ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೭ತೃತೀಯಾಂಕಂ

    ಕೃಷ್ಣವೇಣಿಗೆ ದುಂಡುಮಲ್ಲಿಗೆ ಮಾಲೆ||ಜೋರ್ಸೇ||
    ಕಾವೇರೀ ತಾಯಿಗೆ ಸೇವಂತಿಗೇ ಮಾಲೆ, ತುಂಗಭದ್ರೆಗೆ
    ಸುರಹೊನ್ನೆ ಮಾಲೆ||ಜೋರ್ಸೇ||

    ಒಬ್ಬನಾವಿಕನು:- ಎಲವೋ ಮಣಿಭದ್ರಾ! ಬರಬರುತ್ತ, ಪ್ರವಾ
ಹವು ಮಿತಿಮೀರುತ್ತಿದೆ. ನಾವು ಬೇಗನೆ ದಡವನ್ನು ಸೇರುವುದೊಳ್ಳೆ
ಯದು. ಸಾವಕಾಶಮಾಡಿದರೆ "ನದೀನಾಂ ಸಾಗರೋಗತಿ" ಎಂಬಂತೆ
ನನ್ನ ಗತಿ ಅಧೋಗತಿಯೇ ಆಗುವುದು.

    ಮಣಿಭದ್ರ:- ಸಾರಮೇಯಾ! ನೀನು ಹೇಳಿದ್ದೇ ದಿಟವು.
ಇಷ್ಟೊಂದು ಪ್ರವಾಹವೂ ಎಂದೂ ಬಂದಿಲ್ಲ. ಹಡಗನ್ನು ದಡಕ್ಕೆ ನಡಿಸು!
ಇತ್ತ ನೋಡು ಹೊಸನೀರು ಬಲವಾಗಿ ತಳ್ಳುತ್ತಿರುವುದು.
     ಹಡಗಿನವರೆಲ್ಲರೂ ಒಂದೇ ಧ್ವನಿಯಿಂದ :-ಜಾಗ್ರತೆ! ಜಾಗ್ರತೆ!

     [ಎಂದು ನಾವಿಕರು ದಡವನ್ನು ಸೇರಿ ದಿಕ್ಕಾಪಾಲಾಗಿ ಹೊರಟು
ಹೋಗುವರು.]
     [ವಸುದೇವನು ಮಗುವನ್ನು ತಲೆಯ ಮೇಲಿರಿಸಿಕೊಂಡು ಯಮು
ನಾ ತೀರಕ್ಕೆ ಬಂದು ಸೇರುವನು.]

   ವಸುದೇವ:- ಆಹಾ ! ಪ್ರಚಂಡ ವೇಗದಿಂದ ಅಲ್ಲಕಲ್ಲೋಲವಾಗಿ
ಪ್ರವಹಿಸುತ್ತ, ಭಯಂಕರವಾಗಿ ಬೋರ್ಗರೆಯುತ್ತಿರುವ ಈ ಮಹಾ
ಪ್ರವಾಹವನ್ನು ದಾಟುವುದೆಂತು? ದಂಡೆಗಳನ್ನು ಮೀರಿ ಹರಿಯುತ್ತಿ
ರುವ ಪ್ರವಾಹ ವೇಗದ ಮುಂದೆ ನನ್ನ ಸಾಹಸವು ಲೇಶವಾದರೂ ನಡಿ
ಯುವ ಹಾಗಿಲ್ಲವು. ಮಾತೆಯಾದ ಯಮುನೆಯು, ನನ್ನಲ್ಲಿ ಕರುಣ
ವಿಟ್ಟು ದಾರಿಯನ್ನು ಬಿಟ್ಟರಲ್ಲವೆ ನಾನು ಗೋಕುಲವನ್ನು ಸೇರು
ವುದು? ನನ್ನ ಪ್ರಾರ್ಥನೆಯನ್ನ೦ಗೀಕರಿಸಿ, ಯಮುನೆಯು ಕರುಣಿ
ಸುವಳೆ? ಆಗಲಿ! ಪ್ರಾರ್ಥಿಸಿ ನೋಡುವೆನು.

ವಸುದೇವ:
           - ರಾಗ-ಯಮುನಾಕಲ್ಯಾಣಿ-ಏಕತಾಳ.

    ಜಯ ಜಯ ನಿರ್ಮಲವಾಹಿನಿ ಯಮುನೇ,|ಜಾಹ್ನವಿ ಸೋದರಿ ಪಾಲಯಮಾ೦
    ||ಪ|| ಜಯ ಜಯ ಯಾದವ ದುಃಖ ನಿವಾರಿಣಿ, ದಿವ್ಯ ತರಂಗಿಣೀ ಪಾಲಯ
    ಮಾಂ||ಜಯ||ಅ-ಪ||
     ಜಯ ಜಯ ಮಣಿಮಯ ಭೂಷಣ ಭೂಷಿಣಿ,