ರಾಜಯೋಗ ರತ್ನಾಕರ [1920ನೇ ಜನವರಿ ತಿಂಗಳಲ್ಲಿ ಪ್ರಕಟವಾಗುತ್ತದೆ.] ಈ ಗ್ರಂಥದಲ್ಲಿ ಸಾಂಖ್ಯ - ತಾರಕ-ಅಮನಸ್ಕಾದಿ ಯೋಗರಹಸ್ಯ ಗಳೆಲ್ಲವೂ, ಆಚರಿಸುವುದಕ್ಕೆ ಸಾಧ್ಯವಾಗುವಂತ ಸುಲಭವಾದ ದೃಷ್ಟಾಂ ತಗಳೊಂದಿಗೆ ತಿಳಿವಾಗಿ ವಿವರಿಸಲ್ಪಟ್ಟಿದೆ. ಬೆಲೆ 1 0 0 ವಿಳಾಸ:--ಕಾ, ಶಿವರಾಮದಾಸ, ಆನಂದಚಂದಿಕಾ ಆಫೀಸ್, ಬೆಂಗಳೂರು ಸಿಟಿ, G:: ರಾಮ ರಾಜ್ಯ [192ನೆಯ ಒಬ್ರವರಿ ತಿಂಗಳಲ್ಲಿ ಪ್ರಕಟವಾಗುತ್ತದೆ.] ಈ ಗ್ರಂಥದಲ್ಲಿ ಶ್ರೀರಾಮಚಂದ್ರನು (ರಾವಣಾಸುರನನ್ನು ಸಂಹ ರಿಸಿ ಅಯೋಧ್ಯೆಗೆ ಬಂದು) ಪಟ್ಟಾಭಿಷಿಕನಾಗಿ ರಾಜ್ಯಾಧಿಪತ್ಯವನ್ನು ವಹಿಸಿದನಂತರ ಹನ್ನೊಂದುಸಾವಿರ ವರ್ಷಗಳು ಏಕಚಕ್ರಾಧಿಪತ್ಯ ವಾಗಿ ನಡಿಸಿದ ರಾಜ್ಯಭಾರದ ವೈಭವವೂ, ಮತ - ನೀತಿ - ಸಂಘಪದ್ದತಿ ಗಳನ್ನು ಪರಿಪಾಲಿಸಿದ ಧರಸೂಕ್ಷತೆಯ, ಖಗೋಳ – ಭೂಗೋಳ ತತ್ನರಹಸ್ಯಗಳನ್ನು ವಸಿಷ್ಠ ವಿಶ್ವಾಮಿತ್ರರ ಮೂಲಕ ಪ್ರಚಾರಪಡಿಸಿದ ವೈಜ್ಞಾನಿಕ ಕೌಶಲವೂ, ಸೀತಾದೇವಿಯು ಸ್ತ್ರೀಯರ ವಿಚಾರದಲ್ಲಿ ಏರ್ಪಡಿಸಿದ ಸಂಘಶಾಸನಗಳ, ಲಕ್ಷಣ – ಭರತ - ಶತ್ರುಘ್ನರಿಗೆ ಸಾಮಂತರಾಜ್ಯಾಧಿಪತ್ಯವನ್ನು ಕೊಟ್ಟಾಗ ಶ್ರೀರಾಮಚಂದ್ರನು ಮಾಡಿ ದ ರಾಜಧರ ಪ್ರಸಂಗವೂ, ಶ್ರೀರಾಮನು ಆಂಜನೇಯನಿಗೆ ಬೋಧಿಸಿದ ತತ್ತಾರ ರಹಸ್ಯವೂ, ಬಹಳ ವಿವರವಾಗಿಯ, ಪ್ರಮಾಣವಾಕ್ಯ ಸಮ್ಮತವಾಗಿಯೂ ವಿರಚಿಸಲ್ಪಟ್ಟಿದೆ. ಬೆಲೆ 1 0 0 ಔಟ್ ನಮ್ಮ ಗ್ರಂಥಮಾಲೆಯ ಪ್ರತಿಯೊಂದು ಗ್ರಂಥವೂ ಸುಲಭವಾದ ಮತ್ತು ಮನೋಹರವಾದ ವಚನಶೈಲಿಯಿಂದ ವಿರಚಿತವಾಗಿರುತ್ತವೆ. ವಿಳಾಸ:-ಕಾ ಶಿವರಾಮದಾಸ, ಸಂಪಾದಕ, ಆನಂದಚಂದ್ರಿಕೆ, ಬೆಂಗಳೂರು ಸಿಟ.
ಪುಟ:ಶ್ರೀ ಕೃಷ್ಣ ಲೀಲೆ.djvu/೧೬೬
ಗೋಚರ