿಮ್ಮಮೇಲಿನ ಭಕ್ತಿಯಿಂದ ನಿಮ್ಮ ಪಾಣಿಗ್ರಹಣಮಾಡುವಳು; ನಾನು ಇನ್ನುಮೇಲೆ ಮೈತ್ರೀಯಿಯ ಹೆಜ್ಜೆಯಮೇಲೆ ಹೆಜೆ ಯನ್ನಿಟ್ಟು ನಡೆಯತಕ್ಕವಳು. ಅಂದಬಳಿಕ ನಮ್ಮಲ್ಲಿ ಮಾತ್ಸರ್ಯವು ಹ್ಯಾಗೆ ಉತ್ಪನ್ನವಾಗುವದು? ಮೇಲಾಗಿ ನನ್ನಮೇಲೆ ತಮ್ಮ ಅಪಾರವಾದ ಪ್ರೇಮವಿರುತ್ತದೆಂಬದನ್ನು ನಾನು ಒಲ್ಲೆನು. ನನ್ನಮೇಲಿನ ತಮ್ಮ ಪ್ರೇಮವು ಯಾತರಿಂದಲೂ ಕಡಿಮೆಯಾಗುವಹಾಗಿಲ್ಲ. ಇದರಿಂದಲೂ ಮಾತ್ಸರ್ಯದ ಉತ್ಪತ್ತಿಗೆ ಆಸ್ಪದವು ದೊರೆಯುವಹಾಗಿಲ್ಲ!

ಯಾಜ್ಞವಲ್ಕ್ಯ - ದೇವೀ, ವಿಚಾರಕ್ಕೂ ಪ್ರತ್ಯಕ್ಷಆಚಾರಕ್ಕೂ ಅಂತರವಿರು

ವದು. ನಿನ್ನ ಮಾತುಗಳು ಕೇಳಲಿಕ್ಕೆ ಬಲು ಸಮರ್ಪಕವಾಗಿವೆ. ಅದರಂತೆ ನಡೆಯಲುಮಾತ್ರ ಶಕ್ಯವಾಗಿರುವದಿಲ್ಲ. ನಿನ್ನಂತ ಮೈತ್ರೇಯಿಯನ್ನು ನಾನು ವಿಶೇಷವಾಗಿ ಪ್ರೀತಿಸಲಿಕ್ಕಿಲ್ಲವೆಂದು ನೀನು ಹ್ಯಾಗೆ ತಿಳಿದುಕೊಳ್ಳುವೆ? ಈ ತಿಳುವಳಿಕಿಯಿಂದಲೇ ನೀನು ಮೋಸಹೋದೀ! ಕದಾಚಿತ್ ನನ್ನ ಪ್ರೇಮವು ಮೈತ್ರೇಯಿಯಮೇಲೆ ದಿನದಿನಕ್ಕೆ ಹೆಚ್ಚುತ್ತ ಹೋಗಿ, ಅದರಿಂದ ನಿನ್ನಲ್ಲಿ ಮಾತ್ಸರ್ಯವು ಉತ್ಪನ್ನವಾಗುವ ಸಂಭವವಿರುತ್ತದೆ.

ಕಾತ್ಯಾಯನಿ--ಭಗವನ್ ಕ್ಷಮಿಸಬೇಕು. ಮೈತ್ರೇಯಿಯ ವಿಷಯವಾಗಿ

ನಾನು ಹೊಟ್ಟೇಕಿಚ್ಚುಪಡುವದು ಸರ್ವಥಾ ಶಕ್ಯವಿರುವದಿಲ್ಲ. ನಿಮ್ಮ ಕಾತ್ಯಾಯನಿಯು ಅಷ್ಟು ಗ್ರಾಮ್ಯಸ್ತ್ರೀಯಾಗಿರಬಹುದ? ಮುನಿವರ್ಯ, ಪತಿಗೆ ಅತ್ಯಂತಪ್ರಿಯವಾದ ವಸ್ತುವಿನ ವಿಷಯವಾಗಿ ಸತಿಯು ಮತ್ಸರಪಡುಬಹುದೆ ? ಹೀಗೆ ಪತಿಯ ಒಲವಿನ ವಿರುದ್ಧವಾಗಿ ನಡೆಯುವವಳು ಸತಿಯು ಹ್ಯಾಗೆ? ಸತಿ-ಪತಿಗಳ ದೇಹಗಳು ಭಿನ್ನವಾಗಿದ್ದರೂ ಅವರ ಆತ್ಮಗಳಲ್ಲಿ ಏಕರೂಪತೆಯಿರುವದಷ್ಟೆ? ಅಂದಬಳಿಕ, ಮೈತ್ರೇಯಿಯ ಮೇಲೆ ನಿಮ್ಮ ಪ್ರೇಮವು ಹೆಚ್ಚಾದಮಾನದಿಂದ, ಮೈತ್ರೇಯಿಯ ಮೇಲಿನ ನನ್ನ ಪ್ರೇಮವು ಹೆಚ್ಚದೆ ಹ್ಯಾಗೆಯಿದ್ದೀತು! ನಾನು ತಮ್ಮ ಸಹಧರ್ಮಿಣಿಯಲ್ಲವೆ? ನಿಮಗೆ ಪ್ರಿಯವಾದದ್ದು ನನಗೆ ಪ್ರಿಯವು, ನಿಮಗೆ ಅಪ್ರಿಯವಾದದ್ದು ನನಗೆ ಅಪ್ರಿಯವು!

ಯಾಜ್ಞವಲ್ಕ್ಯ-- ದೇವೀ,ನಿನ್ನ ಮಾತನ್ನು ನಾನು ಅಲ್ಲಗಳಿಯಲಾರೆನು. ನೀನು

ಅಂಥ ಸಜ್ಜನಳೆಂಬದನ್ನು ನಾನು ಬಲ್ಲೆನು; ಆದರೆ ಮೈತ್ರೇಯಿಯು ತಾರುಣ್ಯದಮೂಲಕ ಅವಿವೇಕಿಯಾಗಿ ಮಾತ್ಸರ್ಯತಾಳಿದರೆ ಮಾಡುವದೇನು?
34

ಕಾತ್ಯಾಯನಿ--ಆದಂತು ಶಕ್ಯವೇ ಇರುವದಿಲ್ಲ. ನನಗಿಂತಲೂ ಮೈತ್ರೇ-

ಯಿಯು ಹೆಚ್ಚಿನಯೋಗ್ಯತೆಯವಳೆಂಬದನ್ನು ನಾನು ಬಲ್ಲೆನು. ಆಕೆಯ ಸಹವಾಸದಿಂದಲೇ ನನಗೆ ಪಾರಮಾರ್ಥಿಕ ಜಾಗ್ರತಿಯು ಉತ್ಪನ್ನವಾಗಿರುತ್ತದೆ. ಇದರಮೇಲೆಯೂ ತಾರುಣ್ಯದಮೂಲಕ ಆಕೆಯು ಅವಿವೇಕಿಯಾಗಿ ನಡೆದುಕೊಂಡರೆ, ಭಗವನ್, ತಮ್ಮ ಸಹವಾಸದ ಮಹಿಮೆಯು ಆಕೆಯಲ್ಲಿ ವಿವೇಕವನ್ನು ಹುಟ್ಟಿಸದೆಯಿರುವದೆ ? ತಮ್ಮ ಸಹವಾಸಕ್ಕೆ ಹಣಿಯದಂಥ ಯೋಗ್ಯತಾಹೀನಳು ಮೈತ್ರೇಯಿಯು ಆಗಿದ್ದರೆ; ಆಕೆಯು ಶೀಯಾಜ್ಞವಲ್ಕ್ಯಪತ್ನಿಯ, ಕಾತ್ಯಾಯನಿಯ ಸಂಸಾರಾಸಕ್ತಮನಸ್ಸನ್ನು ಜಾಗ್ರತಗೊಳಿಸಲು ಸಮರ್ಥಳಾಗಬಹುದೆ ?

