ವಿಭೂತಿ ಆವ ಭೂಷಣದೊಳಗು ? ಪುಲಿಯ ಚರ್ಮ ಆವ ವಸ್ತ್ರದೊಳಗು ? ಖಟ್ಟಾಂಗ ಆವ ಆಯುಧದೊಳಗು ? ನೀ ಇಡುವುದು ಇಂತುಟು ನೀ ಹೊದೆವುದು ಇಂತುಟು ನೀ ಹಿಡಿವುದು ಇಂತುಟು ನೀ ಕೊಡುವುದು ಇಂದ್ರಪದವಿ ಗುಹೇಶ್ವರಾ.