ಮಾತಿನಲ್ಲಿ ಭವಿಯ ಬಿಟ್ಟರೇನೋ? ಕನಸಿನಲ್ಲಿ ಮನಸಿನಲ್ಲಿ ಆವರಿಸಿಪ್ಪ ಭವಿ ಭವಿಯೆಂಬ ಸಂದೇಹದ ಕೀಲಕಳೆದು ನಿಸ್ಸಂದೇಹ ನಿರ್ಲೇಪನಾಗಿರಬಲ್ಲರೆ ಶೀಲಸಂಪನ್ನರೆಂಬೆ. ಉಳಿದುದೆಲ್ಲ ಸೂತಕದ ಪಾತಕ ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.