ಯಾಜ್ಞವಲ್ಕ್ಯ--ಸರಿಸರಿ, ನಿನ್ನ ಮಾತು ಒಪ್ಪತಕ್ಕದ್ದು! ಆದರೂ ಇನ್ನಷ್ಟು

ವಿಚಾರಮಾಡು. ಮಹತ್ವದ ಕಾರ್ಯದಲ್ಲಿ ದುಡುಕುವದು ಹಿತಕರವಾಗದು . ಇಬ್ಬರು ಹೆಂಡಿರನ್ನು ಮಾಡಿಕೊಳ್ಳುವದು, ನನಗಂತು ಹಿತಕರವಾಗಿ ತೋರುವದಿಲ್ಲ. ಏಕಪತ್ನೀ ವ್ರತದ ಮಹತ್ವವು ಹೆಚ್ಚಿನದಿರುತ್ತದೆ.

ಕಾತ್ಯಾಯನಿ--ಭಗವನ್, ಕಾತ್ಯಾಯನಿಯಾದರೂ ಏಕಪತ್ನೀವ್ರತದ ಮಹಿಮೆ

ಯನ್ನು ಅರಿಯದೆ ಇರಬಹುದೆ ? ಬಹುಪತ್ನೀಕರ ಸಂಸಾರವು ಸ್ವಾರಸ್ಯಹೀನವಾಗುವದೆಂ ಬದು ಪ್ರಸಿದ್ದವು. ಅಂಥ ಅಯೋಗ್ಯ ವ್ಯವಹಾರಕ್ಕೆ ಶ್ರೀ ಯಾಜ್ಞವಲ್ಕ್ಯರ ಪತ್ನಿಯು ಸರ್ವಥಾ ಉತ್ತೇಜನ ಕೊಡಲಾರಳು.

ಯಾಜ್ಞವಲ್ಕ್ಯ--ಹಾಗಾದರೆ ಮೈತ್ರೇಯಿಯ ಪಾಣಿಗ್ರಹಣಮಾಡಲಿಕ್ಕೆ ನನ್ನ

ಮನಸ್ಸನ್ನು ತಿರುಗಿಸಲು ಯಾಕೆ ಯತ್ನಿಸುವೆ ?

ಕಾತ್ಯಾಯನಿ--ಅದರಿಂದ ಏಕಪತ್ನೀವ್ರತಕ್ಕೆ ಭಂಗಬರುವದಿಲ್ಲೆಂದು !

ಯಾಜ್ಞವಲ್ಕ್ಯ--ಅದು ಹ್ಯಾಗೆ ?

ಕಾತ್ಯಾಯನಿ--ಭಗವನ್, ಪಾಮರಳಾದ ಪತ್ನಿಯಲ್ಲಿ ತಮ್ಮ ಪ್ರೇಮವಾತ್ಸಲ್ಯ

ಗಳೆಷ್ಟು ! ಸರ್ವಜ್ಞರಾದ ತಾವು ಬಾಲಭಾವದ ನನ್ನ ಉತ್ತರದಿಂದ ಕೌತುಕ ಪಡುವದ ಕ್ಕಾಗಿ ಗೊತ್ತಿಲ್ಲದವರಂತೆ ಪ್ರಶ್ನೆಮಾಡುವಿರಲ್ಲ! ಅಜ್ಞಾನವನ್ನು ದೂರಮಾಡಿಕೊಳ್ಳಲಿಕ್ಕೆ ಇದಕ್ಕೂ ಹೆಚ್ಚಿನ ಸುಪ್ರಸಂಗವು ನನಗೆ ಬೇರೆ ಯಾವದು ಒದಗಬಹುದು ? ತಮ್ಮ ಪ್ರಶ್ನೆಗೆ ಉತ್ತರಕೊಡುವಾಗ ನನ್ನ ಮನೋವೃತ್ತಿಯು ಉಜ್ಜಲಭಾವನಾಯುಕ್ತವಾದದ್ದರಿಂದ ನನಗೆ ಪರಮಾನಂದವಾಗಿರುವದು. ಮುನಿವರ್ಯ, ದೇವ-ದ್ವಿಜಾಗ್ನಿ ಸಾಕ್ಷಿಯಿಂದ ಪಾಣಿಗ್ರಹಣಮಾಡಿ ಪತ್ನಿಯರೆಂಬ ಗೌರವದ ಪದವಿಯನ್ನು ಪಡೆದ ನಾವಿಬ್ಬರು, ಗಂಗಾ ಯಮುನೆಗಳ ಪ್ರವಾಹಗಳು ಸಮುದ್ರಗಮನ ಭರದಲ್ಲಿ ತಮ್ಮ ದ್ವೈತಭಾವದ ಪರಿವೆಯಿ ಲ್ಲದೆ ಏಕರೂಪಹೊಂದಿ ಕಡೆಗೆ ಸಮುದ್ರದಲ್ಲಿ ಲೀನವಾಗಿ ಹೋಗುವಂತೆ, ತಮ್ಮ ಸೇವೆ ಯಿಂದ ಕೃತಾರ್ಥರಾಗುವ ಭರದಲ್ಲಿ ನಾವು ಸ್ವತ್ವವನ್ನು ಮರೆತು ಏಕರೂಪರಾಗಿ ಕಡೆಗೆ ತಮ್ಮಲ್ಲಿ ಲೀನವಾಗಿ ಹೋಗುವೆವು! ಅಂದಬಳಿಕ, ಕಾತ್ಯಾಯನಿಯೂ, ಮೈತ್ರೇಯಿಯೂ ಈಗ ಭಿನ್ನ ವ್ಯಕ್ತಿಗಳಾಗಿ ತೋರಿದರೂ ಮೈತ್ರೇಯಿಯ ವಿವಾಹಾನಂತರ ಅವರು ತತ್ವತಃ
35

ಭಿನ್ನವಾಗಿ ಹ್ಯಾಗೆ ಉಳಿದಾರು ? ಅಂದಬಳಿಕ ನಮ್ಮಿಬ್ಬರ ವಿವಾಹದಿಂದ ತಾವು ಬಹು ಪತ್ನೀಕರು ಹ್ಯಾಗಾಗುವಿರಿ ?

