ವಿಷಯಕ್ಕೆ ಹೋಗು

ಶ್ವಪಚನಾದಡೇನು ಲಿಂಗಭಕ್ತನೇ ಕುಲಜನು.

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಶ್ವಪಚನಾದಡೇನು ಲಿಂಗಭಕ್ತನೇ ಕುಲಜನು. ನಂಬಿ ನಂಬದಿದ್ದಡೆ ಸಂದೇಹಿ
ನೋಡಾ. ಕಟಿದಡೇನು
ಮುಟಿದಡೇನು
ಹೂಸಿದಡೇನು ಮನಮುಟ್ಟದನ್ನಕ್ಕ ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು
ಕೂಡಲಸಂಗಮದೇವ ಒಲಿದಂಗಲ್ಲದೆ.