ನೆಲಸಂ{! ಮಾರ್ಗಶಿರ) ಪೂರ್ಣಕಲಾ ೨೪೧ ದೂ, ನಾವು ಈಗತಾನೇ ಸನ್ನಿಧಾನದಲ್ಲಿ ಮಾಡಿರುವ ಶಪಥವನ್ನು ಸಫಲಗೊಳಿಸಿಕೊಂಡು ಬರುವವರೆಗೆ, ನಮಗೆ ಇದೇ ಸ್ಥಿತಿಯ ಲ್ಲಿರುವುದಕ್ಕೆ ಅವಕಾಶ ಕೊಡಬೇಕೆಂದೂ ಪ್ರಾರ್ಥಿಸುವೆವು. ಭಾಸ್ಕರ-ಸಂತೋಷದಿಂದ-ಸುಕುಮಾರರೇ! ನಿಮ್ಮ ಪ್ರಾರ್ಥನೆಯನ್ನು ನಾವು ಅಂಗೀಕರಿಸಿರುವೆವು. ಅದರಂತೆಯೇ ನಿಮ್ಮಿಲ್ವರ ಪ್ರತಿ ಜ್ಞಾಪಾಲನೆಗಾಗಿ ನಿಮಗೆ ಒಂದು ವರ್ಷದವರೆಗೂ ಅವಕಾಶ ವನ್ನು ಕೊಟ್ಟಿರುವೆವು. ಅಗತ್ಯವಾದರೆ ನಿಮ್ಮಂತೆಯೇ ಅಕ್ಷಯ ಕುಮಾರನಿಗೂ ಅದು ಅನ್ವಯವಾದಂತೆ ಭಾವಿಸಬಹುದು. ಅಕ್ಷಯ-ಸ್ವಾಮಿಜೀ ! ನನ್ನ ಅಭೀಷ್ಟವೂ ಅದೇ ಆಗಿರುವುದು, ನಾವು ಅಯ್ದರೂ ದೇಶಯಾತ್ರಾಾಜದಿಂದ ಉದ್ದೇಶಸಿದ್ದಿಗಾಗಿ. ಹೊರಡ. ಭಾಸ್ಕರಾ-ಕುಮಾರ ! ಅಷ್ಟರಲ್ಲಿಯೇ ವಾಕ್ಯವನ್ನು ನಿಲ್ಲಿಸುವುದೇಕೆ ? ನಿನ್ನ ಅಭಿಮತವನ್ನು ನಾನು ಅನುಮೋದಿಸಿರುವೆನು, ಹಾಗೆ ಮಾಡುವುದೂ ಈಗ ಅಗತ್ಯವ. ಏಕೆಂದರೆ, ಈ ವರೆಗೆ ನೀವು ಕಠಿಣ ನಿಯಮಗಳಿಂದ ಇತರ ವಿಚಾರಗಳಿಗೆ ಅವಕಾಶವನ್ನು ಕೊಡದೆ ವ್ಯಾಸಂಗಿಸುತ್ತಿದ್ದುದರಿಂದ ಈವರೆಗಣ ನಿಮ್ಮ ಪರಿಶ್ರಮ ಕ್ಕೆ ದೇಶಸಂಚಾರಮಾಡಿ, ಅಲ್ಲಲ್ಲಿಯ ವಿದ್ಯಮಾನ ಏಶೇಷಗಳನ್ನು ಸಂಗ್ರಹಿಸಿ, ಆ ಮೂಲಕ ನಿಮ್ಮ ಆಲೋಚನಾಶಕ್ತಿ, ಲೋ ಕಾನುಭವಗಳು ಹೆಚ್ಚುವಂತೆ ಮಾಡುವುದು ಅಗತ್ಯವು. ಹಾಗೆ ಮಾಡುವುದರಿಂದ ನಿಮ್ಮ ಮನಸ್ಸು ಮತ್ತಷ್ಟು ಉತ್ಸಾಹವನ್ನೂ ಹೊಂದಬಹುದಾಗಿದೆ, ಗೀತಾಚಾರ್ಯ ಆಚಾರ ! ಶಿಷ್ಯರು ಒಂದುವರ್ಷದೊಳಗಾಗಿ ತಿಂದಿ
ಪುಟ:ಪೂರ್ಣಕಲಾ.djvu/೨೬೧
ಗೋಚರ