ಯಾಜ್ಞವಲ್ಕ್ಯ--ಕಾತ್ಯಾಯನೀ, ನೀನು ಧನ್ಯಳಂಬದಿಷ್ಟೇ ಅಲ್ಲ, ನಿನ್ನ ಪಾಣಿ

ಗ್ರಹಣ ಮಾಡಿದ ನಾನೂ ಪರಮಧನ್ಯನು ! ನಿಮ್ಮಂಥ ಸಾಧ್ವಿಯರು ಯೋಗದಿಂದ ಗೃಹಸ್ಥಾಶ್ರಮವೂ ಧನ್ಯವಾಗಿ ಹೋಗಿರುವದು; ಆದರೆ ನಿನ್ನ ಮಾತು ವ್ಯವಹಾರದಲ್ಲಿ ಅನುಭವಕ್ಕೆ ಬರುತ್ತಿರುವದೆಯೆ ?

ಕಾತ್ಯಾಯನಿ--ಬರುತ್ತಿರುವದೆಂದು ಹ್ಯಾಗೆ ಹೇಳಲಿ ಮಹಾರಾಜ! ತಮ್ಮಂಥ

ಮಹನೀಯರಲ್ಲದ ಸ್ವಾರ್ಥಪರಾಯಣರಾದ ಏಕಪತ್ನೀಕರುಕೂಡ ಬಹುಪತ್ನೀಕರಂತೆ ದುಃಖಪಡುವದನ್ನು ನೋಡುತ್ತಿರುವಾಗ, ಬಹು ಕನ್ಯಾಪಾಣಿಗ್ರಹಣವು ಹಿತಕರವಾಗು ವದೆಂದು ಹೇಳಲಿಕ್ಕೆ ನನ್ನ ಬಾಯಿಯಾದರೂ ಹ್ಯಾಗೆ ಏಳಬೇಕು? ಎಲ್ಲ ಬಗೆಯಿಂದ ಗಂಡ ನನ್ನು ಅನುಸರಿಸಿ ಅಭೇದವಾಗಿ ವರ್ತಿಸಿದ ಸ್ವಾರ್ಥಪರಾಯಣಳಾದ ಹೆಂಡತಿಯು, ಗಂಡನೊಡನೆ ಒಮ್ಮೆ ಪ್ರೇಮದಿಂದ, ಒಮ್ಮೆ ಸಿಟ್ಟಿನಿಂದ, ಒಮ್ಮೆ!ಔದಾಸೀನ್ಯದಿಂದ, ಒಮ್ಮೆ ದುರಭಿಮಾನದ ಅಹಂಕಾರದಿಂದ, ಮತ್ತೊಮ್ಮೆ ಮತ್ತೊಂದು ವಿಧದಿಂದ ವರ್ತಿಸು ವದರಿಂದ, ಬಹುರೂಪಿಯಾಗಿ ಏಕಪತ್ನೀತ್ವಕ್ಕೆ ಬಾಧೆ ತರುವಳು! ಭಗವನ್ ಈ ದೃಷ್ಟಿ ಯಿಂದ ವಿಚಾರ ಮಾಡಿದರೆ, ಜಗತ್ತಿನಲ್ಲಿ ಏಕಪತ್ನೀತ್ವವು ಅಪರೂಪವೆಂದು ಹೇಳಬೇಕಾ ಗುವದು. ಸಮುದ್ರನಾಥನು ಎಲ್ಲ ನದೀಪತ್ನಿಯರನ್ನು ಸಮನಾಗಿ ಪ್ರೀತಿಸಿ, ಅವರೆಲ್ಲ ರನ್ನೂ ತನ್ನ ಗಾಂಭೀರ್ಯದಿಂದ ಏಕೀಕರಿಸಿ ತನ್ನೊಳಗೆ ಲೀನಮಾಡಿಕೊಳ್ಳುವಂತೆ, ಮಹಾಮಹಿಮರಾದ ಮುನೀಂದ್ರರು ತಾವು ನಮ್ಮಿಬ್ಬರನ್ನು ಏಕೀಕರಿಸಿ ಲೀನಮಾಡಿ ಕೊಳ್ಳಲು ಸಮರ್ಥರಿರುವಾಗ, ಬಹುಪತ್ನೀಕತ್ವದ ದೋಷವು ಹ್ಯಾಗೆ ಬಾಧಿಸುವದು? ಎಲ್ಲ ಹೆಂಡಿರನ್ನು ಸರಿಯಾಗಿ ಪ್ರೀತಿಸಲು ಸಮರ್ಥನಾದ ಪತಿಯು, ವಿಶೇಷತರದ ಉದಾ ತ್ತೋದ್ದೇಶದಿಂದ ಎಷ್ಟು ಜನ ಹೆಂಡಿರನ್ನು ಮಾಡಿಕೊಂಡರೇನು ? ಮೈತ್ರೇಯಿಯಂಥ ಉದಾತ್ತ ವಿಚಾರದ ಸಖಿಯು ಬ್ರಹ್ಮಚರ್ಯದಿಂದಿರುವದಕ್ಕಿಂತ ತಮ್ಮಂಥ ಮಹಾತ್ಮರ ಪಾಣಿಗ್ರಹಣಮಾಡಿ ಗೃಹಸ್ಥಾಶ್ರಮಿಯಾಗಿರುವದು ನನಗೆ ಸಮರ್ಪಕವಾಗಿ ತೋರುವದು. ಮೈತ್ರೇಯಿಯು ತಮ್ಮ ಪಾಣಿಗ್ರಹಣವನ್ನು ಮನಃಪೂರ್ವಕವಾಗಿ ಬಯಸುವಳು. ಅದು ಸಾಧಿಸದ ಪಕ್ಷದಲ್ಲಿ ಬ್ರಹ್ಮಚರ್ಯದಿಂದ ಕಾಲಹರಣ ಮಾಡುವಳು. ಹೀಗೆ ಅನನ್ಯಗತಿಕಳಾಗಿರುವ ಗುಣಾರ್ಢ್ಯಳಾದ ಅಬಲೆಗೆ ಆಶ್ರಯವಿತ್ತು , ಆಕೆಯನ್ನು ಕೃತಾರ್ಥಳಾಗ ಮಾಡುವದು ತಮ್ಮಂಥ ದಯಾಸಾಗರರಿಗೆ ಭೂಷಣವಾಗಿರುವದು. ಮಹಾಜ್ಞಾನಿಗಳಾದ ತಾವು ಲೋಕಕ್ಕೆ ಗೃಹಸ್ಥಾಶ್ರಮದ ಪ್ರಶಸ್ತ ಮಾರ್ಗವನ್ನು ತೋರಿ ಸುವದಕ್ಕಾಗಿಯೇ ಗೃಹಸ್ಥಾಶ್ರಮಿಗಳಾಗಿರುವದರಿಂದ, ಇಂದಿನ ವರೆಗೆ ಏಕಪತ್ನೀಕರಾಗಿ ಏಕಪತ್ನೀವ್ರತವನ್ನು ಪಾಲಿಸಿ ತೋರಿಸಿದಂತೆ, ಇನ್ನೂ ಮೇಲೆ ಬಹುಪತ್ನೀಕರಾಗಿಯೂ ಏಕಪತ್ನೀವ್ರತದಿಂದ ಆಚರಿಸುವ ಗಂಭೀರ ಮಾರ್ಗವನ್ನೂ ಜಗತ್ತಿಗೆ ತೋರಿಸಬೇಕೆಂದು ಪಾಮರಳಾದ ನಾನು ಅತ್ಯಂತವಾದ ಸಥಿಯಿಂದ ಸೆರಗೊಡ್ಡಿಬೇಡಿಕೊಳ್ಳುವೆನು. ಭಗ
36

ವನ್, 'ನೀವಲ್ಲದೆ ಮತ್ತೆ ಯಾರು ಈ ಗಂಭೀರ ಮಾರ್ಗವನ್ನು ತೋರಿಸಲು ಸಮರ್ಥ ರಾಗುವರು?

