ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 31

                        ಮಾತೃ ನ೦ದಿನಿ
ಮಾತಿಂದೆಯೇ ನಮ್ಮನ್ನು ಮೂರ್ಖರೆಂದು ಅಲ್ಲಗಳೆದೆ! ಹೋಗಲಿ: ನೀನಾದರೂ ಬುದ್ದಿ ಸಂಪನ್ನೆಯಾಗಿರುವೆಯಲ್ಲ!ಅಷ್ಟೇ ಸಾಕು!
     ವಿಶ್ವನಾಥ:-ಕೋಪದಿಂದ,-'ಬರಿಯ ಬಾಯಿಬಡಕುತನದಿಂದೇನು? ಸರಿಯಾಗಿ ಬಿಚ್ಚಿಹೇಳು! ನಮಗೆ ಮೂರ್ಖಸಮಾಜದಲ್ಲಿಯೇ ಎಂತಹ ಸನ್ಮಾನವನ್ನು ಕೊಡಬಲ್ಲೆ?”
   ನಂದಿನಿ-ಅದನ್ನೇ ಯೇಚಿಸುತ್ತಿರುವೆನು.ಯಾವ ಶಬ್ದ ಪ್ರಯೋಗದಿಂದ,ಎಂತಹ ಸ್ವರಸಂಧಾನದಿಂದ ಸಂಬೋಧಿಸಬೇಕೆಂಬುದೇ ಇನ್ನೂ ಬಗೆಹರಿದಿಲ್ಲ.ಆದರೂ, ಮೊದಲು ಒಂದು ವಿಚಾರ.-
  ಗಣೇಶ..-ಅದೇನು? ಎಲ್ಲವನ್ನೂ ..ದರಿಬಿಡು ! ಆದುರಾಗಲಿ, ಕಡೆಯವರೆಗೂ ಕೇಳಿ-ನೋಡಿಯೇ ಹೋಗುವೆವು.
   ನಂದಿನಿ:-ಇದರಿಂದ ನೀವು ನನ್ನನ್ನು ವಾಚಾಳೆಯೆಂದು ಹೇಳುವಿರೋ ಹೇಗೋ ತಿಳಿಯದು ! ಆದರೂ ಹಿಂತೆಗೆವಂತಿಲ್ಲ. ವಾತಾಳಕತೆಯಿಲ್ಲದಿದ್ದಿರೆ ನೀಚಸೇವೆಗೆ ಕೈಚಾಚಬೇಕಾದೀತು!-
   ವಿಶ್ವನಾಥ:-ಸರಿ-ಸರಿ; ಬಲುಸೊಗಸು! ಪ್ರತಿಮಾತಿನಲ್ಲಿಯ ಯತಿ. ಗಣ, ನಿಯಮ, ಪ್ರಾಸ, ವ್ಯಾಕರಣ, ಛಂದಸ್ಸು, ಉದಾಹರಣೆ -ಎಲ್ಲವೂ ಸೇರಿ ಹೊಳೆಯುತ್ತಿರುವುವು.
  ನಂದಿನಿ:- ದರ್ಪಿತಸ್ವರದಿಂದ.. – ಅನ್ಯಾಯ! ಬಹು ಅನ್ಯಾಯ!! ಅಲ್ಲ – ಮಹಾಶಯ! ನಿಮ್ಮಾ ಅಭಿಮಾನದಿಂದಲ್ಲವೇ ನಮ್ಮಾ ಮಾತೃ ಭಾಷೆ ಮೃತ್ಯು ಮೂಲದಲ್ಲಿ ಬಿದ್ದ ನಶಿಸುವಂತಾಗಿರುವುದು? ನಿಮ್ಮಂತಹ ಮಹಾಪುರುಷ ಸಂತಸವುಂಟಾಗಿದ್ದೂ ನಿಮ್ಮವರ ಉದಾಸೀನದಿಂದಲ್ಲವೇ ನಮ್ಮ ದೇಶಮಾತೆ. ಒಂಬೆಯಂತೆ ಒಗೆಗೆಟ್ಟು ಬೇಡುತ್ತಿರುವುದು?'
  ನರೇಶ: ಸಂಭ್ರಮದಿಂದ,. - 'ಭಲೆ! ನಂದ: ಮೇಲುಮಾತಾಡಿದೆ!! ಮತ್ತೊಮ್ಮೆ ಹೇಳು? [ವಿಶ್ವನಾಥನ ಕಡೆಗೆ ತಿರುಗಿ) ಏನು ಹೇಳುವಿರಿ ? ಸ್ವಾಮೀ! ಕೇಳಿದಿರೋ? ಎಷ್ಟು ಅರ್ಥವತ್ತಾದ ಭಾಷಣ?'-

ವಿಶ್ವನಾಥ....ಕ್ರೋಧಾವೇಶದಿಂದ, 'ಸಾಕಯ್ಯಾ, ಸಾಕು! : ಬೀದಿಯಲ್ಲಿ ಎಲ್ಲಿಯೋ ಹೋಗುತಿದ್ದ ಭಿಕ್ಷುಕನ ಮಗಳು, ಸ್ವೇಚ್ಚೆಯಿ೦ದ ಬೆಳೆದವಳನ್ನು ಕರೆತಂದು ಮನೆಯಲ್ಲಿರಿಸಿಕೊಂಡು,ಈ ಮೂಲಕ ಶಾಸ್ತ್ರ-ಸಂಗ