ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲಸಿಕೆ

ವಿಕಿಸೋರ್ಸ್ದಿಂದ

ಸೂಕ್ಷ್ಮಜೀವಿ ಅಥವಾ ವೈರಸ್‍ಗಳನ್ನು ಕೊಂದು ಇಲ್ಲವೇ ದುರ್ಬಲೀಕರಿಸಿ ತಯಾರಿಸಿದ ದ್ರವಪದಾರ್ಥ (ವ್ಯಾಕ್ಸಿನ್). ಇದನ್ನು ಚುಚ್ಚುಮದ್ದಾಗಿ ರಕ್ತಪರಿಚಲನ ವ್ಯವಸ್ಥೆಗೆ ಹೊಗಿಸಿದಾಗ ಅದರಲ್ಲಿ ಪ್ರತಿಕಾಯಗಳು ಜನಿಸಿ ವ್ಯಕ್ತಿಗೆ ಆಯಾ ರೋಗದ ಎದುರು ರಕ್ಷೆ ಒದಗಿಸುತ್ತವೆ.

ಲಸಿಕೆ ಹಾಕುವುದು: ಯಾವುದೇ ಸಾಂಕ್ರಾಮಿಕ ರೋಗ ದೇಹಕ್ಕೆ ತಟ್ಟದಂತೆ ರಕ್ಷಣೆ ಒದಗಿಸಲು ಲಸಿಕೆ ಚುಚ್ಚುವ ಪ್ರಕ್ರಿಯೆ (ವ್ಯಾಕ್ಸಿನೇಶನ್). ಮೂಲತಃ ಸಿಡುಬು ಅಂಟದಂತೆ ರಕ್ಷಣೆ ಒದಗಿಸಲು ಲಸಿಕೆ ಹಾಕುವ ತಂತ್ರವನ್ನು ಯಶಸ್ವಿಯಾಗಿ ಬಳಸಲಾಯಿತು (1885ರ ಸುಮಾರಿಗೆ).

(ನೋಡಿ- ಪಾಸ್ತರ್,ಲೂಯಿ) (1822-95). ತದನಂತರದ ದಿನಗಳಲ್ಲಿ ಬೇರೆ ಬೇರೆ ಅಂಟುರೋಗಗಳನ್ನು ತಡೆಯಲು ಮುಂದಾಗಿಯೇ ಲಸಿಕೆ ಹಾಕುವ ತಂತ್ರಗಳು ಬಳಕೆಗೆ ಬಂದಿವೆ.