ಯಾಜ್ಞವಲ್ಕ್ಯ--ದೇವೀ, ಅತ್ಯಂತ ವಿನಯಶೀಲಳಾದ ನೀನು ಪತಿಯಾದ ನನ್ನ

ಮಹಿಮೆಯನ್ನು ವರ್ಣಿಸಿದ್ದು ಸ್ವಾಭಾವಿಕವೇ ಸರಿ; ಆದರೆ ನಿನ್ನ ಯೋಗದಿಂದಲೇ ಪವಿತ್ರನಾಗಿ ಗೃಹಸ್ಥಾಶ್ರಮದ ಕರ್ತವ್ಯಗಳನ್ನೆಲ್ಲ ಅಬಾಧಿತವಾಗಿ ನಡೆಸುವ ನಾನು , ನಿನ್ನ ಘನತರವಾದ ಯೋಗ್ಯತೆಯನ್ನು ವರ್ಣಿಸುವದು ನಿನಗೆ ಸಂಕೋಚಕರವಾಗಿ ತೋರೀತು! ನಿನ್ನ ಉದಾತ್ತವಿಚಾರಕ್ಕಾಗಿ ನಾನು ಪರಮ ಸಂತುಷ್ಟನಾಗಿದ್ದೇನೆ . ಸತೀಶಿರೋಮಣಿಯಾದ ಅರುಂಧತಿಯೊಡನೆ ಪುಣ್ಯಾಹವಾಚನದಲ್ಲಿ ನಿನ್ನ ಪರಿಗಣನೆ ಯಾಗಲಿ! ಭಗವತಿ, ನಿನ್ನಂಥ ಸತಿಯರ ಯೋಗ್ಯತೆಯು ಸಾಮಾನ್ಯವಾದದ್ದಲ್ಲ. ಪರ್ಯಾಯದಿಂದ ನಿನ್ನ ಮುಖದಿಂದಲೇ ಅದು ಪ್ರಕಟವಾಗಿರುವದರಿಂದ ಅದನ್ನು ನಾನು ಮತ್ತೆ ವರ್ಣಿಸುವುದಿಲ್ಲ. ಆಗಲಿ, ನಾನು ಅವಶ್ಯವಾಗಿ ಮೈತ್ರೇಯಿಯ ಪಾಣಿಗ್ರಹಣ ಮಾಡುವೆನು. ಸಾಕ್ಷಾತ್ತ್ರಿಪುರಾರಿಯನ್ನು ಪಾರ್ವತಿಯೂ, ಭೋಗವತಿಯೂ ಆಶ್ರಯಿಸಿ ಶೋಭಿಸುತ್ತಿರುವಂತೆ, ನೀವಿಬ್ಬರೂ ನನ್ನನ್ನು ಆಶ್ರಯಿಸಿ ಶೋಭಿಸಿರಿ!

ಕಾತ್ಯಾಯನಿ-- ಭಗವನ್ , ಅಲಭ್ಯವರಪ್ರದಾನಪೂರ್ವಕವಾಗಿ ತಾವು ಮೈತ್ರೇ

ಯಿಯ ಪಾಣಿಗ್ರಹಣಕ್ಕೆ ಒಪ್ಪಿದ್ದರಿಂದ ನಾನು ಕೃತಕೃತ್ಯಳಾದೆನು. ನಮ್ಮ ಈ ಕಲ್ಯಾಣಪ್ರದವವಾದ ಸಂವಾದವು ನಿಮ್ಮ ಪ್ರಸಾದರೂಪವಾಗಿರುವದರಿಂದ ಅದನ್ನು ಓದುವವರ ಇಷ್ಟಾರ್ಥಗಳು ಸಿದ್ಧಿಸಲಿ !!

ಯಾಜ್ಞವಲ್ಕ್ಯ--ಆಗಲಿ , ಇಷ್ಟಾರ್ಥಪ್ರದರೂಪವಾದ ನಿನ್ನಂಥ ಸಾದ್ವೀಶ್ರೇ

ಷ್ಡರ ಪರಂಪರೆಯು ಈ ಭರತಭೂಮಿಯಲ್ಲಿ ಸ್ಥಿರವಾಗಿರಲಿ ! ಮನೆಮನೆಗೆ ಕಾತ್ಯಾಯನಿಯ ಗುಣಪ್ರಭಾವವು ಪ್ರಕಾಶಿಸಲಿ !!

೫ ನೆಯ ಪ್ರಕರಣ.

ತರುಣೋಪಾಯ.

--೧೦-co--೦--

ಗವಾನ್ ಯಾಜ್ಞವಲ್ಕ್ಯರು ಮೈತ್ರೇಯಿಯ ಪಾಣಿಗ್ರಹಣ ಮಾಡಿ ಇಬ್ಬರ

ಹೆಂಡಿರೊಡನೆ ಅತ್ಯುಜ್ವಲತೆಯಿಂದ ಗೃಹಸ್ಥಾಶ್ರಮ ಧರ್ಮವನ್ನು ಪಾಲಿಸಹತ್ತಿದರು ಮಹಾತ್ಮರ ಮನಸ್ಸಿನಲ್ಲಿ, ಮಾತಿನಲ್ಲಿ, ಕೃತಿಯಲ್ಲಿ ಏಕರೂಪತೆ ಇರುವದೆಂಬದುಸುಳ್ಳಲ್ಲ ಭಗವತೀ ಕಾತ್ಯಾಯನಿಯು ತಾನು ಪತಿಯ ಮುಂದೆ ಪತಿಧರ್ಮವನ್ನು ಪ್ರತಿಪಾದಿಸಿ


• ಬ್ರಾಹ್ಮಣರು ಪ್ರಣ್ಯಾಸವಾಚನದಲ್ಲಿ "ಅರುಂಧತೀ ಪುರೋಗಾ ಏಕಪತ್ನ್ಯ: ಪ್ರೀಯಂತಾಂ, ಭಗ

ವತೀಕಾತ್ಯಾಯನಿ ಪ್ರೀಯತಾಂ” ಎಂದು ಪಠಿಸುವದು ಪ್ರಸಿದ್ದವಾಗಿರುವದ'

