ವಿಷಯಕ್ಕೆ ಹೋಗು

ಮಂಜರ ದೃಷ್ಟಿಯೊಳಗೆ ಚಂದ್ರಮನುದಯ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಮಂಜರ ದೃಷ್ಟಿಯೊಳಗೆ ಚಂದ್ರಮನುದಯ ನೋಡಾ. ಚಂದ್ರಮಂಡಲನೊಡೆದು ರವಿ ಮೂಡಲು ಮಂಜರ ಸತ್ತಿತ್ತು; ದೃಷ್ಟಿ ನಷ್ಟವಾಯಿತ್ತು. ಚಿಚ್ಚಂದ್ರ ಸೂರ್ಯರೊಂದಾಗಿ ಚಿದಾತ್ಮ ಲಿಂಗವಾದೆನು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.