ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮಾತೃನಂದಿನಿ 183
ಕನ್ಯಾದಾನ, ಸರ್ವೊತ್ತಮ ಬಾಂಧವ್ಯ; ಸಾಧ್ವೀವಧೂಶಾಭ; ಅಹುದು; ಶ್ರೀಮಂತನ ಸುಕೃತವಿಶೇಷ; ಆಗಲಿ; ಶುಭಸ್ಯಶೀಘ್ರಂ'ನಂದಿನೀ ಕಲ್ಯಾಣ.) ಸತ್ಯಾನಂದ:- ನನ್ನ ಪ್ರಿಯಬಾಂಧವರೇ!
ನಂದಿನೀ ಕಲ್ಯಾಣಮಾತ್ರವೇ ಅಲ್ಲ, ನಂದಿನಿಯು ನಾರಾನಂದನಿಂದ ಕಲ್ಯಾಣಿಯಾಗುವಂತೆ, ಅಚಲಚಂದ್ರನಾಥನು ಸ್ವರ್ಣಕುಮಾರಿಯನ್ನು ಸರಿಗ್ರಹಿಸಿ, ಮಂಗಳಪ್ರದನಾಗಬೇಕೆಂಬುದೂ ಭಗವತಿಯ ಸಂಕಲ್ಪವಾಗಿದೆ. ನಾದಾನಂದ-ಅಚಲಚಂದ್ರರ ಪುತ್ರಕರ್ತವ್ಯವು ಸಾರ್ಧಿಕಹೊಂದುವಂತೆ, ಸೇವಾನಂದ-ಭಕ್ತಿಸಾರರೂ ಪ್ರಕೃತಿ ಪ್ರಭಾವದಿಂದ ಸಹಕರಿಸುವರೆಂದು ನಿರೀಕ್ಷಿಸಲ್ಪಟ್ಟಿದೆ. [ತಥಾಸ್ತು, ತಥಾಸ್ತು, ತಥಾಸ್ತು, ತ್ರಿವಾರ ಹೇಳುವೆವು. ಸಾಧುಸಮ್ಮತವು, ಸ್ವದೇಶಾಭಿವೃದ್ಧಿ ಸಾಧನವು. ಇದೇ ಅತ್ಯಾವಶ್ಯಕವಾಗಿ ಮಾಡಬೇಕಾದ ಮಹತ್ಕಾರ್ಯವು, ಭಗವತಿಯಃ ಅನುಗ್ರಹಿಸಲಿ. ನಡೆಯಲಿ; ಮಂಗಳೋತ್ಸವಗಳು. ( ಕರತಾಡನಗಳು)]
- ಸತ್ಯಾನಂದನು ಇಷ್ಟು ಹೇಳಿ ಮತ್ತೆ ದೇವಿಯ ಕಡೆಗೆ ತಿರುಗಿ ಧ್ಯಾನಾ ಸಕ್ತನಾಗಿ ಕುಳಿತನು.