37

ದಂತೆ ಅಕ್ಷರಶಃ ಕಡೆತನಕ ನಡೆದಳು. ಮೈತ್ರೇಯಿಯೂ ಕಾತ್ಯಾಯನಿಯ ವಿಷಯವಾಗಿ ಮಾತ್ಸರ್ಯತಾಳಲಿಲ್ಲ. ಅವರ ಪರಸ್ಪರರ ಪ್ರೇಮಭಾವವು ಕಡೆತನಕ ಅಖಂಡವಾಗಿ ಉಳಿಯಿತು. ನಿಸ್ಪೃಹರಾದ ಮಹಾತ್ಮರ ಆಚರಣೆಯು ಹೀಗೆಯೇ ಸರಿ. ಇಂಥ ಉದಾತ್ತಭಾವದ ಪತ್ನಿಯರ ಸಹವಾಸದಿಂದ ಯಾಜ್ಞವಲ್ಕ್ಯರ ಗೃಹಸ್ಥಾಶ್ರಮ ಆನಂದಕರವಾಗಿಯೂ, ಲೋಕಾದರಣೀಯವಾಗಿಯೂ ನಡೆಯಿತು. ಸಾಧಾರಣವಾಗಿ ಮೂವತ್ತು ವರ್ಷದ ವಯಸ್ಸಿನಲ್ಲಿ ಮೈತ್ರೇಯಿಯ ಲಗ್ನವಾದ ಆ ಮಹಾತ್ಮರು ವೃದ್ಧಾ ಪ್ಯವು ಪ್ರಾಪ್ತವಾಗುವವರೆಗೆ ಗೃಹಸ್ಥಾಶ್ರಮಿಗಳಾಗಿದ್ದರು . ಅವರು ತಮ್ಮ ಪತ್ನಿಯರೊಡನೆ ಆಧ್ಯಾತ್ಮಿಕ ವಿಷಯವನ್ನು ಕುರಿತು ದಿನಾಲು ಚರ್ಚಿಸುತ್ತಿದ್ದರು. ಮೈತ್ರೇಯಿಯೊಡನೆ ಕಾತ್ಯಾಯನಿಯ ಆಧ್ಯಾತ್ಮಿಕ ಜ್ಞಾನವೂ ದಿನದಿನಕ್ಕೆ ಹೆಚ್ಚಹತ್ತಿ, ಆಕೆಯ ಸಂಸಾರಾಸಕ್ತಿಯು ದಿನದಿನಕ್ಕೆ ಕಡಿಮೆಯಾಗಹತ್ತಿತು. ಒಂದುದಿನ ಯಾಜ್ಯವಲ್ಕ್ಯರು ಹೋಮಶಾಲೆಯಲ್ಲಿ ಕುಳಿತಿದ್ದರು. ಅವರ ಮುಖಮುದ್ರೆಯು ಶಾಂತವೂ, ತೇಜಸ್ವಿಯೂ ಇದ್ದದ್ದರಿಂದ ಪಂಚಾಗ್ನಿಯಿಂದ ಯುಕ್ತವಾದ ಆ ಹೋಮಶಾಲೆಯಲ್ಲಿ ಆರನೆಯ ಅಗ್ನಿಯಂತೆ ಅವರು ಒಪ್ಪುತ್ತಿದ್ದರು . ಸ್ವಾಹಾ-ಸ್ವಧೆಯರಂತೆ ಇದ್ದ ಅವರ ಇಬ್ಬರು ಪತ್ನಿಯರು ಬಳಿಯಲ್ಲಿ ಕುಳಿತಿದ್ದರು. ಸಾಯಂಕಾಲದ ಹೋಮವು ಅದೇ ಮುಗಿದು, ಸ್ಧ೦ಡಿಲದಿಂದ ಹೊರಡುವ ಹೋಮ ಧೂಮವು ಅಲ್ಲಿಯೇ ಸುತ್ತುತ್ತಿದ್ದರಿಂದ, ಹವಿರ್ಗಂಧವು ಹೋಮಶಾಲೆಯಲ್ಲೆಲ್ಲ ಇಡಗಿತ್ತು. ಯಜಮಾನನ ಇಚ್ಛೆಯಂತೆ ಹೋಮ ಧೂಮವು ದೇವತೆಗಳನ್ನು ಸಂತೋಷಪಡಿಸುವದಕ್ಕಾಗಿ ಸ್ವರ್ಗಲೋಕಕ್ಕೆ ಹೋಗುತ್ತಲಿತ್ತು. ಹೀಗೆ ದೇವತೆಗಳನ್ನು ಸಂತೋಷಪಡಿಸಿ ಅವರು ಆನಂದದಿಂದ ಕುಳಿತಿರಲು, ಯಾಜ್ಞವಲ್ಕ್ಯರು ತಮ್ಮ ಪ್ರೀಯಪತ್ನಿಯರನ್ನು ಕುರಿತು- "ಈ ವರೆಗೆ ನಾನು ನಿಮ್ಮ ಯೋಗದಿಂದ ಗೃಹಸ್ತಾಶ್ರಮದ ವೈಭವದಲ್ಲಿದ್ದೆನು. ಈಗ ವೃದ್ದಾಪ್ಯವು ಪ್ರಾಪ್ತವಾಗಿರುವದರಿಂದ, ಚತುರ್ಥಾಶ್ರಮವನ್ನು ಸ್ವೀಕರಿಸುವದು ಅವಶ್ಯ ವಾಗಿರುತ್ತದೆ; ಆದ್ದರಿಂದ ಏನಾದರೂ ನಿಮ್ಮ ವ್ಯವಸ್ಥೆಯನ್ನು ಮಾಡಬೇಕಾಗಿರುವುದು. ಈ ವರೆಗೆ ನಾನು ಸಂಪಾದಿಸಿರುವ ಧನವನ್ನು ನೀವಿಬ್ಬರೂ ಹಂಚಿಕೊಂಡು ಸುಖದಿಂದ ಕಾಲಹರಣ ಮಾಡಿರಿ." ಎಂದು ಹೇಳಿದರು. ಅವರ ಆಶ್ರಮಸ್ವೀಕಾರದ ವಿಚಾರವು ಅವರ ಇಬ್ಬರು ಪತ್ನಿಯರಿಗೂ ಯೋಗ್ಯವಾಗಿ ತೋರಿತು. ಅವರು ಹಟಮಾರಿತನದಿಂದ ತಮ್ಮ ಪತಿಯನ್ನು ಸಂಸಾರದ ಬಲೆಯಲ್ಲಿ ಬಿಗಿಯುವ ಗೊಡವಿಗೆ ಹೋಗಲಿಲ್ಲ. ಕಾತ್ಯಾಯನಿಯ ಮೊದಲಿನ ಸಂಸಾರಾಸಕ್ತಿಯು ಸಂಪೂರ್ಣವಾಗಿ ಅಳಿದು ಹೋಗಿತ್ತು. ಮೈತ್ರೇಯಿಯಂತು ಮೊದಲಿನಿಂದಲೇ ವಿರಕ್ತಳಾಗಿದ್ದಳು. ಅವರಿಬ್ಬರೂ ತಮ್ಮ ಪತಿಯನ್ನು ಕುರಿತು- "ಭಗವನ್, ತಮ್ಮ ಮನೆಯಲ್ಲಿ ಧನವೇನಿರುತದೆಂಬದು ನಮಗೆ ಗೊತ್ತೇ ಇರುತ್ತದೆ: ಆದರೆ ಆ ಧನದಿಂದ ನಮಗೆ ಅಮರರಾಗಲಿಕ್ಕೆ ಬರಬಹುದೋ?

