ವಿಷಯಕ್ಕೆ ಹೋಗು

ಶಿವನಲ್ಲದೆ ಮತ್ತೆ ದೈವವಿಲ್ಲೆಂದುದು

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಶಿವನಲ್ಲದೆ ಮತ್ತೆ ದೈವವಿಲ್ಲೆಂದುದು ವೇದ. ಉಳ್ಳಡೆ
ದಕ್ಷನ ಜನ್ನ ತಾನೆ ಹೇಳದೆ ? ಉಳ್ಳಡೆ ಕ್ರತುವನು ಕಾಯಲಾಗದೆ ? ಉಳ್ಳಡೆ ತಮ್ಮ ತಮ್ಮ ಶಿರಗಳ ಹೋಗಲಾಡಿಕೊಳಲೇಕೆ ? ಈ ಕ್ರತುಗಳಿಗೆ `ಶಿವನೇಕೋ ದೇವ' ಎಂದುದು ಋಗ್ವೇದ. `ಆವೋ ರಾಜಾನಮಧ್ವರಸ್ಯ ರುದ್ರಂ ಹೋತಾರಂ ಸತ್ಯಯಜುಂ ರೋದಸ್ಯೋಃ ಅಗ್ನಿಂ ಪುರಾತನಯಿತ್ನೋರಚಿತ್ತಾತ್ ಹಿರಣ್ಯರೂಪಮವಸೇ ಕೃಣುಧ್ವಂ _ಎಂದುದಾಗಿ ಇಂತೆಂಬ ಶ್ರುತಿಯಿದೆ. ಇದು ಕಾರಣ_ ಕೂಡಲಚೆನ್ನಸಂಗನಲ್ಲದಿಲ್ಲ; ನಿಲ್ಲು
ಮಾಣು.