ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦ ಸತೀಹಿತೈಷಿಣಿ (ಿ ಮಾಶಿಕ Mys/\/v MMMMMM ಮಾರ, ಪ್ರಭಾಕರ ಕುಮುದಮಿತ್ರ, ಮಧುಮಿತ್ರರು, ಅಭಿಷೇಕಕ್ಕಾಗಿ ಶುದ್ಧೋದಕವೇ ಮೊದಲಾದ ಸಾಹಿತ್ಯಗಳನ್ನು ಒದಗಿಸುವುದರಲ್ಲಿ ನಿರತ ರಾಗಿದ್ದರು, ಶಾಂತಿನಾಥನು ದೇವಿಯ ಪೂಜೋಪಕರಣಗಳನ್ನು ಸಿದ್ದ ಪಡಿಸಿ, ದೇವಿಯ ಮುಂದೆ ಕೈಕಟ್ಟಿ ನಿಂತಿರುವನು. ಇವರೆಲ್ಲರಿಗೂ ಪ್ರಾತಃಸ್ನಾನ-ಜಪ-ತಪಾನುಷ್ಠಾನಗಳು ಸಾಂಗವಾಗಿ ನಡೆದಿದ್ದವು. ಪೂರ್ಣಕಲೆಯ ಅಬ್ಬೆ, ಶಾಂತಿದೇವಿ, ರೋಹಿಣೀದೇವಿ, ಸತೀ ಮಣಿಯರು ಶುಚಿರ್ಭೂತರಾಗಿ ಬಂದು ನಿಯಮಿತಕಾರಗಳನ್ನು ನೆರೆ ವೇರಿಸಿ, ದೇವೀಸಂದರ್ಶ ನಕ್ಕಾಗಿ ಬಂದಿದ್ದ ಮಹಿಳೆಯರನ್ನು ಬಳಿಯಲ್ಲಿ ಕುಳ್ಳಿರಿಸಿಕೊಂಡು, ದೇವಿಗೆ ಪುಷ್ಪಾಲಂಕಾರಕ್ಕಾಗಿ ಮಾಲೆ, ಕಿರೀಟ, ಹಸ್ರಾಭರಣಗಳನ್ನು ವಿವಿಧ ಪರಿಮಳ ಪುಷ್ಪಗಳಿಂದ ರಚಿಸುತ್ತಿರುವರು. ಪೂಣ೯ಕಲಾ, ಶಾರದೆ, ಕುಮುದೆಯರು,ಶ್ರದ್ಧಾ- ಭಕ್ತಿ - ಕೀರ್ತಿಗಳು ಮೂರ್ತಿಭವಿಸಿದಂತೆ ಶುಭ್ರವಸನ ಧಾರಿಣಿಯರಾಗಿ ದೇವಿಗೆ ಇದಿರಾಗಿ ಕುಳಿತು ಗುರುಜನಾಜೆಯಂತೆ ವೀಣಾಪಾಣಿಯರಾಗಿ ಉದಯರಾಗ ದಿಂದ ದೇವಿಯ ಗುಣಸಂಕೀರ್ತನೆಗಳನ್ನು ಮನೋಹರವಾಗಿ ಗನ ಮಾಡುತ್ತಿರುವರು, ಅರುಣೋದಯವಾಯಿತು. ಗೀತಾಚಾರ್ಯರು ಎದ್ದು ನಿಂತು ಘಂ ಟಾಧ್ವನಿ ಮಾಡಿದರು, ಘಂಟಾಧ್ವನಿಯನ್ನು ಕೇಳಿ ಎಲ್ಲರೂ ಕೃತಕಾ ರ್ಯರಾಗಿ ಬಂದು ದೇವಿಯಮುಂದೆ ಎರಡು ವರಸೆಯಾಗಿಸಾಲುಕಟ್ಟಿ ನಿಂತರು ಭಾಸ್ಕರಾಚಾರ್ಯರು ಧ್ಯಾನವನ್ನು ಪೂರ್ಣಗೊಳಿಸಿ ಎದ್ದು ದೇವಿಯನ್ನು ವಂದಿಸಿ, ಸೇವಾಕಾರ್ಯದಲ್ಲಿ ಉದ್ಯುಕ್ತರಾದರು. ದೇವಿಯ ಅರ್ಚಾರೂಪಿಯಾಗಿದ್ದ ಮಾತೆಯ - ಅಭಿಷೇ ಕೋತ್ಸವವು ಗುರುಗಳ ವೇದ, ಉಪನಿಷತ್ ಪಾರಾಯಣಗಳ ದಿವ್ಯ ಘೋಷಗಳಿಂದಲೂ ವಿದ್ಯಾರ್ಥಿವರ್ಗಿಯರ ಸುಪ್ರಭಾತಸ್ತು ತಿವಚನ