ಯಾಜ್ಞವಲ್ಕ್ಯ-–ಛೇ, ಛೇ, ಹೀಗೆ ಹೇಗೆ ಕೇಳುವಿರಿ? ಎಲ್ಲಿಯಾದರೂ ಧನ

ದಿಂದ ಅಮರತ್ವವು ಪ್ರಾಪ್ತವಾಗಬಹುದೆ? ಧನವಂತರಿಗೆ ಆಗುವ ಸುಖವು ಮಾತ್ರ ನಿಮಗೆ
38

ಧನದಿಂದ ಆಗಬಹುದು. ದ್ರವ್ಯವು ಜಡವಿರುವದರಿಂದ ಬಹಳವಾದರೆ ಅದು ಈ ಜಡ ದೇಹದ ಪರಿಪೋಷಣವನ್ನು ಮಾಡೀತು. ದ್ರವ್ಯವಿಲ್ಲದೆ ಸಂಸಾರಯಾತ್ರೆಯು ನಡೆಯಲಾರದು. ಸಂಸಾರದಲ್ಲಿ ಮುಕ್ತಿಯ ಹೆಸರನ್ನು ಎತ್ತಲಾಗದು.

ಕಾತ್ಯಾಯನಿ--ಮಹಾರಾಜ, ಶರೀರವು ಪುಷ್ಟವಾದ ಮಾತ್ರದಿಂದ ನಮ್ಮ ಕರ್ತ

ವ್ಯವು ಮುಗಿದಂತಾಗಲಿಲ್ಲ. ಅಮರತ್ವವನ್ನು ದೊರಕಿಸಿಕೊಡದೆಯಿದ್ದ ಧನವನ್ನು ತಕ್ಕೊಂಡು ನಾವು ಮಾಡುವದೇನು? ಅದರಿಂದ ನಮಗಾಗುವ ಹಿತವೇನು?

ಮೈತ್ರೇಯಿ--ಭಗವಾನ್, ಅಮರಪದಪ್ರಾಪ್ತಿಗೆ ಬೇಕಾದದ್ದನ್ನಷ್ಟು ನಮಗೆ

ಕೊಟ್ಟು ಹೋಗಬೇಕು. ಉಳಿದದ್ದೇನು ನಮಗೆ ಬೇಡ. ಜನ್ಮಮರಣಗಳ ಘರ್ಷಣದಿಂದ, ಹಾಗು ತಾಪತ್ರಯಾಗ್ನಿಗಳ ತಾಪದಿಂದ ಬೇಯುವ ನಮ್ಮನ್ನು ಭವಸಾಗರದಿಂದ ಮುಕ್ತವಾಗಮಾಡಿರಿ. ನಮಗೆ ಶಾಂತಿಯನ್ನು ಕೊಡುವವರು ತಮ್ಮ ಹೊರತು ತ್ರೈಲೋಕ್ಯದಲ್ಲಿ ಮತ್ತೆ ಯಾರೂ ನಮಗೆ ಕಾಣುವದಿಲ್ಲ .

ಈ ಮಾತುಗಳನ್ನು ಕೇಳಿ ಯಾಜ್ಞವಲ್ಕ್ಯರಿಗೆ ಪರಮಾನಂದವಾಯಿತು. ಅವರು

ತಮ್ಮ ಪತ್ನಿಯರನ್ನು ಕುರಿತು-- "ನೀವಿಬ್ಬರೂ ನನಗೆ ಅತ್ಯಂತ ಪ್ರಿಯರಾಗಿರುವಿರಿ. ನನಗೆ ಪ್ರಿಯವಾದ ಮಾತುಗಳನ್ನೇ ನೀವು ಆಡಿದಿರಿ. ನಾನು ನಿಮಗೆ ಅಮರತ್ವವು ಪ್ರಾಪ್ತವಾಗುವದಕ್ಕಾಗಿ ಹೇಳುವ ಮಾತುಗಳನ್ನು ಲಕ್ಷಪೂರ್ವಕವಾಗಿ ಕೇಳಿರಿ. ಈ ವರೆಗೆ ಗೃಹಸ್ಥಾಶ್ರಮದ ಧರ್ಮಗಳಂತ ಆಚರಿಸಿ ನೀವು ಧನ್ಯರಾಗಿರುವಿರಿ. ನಿಮಗೆ ಮೋಕ್ಷೋಪಾಯಗಳನ್ನು ಕುರಿತು ಸಾಮಾನ್ಯವಾಗಿ ಇಂದು ನಿಮ್ಮನ್ನು ಬೋಧಿಸುವೆನು. ನಿಮಗೆ ಶಾಶ್ವತ ಶಾಂತಿಯ ಪ್ರಶಸ್ತವಾದ ಮಾರ್ಗವನ್ನು ತೋರಿಸಿಯೇ ನಾನು ಚತುರ್ಥಾಶ್ರಮವನ್ನು ಸ್ವೀಕರಿಸುವೆನು; ಮುಂದೆ ತಪಶ್ಚರ್ಯದಿಂದ ಆ ಮಾರ್ಗವನ್ನು ಕ್ರಮಿಸಿ, ಶಾಶ್ವತಶಾಂತಿಸಾಮ್ರಾಜ್ಯವ ಮುಟುವ ಕೆಲಸವನ್ನು ನೀವೇ ಮಾಡಬೇಕಾಗುವದು; . ಅಲ್ಲಿ ಅನ್ಯರ ಸಹಾಯವು ವಿಶೇಷವಾಗಿ ಉಪಯೋಗಿಸುವದಿಲ್ಲ. ಅಧಿಕಾರ ಸಂಪನ್ನರೂ, ಆಜ್ಞಾಪಾಲನ ಧುರೀಣರೂ ಆದ ನಿಮಗೆ ಸವಿಸ್ತರ ಬೋಧವು ಅನವಶ್ಯಕವಾದ್ದರಿಂದ ಸಂಕ್ಷೇಪವಾಗಿಯೇ ಹೇಳುವದನ್ನು ಹೇಳುವೆನು. ಸತಿಯರ ಮುಖ್ಯ ಧರ್ಮವು ಪತಿಯ ಅನುಸರಣವು. ಸತಿಗೆ ಪತಿಯೇ ದೈವತವು. ಆತನೇ ಸದ್ಗುರುವು. ಆತನ ವೇದೋಕ ಕರ್ಮಾಚರಣೆಯ ಅನುಸರಣದಿಂದ ಚಿತ್ತಶುದ್ಧಿಯೂ, ಆತನ ಆಜ್ಞಾಪಾಲನರೂವವಾದ ಔಪಾಸನೆಯಿಂದ ಚಿತ್ತೈಕಾಗ್ರತೆಯೂ ಆಗುವವು. ಇವೇ ಬ್ರಹ್ಮಜ್ಞಾನದ, ಅಥವಾ ಸ್ವಾನಂದಸಾಮ್ರಾಜ್ಯದ ಪ್ರಾಪ್ತಿಗೆ ಮುಖ್ಯ ಸಾಧನಗಳಾಗಿರುವವು . ಸದ್ಗುರು ರೂಪನಾದ ಪತಿಯ ಕೃಪಾಸಂಪಾದನವೇ ಬ್ರಹ್ಮಜ್ಞಾನ ಪ್ರಾಪ್ತಿಯು. ಹೀಗೆ ಸತಿಗೆ ಪತಿಯ ಹೊರತು ಅನ್ಯಗತಿಯಿಲ್ಲ. ಸತಿಯು ಸತ್ಯ, ಶಾಂತಿ, ಕ್ಷಮಾ, ಧೈರ್ಯ, ಸಂತೋಷ, ಅಕ್ರೋಧ, ನಿರಭಿಮಾನ, ನಿರ್ಮಾತ್ಸರ್ಯ, ಪ್ರಾಣಿಜಾತಗಳಲ್ಲಿ ಭಗವದ್ರೂಪಭಾವನೆ, ಆರ್ಜನ ಈ ಗುಣಗಳನ್ನು ಪ್ರಯತ್ನವೂರ್ವಕ ಸಂಪಾದಿಸಬೇಕು. ಮೋಕ್ಷಾಪೇಕ್ಷಿಯು ಈ ಜಗತ್ತು, ಬಹಳಹೇಳುವದೇನು , ಈ
39

