ಲಿಂಗದಲ್ಲಿ ಆಗಾಗಿ ಅಂಗವಿರಹಿತನಾಗಿ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಲಿಂಗದಲ್ಲಿ
ಆಗಾಗಿ
ಅಂಗವಿರಹಿತನಾಗಿ
ಫಲವೇನಯ್ಯಾ
?
ಜಂಗಮದಲ್ಲಿ
ಸನ್ನಹಿತನಾಗಿ
ದಾಸೋಹವ
ಮಾಡಿ
ಫಲವೇನಯ್ಯಾ
?
`ನೀ'
`ನಾ'
ಎಂಬ
ಭಾವ
ಉಳ್ಳನ್ನಕ್ಕರ
ಜಂಗಮದಲ್ಲಿ
ಸಮಯಾಚಾರಿಯಾಗಿಪ್ಪನ್ನಕ್ಕರ
ಮಾಡುವ
ಭಕ್ತಿಗೆ
ಭಿನ್ನವದೆ.
ಗುಹೇಶ್ವರಲಿಂಗದಲ್ಲಿ
ಸಂಗನಬಸವಣ್ಣಂಗೆ
ಆಚರಣೆ
ತಿಳಿಯದು
ನೋಡಾ
ಚೆನ್ನಬಸವಣ್ಣಾ.