ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃ ನಂದಿನಿ 75 ಮತ್ತು ಕುಳಿತಿದ್ದವರ ಮೈಯೆಲ್ಲಾ ಬೆವತು ನೀರಾಗಿ ಕರಗಿ ಹೋಗುವಂತಾ ಗಿದ್ದಿತು. ಇನ್ನು ವಿಳಂಬಿಸಿದರೆ ಈ ಹೆಂಗಸರ ಗಲಬೆಯನ್ನು ಅಡಗಿಸು ಇದು ಬ್ರಹ್ಮದೇವನಿಗೂ ಆಗದಂತೆ ಬಲವಾಗುವುದು. ಇಷ್ಟರಮಟ್ಟಿನ ಶಾಂತಸ್ಥಿತಿ:ಲ್ಲದೆ: ನಿರನವನ್ನು ಓದಿ ತಿಳಿಸಿಬಿಡಿ," ಎಂಬದಾಗಿ ಸ್ವಾಮಿಗಳ ಆಜ್ಞೆಯಾಯಿತು. ಅಪ್ಪಣೆಯೊಂದನ್ನೇ ಕಾದಿದ್ದ ಧರ್ಮಾಧಿ ಕುರಿಯು ಸಂಭ್ರಮದಿಂದ ಪತ್ರವನ್ನು ಓದಲು ಮೊದಲುಮಾಡಿದನು. 11 ಶ್ರೀಮತ್ಪರಮಹಂಸತ್ಯಾದನೇಕ ಬಿರುದಾಂಕಿತರಾಗಿ ಜಗತ್ಪಸಿದ್ಧಿ ಹೊಂದಿ ಸರಿಶೋಭಿಸುತ್ತಿರುವ ಶ್ರೀಮತ್ ಅಭಿನವ ಜೀವನದ ಪರಮ ಹಂಸ ಜಗದ್ಗುರು ಪಾದಪೀಠದಲ್ಲಿ ಶಿಷ್ಯ ಪ್ರಶಿಷ್ಯವೃತ್ತಿಯಿಂದ ಏತತ್ಪರ್ಯಂತ ರವೂ ಆಶ್ರಿತರಾಗಿರುತ್ತಿರುವವರೆಲ್ಲರಿಗೂ ಸನ್ನಿಧಾನದಿಂದ ನಿರೂಪಿಸುವುದೇ ನೆಂದರೆ:- ಕಲಿಪುರುಷನ ಪ್ರಾಬಲ್ಯದಿಂದ ಧರ್ಮದೇವನು ಈಗ ಕೇವಲ ಮಲಿನ ಸ್ಥಿತಿಗೆ ಬಂದಂತೆ ಕಾಣುತ್ತಿರುವುದೆಂದೂ, ಸುಧಾರಣಾವಾದಿಗಳೆಂಬ ಕಾಳ ಸರ್ಪಗಳು ಅಲ್ಲಲ್ಲಿ ತಲೆಯೆತ್ತಿ ಧರ್ಮಶಾಸನವನ್ನು ನಿರ್ಮೂಲಮಾಡುವ ಪ್ರಯತ್ನದಲ್ಲಿರುವುವೆಂದೂ, ವರ್ಣಸಂಕರಗಳ ಮತ್ತು ಜಾತಿಸಂಕರಗಳ ಬಾಧೆಯು ಹೇಗೂ ಹೇಳಿ ಮುಗಿಸುವಂತಿಲ್ಲವೆಂದೂ, ಶ್ವ ಪತ, ಕರ್ಮ ಹೀನ, ಅಸಂಸ್ಕೃತರೆಂಬ ತಾರತಮ್ಯ ಜ್ಞಾನವಿಲ್ಲದೆ, ಎಲ್ಲರೂ ಒಂದಾಗಿ ಕಲೆತು,ವಾನ, ಪರಿಗ್ರಹ, ಭೋಜನವೇ ಮೊದಲಾದ ಸಂಬಂಧ-ಸಹವಾಸ-ಸಂಸರ್ಗಗಳಿಂದ ಸಮಾಜದ ಶಾಂತಿಯನ್ನು ಸೂರೆಗೊಂಡಿರುವುದಲ್ಲದೆ, ವಿವಾಹಪರಿಷ್ಕರಣ ಸಂಘ'ಗಳೆಂಬ ಕೂಟಗಳನ್ನೇರ್ಪಡಿಸಿಕೊಂಡು ಪ್ರೌಢಾವಿವಾಹ-ವಿಧವಾವಿ ವಾಹಗಳೆಂಬ ತಾಮಸವ್ಯಾಪಾರವನ್ನು ಹೆಚ್ಚಿಸುತ್ತಿರುವರೆಂದೂ, ಧರ್ಮಶಾ ಸನ ಕರ್ತರೂ ಮತೋದ್ಧಾರಕರೂ ಆದ ಮಠಾಧಿಪತಿಗಳನ್ನು ತುಚೀಕರಿ ಸತ್ತಿರುವ ನಾಸ್ತಿಕವಾದಿಗಳೇ ಎಲ್ಲೆಲ್ಲಿಯೂ ಕಾಣುತ್ತಿರುವರೆಂದೂ, ದೇವಾ ಲಯ ಪ್ರತಿಷ್ಠೆ, ಜೀರ್ಣೋದ್ಧಾರ, ಸತ್ರ ನಿರ್ಮಾಣ, ಮಠಾರಾಧನೆ, ಸಂತ ಸೇವೆ, ಪುರಾಣಪರಿಶ್ರವಣ, ನಾರಾಯಣ ಮೊದಲಾದ ಧರ್ಮಕಾರ್ಯ ಗಳಿಗೆಲ್ಲಕ್ಕೂ ಹೇಳಲಾಗದಷ್ಟು ಕಂಟಕಗಳನ್ನೊಡ್ಡಿ, ನ್ಯಾಯ-ಧರ್ಮಪ್ರವ ತಕರಾದ ವೈದಿಕರನ್ನು ತಲೆಯೆತ್ತದಂತೆ ಮಾಡಿ, ಬಹುವಿಧ ಸಂತಾಪಗಳಿಗೆ