ದೇಹವು ಕೂಡ ನನ್ನದಲ್ಲವೆಂದು ಭಾವಿಸಬೇಕು. ಇದಕ್ಕೇ ಋಷಿಗಳು ತ್ಯಾಗವೆನ್ನು ವರು. ದೇಹಬುದ್ದಿಯವರಿಗೆ ಈ ತ್ಯಾಗವು ದುಷ್ಕರವಾಗಿರುವದು. ಯಾವತ್ತು ವಿಷಯಜಾತವನ್ನು ವಮನದಂತೆ ತಿಳಿಯುವವರಿಗೇ ವೈರಾಗ್ಯವು ಪ್ರಾಪ ವಾಗುವದು. ವಿರಾಗಿಯೇ ಮೋಕ್ಷಾಧಿಕಾರಿಯು. ಆತ್ಮನು ಸರ್ವತ್ರವ್ಯಾಪಕನಾಗಿದ್ದು, ಸ್ತ್ರೀ-ಪುತ್ರಾದಿ ಗಳಿಗಿಂತ ಆತನು ಅತ್ಯಂತಪ್ರಿಯನಾಗಿರುವನು. ಪತಿ-ಪುತ್ರಾದಿಗಳನ್ನು ಪ್ರೀತಿಸು ವದು ಅವರಸಲುವಾಗಿಯಲ್ಲ, ತನ್ನ ಸಲುವಾಗಿ ! ಇದೇಮಾತು ಶರೀರ, ಪಶು, ದೇವ ತೆಗಳು, ಎಲ್ಲಪ್ರಾಣಿಜಾತಗಳು ಇವುಗಳ ವಿಷಯದ ಪ್ರೇಮಭಕ್ತಿಗಳಿಗೂ ಸಂಬಂಧಿ ಸುವದು; ಆದರೂ ಆತ್ಮನು ಅಭೇದ್ಯನೆಂದು ನಿಃಸಂಶಯದಿಂದ ತಿಳಿಯಲಿಕ್ಕೆ ಈಪತಿ-ಪುತ್ರಾ ದಿಕರೇ ಸಾಧನಗಳಾಗಿರುವರು. ಸಮುದ್ರವು ಯಾವತ್ತು, ಜಲಗಳ . ಆಧಾರವಾಗಿ ರುವಂತೆ ಆತ್ಮನು ಯಾವತ್ತು ಜಗತ್ತಿನ ಆಧಾರವಾಗಿರುವನು.

ಬ್ರಹ್ಮದೇವನಿಂದ ಕ್ರಿಮಿಕೀಟಕಾದಿ ಕ್ಷುದ್ರಜೀವಿಗಳವರೆಗೆ ಒಬ್ಬನೇ ಆತ್ಮನು

ವ್ಯಾಪಕನಾಗಿರುವನೆಂಬ ಅನುಭವವನ್ನು ಪಡೆಯುವದೇ ಜ್ಞಾನವು. ಹಸಿಕಟ್ಟಗೆಯು ಸುಡುವಾಗ ಬೆಂಕಿ-ಹೊಗೆಗಳು ಬೇರೆಬೇರೆಯಾಗಿ ಕಾಣಿಸುವಂತೆ, ಆತ್ಮನು ಸಂಕಲ್ಪ ಯುಕ್ತನಾದರೆ ಈ ಜಗತ್ತು ಭಿನ್ನವಾಗಿ ತೋರುವರು. ಸುಮಂಗಲೆಯರೇ , ಅಜ್ಞಾನ ಮೂಲವಾದ ದೈವತವು ದುಃಖಕ್ಕೆ ಕಾರಣವು . ನಿಮಗೆ ದ್ವೈತದ ಭಾಸವಾಗಲಿಕ್ಕೆ ನಿಮ್ಮ ಸಂಕಲ್ಪವೇ ಕಾರಣವು. ನೀವು ಸಂಕಲ್ಪಾತೀತರಾದರೆ ಆತ್ಮನಸ್ವರೂಪರೇ ಇರುವೆವೆಂಬ ಅನುಭವವು ನಿಮಗೆ ಆಗುವದು; ಆದ್ದರಿಂದ ಯಾವತ್ತು ಸಂಕಲ್ಪಗಳ ನಿರೋಧಮಾಡಿ, ನಾವೇ ಆತ್ಮಸ್ವರೂಪರೆಂಬ ಅಖಂಡಭಾವನೆಯನ್ನು ಹೃದಯದಲ್ಲಿ ಧಾರಣಮಾಡಿರಿ; ಅಂದರೆ ಆಯುಷ್ಯವಿರುವವರೆಗೆ ಜೀವನ್ಮುಕ್ತಿದಶೆಯು ಪ್ರಾಪ್ತವಾಗಿ ಕಡೆಗೆ ಆತ್ಮಸ್ವರೂ ಪದಲ್ಲಿ ನೀವು ಕೂಡಿಹೋಗುವಿರಿ. ಸ್ವಪ್ನಕ್ಕೆ ಸಂಕಲ್ಪವು ಕಾರಣವಾಗಿರುವಂತೆ, ಜಾಗ್ರತಿಗೂ ಸಂಕಲ್ಪವೇ ಕಾರಣವಾಗಿರುವದು. ಸ್ವಪ್ನದಲ್ಲಿ ಸಂಕಲ್ಪದನಾಶವಾದ ಕೂಡಲೆ ಗಾಢನಿದ್ರೆಯೂ ಹತ್ತುವಂತೆ, ಜಾಗ್ರತಿಯಲ್ಲಿ ಸಂಕಲ್ಪದ ನಾಶವಾದರೆ ಸಮೃದ್ಧಿಯು ಲಭಿಸುವದು. ಆತ್ಮನು ಸಂಗರಹಿತನಾಗಿದ್ದು ಎಲ್ಲವನ್ನು ನೋಡು ವನು ; ಆದರೆ ಆತ್ಮನನ್ನು ಮಾತ್ರ ಯಾರೂ ನೋಡಲಾರರು. ಆತ್ಮನು ಅವಸ್ಥಾಶ್ರಯದಲ್ಲಿಯೂ ಸಾಕ್ಷೀಭೂತನಾಗಿದ್ದು, ಸ್ವಯಂಪ್ರಕಾಶಕನಾಗಿರುವನು. ಈ

