ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದ್ರಜಿತ್ಸಂಹಾರ 159 ಆಗ ವಿಭೀಷಣನು ಅಸಮಾನಗದಾದಂಡಧರನಾಗಿ ಅವರನ್ನೆಲ್ಲಾ ಹಿಂದೆ ಕರೆದು ಕೊಂಡು ಹೊರಟುಬಂದು ನಿಕುಂಭಿಳಾ ದೇವಾಲಯವನ್ನು ಹೊಕ್ಕು ನೋಡಲು; ಅಲ್ಲಿ ಇನ್ನೂರೇಳು ಅಕ್ಷೌಹಿಣೀ ಸಂಖ್ಯಾ ಕವಾದ ರಾಕ ಸಚತುರ್ಬಲವು ಸಕಲಾಯುಧಗ ಇನ್ನೂ ಧರಿಸಿಕೊಂಡು ಇರುವೆ ನೊಣಗಳಾದರೂ ಒಳಗೆ ಪ್ರವೇಶಿಸದಂತೆ ಬಹು ಜಾಗರೂ ಕತೆಯಿಂದಿದ್ದಿತು. ಆ ಭೀಕರನಿಶಾಚರ ಬಲದೊಳಗೆ ಪ್ರವೇಶಿಸುವುದು ಬ್ರಹ್ಂದ್ರಾದಿ ಗಳಿಗೂ ಅಸಾಧ್ಯವಾಗಿದ್ದಿತು. ಹೀಗಿರುವಲ್ಲಿ ಹಗೆಗಳಾದವರು ಆ ಯಾಗಶಾಲೆಯನ್ನು ಪ್ರವೇಶಿಸುವುದು ಹೇಗೆ ? ಆದರೂ ನಿಶಾಚರಕುಲಾರ”ದವಾನಲಪ್ರಾಯರಾದ ಆಂಜ ನೇಯಾದಿ ಕಪಿಸುಭಟರು ಸ್ವಲ್ಪವಾದರೂ ಅಂಜದೆ ಗಿರಿತರುಗಳನ್ನು ತೆಗೆದುಕೊಂಡು ಬಂದು ಚತುರ್ದಿಕ್ಕುಗಳಲ್ಲಿಯ ಕವಿದು ಒಳಹೊಕ್ಕು ಎದುರಾದವರನ್ನು ಹೊಯ್ಯು ತಿವಿದು ಕುಟ್ಟಿ ಕಚ್ಚಿ ಕವಂ ಪರಚಿ ಇರಿದು ಒದೆದು ತಲೆಕೆಳಗಾಗುವಂತೆ ಬಿಸುಟು ರಾಕ್ಷಸರ ಚತುರ್ವಿಧ ಬಲವನ್ನು ಪುಡಿಪುಡಿಮಾಡಿದರು. ಆಹಾ ! ವಾನರಚಕ್ರೇಶ್ವರ ನಾದ ಸುಗ್ರೀವನ ಆಜ್ಞಾ ಮಂತ್ರಶಕ್ತಿಯ ಅಮೋಘತೆಯನ್ನು ಬಣ್ಣಿಸುವುದಕ್ಕೆ ಯಾರಿಗೆ ಸಾಧ್ಯವು ? ಬಹುಮಾನವಾಗಿ ಆಪಾರದ್ರವ್ಯವನ್ನೂ ವಿವಿಧವಾದ ದಿವ್ಯಾಂ ಬರಗಳನ್ನೂ ಅಮೂಲ್ಯಾಭರಣಗಳನ್ನೂ ತಿಂಗಳುಗಟ್ಟಳೆಯಾಗಿ ಸಂಬಳಗಳನ್ನೂ ಕೊಟ್ಟು ಪ್ರೀತಿಸುತ್ತ ಆದರಿಸಿದಾಗ ಈ ವಾನರವೀರರಂತೆ ಕವಲಿಲ್ಲದ ಮನಸ್ಸುಳ್ಳ ವರಾಗಿ ಸ್ವಾಮಿ ಕಾರ್ಯವನ್ನು ನಿರ್ವಹಿಸುವ ಸತ್ಯಸಂಧರು ಲೋಕದಲ್ಲಿ ದುರ್ಲಭರು. ಇಂಥ ಮರ್ಕಟವೀರಬಲವು ಕ್ಷಣಕಾಲದಲ್ಲಿ ಎದುರಾದ ರಾಕ್ಷಸಬಲವನ್ನೆಲ್ಲಾ ಬರಿಗೈ ದು ಇಂದ್ರಜಿತ್ತಿನ ಯಜ್ಞ ಮಂಟಪದ ಬಳಿಗೆ ಹೋಗಿ ನೋಡಲು ; ಆಗ ಇಂದ್ರಜಿತ್ತು ವೀರಬಾಹುವೇ ಮೊದಲಾದ ತನ್ನ ಶೂರನಿಶಾಚರಪರಿವಾರದಿಂದ ಕೂಡಿ ಯಜ್ಞ ದೀಕ್ಷೆ ಯನ್ನು ಹೊಂದಿ ತದುಚಿತಕರ್ಮಗಳನ್ನು ನಡಿಸುತ್ತ ತದೇಕಚಿತ್ತನಾಗಿದ್ದನು. ಆ ಯಜ್ಞ ರಕ್ಷಣಾರ್ಥವಾಗಿ ಅಲ್ಲಿಟ್ಟಿದ್ದ ರಾಕ್ಷಸ ಚತುರ್ಬಲವನ್ನು ಎಣಿಸಬಲ್ಲವರಾರು ? ಅಷ್ಟು ಬಲಗಳೂ ಒಮ್ಮೊಗವಾಗಿ ಏಕಕಾಲದಲ್ಲಿ ಹೊರಟುಬಂದು ಲಕ್ಷ್ಮಣಾದಿಗಳನ್ನು ಮುತ್ತಲು ; ಆಗ ಆಂಜನೇಯಾದಿ ವಾನರವಾಹಿನೀಪತಿಗಳು ಸನ್ನದ್ಧರಾಗಿ ನಿಂತು ಸಂಹಾರಕ್ಕು ಪಕ್ರಮಿಸಿ ಆ ದೈತ್ಯರನ್ನು ಎಷ್ಟು ವಿಧದಿಂದ ಕೊಂದು ಕಡಹುತ್ತಿದ್ದರೂ ಮತ್ತು ಮತ್ತು ಒಂದು ನೀಲಮೇಘಗಳಂತೆ ಮುತ್ತು ಕಾದುತ್ತ ಮುಂದಕ್ಕೆ ದಾರಿ ಗೊಡದಿರಲು ; ಆಗ ಧೀರನಾದ ವಿಭೀಷಣನು ನೋಡಿ ಇವರೊಡನೆ ಹೀಗೆ ಜಗಳ ವಾಡುತ್ತ ನಿಂತರೆ ಸಾವಕಾಶವಾಗುವದು. ಇನ್ನು ಸೂರ್ಯೋದಯಕ್ಕೆ ಒಂದು ಯಾಮಮಾತ್ರ ಇದೆ. ಅಷ್ಟರಲ್ಲಿ ಇವನ ಯಜ್ಞವು ನೆರವೇರಿಹೋಗುವುದು ಎಂದು ಯೋಚಿಸಿ ತನ್ನ ಅಪ್ರತಿಮೆಗದಾಯುಧವನ್ನು ತೆಗೆದು ಕೊಂಡು ಲಕ್ಷ್ಮಣನನ್ನು ನೋಡಿ--ನಾನು ನಿನಗೆ ದಾರಿಯನ್ನು ಮಾಡಿಕೊಡುತ್ತ ಮುಂದೆ ಹೋಗುತ್ತೇನೆ. ನೀನು ನನ್ನ ಬೆಂಬಿಡದೆ ಬರುವವನಾಗು, ಅಂಗದಾದಿಗಳು ಈ ರಕ್ಕಸಬದೊಡನೆ ಕಾಡುತ್ತಿರಲಿ ಎಂದು ಹೇಳಿ ಎದುರಾದ ರಾಕ್ಷಸವೀರರನ್ನು ತನ್ನ ಗದಾದಂಡದಿಂದ ಮುರಿಬಡಿದು ಹೊರಬೀಳಿಸುತ್ತ ಯಮನ ನಗರಿಗೆ ಕಳುಹಿಸುತ್ತ ಹೋಗುತ್ತಿರಲು ;