ಹಾಲುಜೇನು - ಹಾಲು ಜೇನು ಒಂದಾದ ಹಾಗೆ

ವಿಕಿಸೋರ್ಸ್ ಇಂದ
Jump to navigation Jump to search

ಚಿತ್ರ: ಹಾಲುಜೇನು
ಸಾಹಿತ್ಯ: ಚಿ. ಉದಯಶಂಕರ್
ಗಾಯನ: ಡಾ.ರಾಜ್‍ಕುಮಾರ್
ಸಂಗೀತ: ಜಿ.ಕೆ.ವೆಂಕಟೇಶ್ಹಾಲುಜೇನು ಒಂದಾದ ಹಾಗೆ
ನನ್ನ ನಿನ್ನ ಜೀವನ ||ಪಲ್ಲವಿ||

ನೀ ನಗುತಲಿ ಸುಖವಾಗಿರೆ
ಆನಂದದ ಹೊನಲಾಗಿರೆ
ಬಾಳೆ ಸವಿಗಾನ


||ಪಲ್ಲವಿ||

ಬಿಸಿಲಾಗಲಿ, ಮಳೆಯಾಗಲಿ, ನೆರಳಾಗಿ ನಾನು ಬರುವೆನು ಜೊತೆಗೆ |೨|
ಸವಿಮಾತಲಿ ಸುಖನೀಡುವೆ,ಎಂದೆಂದಿಗೂ ಹೀಗೆ
ಹೂವಾಗಲಿ ಈ ಮೊಗವರಳಿ, ಸಂತೋಷದ ಪರಿಮಳ ಚೆಲ್ಲಿ |೨|
ಹಾಯಾಗಿರೂ


||ಪಲ್ಲವಿ||

ಈ ತಾವರೆ ಮೊಗವೇತಕೆ ಮೊಗ್ಗಾದ ಹಾಗೆ ಕೊರಗಿದೆ ಚೆಲುವೆ |೨|
ಇಂದೇತಕೆ ಈ ಮೌನವು, ಹೀಗೇಕೆ ನೀನಿರುವೆ
ನೀನೇತಕೆ ಬಾಡುವೆ ಕೊರಗಿ, ನಾನಿಲ್ಲವೇ ಆಸರೆಯಾಗಿ |೨|
ಹಾಯಾಗಿರೂ


||ಪಲ್ಲವಿ||
ನೀ ನಗುತಲಿ ಸುಖವಾಗಿರೆ
ಆನಂದದ ಹೊನಲಾಗಿರೆ
ಬಾಳೆ ಸವಿಗಾನ

||ಪಲ್ಲವಿ||

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