ಆತ್ಮನೇ ಅಜ್ಞಾನಾವೇಷ್ಟಿತನಾಗಿ ನಾನು ಕರ್ತವ್ಯವೆಂದು ಭಾವಿಸಿ ಬದ್ಧನಾಗುವನು. ಅದೇ ಆತ್ಮನೇ ತಾನು ಅಸಂಗನೂ, ಅಕರ್ತೃವೂ ಎಂದು ತಿಳಿದರೆ ಮುಕ್ತನಾಗುವನು, ಕನ್ನಡಿಯಲ್ಲಿ ಪ್ರತಿಬಿಂಬಿಸಿರುವ ತನ್ನ ಸ್ವರೂಪವನ್ನೆ ಬಾಲಕನು ಭಿನ್ನವಾಗಿ ಕಲ್ಪಿಸುವಂತೆ, ಮಾಯಾಮ್ಮೊಹಿತನಾದ ಆತ್ಮನು ವಿಷಯಗಳನ್ನು ತನ್ನಿಂದ ಭಿನ್ನವಾಗಿ ಕಲ್ಪಿಸುವನು. ಸುಮಂಗಲೇಯರೇ, ನೀವು ಶಾಂತವೃತ್ತಿಯವರಾಗಿ ಆತ್ಮನಹೊರತು ಬೇರೆಯಾವದರ ವಿಚಾರವನ್ನು ಮಾಡದೆ ಜೀವನ್ಮುಕ್ತರಾಗಿ ಪ್ರಾರಬ್ದಕ್ಷಯವಾಗು ವರೆಗೆ ಸುಖಿಗಳಾಗಿ ಇರ್ರಿ, ಈ ಆತ್ಮಶೋಧಕ್ಕಾಗಿಯೇ ಎಷ್ಟೋಜನರು ಸರ್ವಸಂಗ
40

ಪರಿತ್ಯಾಗಮಾಡಿ ಭಿಕ್ಷಾವೃತ್ತಿಯಿಂದ ತಿರುಗುತ್ತಿರುವರು ; ಆದ್ದರಿಂದ ನೀವು ನಿರಿಚ್ಛರಾಗಿ ಆತ್ಮನಿಷ್ಠರಾಗಿರಿ. ಮಾಡಿದಕರ್ಮಗಳನ್ನು ಸ್ಮರಿಸಬೇಡಿರಿ. ಪ್ರಾರಬ್ಧಾನು ಸಾರವಾಗಿ ಮಾಡಬೇಕಾದ ಕರ್ಮಗಳನ್ನು ನೀವು ಅನಾಸಕ್ತರಾಗಿ ಮಾಡಿರಿ; ಆದರೆ ಕರ್ತೃತ್ಯದ ಅಹಂಕಾರಕ್ಕೆ , ಹೃದಯದಲ್ಲಿ ಸರ್ವಥಾ ಆಸ್ಪದಕೊಡಬೇಡಿರಿ. ಒಬ್ಬ ನೊಬ್ಬ ಹುಡುಗನು ಅಹಂಕಾರರಹಿತವಾಗಿ ಕರ್ಮಮಾಡುತ್ತಿರುವಂತೆ ನೀವು ಕರ್ಮ ಮಾಡಿ ಮುಕ್ತರಾಗಿರಿ, ಎಷ್ಟು ಹೇಳಿದರೂ ಅಪ್ಟೇ, ಪ್ರಿ ಯ ತ ಮೆ ಯ ರೇ, ಸದ್ಗುರುವಿಗೆ ಶರಣುಹೋಗಿ, ಆತನನು, ಏಕನಿಷ್ಠೆಯಿಂದ ಸೇವಿಸಿ ಆತನ ಅನುಗ್ರಹ ಸಂಪಾದಿಸದಹೊರತು ಮೋಕ್ಷವು ಸಾಧಿಸದು. ನೀವು ಪರಮ ಧನ್ಯರಾದ್ದರಿಂದಲೇ ಪತಿ ರೂಪ ಸದ್ಗುರುವನ್ನು ಸೆ:ವಿಸಿ, ಆತನ ಅನುಗ್ರಹಕ್ಕೆ ಪಾತ್ರರಾಗುವಿರಿ !

ಈಮೇರೆಗೆ ಬೋಧಿಸಿ ಯೋಗೀಶ್ವರರಾದ ಶ್ರೀ ಯಾಜ್ಞವಲ್ಕ್ಯೆ ರು ಸನ್ಯಾಸ

ಗ್ರಹಣ ಮಾಡಿದರು. ಏಕನಿಷ್ಠೆಯಿಂದ ತಮ್ಮನ್ನು ಸ್ಮರಿಸುವವರನ್ನು ಉದ್ಧರಿಸುವದ ಕ್ಕಾಗಿ ಆ ಮಹಾತ್ಮರು ಈಗಲೂ ಭೂತಲದಲ್ಲಿ ವಾಸಿಸುತ್ತಿರುವರು. ಇಹ-ಪರ ಸೌಖ್ಯಸಾ ಧಕವಾದ ಈ ಭಗವತೀಕಾತ್ಯಾಯನಿಯ ಸವ್ರಸಪೂರ್ಣ ಚಾರಿತ್ರ್ಯವನ್ನು ಓದುವವರ, ಹಾಗು ಕೇಳುವವರ ಇಷ್ಟಾರ್ಥಗಳು ಸಾಧಿಸುವವು. ಈ ಅಲ್ಬಗ್ರಂಥರೂಪ ಪುಷ್ಪಾಂಜಲಿ ಯನ್ನು ನಮ್ಮ ಪೂಜ್ಯ, ಮಾತೃವರ್ಗಕ್ಕೂ, ಪ್ರಿಯ ಭಗಿನೀವರ್ಗಕ್ಕೂ ಅರ್ಪಿಸಿ, ಅವರ ಇಷ್ಟಾರ್ಥಗಳನ್ನು ಪೂರ್ಣಮಾಡುವದಕ್ಕಾಗಿ ಶ್ರೀ ಕಾತ್ಯಾಯನೀ-ಯಾಜ್ಞವಲ್ಕ್ಯರನ್ನು ಪ್ರಾರ್ಥಿಸುವೆವು ! ! ||ಓಂ ಶಾಂತಿಃ ಶಾಂತಿಃ ಶಾಂತಿ..!!