ಪುಟ:ಕಥಾ ಸಂಗ್ರಹ - ಭಾಗ ೨.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೂರ್ಮಾವತಾರದ ಕಥೆ 215 ಭೇರೀ ಢಕ್ಕೆ ಡಿಂಡಿಮ ಇವು ಮೊದಲಾದ ಚರ್ಮವಾದ್ಯಗಳನ್ನೂ ತಾಳವೇ ಮೊದ ಲಾದ ಕಾಂಸ್ಯವಾದ್ಯಗಳನ್ನೂ ಕ್ರಮವಾಗಿ ನುಡಿಸುತ್ತ ಊದುತ್ತ ಬಾರಿಸುತ್ತ ಸಾವೇರಿ ಅಸಾವೇರಿ ಕಾಂಬೋದಿ ಯದುಕುಲಕಾಂಬೋದಿ ಭೈರವಿ ಆನಂದಭೈರವಿ ನೀಲಾಂಬರಿ ರೇಗುಪ್ತಿ ತೋಡಿ ಮುಂತಾದ ಅನೇಕ ವಿಧ ರಾಗಗಳಿಂದ ಮನೋಹರವಾಗಿ ಸಂಗೀತ ವನ್ನು ಹಾಡುತ್ತ ದೇವಪತಿಯ ಮುಂಗಡೆಯಲ್ಲಿ ಬಂದರು, ಮತ್ತು ಅಪ್ಪರ ಸ್ತ್ರೀಯರು ಸುರಪತಿಯ ಪುರೋಭಾಗದಲ್ಲಿ ಸಾಲುಸಾಲಾಗಿ ನಿಂತು ಭರತಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಸೊಬಗಿನಿಂದ ನರ್ತನಮಾಡುತ್ತ ಬಂದರು, ಮತ್ತು ಕಿನ್ನರ ಕಿಂಪುರುಷಾದಿ .ಗಳು ಕೈಯೆತ್ತಿ.-ಜಂಭಾರಿಯೇ, ಪಾಕಶಾಸನನೇ, ವೃತಾಸುರಸಂಹಾರಕನೇ. ತ್ರಿಲೋಕನಾಯಕನೇ, ಜಯ ಜಯ ಎಂದು ಸಂಭ್ರಮದಿಂದ ಹೊಗಳುತ್ತ ಬಂದರು. ಇಂಥ ಅತುಲವೈಭವದಿಂದ ಕೂಡಿ ದೇವೇಂದ್ರನು ಅಮರಾವತಿಯ ರಾಜವೀಧಿಯಲ್ಲಿ ಬರುತ್ತಿರಲು; ಆಗ ದೇವಸ್ತ್ರೀಯರು ಬಂದುಬಂದು ನವರತ್ನಗಳ ಆರತಿಗಳನ್ನು ಬೆಳಗು ತಿದ್ದರು. ಸುರಪತಿಯು ಅವರಿಗೆ ಅಪರಿಮಿತ ವಸ್ತ್ರಾಭರಣಗಳನ್ನು ಕೊಡುತ್ತ ಮಹಾ ಸಂತೋಷದಿಂದಲೂ ಮಹದೈಶ್ವರ್ಯದಿಂದಲೂ ಮದೋನ್ಮತ್ತನಾಗಿ ಮೂರು ಲೋಕ ಗಳಲ್ಲೂ ತನಗೆ ಯಾರೂ ಸಮಾನರಿಲ್ಲ ವೆಂದು ತನ್ನ ಮನಸ್ಸಿನಲ್ಲಿ ಯೋಚಿಸಿಕೊಂಡು ಬಲು ಹೆಮ್ಮೆಯಿಂದ ಬರುತ್ತಿದ್ದನು. ಅಷ್ಟರಲ್ಲಿ ದೂರ್ವಾಸನೆಂಬ ಕೋಪಸ್ವಭಾವವುಳ್ಳ ಉಗ್ರತಪಸ್ವಿ ಯು ಕೈಲಾಸ ಪರ್ವತಕ್ಕೆ ಹೋಗಿ ಪಾರ್ವತೀಪರಮೇಶ್ವರರನ್ನು ವಂದಿಸಿ ಭಯಭರಿತ ಭಕ್ತಿಯಿಂದ ಬಹಳವಾಗಿ ಸೋತ್ರಮಾಡಲು; ಆಗ ಪಾರ್ವತೀದೇವಿಯು ಪ್ರಸನ್ನಳಾಗಿ ತಾನು ಧರಿಸಿದ್ದ ಪುಷ್ಪಮಾಲಿಕೆಯನ್ನು ಕೊಟ್ಟು ದರಿಂದ ಆತನು ಅದನ್ನು ತೆಗೆದು ಕೊಂಡು ಪಾರ್ವತೀಪರಮೇಶ್ವರರನ್ನು ವಂದಿಸಿ ಅಲ್ಲಿಂದ ಹೊರಟು ಅಮರಾವತಿಗೆ ಬಂದು ರಾಜ ವೀಧಿಯಲ್ಲಿ ಮಹಾವೈಭವದೊಡನೆ ಬರುತ್ತಿರುವ ದೇವಸತಿಯನ್ನು ಕಂಡು ಸಂತೋ ಷದಿಂದ ಆತನಿಗೆ ಆ ಪುಷ್ಪಮಾಲಿಕೆಯನ್ನು ಕೊಟ್ಟು ಹರಸಿದನು. ಆಗ ದೇವೇಂದ್ರನು ಐಶ್ವರ್ಯಮತ್ತನಾಗಿ ಆ ಮುನಿಪತಿಯನ್ನು ವಿನಯದಿಂದ ಕಂಡು ವಂದಿಸದೆ ಅವನು ಕೊಟ್ಟ ಪುಷ್ಪಮಾಲಿಕೆಯನ್ನಾದರೂ ಭಕ್ತಿಯಿಂದ ತನ್ನ ಶಿರಸ್ಸಿನಲ್ಲಿ ಧರಿಸಿಕೊಳ್ಳದೆ ಉದಾಸೀನದಿಂದ ಅದನ್ನು ಐರಾವತದ ಕುಂಭಸ್ಥಳದ ಮೇಲೆ ಹಾಕಲು; ಅದು ಆ ಪುಷ್ಪಮಾಲಿಕೆಯನ್ನು ತನ್ನ ಸೊಂಡಲಿನಿಂದ ತೆಗೆದು ಕೊಂಡು ಭೂಮಿಯಲ್ಲಿ ಬಡಿದು ಕಾಲಿನಿಂದ ತುಳಿದು ಹೊಸಗಿಬಿಟ್ಟಿತು. ಅದನ್ನು ಕಂಡು ದೂರ್ವಾಸಮುನಿಯು ಮಹಾ ಕೋಪಸಂತಪ್ತ ಹೃದಯನಾಗಿ ಕಣ್ಣುಗಳಿಂದ ಕಿಡಿಗಳನ್ನು ದುರಿಸುವವನಾಗಿ ದುರ್ಗವ್ರದೂಷಿತನಾದ ಇಂದ್ರನನ್ನು ಕುರಿತು-ಎಲೈ ಮದಾಂಧನೇ, ಮೂರ್ಖನೇ, ಲೋಕವಂದ್ಯಳಾದ ಮಹಾದೇವಿಯ ಪರಿಶುದ್ಧ ಪ್ರಸಾದವನ್ನು ನೀನು ತ್ರಿಲೋಕಾ ಧಿಪತಿಯು ಚೆನ್ನಾಗಿ ಬಾಳುತ್ತಿರಬೇಕೆಂದು ನಾನು ನಿನ್ನಲ್ಲಿ ಅನುಗ್ರಹವನ್ನು ಮಾಡಿ ತಂದು ಕೊಟ್ಟರೆ ನೀನು ಆ ಪ್ರಸಾದಮಾಲಿಕೆಯನ್ನು ಭಯಭಕ್ತಿಯಿಂದ ಶಿರಸ್ಸಿನಲ್ಲಿ ಧರಿಸದೆ ಯಾವ ಲೋಕತ್ರಯಾಧಿಪತ್ಯದ ಐಶ್ವರ್ಯಮದದಿಂದ ಐರಾವತದ ಕುಂಭ